IPL 2024: ಐಪಿಎಲ್‌ನ ಆವೃತ್ತಿಯೊಂದರಲ್ಲಿ ಅತಿ ಹೆಚ್ಚು ರನ್ ಗಳಿಸಿದ ಟಾಪ್-5 ಬ್ಯಾಟರ್ಸ್
- Most Runs In Single Edition Of IPL history : ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಟಾಪ್-5 ಬ್ಯಾಟರ್ಸ್ ಟ್ಟಿಯನ್ನು ನೋಡೋಣ.
- Most Runs In Single Edition Of IPL history : ಇಂಡಿಯನ್ ಪ್ರೀಮಿಯರ್ ಲೀಗ್ ಇತಿಹಾಸದಲ್ಲಿ ಒಂದೇ ಆವೃತ್ತಿಯೊಂದರಲ್ಲಿ ಅತ್ಯಧಿಕ ರನ್ ಕಲೆ ಹಾಕಿದ ಟಾಪ್-5 ಬ್ಯಾಟರ್ಸ್ ಟ್ಟಿಯನ್ನು ನೋಡೋಣ.
(1 / 9)
2024ರ ಐಪಿಎಲ್ಗೆ ದಿನಗಣನೆ ಶುರುವಾಗಿದೆ. ಶೀಘ್ರದಲ್ಲೇ ಐಪಿಎಲ್ ವೇಳಾಪಟ್ಟಿಯೂ ಬಿಡುಗಡೆಯಾಗಲಿದೆ. ಆದರೆ ಅದಕ್ಕೂ ಮುನ್ನವೇ ಸ್ಟಾರ್ ಆಟಗಾರರ ಮೇಲೆ ನಿರೀಕ್ಷೆ ಹೆಚ್ಚಾಗಿದೆ. ಬ್ಯಾಟ್ಸ್ಮನ್ಗಳಿಂದ ರನ್ಮಳೆಯ ನಿರೀಕ್ಷೆ ಮಾಡಲಾಗಿದೆ. ಹಾಗಾದರೆ ಐಪಿಎಲ್‌ನ ಒಂದೇ ಆವೃತ್ತಿಯಲ್ಲಿ ಹೆಚ್ಚು ರನ್ ಕಲೆ ಹಾಕಿದ ಟಾಪ್-5 ಬ್ಯಾಟರ್ಸ್ ಪಟ್ಟಿಯನ್ನು ನೋಡೋಣ.
(2 / 9)
ವಿರಾಟ್ ಕೊಹ್ಲಿ ಆವೃತ್ತಿಯೊಂದರಲ್ಲಿ ಅಧಿಕ ಗಳಿಸಿದ ಆಟಗಾರರ ಪೈಕಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್‌ನಲ್ಲಿ 7000ಕ್ಕೂ ಅಧಿಕ ರನ್ ಗಳಿಸಿರುವ ಕೊಹ್ಲಿ, ಟೂರ್ನಿಯಲ್ಲಿ ಹೆಚ್ಚು ರನ್ ಸ್ಕೋರರ್ ಕೂಡ ಆಗಿದ್ದಾರೆ. ಐಪಿಎಲ್ 2016ರಲ್ಲಿ ಅಮೋಘ ಫಾರ್ಮ್‌ನಲ್ಲಿದ್ದರು. ತಂಡವನ್ನು ಮುನ್ನಡೆಸುವುದರ ಜೊತೆಗೆ ಬ್ಯಾಟಿಂಗ್ನಲ್ಲೂ ಹೊಸ ಇತಿಹಾಸ ಸೃಷ್ಟಿಸಿದ್ದರು.
(3 / 9)
2016ರ ಆವೃತ್ತಿಯಲ್ಲಿ ಆರ್ಸಿಬಿ ತಂಡವನ್ನು ಫೈನಲ್ಗೇರಿಸಿದ್ದ ಕೊಹ್ಲಿ, ಬ್ಯಾಟಿಂಗ್ನಲ್ಲಿ ವಿದ್ವಂಸ ಸೃಷ್ಟಿಸಿದ್ದರು. ಆ ಸೀಸನ್ನಲ್ಲಿ ನಾಲ್ಕು ಶತಕ ಹಾಗೂ ಏಳು ಅರ್ಧಶತಕ ಸೇರಿದಂತೆ ಬರೋಬ್ಬರಿ 973 ರನ್ ಗಳಿಸಿದ್ದರು. ದುರಾದೃಷ್ಟ ಏನೆಂದರೆ ಆರ್ಸಿಬಿ ಫೈನಲ್ನಲ್ಲಿ ಸೋಲು ಕಂಡಿತು. ಆದರೆ ಕೊಹ್ಲಿ ಆರೆಂಜ್ ಕ್ಯಾಪ್ ಗೆದ್ದರು.
(4 / 9)
ಶುಭ್ಮನ್ ಗಿಲ್ ಐಪಿಎಲ್‌ನಲ್ಲಿ ಅತ್ಯಂತ ಸ್ಥಿರವಾದ ಬ್ಯಾಟ್ಸ್‌ಮನ್‌ಗಳಲ್ಲಿ ಒಬ್ಬರು. ಗುಜರಾತ್ ಟೈಟಾನ್ಸ್ ಫೈನಲ್ ತಲುಪಿದ ಐಪಿಎಲ್ 2023 ರಲ್ಲಿ ಆ ತಂಡದ ಪರ ಆಡುವಾಗ ಭಯಾನಕ ಫಾರ್ಮ್‌ನಲ್ಲಿದ್ದರು. ವಿನಾಶಕಾರಿ ಫಾರ್ಮ್‌ನಲ್ಲಿದ್ದ ಗಿಲ್, 3 ಶತಕ, 4 ಅರ್ಧಶತಕಗಳೊಂದಿಗೆ 890 ರನ್ ಗಳಿಸಿದ್ದರು.
(5 / 9)
ಜೋಸ್ ಬಟ್ಲರ್ 2022ರ ಐಪಿಎಲ್‌ನಲ್ಲಿ ಕ್ರೂರ ಫಾರ್ಮ್‌ನಲ್ಲಿದ್ದರು. ರಾಜಸ್ಥಾನ ರಾಯಲ್ಸ್ ಫೈನಲ್ ತಲುಪುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. 17 ಪಂದ್ಯಗಳಲ್ಲಿ 4 ಅರ್ಧಶತಕ, 4 ಶತಕ ಸೇರಿ 863 ರನ್ ಗಳಿಸಿದರು. ದುರದೃಷ್ಟವಶಾತ್, ಆರ್ಆರ್ ಪ್ರಶಸ್ತಿಯನ್ನು ಗೆಲ್ಲಲು ಸಾಧ್ಯವಾಗಲಿಲ್ಲ. ಆದರೆ ಬಟ್ಲರ್ ಆರೆಂಜ್ ಕ್ಯಾಪ್ ಗೆದ್ದರು.
(6 / 9)
ಡೇವಿಡ್ ವಾರ್ನರ್ ನಾಯಕತ್ವದಲ್ಲಿ ಎಸ್ಆರ್ಎಚ್ ಚಾಂಪಿಯನ್ ಪಟ್ಟ ಅಲಂಕರಿಸಿತು. 2016ರ ಐಪಿಎಲ್ ಫೈನಲ್ನಲ್ಲಿ ಆರ್ಸಿಬಿ ವಿರುದ್ಧ ಹೈದರಾಬಾದ್ ಗೆದ್ದು ಚೊಚ್ಚಲ ಪ್ರಶಸ್ತಿಗೆ ಮುತ್ತಿಕ್ಕಿತ್ತು. ವಾರ್ನರ್ 2016ರ ಋತುವಿನಲ್ಲಿ 9 ಅರ್ಧಶತಕಗಳನ್ನು ಒಳಗೊಂಡಂತೆ 848 ರನ್ ಗಳಿಸಿ ಗಮನ ಸೆಳೆದರು.
(7 / 9)
ಕೇನ್ ವಿಲಿಯಮ್ಸನ್ 2018ರ ಐಪಿಎಲ್‌ನಲ್ಲಿ ಎಸ್ಆರ್ಎಚ್ ತಂಡದ ಪರ ಅದ್ಭುತ ಫಾರ್ಮ್‌ನಲ್ಲಿದ್ದರು. ಫೈನಲ್ವರೆಗೂ ತಂಡವನ್ನು ಮುನ್ನಡೆಸಿದ ಅವರು, ಪ್ರಶಸ್ತಿ ಸುತ್ತಿನ ಪಂದ್ಯದಲ್ಲಿ ಸಿಎಸ್ಕೆ ವಿರುದ್ಧ ಸೋತರು. ಆ ಸೀಸನ್ನಲ್ಲಿ 17 ಪಂದ್ಯಗಳಲ್ಲಿ 1 ಶತಕ, 7 ರ್ಧಶತಕ ಸೇರಿದಂತೆ 735 ರನ್ ಗಳಿಸಿದ್ದಾರೆ. ಆ ಮೂಲಕ ಆವೃತ್ತಿಯೊಂದರಲ್ಲಿ ಅಧಿಕ ರನ್ ಗಳಿಸಿದ ಟಾಪ್-5ನೇ ಆಟಗಾರ ಎನಿಸಿದ್ದಾರೆ.
(8 / 9)
ಸದ್ಯ ಈ ಆಟಗಾರರ ಮೇಲೆ ಈ ಬಾರಿಯೂ ನಿರೀಕ್ಷೆ ಇದೆ. ಇವರಷ್ಟೇ ಅಲ್ಲದೆ, ಕೆಎಲ್ ರಾಹುಲ್, ಫಾಫ್ ಡು ಪ್ಲೆಸಿಸ್, ರೋಹಿತ್ ಶರ್ಮಾ, ಸೂರ್ಯಕುಮಾರ್ ಯಾದವ್ ಸೇರಿ ಹಲವರು ಈ ಬಾರಿ ಆರೆಂಜ್ ಕ್ಯಾಪ್ ಗೆಲ್ಲುವ ರೇಸ್ನಲ್ಲಿದ್ದಾರೆ. ಯುವ ಆಟಗಾರರು ಸಹ ಅನುಭವಿ ಆಟಗಾರರಿಗೆ ಪೈಪೋಟಿ ನೀಡಲು ಸಜ್ಜಾಗಿದ್ದಾರೆ.
ಇತರ ಗ್ಯಾಲರಿಗಳು