Sanjay Raut: ಶಿವಸೇನೆಗೆ ದ್ರೋಹ ಮಾಡುವಂತೆ ಒತ್ತಡ ಹೇರಲಾಗಿತ್ತು: ಸಂಜಯ್ ರಾವತ್ ತಾಯಿಗೆ ಬರೆದ ಪತ್ರದಲ್ಲೇನಿದೆ?
- ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪ್ರಸ್ತುತ ಜೈಲಿನಲ್ಲಿರುವ ಶಿವ ಸೇನೆಯ ಮುಖಂಡ ಸಂಜಯ್ ರಾವುತ್, ಪಕ್ಷಕ್ಕೆ ದ್ರೋಹ ಮಾಡುವಂತೆ ತಮ್ಮ ಮೇಲೆ ಒತ್ತಡ ಹಾಕಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೈಲಿನಿಂದಲೇ ತಮ್ಮ ತಾಯಿಗೆ ಪತ್ರ ಬರೆದಿರುವ ಸಂಜಯ್ ರಾವತ್, ತಮ್ಮನ್ನು ಸುಳ್ಳು ಆರೋಪಗಳಡಿ ಬಂಧಿಸಲಾಗಿದೆ ಎಂದು ಹರಿಹಾಯ್ದಿದ್ದಾರೆ. ರಾವತ್ ಅವರ ಪತ್ರದ ಸಾರಾಂಶ ಇಲ್ಲಿದೆ..
- ಮುಂಬೈ: ಅಕ್ರಮ ಹಣ ವರ್ಗಾವಣೆ ಆರೋಪದ ಮೇಲೆ ಪ್ರಸ್ತುತ ಜೈಲಿನಲ್ಲಿರುವ ಶಿವ ಸೇನೆಯ ಮುಖಂಡ ಸಂಜಯ್ ರಾವುತ್, ಪಕ್ಷಕ್ಕೆ ದ್ರೋಹ ಮಾಡುವಂತೆ ತಮ್ಮ ಮೇಲೆ ಒತ್ತಡ ಹಾಕಲಾಗಿತ್ತು ಎಂದು ಗಂಭೀರ ಆರೋಪ ಮಾಡಿದ್ದಾರೆ. ಜೈಲಿನಿಂದಲೇ ತಮ್ಮ ತಾಯಿಗೆ ಪತ್ರ ಬರೆದಿರುವ ಸಂಜಯ್ ರಾವತ್, ತಮ್ಮನ್ನು ಸುಳ್ಳು ಆರೋಪಗಳಡಿ ಬಂಧಿಸಲಾಗಿದೆ ಎಂದು ಹರಿಹಾಯ್ದಿದ್ದಾರೆ. ರಾವತ್ ಅವರ ಪತ್ರದ ಸಾರಾಂಶ ಇಲ್ಲಿದೆ..
(1 / 5)
ಶಿವಸೇನಾ ಅಧ್ಯಕ್ಷ ಉದ್ಧವ್ ಠಾಕ್ರೆ ಮತ್ತು ಸಮಸ್ತ ಶಿವಸೈನಿಕರು ನನ್ನ ತಾಯಿಗೆ ಮಕ್ಕಳಿದ್ದಂತೆ. ನಾನು ಜೈಲಿನಲ್ಲಿ ಇರುವವರೆಗೂ ಶಿವಸೇಯನಿಕರು ನನ್ನ ತಾಯಿಯನ್ನು ನೋಡಿಕೊಳ್ಳಲಿದ್ದಾರೆ ಎಂಬ ವಿಶ್ವಾಸವಿದೆ ಎಂದು ಸಂಜಯ್ ರಾವುತ್ ಪತ್ರದಲ್ಲಿ ಭಾವುಕರಾಗಿ ಉಲ್ಲೇಖಿಸಿದ್ದಾರೆ.(ಸಂಗ್ರಹ ಚಿತ್ರ)(HT PHOTO)
(2 / 5)
ನನ್ನನ್ನು ಸುಳ್ಳು ಮತ್ತು ಬೋಗಸ್ ಆರೋಪಗಳಡಿಯಲ್ಲಿ ಬಂಧಿಸಲಾಗಿದೆ ಎಂಬುದು ಎಲ್ಲರಿಗೂ ತಿಳಿದಿದೆ. ಪಕ್ಷಕ್ಕೆ ದ್ರೋಹ ಬಗೆಯುವಂತೆ ನನ್ನ ಮೇಲೆ ನಿರಂತರವಾಗಿ ಒತ್ತಡ ಹೇರಲಾಗುತ್ತಿದ್ದು, ನಾನು ಯಾವ ಒತ್ತಡಕ್ಕೂ ಮಣಿಯುವುದಿಲ್ಲ ಎಂಬುದು ನಿಮಗೆ ಗೊತ್ತಿದೆ ಎಂದು ತಾಯಿಯನ್ನು ಉಲ್ಲೇಖಿಸಿ ಸಂಜಯ್ ರಾವತ್ ಪತ್ರ ಬರೆದಿದ್ದಾರೆ. (ಸಂಗ್ರಹ ಚಿತ್ರ)(HT PHOTO)
(3 / 5)
ಸ್ವಾತಂತ್ರ್ಯ ಹೋರಾಟಗಾರರಾದ ಲೋಕಮಾನ್ಯ ತಿಲಕ್ ಮತ್ತು ವಿ.ಡಿ. ಸಾವರ್ಕರ್ ಕೂಡ ಇದೇ ರೀತಿಯ ಸಂಕಷ್ಟಗಳನ್ನು ಎದುರಿಸಿದ್ದರು. ಸತ್ಯದ ಪರವಾಗಿ ನಿಲ್ಲುವ ಎಲ್ಲರೂ ಇಂತಹ ಸಂಕಷ್ಟ ಮತ್ತು ಬೆದರಿಕೆಗಳನ್ನು ಎದುರಿಸಬೇಕಾಗುತ್ತದೆ ಎಂದು ಸಂಜಯ್ ರಾವತ್ ಮಾರ್ಮಿಕವಾಗಿ ಹೇಳಿದ್ದಾರೆ. (ಸಂಗ್ರಹ ಚಿತ್ರ)(HT PHOTO)
(4 / 5)
ನಿಮ್ಮಂತೆ ಶಿವಸೇನೆ ಕೂಡ ನನ್ನ ತಾಯಿ. ನನ್ನ ತಾಯಿಗೆ (ಪಕ್ಷಕ್ಕೆ) ದ್ರೋಹ ಮಾಡಬೇಕೆಂದು ನನಗೆ ಒತ್ತಡವಿತ್ತು. ಸರ್ಕಾರದ ವಿರುದ್ಧ ಮಾತನಾಡದಂತೆ ಬೆದರಿಕೆ ಹಾಕಿದ್ದರು. ಅದರೆ ನಾನು ಈ ಬೆದರಿಕೆಗಳಿಗೆ ಕಿವಿಗೊಡಲಿಲ್ಲ, ಅದಕ್ಕಾಗಿಯೇ ನಾನು ನಿಮ್ಮಿಂದ ದೂರವಾಗಿದ್ದೇನೆ ಎಂದು ಪತ್ರದಲ್ಲಿ ಸಂಜಯ್ ರಾವತ್ ಉಲ್ಲೇಖಿಸಿದ್ದಾರೆ. (ಸಂಗ್ರಹ ಚಿತ್ರ)(HT PHOTO)
(5 / 5)
ಶಿವಸೇನಾ ಮುಖ್ಯಸ್ಥ ಉದ್ಧವ್ ಠಾಕ್ರೆ ನನಗೆ ಸಹೋದರ ಇದ್ದಂತೆ. ಅವರು ನಡೆಸುತ್ತಿರುವ ಹೋರಾಟಕ್ಕೆ ನನ್ನ ಸಂಪೂರ್ಣ ಬೆಂಬಲವಿದೆ. ಕಷ್ಟದ ದಿನಗಳಲ್ಲಿ ನಾನು ಅವರೊಂದಿಗಿಲ್ಲ ಎಂಬ ದು:ಖವಿದೆ. ಆದರೆ ಅವರು ನನ್ನ ತಾಯಿಯನ್ನು ನೋಡಿಕೊಳ್ಳುತ್ತಿರುವುದಕ್ಕೆ ನಾನು ಅವರಿಗೆ ಸದಾ ಋಣಿಯಾಗಿರಲಿದ್ದೇನೆ ಎಂದು ಸಂಜಯ್ ರಾವತ್ ಭಾವನಾತ್ಮಕ ಪತ್ರ ಬರೆದಿದ್ದಾರೆ. (ಸಂಗ್ರಹ ಚಿತ್ರ)(HT PHOTO)
ಇತರ ಗ್ಯಾಲರಿಗಳು