ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಲು ನಿಜವಾದ ಕಾರಣ ಇದು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಲು ನಿಜವಾದ ಕಾರಣ ಇದು

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ಗೆ ವಿರಾಟ್ ಕೊಹ್ಲಿ ನಿವೃತ್ತಿ ಘೋಷಿಸಲು ನಿಜವಾದ ಕಾರಣ ಇದು

ಟೀಮ್ ಇಂಡಿಯಾ ಮಾಜಿ ನಾಯಕ ವಿರಾಟ್ ಕೊಹ್ಲಿ ಅವರು ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ನಿಂದ ನಿವೃತ್ತಿ ಹೊಂದಲು ಪ್ರಮುಖ ಕಾರಣ ಏನೆಂದು ಅವರೇ ಬಹಿರಂಗಪಡಿಸಿದ್ದಾರೆ.

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​ಗೆ ತಾನು ನಿವೃತ್ತಿ ಘೋಷಿಸಿದ್ದು ಏಕೆ ಎಂದು ಸೂಪರ್ ಸ್ಟಾರ್​​ ವಿರಾಟ್ ಕೊಹ್ಲಿ ಬಹಿರಂಗಪಡಿಸಿದ್ದಾರೆ. ಯುವ ಆಟಗಾರರಿಗೆ ಹಿರಿಯ ಆಟಗಾರರಿಂದ ತೊಂದರೆ ಉಂಟಾಗಬಾರದು ಎನ್ನುವ ಕಾರಣಕ್ಕೆ ನಿವೃತ್ತಿ ನಿರ್ಧಾರ ಕೈಗೊಂಡಿರುವುದಾಗಿ ಹೇಳಿದ್ದಾರೆ.
icon

(1 / 8)

18ನೇ ಆವೃತ್ತಿಯ ಐಪಿಎಲ್​ನಲ್ಲಿ ಆರ್​​ಸಿಬಿ ಬ್ಯಾಟರ್​ ವಿರಾಟ್ ಕೊಹ್ಲಿ ಅದ್ಭುತ ಲಯದಲ್ಲಿದ್ದಾರೆ. ತಂಡದ ಗೆಲುವಿಗೆ ಶ್ರಮಿಸುತ್ತಿದ್ದಾರೆ. ಸ್ಟ್ರೈಕ್​ರೇಟ್ ಬಗ್ಗೆ ಕೆಲವರು ಟೀಕೆ ಮಾಡುತ್ತಿದ್ದರೂ  ಮತ್ತೊಂದು ಎಂಡ್​​ನಲ್ಲಿ ಅವರ ನಿರ್ವಹಿಸುತ್ತಿರುವ ಕಾರ್ಯ ಅಮೋಘವಾದದ್ದು ಎಂದು ಕೆಲ ಕ್ರಿಕೆಟ್ ತಜ್ಞರಿಂದ ಅಭಿಪ್ರಾಯ ಕೇಳಿ ಬರುತ್ತಿದೆ.
icon

(2 / 8)

ಕೊಹ್ಲಿ ನಿಧಾನವಾಗಿ ಆಡುತ್ತಿದ್ದಾರೆ ನಿಜ. ಅದಕ್ಕೆ ಸಂಬಂಧಿಸಿ ಸ್ಟ್ರೈಕ್​ರೇಟ್ ಕೂಡ ಹೇಳಿಕೊಳ್ಳುವಂತಿಲ್ಲ. ಆದರೆ ಅವರು ವಿಕೆಟ್ ರಕ್ಷಿಸಲು ಮತ್ತು ತಂಡವು ಒತ್ತಡಕ್ಕೆ ಸಿಲುಕಿದ ಸಮಯದಲ್ಲೆಲ್ಲಾ ಅವರು ಒಬ್ಬ ಆಪತ್ಭಾಂಧವನನಾಗಿದ್ದಾರೆ ಎಂಬುದು ಅಷ್ಟೇ ಸತ್ಯ. ವೇಗವಾಗಿಯೂ ಬ್ಯಾಟ್ ಬೀಸುತ್ತಾರೆ, ನಿಧಾನವಾಗಿ ಆಡುವ ಶಕ್ತಿಯೂ ಅವರಲ್ಲಿದೆ.
icon

(3 / 8)

(ICC-X)

ವಿರಾಟ್ ಕೊಹ್ಲಿ ಕಳೆದ 1 ವರ್ಷದಲ್ಲಿ ಐಪಿಎಲ್ ಪ್ಲೇಆಫ್ ಆಡುವುದರ ಜೊತೆಗೆ 2024ರ ಟಿ20 ವಿಶ್ವಕಪ್ ಗೆದ್ದಿದ್ದು, ಫೈನಲ್​​ನಲ್ಲಿ ಪಂದ್ಯಶ್ರೇಷ್ಠ ಪ್ರಶಸ್ತಿಗೂ ಭಾಜನರಾಗಿದ್ದಾರೆ. ಇತ್ತೀಚೆಗೆ ಚಾಂಪಿಯನ್ಸ್ ಟ್ರೋಫಿಯಲ್ಲಿ  ಕೂಡ ಅದ್ಭುತ ಪ್ರದರ್ಶನ ನೀಡಿದ್ದರು. ಹೀಗಿದ್ದರೂ ಟಿ20 ಕ್ರಿಕೆಟ್​​ನಲ್ಲಿ ತೊರೆದಿದ್ದೇಕೆ ಎಂದು ಕೊಹ್ಲಿಯೇ ಸ್ವತಃ ಉತ್ತರಿಸಿದ್ದಾರೆ.
icon

(4 / 8)

(ICC X)

ಅಂತಾರಾಷ್ಟ್ರೀಯ ಟಿ20 ಕ್ರಿಕೆಟ್​​ನಿಂದ ನಿವೃತ್ತಿ ನನ್ನ ಮೇಲೆ ಹೆಚ್ಚಿನ ಪರಿಣಾಮ ಬೀರಿಲ್ಲ ಎಂದು ನಾನು ಭಾವಿಸುತ್ತೇನೆ. ನಾನು ಸಾಕಷ್ಟು ಯೋಚಿಸಿಯೇ ಈ ನಿರ್ಧಾರ ತೆಗೆದುಕೊಂಡಿದ್ದೇನೆ. ಏಕೆಂದರೆ ಹೊಸ ಆಟಗಾರರು ಬರುತ್ತಿದ್ದು, ಅವರು ಕುದುರಿಕೊಳ್ಳಲು 2-3 ವರ್ಷಗಳ ಸಮಯ ಬೇಕಾಗುತ್ತದೆ ಎಂದು ಹೇಳಿದ್ದಾರೆ.
icon

(5 / 8)

(REUTERS)

ಅಂತಾರಾಷ್ಟ್ರೀಯ ಕ್ರಿಕೆಟ್​​ನಲ್ಲಿ ಒತ್ತಡದಲ್ಲಿ ತಮ್ಮನ್ನು ಹೇಗೆ ವ್ಯಕ್ತಪಡಿಸಬೇಕೆಂದು ಅರ್ಥಮಾಡಿಕೊಳ್ಳುವುದು ಮುಖ್ಯ. ಮುಂದಿನ ವಿಶ್ವಕಪ್​​ಗೂ ಮುನ್ನ ಯುವ ಆಟಗಾರರು ವಿಶ್ವದ ವಿವಿಧ ದೇಶಗಳಲ್ಲಿ ವಿಭಿನ್ನ ಪರಿಸ್ಥಿತಿಗಳಲ್ಲಿ ಆಡಿದ ಅನುಭವ ಅವರು ಪಡೆಯಬೇಕು. ಆ ಮೂಲಕ ಮಹತ್ವದ ಟೂರ್ನಿಗೆ ಅವರು ಸಿದ್ದರಾಗಲು ನೆರವಾಗುತ್ತದೆ ಎಂದು ಯುವ ಆಟಗಾರರ ಕುರಿತು ಹೇಳಿದ್ದಾರೆ.
icon

(6 / 8)

ವಿರಾಟ್ ಕೊಹ್ಲಿ ತಮ್ಮ ಅಂತಾರಾಷ್ಟ್ರೀಯ ಟಿ20 ವೃತ್ತಿಜೀವನದಲ್ಲಿ 125 ಪಂದ್ಯಗಳಲ್ಲಿ 4188 ರನ್ ಗಳಿಸಿದ್ದು, ಬ್ಯಾಟಿಂಗ್ ಸರಾಸರಿ 48 ಹೊಂದಿದ್ದಾರೆ. 2014 ಮತ್ತು 2016ರ ಐಸಿಸಿ ಟಿ20 ವಿಶ್ವಕಪ್​ನಲ್ಲಿ ಸರಣಿ ಶ್ರೇಷ್ಠ ಪ್ರಶಸ್ತಿಗೆ ಭಾಜನರಾಗಿದ್ದರು. ಕಳೆದ ಐಪಿಎಲ್​ನಲ್ಲಿ ಆರೆಂಜ್ ಕ್ಯಾಪ್ ಕೂಡ ಗೆದ್ದಿದ್ದರು.
icon

(7 / 8)

(AFP)

2025ರ ಐಪಿಎಲ್​ನಲ್ಲಿ 10 ಇನ್ನಿಂಗ್ಸ್​​ಗಳಲ್ಲಿ 63.29 ಸರಾಸರಿಯಲ್ಲಿ 443 ರನ್ ಗಳಿಸಿದ್ದಾರೆ. ಈಗ ಯುವ ಆಟಗಾರರಿಗೆ ಪೈಪೋಟಿ ನೀಡುತ್ತಿದ್ದಾರೆ. ಆದರೆ ಭಾರತದ ಟಿ20 ತಂಡದಲ್ಲಿ ಅವರ ಅಲಭ್ಯತೆ ಕಾಡುವುದು ನಿಜಕ್ಕೂ ಸುಳ್ಳಲ್ಲ.
icon

(8 / 8)

(PTI)

Prasanna Kumar PN

TwittereMail
ಪ್ರಸನ್ನಕುಮಾರ್ ಪಿ.ಎನ್.: 'ಹಿಂದೂಸ್ತಾನ್ ಟೈಮ್ಸ್​​ ಕನ್ನಡ'ದಲ್ಲಿ ಸೀನಿಯರ್​ ಕಂಟೆಂಟ್ ಪ್ರೊಡ್ಯೂಸರ್. ಕ್ರೀಡಾ (ಕ್ರಿಕೆಟ್) ವಿಭಾಗದಲ್ಲಿ ಕಾರ್ಯನಿರ್ವಹಣೆ. ಸಂಜೆವಾಣಿ, ವಿಶ್ವವಾಣಿ, ಪ್ರಜಾವಾಣಿ, ಈಟಿವಿ ಭಾರತ್, ನ್ಯೂಸ್ ಫಸ್ಟ್​ ಮಾಧ್ಯಮ ಸಂಸ್ಥೆಗಳಲ್ಲಿ ಒಟ್ಟು 7 ವರ್ಷ ಸೇವೆ ಸಲ್ಲಿಸಿದ ಅನುಭವ. ಬೆಂಗಳೂರು ಗ್ರಾಮಾಂತರ ಜಿಲ್ಲೆ ದೊಡ್ಡಬಳ್ಳಾಪುರ ತಾಲೂಕಿನ ಪುಟ್ಟಲಿಂಗಯ್ಯನಪಾಳ್ಯ ಇವರ ಊರು. ಸದ್ಯಕ್ಕೆ ಬೆಂಗಳೂರು ನಿವಾಸಿ.

ಇತರ ಗ್ಯಾಲರಿಗಳು