ಕನ್ನಡ ಸುದ್ದಿ  /  Photo Gallery  /  Virat Kohli Joins Training Session At M Chinnaswamy Stadium Bengaluru Ipl 2024 Rcb Vs Csk Indian Premier League Jra

Photos: ಕೊನೆಗೂ ನಮ್ಮ ಬೆಂಗಳೂರಿಗೆ ಬಂದೇ ಬಿಟ್ರು ವಿರಾಟ್‌; ಚಿನ್ನಸ್ವಾಮಿಯಲ್ಲಿ ತಂಡದೊಂದಿಗೆ ಅಭ್ಯಾಸ ಆರಂಭಿಸಿದ ಕೊಹ್ಲಿ

  • ಕೊನೆಗೂ, ವಿರಾಟ್ ಕೊಹ್ಲಿ ಆರ್‌ಸಿಬಿ ಶಿಬಿರ ಸೇರಿಕೊಂಡಿದ್ದಾರೆ. ಬಹುದಿನಗಳಿಂದ ಆರ್‌ಸಿಬಿ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದ ಸಂದರ್ಭ ಇಂದು (ಮಾರ್ಚ್‌ 18 ಸೋಮವಾರ) ಬಂದಿದೆ. ಐಪಿಎಲ್ ಪ್ರಸಕ್ತ ಆವೃತ್ತಿಯ ಆರಂಭಿಕ ಪಂದ್ಯಕ್ಕೆ ನಾಲ್ಕು ದಿನಗಳ ಮುಂಚಿತವಾಗಿ ವಿರಾಟ್ ಕೊಹ್ಲಿ ಬೆಂಗಳೂರಿನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು ಶಿಬಿರ ಸೇರಿಕೊಂಡಿದ್ದಾರೆ.

ಆರ್‌ಸಿಬಿ ತಂಡವು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಅದಕ್ಕೂ ಮುನ್ನ ಕೊಹ್ಲಿ ತಂಡ ಸೇರಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೆ ಆರ್‌ಸಿಬಿ ತಂಡಕ್ಕೂ ಬಲ ಬಂದಿದೆ.
icon

(1 / 9)

ಆರ್‌ಸಿಬಿ ತಂಡವು ಚೆನ್ನೈನ ಎಂಎ ಚಿದಂಬರಂ ಕ್ರೀಡಾಂಗಣದಲ್ಲಿ ಹಾಲಿ ಚಾಂಪಿಯನ್‌ ಚೆನ್ನೈ ಸೂಪರ್ ಕಿಂಗ್ಸ್ (ಸಿಎಸ್‌ಕೆ) ವಿರುದ್ಧ ಉದ್ಘಾಟನಾ ಪಂದ್ಯದಲ್ಲಿ ಕಣಕ್ಕಿಳಿಯಲಿದೆ. ಅದಕ್ಕೂ ಮುನ್ನ ಕೊಹ್ಲಿ ತಂಡ ಸೇರಿಕೊಂಡಿದ್ದು, ಅಭಿಮಾನಿಗಳು ಖುಷಿಯಾಗಿದ್ದಾರೆ. ಅಲ್ಲದೆ ಆರ್‌ಸಿಬಿ ತಂಡಕ್ಕೂ ಬಲ ಬಂದಿದೆ.

ವಿರಾಟ್‌ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ, ತಮ್ಮ ಎರಡನೇ ಮಗು ಅಕಾಯ್ ಜನನದಿಂದಾಗಿ ಲಂಡನ್‌ನಲ್ಲಿದ್ದರು. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಕೊನೆಯ ಬಾರಿಗೆ ಆಡಿದ್ದ ಕೊಹ್ಲಿ, ಆ ಬಳಿಕ ಮೈದಾನಕ್ಕಿಳಿದಿಲ್ಲ. 
icon

(2 / 9)

ವಿರಾಟ್‌ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ, ತಮ್ಮ ಎರಡನೇ ಮಗು ಅಕಾಯ್ ಜನನದಿಂದಾಗಿ ಲಂಡನ್‌ನಲ್ಲಿದ್ದರು. ಅಫ್ಘಾನಿಸ್ತಾನ ವಿರುದ್ಧದ ಟಿ20 ಸರಣಿಯಲ್ಲಿ ಕೊನೆಯ ಬಾರಿಗೆ ಆಡಿದ್ದ ಕೊಹ್ಲಿ, ಆ ಬಳಿಕ ಮೈದಾನಕ್ಕಿಳಿದಿಲ್ಲ. 

ಮಾರ್ಚ್ 17ರ ಭಾನುವಾರವಷ್ಟೇ ವಿರಾಟ್‌ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ನಿನ್ನೆ ಲಂಡನ್‌ನಿಂದ ಭಾರತಕ್ಕೆ ಮರಳಿದರು. ಭಾನುವಾರ ರಾತ್ರಿ ಮತ್ತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ವಿರಾಟ್‌, ಇದೀಗ ಬೆಂಗಳೂರಿನಲ್ಲಿ ತಂಡ ಸೇರಿಕೊಂಡಿದ್ದಾರೆ.
icon

(3 / 9)

ಮಾರ್ಚ್ 17ರ ಭಾನುವಾರವಷ್ಟೇ ವಿರಾಟ್‌ ಮುಂಬೈ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡರು. ನಿನ್ನೆ ಲಂಡನ್‌ನಿಂದ ಭಾರತಕ್ಕೆ ಮರಳಿದರು. ಭಾನುವಾರ ರಾತ್ರಿ ಮತ್ತೆ ವಿಮಾನ ನಿಲ್ದಾಣದಲ್ಲಿ ಕಾಣಿಸಿಕೊಂಡಿದ್ದ ವಿರಾಟ್‌, ಇದೀಗ ಬೆಂಗಳೂರಿನಲ್ಲಿ ತಂಡ ಸೇರಿಕೊಂಡಿದ್ದಾರೆ.(PTI)

ಐಪಿಎಲ್ 2024ರ ಆವೃತ್ತಿಯ ಆರಂಭಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ತರಬೇತಿ ಅವಧಿಯಲ್ಲಿ ಪಾಲ್ಗೊಂಡಿದ್ದಾರೆ.
icon

(4 / 9)

ಐಪಿಎಲ್ 2024ರ ಆವೃತ್ತಿಯ ಆರಂಭಕ್ಕೆ ಪೂರ್ವಭಾವಿಯಾಗಿ ಬೆಂಗಳೂರಿನ ಎಂ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ವಿರಾಟ್ ಕೊಹ್ಲಿ ತರಬೇತಿ ಅವಧಿಯಲ್ಲಿ ಪಾಲ್ಗೊಂಡಿದ್ದಾರೆ.(PTI)

ಕೊಹ್ಲಿ ಆಗಮನವನ್ನು ಖುದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಚೈಸಿ ಕೂಡಾ ಅಧಿಕೃತವಾಗಿ ತಿಳಿಸಿದೆ. ಕೊಹ್ಲಿ ಕ್ಯಾಂಪ್‌ ಸೇರಿಕೊಂಡಿರುವ ವಿಡಿಯೋವನ್ನು ಆರ್‌ಸಿಬಿ ಹಂಚಿಕೊಂಡಿದೆ.
icon

(5 / 9)

ಕೊಹ್ಲಿ ಆಗಮನವನ್ನು ಖುದ್ದು ರಾಯಲ್ ಚಾಲೆಂಜರ್ಸ್ ಬೆಂಗಳೂರು ಫ್ಚೈಸಿ ಕೂಡಾ ಅಧಿಕೃತವಾಗಿ ತಿಳಿಸಿದೆ. ಕೊಹ್ಲಿ ಕ್ಯಾಂಪ್‌ ಸೇರಿಕೊಂಡಿರುವ ವಿಡಿಯೋವನ್ನು ಆರ್‌ಸಿಬಿ ಹಂಚಿಕೊಂಡಿದೆ.(PTI)

ಕಂಬ್ಯಾಕ್‌ ಕುರಿತು ಮಾತನಾಡಿರುವ ವಿರಾಟ್‌, ಹಿಂತಿರುಗುವುದು ನಿಜಕ್ಕೂ ಖುಷಿ ಕೊಡುತ್ತದೆ. ಕ್ರಿಕೆಟ್ ಆಡುವುದು, ಅದರಲ್ಲೂ ಐಪಿಎಲ್ ಆರಂಭಿಸುವುದು ನಿಜಕ್ಕೂ ಖುಷಿ. ಬೆಂಗಳೂರಿಗೆ ಹಿಂತಿರುಗಲು ಯಾವಾಗಲೂ ನಾನು ಉತ್ಸುಕನಾಗಿರುತ್ತೇನೆ. ಸದ್ಯ ಹಿಂತಿರುಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ, ಅಲ್ಲದೆ ಆಡಲು ಸಾಕಷ್ಟು ಉತ್ಸುಕನಾಗಿದ್ದೇನೆ. ಎಲ್ಲಾ ಅಭಿಮಾನಿಗಳು ಉತ್ಸುಕರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.
icon

(6 / 9)

ಕಂಬ್ಯಾಕ್‌ ಕುರಿತು ಮಾತನಾಡಿರುವ ವಿರಾಟ್‌, ಹಿಂತಿರುಗುವುದು ನಿಜಕ್ಕೂ ಖುಷಿ ಕೊಡುತ್ತದೆ. ಕ್ರಿಕೆಟ್ ಆಡುವುದು, ಅದರಲ್ಲೂ ಐಪಿಎಲ್ ಆರಂಭಿಸುವುದು ನಿಜಕ್ಕೂ ಖುಷಿ. ಬೆಂಗಳೂರಿಗೆ ಹಿಂತಿರುಗಲು ಯಾವಾಗಲೂ ನಾನು ಉತ್ಸುಕನಾಗಿರುತ್ತೇನೆ. ಸದ್ಯ ಹಿಂತಿರುಗಿದ್ದಕ್ಕೆ ನನಗೆ ತುಂಬಾ ಸಂತೋಷವಾಗುತ್ತಿದೆ, ಅಲ್ಲದೆ ಆಡಲು ಸಾಕಷ್ಟು ಉತ್ಸುಕನಾಗಿದ್ದೇನೆ. ಎಲ್ಲಾ ಅಭಿಮಾನಿಗಳು ಉತ್ಸುಕರಾಗಿದ್ದಾರೆ ಎಂದು ನಾನು ಭಾವಿಸುತ್ತೇನೆ" ಎಂದು ಕೊಹ್ಲಿ ಹೇಳಿಕೊಂಡಿದ್ದಾರೆ.(PTI)

ಅದೇ  ಜೋಶ್ ಹಾಗೂ ಉತ್ಸಾಹದೊಂದಿಗೆ ವಿರಾಟ್‌ ಚಿನ್ನಸ್ವಾಮಿ ಮೈದಾನದಾದ್ಯಂತ ಓಡಾಡಿದ್ದಾರೆ.
icon

(7 / 9)

ಅದೇ  ಜೋಶ್ ಹಾಗೂ ಉತ್ಸಾಹದೊಂದಿಗೆ ವಿರಾಟ್‌ ಚಿನ್ನಸ್ವಾಮಿ ಮೈದಾನದಾದ್ಯಂತ ಓಡಾಡಿದ್ದಾರೆ.(PTI)

ಐಪಿಎಲ್‌ ಆರಂಭಕ್ಕೂ ಮುನ್ನ, ಮಾರ್ಚ್‌ 19ರ ಮಂಗಳವಾರ ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ ನಡೆಯುತ್ತಿದೆ. ವಿರಾಟ್‌ ಸೇರಿದಂತೆ ಆರ್‌ಸಿಬಿ ತಂಡದ ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.
icon

(8 / 9)

ಐಪಿಎಲ್‌ ಆರಂಭಕ್ಕೂ ಮುನ್ನ, ಮಾರ್ಚ್‌ 19ರ ಮಂಗಳವಾರ ಆರ್‌ಸಿಬಿ ಅನ್‌ಬಾಕ್ಸ್‌ ಈವೆಂಟ್‌ ನಡೆಯುತ್ತಿದೆ. ವಿರಾಟ್‌ ಸೇರಿದಂತೆ ಆರ್‌ಸಿಬಿ ತಂಡದ ಆಟಗಾರರು ಕಾರ್ಯಕ್ರಮದಲ್ಲಿ ಪಾಲ್ಗೊಳ್ಳಲಿದ್ದಾರೆ.(PTI)

ವಿರಾಟ್‌ ಆಗಮನದೊಂದಿಗೆ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ಮೊದಲ ಪಂದ್ಯದಲ್ಲಿಯೇ ವಿರಾಟ್‌ ಕಣಕ್ಕಿಳಿಯುವುದು ಇದೀಗ ಖಚಿತವಾಗಿದೆ.
icon

(9 / 9)

ವಿರಾಟ್‌ ಆಗಮನದೊಂದಿಗೆ ಅಭಿಮಾನಿಗಳು ಫುಲ್‌ ಖುಷಿಯಾಗಿದ್ದಾರೆ. ಮೊದಲ ಪಂದ್ಯದಲ್ಲಿಯೇ ವಿರಾಟ್‌ ಕಣಕ್ಕಿಳಿಯುವುದು ಇದೀಗ ಖಚಿತವಾಗಿದೆ.(PTI)


IPL_Entry_Point

ಇತರ ಗ್ಯಾಲರಿಗಳು