Chia Seeds: ತೂಕ ಇಳಿಕೆಗೆ, ಕೊಲೆಸ್ಟ್ರಾಲ್ ಕಡಿಮೆ ಮಾಡಲು ಚಿಯಾ ಬೀಜ ಸಹಕಾರಿ: ಇದನ್ನು ಸೇವಿಸುವ ವಿಧಾನ ಇಲ್ಲಿದೆ
- Ways to consume chia seeds: ಚಿಯಾ ಬೀಜಗಳು ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿವಿಧ ಅಗತ್ಯ ಖನಿಜಗಳಿಂದ ತುಂಬಿದ ಪೌಷ್ಟಿಕಾಂಶದ ಆಗರವಾಗಿದೆ. ಆದರೆ ಇದನ್ನು ಹೇಗೆ ಸೇವಿಸಬೇಕು ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ.
- Ways to consume chia seeds: ಚಿಯಾ ಬೀಜಗಳು ಫೈಬರ್, ಒಮೆಗಾ-3 ಕೊಬ್ಬಿನಾಮ್ಲಗಳು ಮತ್ತು ವಿವಿಧ ಅಗತ್ಯ ಖನಿಜಗಳಿಂದ ತುಂಬಿದ ಪೌಷ್ಟಿಕಾಂಶದ ಆಗರವಾಗಿದೆ. ಆದರೆ ಇದನ್ನು ಹೇಗೆ ಸೇವಿಸಬೇಕು ಎಂಬುದು ಕೆಲವರಿಗೆ ತಿಳಿದಿರುವುದಿಲ್ಲ.
(1 / 5)
ಚಿಯಾ ಬೀಜಗಳು ತೂಕ ಇಳಿಕೆಗೆ, ಹೃದಯದ ಆರೋಗ್ಯ ಕಾಪಾಡಲು, ಕೊಲೆಸ್ಟ್ರಾಲ್ ಮಟ್ಟ ಕಡಿಮೆ ಮಾಡಲು, ಮಧುಮೇಹ ನಿಯಂತ್ರಿಸಲು ಸಹಾಯಕಾರಿಯಾಗಿದೆ. ಆರೋಗ್ಯಕ್ಕೆ ಹಲವು ಪ್ರಯೋಜನಗಳನ್ನು ನೀಡುವ ಚಿಯಾ ಬೀಜಗಳನ್ನು ಹೇಗೆ ಸೇವಿಸಬೇಕು ನೋಡೋಣ ಬನ್ನಿ..
(2 / 5)
ನೀರಿನಲ್ಲಿ ನೆನೆಸಿಟ್ಟ ಚಿಯಾಬೀಜಗಳನ್ನು ಸ್ಮೂಥಿ, ಜ್ಯೂಸ್, ಮೊಸರು ಅಥವಾ ಐಸ್ಕ್ರೀಂಗೆ ಹಾಕಿಕೊಂಡು ಸೇವಿಸಬಹುದು. ತೂಕ ಇಳಿಸಿಕೊಳ್ಳಲು ಬಯಸುವವರು ನೆನೆಸಿಟ್ಟ ಚಿಯಾ ಬೀಜಗಳನ್ನು ಒಂದು ಬೌಲ್ ಮೊಸರಿಗೆ ಹಾಕಿ, ಅದಕ್ಕೆ ಕತ್ತರಿಸಿ ಸೇಬು ಹಾಕಿ, ದ್ರಾಕ್ಷಿ ಹಣ್ಣು ಹಾಕಿ ಬೆಳಗ್ಗೆ ಉಪಹಾರವಾಗಿ ತಿನ್ನಿರಿ.
(3 / 5)
ಹಾಲಿನೊಂದಿಗೆ ಚಿಯಾ ಬೀಜಗಳನ್ನು ನೆನೆಸಿ ಜೇನುತುಪ್ಪ ಸೇರಿಸಿ. ರಾತ್ರಿಯಿಡೀ ರೆಫ್ರಿಜರೇಟರ್ನಲ್ಲಿ ಇಡಿ. ಇದಕ್ಕೆ ಹಣ್ಣಿನ ತುಂಡುಗಳನ್ನ ಸೇರಿಸಿ ಬೆಳಗ್ಗೆ ಸವಿಯಿರಿ.
(4 / 5)
ತಣ್ಣೀರಿನಲ್ಲಿ ರಾತ್ರಿ ಚಿಯಾ ಬೀಜಗಳನ್ನು ನೆನೆಸಿಟ್ಟು, ಅದಕ್ಕೆ ಅರ್ಧ ಚಮಚ ಸಕ್ಕರೆ ಹಾಕಿ ಬೆಳಗ್ಗೆ ಕುಡಿಯಿರಿ. ಇದು ನಿಮ್ಮನ್ನು ಹೈಡ್ರೇಟ್ ಆಗಿಯೂ ಇರಿಸುತ್ತದೆ.
ಇತರ ಗ್ಯಾಲರಿಗಳು