ದಾಖಲೆಯ 8ನೇ ಐಪಿಎಲ್ ಶತಕ ಸಿಡಿಸಿದರೂ ಅತ್ಯಂತ ಕೆಟ್ಟ ರೆಕಾರ್ಡ್ ನಿರ್ಮಿಸಿದ ವಿರಾಟ್ ಕೊಹ್ಲಿ; ಸೋಲಿಗೆ ಇದೇ ಕಾರಣವಾಯ್ತಾ?
- Virat Kohli : ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 19ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕ ಸಿಡಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೆಟ್ಟ ದಾಖಲೆ ಬರೆದಿದ್ದಾರೆ.
- Virat Kohli : ಜೈಪುರದ ಸವಾಯಿ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ನಡೆದ ಐಪಿಎಲ್ನ 19ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕ ಸಿಡಿಸಿದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಕೆಟ್ಟ ದಾಖಲೆ ಬರೆದಿದ್ದಾರೆ.
(1 / 7)
17ನೇ ಆವೃತ್ತಿಯ ಐಪಿಎಲ್ನ 19ನೇ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಶತಕ ಸಿಡಿಸಿದ ವಿರಾಟ್ ಕೊಹ್ಲಿ, ಬೇಡದ ದಾಖಲೆಯೊಂದನ್ನು ತನ್ನ ಹೆಸರಿಗೆ ಬರೆದುಕೊಂಡಿದ್ದಾರೆ. ಐಪಿಎಲ್ನಲ್ಲಿ 8ನೇ ಶತಕದ ಜೊತೆಗೆ ಹಲವು ದಾಖಲೆಗಳನ್ನು ಪುಡಿಗಟ್ಟಿದ ಕೊಹ್ಲಿ, ಕೆಟ್ಟ ದಾಖಲೆಯನ್ನೂ ನಿರ್ಮಿಸಿದ್ದಾರೆ.
(AFP)(2 / 7)
ಜೈಪುರದ ಸವಾಯ್ ಮಾನ್ಸಿಂಗ್ ಕ್ರಿಕೆಟ್ ಮೈದಾನದಲ್ಲಿ ಜರುಗಿದ ಪಂದ್ಯದಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಬ್ಯಾಟಿಂಗ್ ಸೂಪರ್ ಸ್ಟಾರ್ ವಿರಾಟ್ ಕೊಹ್ಲಿ 2024ರ ಆವೃತ್ತಿಯ ಮೊದಲ ಶತಕ ಮತ್ತು ಐಪಿಎಲ್ನಲ್ಲಿ 8ನೇ ಸೆಂಚುರಿ ಬಾರಿಸಿ ದಾಖಲೆ ಬರೆದಿದ್ದಾರೆ. ಆದರೆ ನಿಧಾನವಾಗಿ ಮೂರಂಕಿ ದಾಟುವ ಮೂಲಕ ಕಳಪೆ ದಾಖಲೆಗೆ ಒಳಗಾಗಿದ್ದಾರೆ.
(AP)(3 / 7)
ಕಿಂಗ್ ಕೊಹ್ಲಿ ತನ್ನ ಶತಕದ ಆಟದಲ್ಲಿ ಎದುರಿಸಿದ 72 ಎಸೆತಗಳಲ್ಲಿ 12 ಬೌಂಡರಿ, 4 ಸಿಕ್ಸರ್ನೊಂದಿಗೆ ಔಟಾಗದೆ 113 ರನ್ ಕಲೆಹಾಕಿದ್ದಾರೆ. ಆದರೆ ಕೊಹ್ಲಿ ಶತಕ ಪೂರೈಸಲು ತೆಗೆದುಕೊಂಡಿದ್ದು ಬರೋಬ್ಬರಿ 67 ಎಸೆತಗಳನ್ನು. ಇದು ಸ್ಲೋ ಶತಕ ಎಂಬ ದಾಖಲೆಗೆ ಪಾತ್ರವಾಗಿದೆ.
(AFP)(4 / 7)
ಐಪಿಎಲ್ ಇತಿಹಾಸದಲ್ಲಿ ಸೆಂಚುರಿ ಪೂರ್ಣಗೊಳಿಸಲು ಅತ್ಯಧಿಕ ಬಾಲ್ಗಳನ್ನು ತೆಗೆದುಕೊಂಡ ಆಟಗಾರರ ಪೈಕಿ ಜಂಟಿ ಅಗ್ರಸ್ಥಾನ ಪಡೆದಿದ್ದಾರೆ. ವಿರಾಟ್ಗೂ ಮುನ್ನ 2009ರ ಐಪಿಎಲ್ನಲ್ಲಿ ಡೆಕ್ಕನ್ ಚಾರ್ಜಸ್ ವಿರುದ್ಧ ಅಂದು ಆರ್ಸಿಬಿ ತಂಡದಲ್ಲಿದ್ದ ಮನೀಶ್ ಪಾಂಡೆ ಸಹ 67 ಎಸೆತಗಳಲ್ಲೇ ಶತಕ ಪೂರೈಸಿದ್ದರು.
(5 / 7)
ಇದೀಗ ಕೊಹ್ಲಿ ಮತ್ತು ಮನೀಶ್ ಪಾಂಡೆ ಇಬ್ಬರು ಸಹ 67 ಎಸೆತಗಳಲ್ಲಿ ಸೆಂಚುರಿ ಬಾರಿಸಿ ಬೇಡದ ದಾಖಲೆಗೆ ಒಳಗಾಗಿದ್ದಾರೆ. ಕೊಹ್ಲಿಯ ಸೆಂಚುರಿ ಎಷ್ಟು ನಿಧಾನವಾಗಿತ್ತು ಎಂಬುದಕ್ಕೆ ಆರ್ಸಿಬಿ ಇನ್ನಿಂಗ್ಸ್ 19ನೇ ಓವರ್ ಅದ್ಭುತ ಸಾಕ್ಷಿಯಾಗಿತ್ತು. ಈ ಓವರ್ನಲ್ಲಿ ಆರ್ಸಿಬಿ ಗಳಿಸಿದ್ದು ಕೇವಲ ಮೂರೇ ಮೂರು. ಇದೇ ಓವರ್ನಲ್ಲಿ ಕೊಹ್ಲಿ ಸಿಂಗಲ್ ಪಡೆದು ಶತಕವನ್ನು ಪೂರ್ಣಗೊಳಿಸಿದರು.
(AFP)(6 / 7)
ಕೊಹ್ಲಿ ಆಟಕ್ಕೆ ಟೀಕೆ ವ್ಯಕ್ತವಾಗಿದೆ. 20 ಓವರ್ಗಳ ಪೈಕಿ ಒಬ್ಬರೇ 12 ಓವರ್ ಬ್ಯಾಟಿಂಗ್ ನಡೆಸಿದ್ದಾರೆ. ಆದರೆ ಗಳಿಸಿದ್ದು ಮಾತ್ರ 113 ರನ್. ಅವರು ವೇಗವಾಗಿ ಆಡಿದ್ದರೆ, ಇನ್ನೂ 25 ರಿಂದ 30 ರನ್ ಗಳಿಸಬಹುದಿತ್ತು. ಇದು ಗೆಲ್ಲಲು ಸಾಧ್ಯವಾಗುತ್ತಿತ್ತು. ಅವರ ನಿಧಾನಗತಿಯ ಇನ್ನಿಂಗ್ಸ್ನಿಂದಲೇ ಸೋಲಲು ಕಾರಣವಾಯಿತು ಎಂದು ಕ್ರಿಕೆಟ್ ಎಕ್ಸ್ಫರ್ಟ್ಗಳು ಟೀಕಿಸುತ್ತಿದ್ದಾರೆ.
ಇತರ ಗ್ಯಾಲರಿಗಳು