ವೊಡಾಫೋನ್ ಐಡಿಯಾದ ಆಕರ್ಷಕ ಯೋಜನೆಗಳು; 398 ರೂ.ನಿಂದ ಆರಂಭ, ನಾನ್‌ಸ್ಟಾಪ್ ಡೇಟಾ ಜೊತೆಗೆ ಅನ್‌ಲಿಮಿಟೆಡ್ ಕರೆ
ನೀವು ಕೂಡಾ ಪ್ರತಿದಿನ ಹೆಚ್ಚು ಡೇಟಾ ಬಳಸುತ್ತಾ ಇದ್ದರೆ, ಜೊತೆಗೆ ಕರೆ ಮಾಡುವುದಕ್ಕಾಗಿ ಯಾವುದೇ ಮಿತಿ ಇಲ್ಲದಂತೆ ಅನ್‌ಲಿಮಿಟೆಡ್ ಆಫರ್ ಎದುರು ನೋಡುತ್ತಿದ್ದರೆ, ಈ ಆಯ್ಕೆ ನಿಮಗಾಗಿ. ವೋಡಾಫೋನ್ ಐಡಿಯಾದ (Vi) ಈ ನಾನ್‌ಸ್ಟಾಪ್ ಹೀರೋ (Nonstop Hero) ಪ್ರಿಪೇಡ್ ಯೋಜನೆ ನಿಮಗೆ ಉತ್ತಮ ಆಯ್ಕೆಯಾಗಬಹುದು.
(1 / 6)
Vodafone Idea Nonstop Hero Plan : ದೇಶಾದ್ಯಂತ ಇಂಟರ್ನೆಟ್ ಬಳಕೆದಾರರ ಹೆಚ್ಚುತ್ತಿರುವ ಅಗತ್ಯಗಳನ್ನು ಗಮನದಲ್ಲಿಟ್ಟುಕೊಂಡು ವೋಡಾಫೋನ್ ಐಡಿಯಾ (Vi) ತನ್ನ ಗ್ರಾಹಕರಿಗಾಗಿ 'Nonstop Hero' ಹೆಸರಿನಲ್ಲಿ ಮೂರು ಹೊಸ ಪ್ರಿಪೇಡ್ ರಿಚಾರ್ಜ್ ಯೋಜನೆಗಳನ್ನು ಬಿಡುಗಡೆ ಮಾಡಿದೆ. ಈ ಯೋಜನೆಗಳು ನಿರಂತರ ಡೇಟಾ ಮತ್ತು ಅನ್‌ಲಿಮಿಟೆಡ್ ಕರೆಗಳಂತಹ ಸೌಲಭ್ಯಗಳನ್ನು ಬಯಸುವ ಬಳಕೆದಾರರಿಗಾಗಿ ರೂಪಿಸಲಾಗಿದೆ
(2 / 6)
ವೋಡಾಫೋನ್ ಐಡಿಯಾ (Vi) ಯ ಹೊಸ ‘Nonstop Hero’ ಪ್ರಿಪೇಡ್ ಯೋಜನೆಗಳು ಹೆಚ್ಚಿನ ಡೇಟಾ ಬಳಸುವ ಮತ್ತು ನಿರ್ಬಂಧವಿಲ್ಲದ ಕರೆಗಳನ್ನು ಬಯಸುವವರಿಗೆ ಇದೆ. ಈ ಯೋಜನೆಗಳ ಬೆಲೆ ರೂ.398, 698 ಮತ್ತು 1048ರವರೆಗೆ ಸಾಗುತ್ತದೆ. ಈ ಯೋಜನೆಗಳ ಮಾನ್ಯತೆ 28 ರಿಂದ 84 ದಿನಗಳವರೆಗೆ ದೊರೆಯುತ್ತದೆ. ಜೊತೆಗೆ, ಪ್ರತಿದಿನವೂ 100 SMS ಮತ್ತು ದೇಶಾದ್ಯಂತ ಉಚಿತ ರೋಮಿಂಗ್ ಸೌಲಭ್ಯಗಳನ್ನೂ ಒಳಗೊಂಡಿದೆ.
(3 / 6)
Vi 398 ರೂ. ಯೋಜನೆ: ವೋಡಾಫೋನ್ ಐಡಿಯಾದ ಈ ಯೋಜನೆಯಲ್ಲಿ 28 ದಿನಗಳ ಮಾನ್ಯತೆ ದೊರೆಯುತ್ತದೆ. ಈ ಯೋಜನೆಯಲ್ಲಿ ಭಾರತದಲ್ಲಿ ಎಲ್ಲೆಡೆ ಉಚಿತ ಸ್ಥಳೀಯ ಮತ್ತು STD ಕರೆಗಳು ಮತ್ತು ಯಾವುದೇ ಮಿತಿಯಿಲ್ಲದೆ ಇಂಟರ್ನೆಟ್ ಬಳಸುವ (300GB ಫೇರ್ ಬಳಕೆ ನೀತಿಯ ಅಡಿಯಲ್ಲಿ) ಲಾಭವನ್ನು ಪಡೆಯುತ್ತೀರಿ. ಯೋಜನೆಯಲ್ಲಿ ಪ್ರತಿದಿನವೂ 100 ಉಚಿತ SMS ಲಭ್ಯವಿವೆ. ಜೊತೆಗೆ ದೇಶಾದ್ಯಂತ ಉಚಿತ ರೋಮಿಂಗ್ ಸೌಲಭ್ಯವಿದೆ.
(4 / 6)
Vi 698 ರೂ. ಯೋಜನೆ: ವೋಡಾಫೋನ್ ಐಡಿಯಾದ ಈ ಯೋಜನೆಯು 398 ರೂ ಪ್ಯಾಕೇಜ್ ಯೋಜನೆಯಂತೆಯೇ ಎಲ್ಲಾ ಪ್ರಯೋಜನಗಳೊಂದಿಗೆ ಬರುತ್ತದೆ. ಆದರೆ ಈ ಯೋಜನೆಯಲ್ಲಿ 56 ದಿನಗಳ ಮಾನ್ಯತೆ ಲಭ್ಯವಿದೆ. ಇದರಿಂದ ದೀರ್ಘಕಾಲದ ಕಾಲದ ಅನ್ಲಿಮಿಟೆಡ್ ಡೇಟಾ ಮತ್ತು ಕರೆಗಳನ್ನು ಪಡೆಯಬಹುದು.
(5 / 6)
1048 ರೂ. ಯೋಜನೆ: ವೊಡಾಫೋನ್ ಐಡಿಯಾದ ಈ ಯೋಜನೆ 84 ದಿನಗಳ ಮಾನ್ಯತೆ ಅಥವಾ ಸುಮಾರು 3 ತಿಂಗಳ ಮಾನ್ಯತೆ ಹೊಂದಿದೆ. ಹೈ ಡೇಟಾ ಬಳಕೆದಾರರು ಮತ್ತು ಸುದೀರ್ಘ ಸಮಯದ ಸಂಪರ್ಕವನ್ನು ಬಯಸುವವರಿಗೆ ಪರಿಪೂರ್ಣ ಆಯ್ಕೆ. ಈ ಯೋಜನೆಯೊಂದಿಗೆ ಅನ್‌ಲಿಮಿಟೆಡ್ ಕರೆ ಹಾಗೂ ಇತರ ಪ್ರಯೋಜನ ಪಡೆಯಬಹುದು.
(6 / 6)
ಅನ್‌ಲಿಮಿಟೆಡ್ ಎಂದರೆ ಏನು: ಈ ಯೋಜನೆಗಳಲ್ಲಿ ಅತ್ಯಂತ ದೊಡ್ಡ ವಿಶೇಷತೆ ಎಂದರೆ ಅನ್‌ಲಿಮಿಟೆಡ್ (ನಿರ್ಬಂಧವಿಲ್ಲದ) ಡೇಟಾ. ಆದರೆ ಇಲ್ಲಿ 'ನಿರ್ಬಂಧವಿಲ್ಲದ' ಎಂಬುದರ ಅರ್ಥ 300GB ವರೆಗೆ ಡೇಟಾ (ಫೇರ್ ಬಳಕೆದಾರ ನೀತಿಯ ಅಡಿಯಲ್ಲಿ), ಆದರೆ ಈ ಸಂಖ್ಯೆಯು ಸಾಮಾನ್ಯ ಬಳಕೆದಾರರಿಗೆ ಸಾಕಾಗುತ್ತದೆ. ಇದರ ಅರ್ಥ - ದಿನವಾಗಲಿ ಅಥವಾ ರಾತ್ರಿ, ನೀವು ಯಾವುದೇ ಮಿತಿಯಿಲ್ಲದೆ ಇಂಟರ್ನೆಟ್ ಬಳಸಬಹುದು. ಎಲ್ಲಾ ಯೋಜನೆಗಳಲ್ಲಿ ಸ್ಥಳೀಯ ಮತ್ತು STD ಕರೆಗಳು ಸಂಪೂರ್ಣವಾಗಿ ಉಚಿತವಾಗಿವೆ.
ಇತರ ಗ್ಯಾಲರಿಗಳು