ವಿರಾಟ್ ಕೊಹ್ಲಿ ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ಫೋಟೋ ವೈರಲ್; ಪ್ರತಿ ವಿಷಯದಲ್ಲಿ ಗಳಿಸಿದ್ದೆಷ್ಟು?
- ಟೀಮ್ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಎಸ್ಎಸ್ಎಲ್ಸಿ ಅಂಕಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೊಹ್ಲಿ ಗಳಿಸಿರುವ ಅಂಕವೆಷ್ಟು?
- ಟೀಮ್ ಇಂಡಿಯಾ ಸೂಪರ್ ಸ್ಟಾರ್ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ ಎಸ್ಎಸ್ಎಲ್ಸಿ ಅಂಕಪಟ್ಟಿಯು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿದೆ. ಕೊಹ್ಲಿ ಗಳಿಸಿರುವ ಅಂಕವೆಷ್ಟು?
(1 / 7)
ಕೇಂದ್ರೀಯ ಪ್ರೌಢ ಶಿಕ್ಷಣ ಮಂಡಳಿ (CBSE) 10ನೇ ತರಗತಿಯ 2024ನೇ ಸಾಲಿನ ಫಲಿತಾಂಶ ಬಿಡುಗಡೆ ಮಾಡಿದ್ದು, ವಿದ್ಯಾರ್ಥಿಗಳ ಉತ್ತೀರ್ಣ ಪ್ರಮಾಣ ಶೇ. 96.3 ತಲುಪಿರುವುದು ಎಲ್ಲರನ್ನೂ ಆಕರ್ಷಿಸಿದೆ. ಬೋರ್ಡ್ ಪರೀಕ್ಷೆಯ ಫಲಿತಾಂಶ ಪ್ರಕಟದ ಬೆನ್ನಲ್ಲೇ ಕ್ರಿಕೆಟಿಗ ವಿರಾಟ್ ಕೊಹ್ಲಿ ಅವರ 10ನೇ ತರಗತಿ ಅಂಕಪಟ್ಟಿ ವೈರಲ್ ಆಗ್ತಿದೆ.
(2 / 7)
ಮೇ 12ರಂದು ಟೆಸ್ಟ್ ಕ್ರಿಕೆಟ್ಗೆ ವಿರಾಟ್ ಕೊಹ್ಲಿ ವಿದಾಯ ಹೇಳಿದ್ದಾರೆ. ಇನ್ಮುಂದೆ ವಿರಾಟ್ ಟೆಸ್ಟ್ ಆಡೋದಿಲ್ಲ ಎಂಬುದನ್ನು ಅರಗಿಸಿಕೊಳ್ಳಲು ಅಭಿಮಾನಿಗಳಿಂದ ಸಾಧ್ಯವಾಗುತ್ತಿಲ್ಲ. ಈ ಮಧ್ಯೆಯೇ ಅವರ ಎಸ್ಎಸ್ಎಲ್ಸಿ ಮಾರ್ಕ್ಸ್ ಕಾರ್ಡ್ ವೈರಲ್ ಆಗುತ್ತಿದೆ. ಈ ಕುರಿತು ಒಂದು ಫೋಟೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ.
(3 / 7)
ಚಿಕ್ಕಂದಿನಿಂದಲೇ ಕ್ರಿಕೆಟ್ ಮೇಲೆ ಆಸಕ್ತಿ ಹೆಚ್ಚಿಸಿಕೊಂಡಿದ್ದ ವಿರಾಟ್, ಓದಿಗಿಂತ ಹೆಚ್ಚು ಆಟದಲ್ಲೇ ಮುಂದಿದ್ದರು. ಅದೇ ಕಾರಣಕ್ಕೆ 10ನೇ ತರಗತಿಯಲ್ಲಿ (ಸಿಬಿಎಸ್ಇ) ಅತಿ ಹೆಚ್ಚು ಮಾರ್ಕ್ಸ್ ಪಡೆಯಲು ಸಾಧ್ಯವಾಗಿಲ್ಲ. ಕ್ರಿಕೆಟ್ ಲೋಕದ ದೊರೆಯರಾಗಿರುವ ವಿರಾಟ್, ಓದಿನಲ್ಲಿ ಸಾಮಾನ್ಯ ವಿದ್ಯಾರ್ಥಿಯಾಗಿದ್ದರು.
(4 / 7)
ಕ್ರಿಕೆಟ್ಗೆ ಸಂಬಂಧಿಸಿ ಅನೇಕ ಅಂಕಿ-ಅಂಶಗಳಲ್ಲಿ ನಂಬರ್ 1 ಆಗಿರುವ ಕೊಹ್ಲಿ, ಇಂಗ್ಲಿಷ್, ಹಿಂದಿ ಹಾಗೂ ಸಾಮಾಜಿಕ ವಿಜ್ಞಾನದಲ್ಲಿ ಉತ್ತಮ ಅಂಕ ಪಡೆದಿದ್ದರು. ಇಂಗ್ಲಿಷ್ನಲ್ಲಿ ಅತ್ಯಧಿಕ ಅಂಕ ಪಡೆದಿದ್ದಾರೆ. ಅವರು 83 ಮಾರ್ಕ್ಸ್ ಪಡೆದಿದ್ದರು. ಹಿಂದಿಯಲ್ಲಿ 75, ಸಾಮಾಜಿಕ ವಿಜ್ಞಾನದಲ್ಲಿ 81 ಅಂಕ ಅವರು ಪಡೆದಿದ್ದಾರೆ.
(5 / 7)
ಗಣಿತ ಹಾಗೂ ವಿಜ್ಞಾನದಲ್ಲಿ ಕೊಹ್ಲಿ ಅಷ್ಟು ಪ್ರತಿಭಾವಂತ ವಿದ್ಯಾರ್ಥಿ ಆಗಿರದ ಕೊಹ್ಲಿ, ಕ್ರಮವಾಗಿ ಕೇವಲ 51, 55 ಅಂಕ ಗಳಿಸಿದ್ದರು. ಆದರೆ ಗಣಿತ ಅಂಕಗಳಲ್ಲಿ ವೀಕ್ ಆಗಿದ್ದರೂ ತಾನು ಬರೆದ ದಾಖಲೆಗಳನ್ನು ಬೇರೆಯವರು ಲೆಕ್ಕಹಾಕುವುದರಲ್ಲಿ ಬ್ಯುಸಿಯಾಗುವಂತೆ ಮಾಡಿದ್ದಾರೆ. ಇಂಟ್ರೊಡಕ್ಷನರಿ ಐಟಿ ವಿಷಯದಲ್ಲಿ ಕೊಹ್ಲಿ 74 ಅಂಕ ಸಿಕ್ಕಿತ್ತು. ಪಾಸ್ ಆಗಿರುವ ಕೊಹ್ಲಿ ಶೇಕಡವಾರು 70ರ ಆಸುಪಾಸಿನಲ್ಲಿದೆ.
(6 / 7)
ವಿರಾಟ್ ಒಟ್ಟು 419 ಅಂಕ ಪಡೆದಿದ್ದರು. ಓದಿನಲ್ಲಿ ಹಿಂದಿದ್ದರೂ ಆಟದಲ್ಲಿ ಸದಾ ಮುಂದಿದ್ದರು. ಅದಕ್ಕೆ ಕ್ರಿಕೆಟ್ನಲ್ಲಿ ತಾನು ಸಾಧಿಸಿದ ಸಾಧನೆಗಳೇ ಸಾಕ್ಷಿ. 14 ವರ್ಷಗಳ ಕಾಲ ಟೆಸ್ಟ್ಗೆ ಗುಡ್ಬೈ ಹೇಳಿರುವ ಕೊಹ್ಲಿ ಏಕದಿನ ಕ್ರಿಕೆಟ್ನಲ್ಲಿ ಮಾತ್ರ ಮುಂದುವರೆಯಲಿದ್ದಾರೆ. ಅವರು ಟೆಸ್ಟ್ನಲ್ಲಿ 30 ಶತಕ ಸಹಿತ 9230 ರನ್ ಗಳಿಸಿದ್ದಾರೆ.
ಇತರ ಗ್ಯಾಲರಿಗಳು