ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದ ವಿರಾಟ್ ಕೊಹ್ಲಿ ಸಹ ಆಟಗಾರ ಸಿದ್ಧಾರ್ಥ್ ಕೌಲ್ ನಿವೃತ್ತಿ!
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದ ವಿರಾಟ್ ಕೊಹ್ಲಿ ಸಹ ಆಟಗಾರ ಸಿದ್ಧಾರ್ಥ್ ಕೌಲ್ ನಿವೃತ್ತಿ!

ಐಪಿಎಲ್ ಹರಾಜಿನಲ್ಲಿ ಮಾರಾಟವಾಗದೆ ಉಳಿದ ವಿರಾಟ್ ಕೊಹ್ಲಿ ಸಹ ಆಟಗಾರ ಸಿದ್ಧಾರ್ಥ್ ಕೌಲ್ ನಿವೃತ್ತಿ!

  • Siddarth Kaul retire: ಐಪಿಎಲ್ 2025ರ ಮೆಗಾ ಹರಾಜಿನಲ್ಲಿ 40 ಲಕ್ಷ ರೂಪಾಯಿ ಮೂಲ ಬೆಲೆಯನ್ನು ಹೊಂದಿದ್ದರೂ ಅನ್​​ಸೋಲ್ಡ್ ಆದ ಟೀಮ್ ಇಂಡಿಯಾ ಸ್ಟಾರ್ ವೇಗಿ ಸಿದ್ಧಾರ್ಥ್ ಕೌಲ್ ನಿವೃತ್ತಿ ಘೋಷಿಸಿದ್ದಾರೆ.

ಐಪಿಎಲ್ 2025ರ ಮೆಗಾ ಹರಾಜಿನಲ್ಲಿ ಮಾರಾಟವಾಗದ ಟೀಮ್ ಇಂಡಿಯಾ ವೇಗಿ ಸಿದ್ಧಾರ್ಥ್ ಕೌಲ್ ಗುರುವಾರ (ನವೆಂಬರ್ 28) ಎಲ್ಲಾ ಮಾದರಿಯ ಕ್ರಿಕೆಟ್​ಗೆ ನಿವೃತ್ತಿ ಘೋಷಿಸಿದ್ದಾರೆ. ಒಂದು ಕಾಲದಲ್ಲಿ ಟೀಮ್ ಇಂಡಿಯಾ ಪರ ಆಡಿದ್ದ ವೇಗಿ, ಸೋಷಿಯಲ್ ಮೀಡಿಯಾದಲ್ಲಿ ಸುದೀರ್ಘ ಪೋಸ್ಟ್​ ಹಾಕುವ ಮೂಲಕ ಅಧಿಕೃತವಾಗಿ ನಿವೃತ್ತಿ ಘೋಷಿಸಿದ್ದಾರೆ. 
icon

(1 / 5)

ಸಿದ್ದಾರ್ಥ್ ಕೌಲ್ ಅವರು 2018ರ ಜೂನ್ ಮತ್ತು 2019ರ ಫೆಬ್ರವರಿ ನಡುವೆ ಭಾರತ ತಂಡದ ಪರ 3 ಏಕದಿನ ಮತ್ತು 3 ಟಿ 20 ಪಂದ್ಯಗಳಲ್ಲಿ ಕಣಕ್ಕಿಳಿದಿದ್ದಾರೆ. ಆದರೆ ಸಿದ್ಧಾರ್ಥ್ ಏಕದಿನ ಕ್ರಿಕೆಟ್​ನಲ್ಲಿ ವಿಕೆಟ್ ಪಡೆಯುವಲ್ಲಿ ವಿಫಲರಾಗಿದ್ದಾರೆ. ಆದರೆ, ಟಿ20 ಅಂತಾರಾಷ್ಟ್ರೀಯ ಕ್ರಿಕೆಟ್​ನಲ್ಲಿ 4 ವಿಕೆಟ್​​ ಪಡೆದಿದ್ದಾರೆ.
icon

(2 / 5)

ಐಪಿಎಲ್​ನಲ್ಲಿ ರಾಯಲ್ ಚಾಲೆಂಜರ್ಸ್ ಬೆಂಗಳೂರು, ಡೆಲ್ಲಿ ಡೇರ್ ಡೆವಿಲ್ಸ್, ಕೋಲ್ಕತಾ ನೈಟ್ ರೈಡರ್ಸ್ ಮತ್ತು ಸನ್ ರೈಸರ್ಸ್ ಹೈದರಾಬಾದ್ ಪರ ಆಡಿರುವ 34 ವರ್ಷದ ವೇಗಿ ಸಿದ್ಧಾರ್ಥ್ ಕೌಲ್, 54 ಐಪಿಎಲ್ ಪಂದ್ಯಗಳಲ್ಲಿ 58 ವಿಕೆಟ್ ಪಡೆದಿದ್ದಾರೆ. ಸಿದ್ಧಾರ್ಥ್ ಅವರ ದೇಶೀಯ ಕ್ರಿಕೆಟ್ ವೃತ್ತಿಜೀವನ ಅದ್ಭುತವಾಗಿದೆ. ಪಂಜಾಬ್ ವೇಗಿ 88 ಪ್ರಥಮ ದರ್ಜೆ ಪಂದ್ಯಗಳಲ್ಲಿ 297 ವಿಕೆಟ್ ಪಡೆದಿದ್ದಾರೆ. 111 ಲಿಸ್ಟ್ ಎ ಪಂದ್ಯಗಳಲ್ಲಿ 199 ವಿಕೆಟ್, 145 ಟಿ20 ಪಂದ್ಯಗಳಲ್ಲಿ ಸಿದ್ಧಾರ್ಥ್ 182 ವಿಕೆಟ್ ಪಡೆದಿದ್ದಾರೆ.
icon

(3 / 5)

ಸಿದ್ಧಾರ್ಥ್ ಕೌಲ್ ಅವರು 2008ರಲ್ಲಿ ವಿರಾಟ್ ಕೊಹ್ಲಿ ನೇತೃತ್ವದ ಭಾರತದ ಅಂಡರ್ 19 ವಿಶ್ವಕಪ್ ವಿಜೇತ ತಂಡದ ಭಾಗವಾಗಿದ್ದರು. ಸಿದ್ಧಾರ್ಥ್ ಅವರು ಇಂಡಿಯಾ ಎ, ಇಂಡಿಯಾ ಬಿ, ಇಂಡಿಯಾ ರೆಡ್, ಇಂಡಿಯಾ ಬ್ಲೂ, ಇಂಡಿಯಾ ಗ್ರೀನ್, ರೆಸ್ಟ್ ಆಫ್ ಇಂಡಿಯಾ, ಉತ್ತರಾಂಚಲ ಪರ ಕಣಕ್ಕಿಳಿದಿದ್ದಾರೆ. ಈ ವರ್ಷದ ಐಪಿಎಲ್ ಹರಾಜಿನಲ್ಲಿ ಸಿದ್ಧಾರ್ಥ್ 40 ಲಕ್ಷ ಮೂಲಬೆಲೆ ಹೊಂದಿದ್ದರು. ಆದರೆ ಯಾವ ಫ್ರಾಂಚೈಸಿಗೂ ಖರೀದಿಗೆ ಮುಂದಾಗಲಿಲ್ಲ.
icon

(4 / 5)

ಸಿದ್ಧಾರ್ಥ್ ಕೌಲ್ ಅವರು ಇಂಗ್ಲೆಂಡ್​ನ ನಾರ್ಥಾಂಪ್ಟನ್​ಶೈರ್ ಪರ ಕೌಂಟಿ ಕ್ರಿಕೆಟ್ ಆಡಿದ್ದಾರೆ. ರಣಜಿ ಟ್ರೋಫಿಯಲ್ಲಿ ಅವರು ಕೊನೆಯ ಬಾರಿಗೆ ಪಂಜಾಬ್ ಪರ ಆಡಿದ್ದರು. ಈ ವರ್ಷದ ನವೆಂಬರ್ 6-8 ರಿಂದ ರೋಹ್ಟಕ್​ನಲ್ಲಿ ಹರಿಯಾಣ ವಿರುದ್ಧದ ರಣಜಿ ಟ್ರೋಫಿ ಪಂದ್ಯವು ಸಿದ್ಧಾರ್ಥ್ ಅವರ ಕೊನೆಯ ಸ್ಪರ್ಧಾತ್ಮಕ ಪಂದ್ಯ. ಅವರ ಮುಂದಿನ ಭವಿಷ್ಯ ಉತ್ತಮವಾಗಿರಲಿ.
icon

(5 / 5)

ಇತರ ಗ್ಯಾಲರಿಗಳು