ಕನ್ನಡ ಸುದ್ದಿ  /  Photo Gallery  /  Virat Kohli Million-dollar Gift For T20 World Cup Bound Rinku Singh In Rcb Dressing Room After Kkr Match Prs

ಸೋತರೂ ಹೃದಯ ಗೆದ್ದ ವಿರಾಟ್; ರಿಂಕು ಸಿಂಗ್​ಗೆ ವಿಶೇಷ ಉಡುಗೊರೆ ನೀಡಿದ ಕಿಂಗ್ ಕೊಹ್ಲಿ

  • Virat Kohli : ಆರ್​​ಸಿಬಿ ಸೋತಿದ್ದಕ್ಕೆ ನಿರಾಸೆಗೊಂಡಿದ್ದರೂ ವಿರಾಟ್ ಕೊಹ್ಲಿ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕೆಕೆಆರ್​ ಬ್ಯಾಟರ್​ ರಿಂಕು ಸಿಂಗ್ ಅವರಿಗೆ ಕೊಹ್ಲಿ ವಿಶೇಷ ಉಡುಗೊರೆ ನೀಡಿದ್ದಾರೆ.

ಮಾರ್ಚ್ 29ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್​ಗಳ ಸೋಲನುಭವಿಸಿತು.
icon

(1 / 8)

ಮಾರ್ಚ್ 29ರಂದು ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿ ನಡೆದ ಪಂದ್ಯದಲ್ಲಿ ಕೋಲ್ಕತ್ತಾ ನೈಟ್​ ರೈಡರ್ಸ್ ವಿರುದ್ಧ ರಾಯಲ್ ಚಾಲೆಂಜರ್ಸ್ ಬೆಂಗಳೂರು 7 ವಿಕೆಟ್​ಗಳ ಸೋಲನುಭವಿಸಿತು.(AFP)

ಈ ಪಂದ್ಯದಲ್ಲಿ ಕೆಕೆಆರ್​​ ತಂಡವು ಆರ್​​ಸಿಬಿ ಸೋಲಿಸುವ ಮೂಲಕ ಸತತ 2ನೇ ಜಯದ ನಗೆ ಬೀರಿದರೆ, ಅತ್ತ ಬೆಂಗಳೂರು ಟೂರ್ನಿಯಲ್ಲಿ 2ನೇ ಸೋಲು ಕಂಡಿದೆ. ಒಂದರಲ್ಲಿ ಮಾತ್ರ ಆರ್​ಸಿಬಿ ಗೆದ್ದಿದೆ.
icon

(2 / 8)

ಈ ಪಂದ್ಯದಲ್ಲಿ ಕೆಕೆಆರ್​​ ತಂಡವು ಆರ್​​ಸಿಬಿ ಸೋಲಿಸುವ ಮೂಲಕ ಸತತ 2ನೇ ಜಯದ ನಗೆ ಬೀರಿದರೆ, ಅತ್ತ ಬೆಂಗಳೂರು ಟೂರ್ನಿಯಲ್ಲಿ 2ನೇ ಸೋಲು ಕಂಡಿದೆ. ಒಂದರಲ್ಲಿ ಮಾತ್ರ ಆರ್​ಸಿಬಿ ಗೆದ್ದಿದೆ.(AFP)

ಆರ್​​ಸಿಬಿ ಸೋತಿದ್ದಕ್ಕೆ ನಿರಾಸೆಗೊಂಡಿದ್ದರೂ ಸಹ ವಿರಾಟ್ ಕೊಹ್ಲಿ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಯುವ ಆಟಗಾರರಿಗೆ ಕೊಹ್ಲಿ ಸಲಹೆ ಮತ್ತು ಪ್ರೋತ್ಸಾಹ ನೀಡಿದ್ದಾರೆ.
icon

(3 / 8)

ಆರ್​​ಸಿಬಿ ಸೋತಿದ್ದಕ್ಕೆ ನಿರಾಸೆಗೊಂಡಿದ್ದರೂ ಸಹ ವಿರಾಟ್ ಕೊಹ್ಲಿ ನಡೆಗೆ ಅಭಿಮಾನಿಗಳು ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಪಂದ್ಯದ ನಂತರ ಯುವ ಆಟಗಾರರಿಗೆ ಕೊಹ್ಲಿ ಸಲಹೆ ಮತ್ತು ಪ್ರೋತ್ಸಾಹ ನೀಡಿದ್ದಾರೆ.(AFP)

ಇದರ ನಂತರ ಆರ್​​ಸಿಬಿ ಡ್ರೆಸ್ಸಿಂಗ್​ ರೂಮ್​ಗೆ ಬಂದ ಕೆಕೆಆರ್​​ ಎಡಗೈ ಬ್ಯಾಟರ್​ ರಿಂಕು ಸಿಂಗ್​ ಅವರಿಗೆ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿದ್ದಾರೆ. ಇದರ ಫೋಟೋ ವೈರಲ್ ಆಗುತ್ತಿದೆ.
icon

(4 / 8)

ಇದರ ನಂತರ ಆರ್​​ಸಿಬಿ ಡ್ರೆಸ್ಸಿಂಗ್​ ರೂಮ್​ಗೆ ಬಂದ ಕೆಕೆಆರ್​​ ಎಡಗೈ ಬ್ಯಾಟರ್​ ರಿಂಕು ಸಿಂಗ್​ ಅವರಿಗೆ ವಿರಾಟ್ ಕೊಹ್ಲಿ ವಿಶೇಷ ಉಡುಗೊರೆ ನೀಡಿದ್ದಾರೆ. ಇದರ ಫೋಟೋ ವೈರಲ್ ಆಗುತ್ತಿದೆ.

ಆರ್​​ಸಿಬಿ ಡ್ರೆಸ್ಸಿಂಗ್​ ರೂಮ್​ಗೆ ಬಂದ ರಿಂಕು ಸಿಂಗ್​​ಗೆ ಕೊಹ್ಲಿ ತನ್ನ ವಿಶೇಷ ಬ್ಯಾಟ್ ಅನ್ನು ಗಿಫ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂ ಸ್ಟೋರಿ ಹಾಕಿರುವ ರಿಂಕು, ಬ್ಯಾಟ್ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.
icon

(5 / 8)

ಆರ್​​ಸಿಬಿ ಡ್ರೆಸ್ಸಿಂಗ್​ ರೂಮ್​ಗೆ ಬಂದ ರಿಂಕು ಸಿಂಗ್​​ಗೆ ಕೊಹ್ಲಿ ತನ್ನ ವಿಶೇಷ ಬ್ಯಾಟ್ ಅನ್ನು ಗಿಫ್ಟ್ ಕೊಟ್ಟಿದ್ದಾರೆ. ಈ ಬಗ್ಗೆ ಇನ್​ಸ್ಟಾಗ್ರಾಂ ಸ್ಟೋರಿ ಹಾಕಿರುವ ರಿಂಕು, ಬ್ಯಾಟ್ ಕೊಟ್ಟಿದ್ದಕ್ಕೆ ಧನ್ಯವಾದ ಸಲ್ಲಿಸಿದ್ದಾರೆ.

ಪಂದ್ಯದ ಸೋಲಿನ ಬಳಿಕ ಆರ್​​ಸಿಬಿ, ಹಂಚಿಕೊಂಡ ಡ್ರೆಸ್ಸಿಂಗ್​ ರೂಮ್ ವಿಡಿಯೋದಲ್ಲಿ ಕೊಹ್ಲಿ ಅವರನ್ನು ರಿಂಕು ಭೇಟಿಯಾಗಿದ್ದಾರೆ. ಅದರಲ್ಲಿ ಸಹಿ ಮಾಡಿದ ಬ್ಯಾಟ್ ಕೊಟ್ಟಿದ್ದನ್ನು ಕಾಣಬಹುದು.
icon

(6 / 8)

ಪಂದ್ಯದ ಸೋಲಿನ ಬಳಿಕ ಆರ್​​ಸಿಬಿ, ಹಂಚಿಕೊಂಡ ಡ್ರೆಸ್ಸಿಂಗ್​ ರೂಮ್ ವಿಡಿಯೋದಲ್ಲಿ ಕೊಹ್ಲಿ ಅವರನ್ನು ರಿಂಕು ಭೇಟಿಯಾಗಿದ್ದಾರೆ. ಅದರಲ್ಲಿ ಸಹಿ ಮಾಡಿದ ಬ್ಯಾಟ್ ಕೊಟ್ಟಿದ್ದನ್ನು ಕಾಣಬಹುದು.

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಮತ್ತೊಂದು ಅದ್ಭುತ ಇನ್ನಿಂಗ್ಸ್​ ಕಟ್ಟಿದರು. 59 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​ ಸಹಿತ 83 ರನ್​​ ಗಳಿಸಿದರು. ರಿಂಕು ಸಿಂಗ್​ ಈ ಪಂದ್ಯದಲ್ಲಿ ಅಜೇಯ 5 ರನ್ ಗಳಿಸಿದರು.
icon

(7 / 8)

ಈ ಪಂದ್ಯದಲ್ಲಿ ವಿರಾಟ್ ಕೊಹ್ಲಿ, ಮತ್ತೊಂದು ಅದ್ಭುತ ಇನ್ನಿಂಗ್ಸ್​ ಕಟ್ಟಿದರು. 59 ಎಸೆತಗಳಲ್ಲಿ 4 ಬೌಂಡರಿ, 4 ಸಿಕ್ಸರ್​ ಸಹಿತ 83 ರನ್​​ ಗಳಿಸಿದರು. ರಿಂಕು ಸಿಂಗ್​ ಈ ಪಂದ್ಯದಲ್ಲಿ ಅಜೇಯ 5 ರನ್ ಗಳಿಸಿದರು.(AFP)

ಸದ್ಯ ಅಂಕಪಟ್ಟಿಯಲ್ಲಿ ಕೆಕೆಆರ್​​ 2ನೇ ಸ್ಥಾನದಲ್ಲಿದೆ. ಆರ್​​ಸಿಬಿ 6ನೇ ಸ್ಥಾನ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್​ ಅಗ್ರಸ್ಥಾನದಲ್ಲಿದೆ. ರಾಜಸ್ತಾನ 3, ಹೈದರಾಬಾದ್ 4, ಪಂಜಾಬ್ ಐದನೇ ಸ್ಥಾನದಲ್ಲಿವೆ.
icon

(8 / 8)

ಸದ್ಯ ಅಂಕಪಟ್ಟಿಯಲ್ಲಿ ಕೆಕೆಆರ್​​ 2ನೇ ಸ್ಥಾನದಲ್ಲಿದೆ. ಆರ್​​ಸಿಬಿ 6ನೇ ಸ್ಥಾನ ಪಡೆದಿದೆ. ಚೆನ್ನೈ ಸೂಪರ್ ಕಿಂಗ್ಸ್​ ಅಗ್ರಸ್ಥಾನದಲ್ಲಿದೆ. ರಾಜಸ್ತಾನ 3, ಹೈದರಾಬಾದ್ 4, ಪಂಜಾಬ್ ಐದನೇ ಸ್ಥಾನದಲ್ಲಿವೆ.(AFP)

IPL_Entry_Point

ಇತರ ಗ್ಯಾಲರಿಗಳು