ಆರ್​ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟ ವಿರಾಟ್ ಕೊಹ್ಲಿ; ಕಿಂಗ್ ಭಾವುಕರಾದ ಕ್ಷಣಗಳು ಹೀಗಿದ್ದವು, PHOTOS
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಆರ್​ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟ ವಿರಾಟ್ ಕೊಹ್ಲಿ; ಕಿಂಗ್ ಭಾವುಕರಾದ ಕ್ಷಣಗಳು ಹೀಗಿದ್ದವು, Photos

ಆರ್​ಸಿಬಿ ಟ್ರೋಫಿ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟ ವಿರಾಟ್ ಕೊಹ್ಲಿ; ಕಿಂಗ್ ಭಾವುಕರಾದ ಕ್ಷಣಗಳು ಹೀಗಿದ್ದವು, PHOTOS

  • ಆರ್​​ಸಿಬಿ 18 ವರ್ಷಗಳ ಸುದೀರ್ಘ ಕಾಯುವಿಕೆ ಅಂತ್ಯಗೊಂಡಿದೆ. ಇದೇ ಮೊದಲ ಬಾರಿಗೆ ಐಪಿಎಲ್ ಟ್ರೋಫಿ ಗೆದ್ದು ಸಂಭ್ರಮಿಸಿದೆ. 2008ರಿಂದ ಒಂದೇ ತಂಡದ ಪರ ಆಡುತ್ತಿರುವ ಕಪ್ ಗೆಲ್ಲುತ್ತಿದ್ದಂತೆಯೇ ಕೊಹ್ಲಿ, ಭಾವುಕರಾದರು.

18 ವರ್ಷಗಳ ನಂತರ ಕೊನೆಗೂ ಆರ್​ಸಿಬಿ ಚೊಚ್ಚಲ ಐಪಿಎಲ್ ಚಾಂಪಿಯನ್ ಪಟ್ಟ ಅಲಂಕರಿಸಿದೆ. ಸೋಲು, ಟ್ರೋಲುಗಳ ನಡುವೆಯೂ ಅಭಿಮಾನಿಗಳು ಮತ್ತು ಆರ್​ಸಿಬಿ ತಂಡಕ್ಕೆ ನಿಷ್ಠೆ ತೋರಿದ್ದ ವಿರಾಟ್ ಕೊಹ್ಲಿ, ಬೆಂಗಳೂರು ಐತಿಹಾಸಿಕ ಪ್ರಶಸ್ತಿ ಗೆಲ್ಲುತ್ತಿದ್ದಂತೆ ಕಣ್ಣೀರಿಟ್ಟರು.
icon

(1 / 5)

(PTI)

ಮಂಗಳವಾರ (ಜೂನ್ 3) ನಡೆದ ಐಪಿಎಲ್ 2025ರ ಫೈನಲ್​​ನಲ್ಲಿ ಆರ್​​ಸಿಬಿ ಪಂಜಾಬ್ ಕಿಂಗ್ಸ್ ತಂಡವನ್ನು ಸೋಲಿಸಿತು. ಕೊನೆಯ ಓವರ್​​​ನಲ್ಲಿ ತಂಡದ ಗೆಲುವು ಖಚಿತವಾದ ಕೂಡಲೇ ಕೊಹ್ಲಿ ಕಣ್ಣೀರಿಟ್ಟರು. ಪಂದ್ಯ ಮುಗಿದ ಕೂಡಲೇ ಅವರು ಮೈದಾನದಲ್ಲೇ ಶಿರಬಾಗಿ ಅತ್ತುಬಿಟ್ಟರು.
icon

(2 / 5)

(AP)

ವಿರಾಟ್ ಕೊಹ್ಲಿ ಕಣ್ಣೀರಿಡುತ್ತಿದ್ದ ಸಂದರ್ಭದಲ್ಲಿ ಸಹ ಆಟಗಾರರು ಅಭಿನಂದಿಸಿದ ಕ್ಷಣ ಇದು.
icon

(3 / 5)

(REUTERS)

ವಿರಾಟ್ ಕೊಹ್ಲಿ ಅವರ ಜರ್ಸಿ ಸಂಖ್ಯೆ 18 ಆಗಿದೆ. ಇದು ಐಪಿಎಲ್​​ನ 18ನೇ ಆವೃತ್ತಿಯಾಗಿದೆ, ಕಪ್ ಗೆದ್ದ ಬಳಿಕ ಸಹ ಆಟಗಾರರೊಂದಿಗೆ ಕೊಹ್ಲಿ ಸಂಭ್ರಮಿಸಿದ ಪರಿ ಹೀಗಿತ್ತು.
icon

(4 / 5)

ಎಬಿ ಡಿವಿಲಿಯರ್ಸ್ ಮತ್ತು ಕ್ರಿಸ್ ಗೇಲ್ ಕೊಹ್ಲಿಯನ್ನು ತಬ್ಬಿಕೊಂಡು ಭಾವುಕರಾದರು, ನಂತರ ತಮ್ಮ ಪತ್ನಿ ಅನುಷ್ಕಾ ಶರ್ಮಾ ಅವರನ್ನು ತಬ್ಬಿಕೊಂಡು ಭಾವುಕರಾದರು.
icon

(5 / 5)

(AFP)

ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು