ಟಿ20ಐ ಕ್ರಿಕೆಟ್ನಲ್ಲಿ ಪಾಕಿಸ್ತಾನ ತಂಡದ ವಿರುದ್ಧ ಅತ್ಯಧಿಕ ರನ್ ಗಳಿಸಿದ ಭಾರತೀಯ ಆಟಗಾರರು
- Most runs against Pakistan : ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಅತ್ಯಧಿಕ ರನ್ ಕಲೆ ಹಾಕಿದ ಭಾರತದ ಟಾಪ್-5 ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
- Most runs against Pakistan : ಟಿ20ಐ ಕ್ರಿಕೆಟ್ ಇತಿಹಾಸದಲ್ಲಿ ಪಾಕಿಸ್ತಾನ ಕ್ರಿಕೆಟ್ ತಂಡದ ವಿರುದ್ಧ ಅತ್ಯಧಿಕ ರನ್ ಕಲೆ ಹಾಕಿದ ಭಾರತದ ಟಾಪ್-5 ಆಟಗಾರರು ಯಾರು ಎಂಬುದನ್ನು ಈ ಮುಂದೆ ನೋಡೋಣ.
(1 / 5)
ಪಾಕಿಸ್ತಾನ ವಿರುದ್ಧ ಅತಿ ಹೆಚ್ಚು ಟಿ20ಐ ರನ್ ಗಳಿಸಿದ ಆಟಗಾರರ ಕಿ ವಿರಾಟ್ ಕೊಹ್ಲಿ ಅಗ್ರಸ್ಥಾನದಲ್ಲಿದ್ದಾರೆ. 10 ಪಂದ್ಯಗಳಲ್ಲಿ 81.33ರ ಬ್ಯಾಟಿಂಗ್ ಸರಾಸರಿಯಲ್ಲಿ 488 ರನ್ ಸಿಡಿಸಿದ್ದಾರೆ. ಇದರಲ್ಲಿ ಐದು ಅರ್ಧಶತಕಗಳೂ ಸೇರಿವೆ. ಬ್ಯಾಟಿಂಗ್ ಸ್ಟ್ರೈಕ್ರೇಟ್ 123.85. ಗರಿಷ್ಠ ಸ್ಕೋರ್ ಅಜೇಯ 82.
(2 / 5)
ಯುವರಾಜ್ ಸಿಂಗ್ ಈ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಎಡಗೈ ಬ್ಯಾಟ್ಸ್ಮನ್ ಪಾಕ್ ವಿರುದ್ಧ ಆಡಿರುವ 8 ಟಿ20ಐಗಳಲ್ಲಿ 1 ಅರ್ಧಶತಕ ಸಹಿತ 155 ರನ್ ಗಳಿಸಿದ್ದಾರೆ. 2007ರಲ್ಲಿ ಪಾಕ್ ವಿರುದ್ಧ ಮೊದಲ ಟಿ20ಐ ಆಡಿದ್ದರು. ಬ್ಯಾಟಿಂಗ್ ಸರಾಸರಿ 25.83. ಬ್ಯಾಟಿಂಗ್ ಸ್ಟ್ರೈಕ್ರೇಟ್ 109.92. ಗರಿಷ್ಠ ಸ್ಕೋರ್ 72.
(3 / 5)
ಗೌತಮ್ ಗಂಭೀರ್ ಪಾಕಿಸ್ತಾನ ವಿರುದ್ಧ ಅತ್ಯಧಿಕ ರನ್ ಗಳಿಸಿದ ಭಾರತದ ಮೂರನೇ ಬ್ಯಾಟರ್. ಬದ್ಧವೈರಿ ವಿರುದ್ಧ 5 ಟಿ20ಐ ಆಡಿರುವ ಗೌತಿ, 139 ರನ್ ಗಳಿಸಿದ್ದಾರೆ. 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಇದೇ ತಂಡದ ವಿರುದ್ಧ 75 ರನ್ಗಳ ಮ್ಯಾಚ್ ವಿನ್ನಿಂಗ್ ಪ್ರದರ್ಶನ ನೀಡಿದ್ದರು. ಬ್ಯಾಟಿಂಗ್ ಸ್ಟ್ರೈಕ್ರೇಟ್ 125.22. ಬ್ಯಾಟಿಂಗ್ ಸರಾಸರಿ 27.80.
(4 / 5)
ನಾಲ್ಕನೇ ಸ್ಥಾನದಲ್ಲಿರುವ ರೋಹಿತ್ ಶರ್ಮಾ ಪಾಕಿಸ್ತಾನ ವಿರುದ್ಧ ಅತ್ಯುತ್ತಮ ಪ್ರದರ್ಶನ ನೀಡುವಲ್ಲಿ ವಿಫಲವಾಗಿದ್ದಾರೆ. ಆಡಿದ 11 ಪಂದ್ಯಗಳಲ್ಲಿ ಕೇವಲ 114 ರನ್ ಗಳಿಸಿದ್ದಾರೆ. 2007ರ ಟಿ20 ವಿಶ್ವಕಪ್ ಫೈನಲ್ನಲ್ಲಿ ಅಜೇಯ 30 ರನ್ ಗಳಿಸಿದ್ದ ರೋಹಿತ್ ಸ್ಟ್ರೈಕ್ರೇಟ್ 118.75. ಬ್ಯಾಟಿಂಗ್ ಸರಾಸರಿ 14.25. ಗರಿಷ್ಠ ಸ್ಕೋರ್ 30*. ಒಂದು ಅರ್ಧಶತಕವನ್ನೂ ದಾಖಲಿಸಿಲ್ಲ ಹಿಟ್ಮ್ಯಾನ್.
ಇತರ ಗ್ಯಾಲರಿಗಳು