ಕನ್ನಡ ಸುದ್ದಿ  /  Photo Gallery  /  Weight Loss Pudina Water Benefits In Weight Loss Journey Summer Health Benefits Of Drinking Pudina Water Rst

ತೂಕ ಇಳಿಸೋಕೆ ಹೇಳಿ ಮಾಡಿಸಿದ್ದು ಪುದಿನಾ ನೀರು; ಬೇಸಿಗೆಯಲ್ಲಿ ಇದನ್ನು ಕುಡಿಯುವುದರಿಂದಾಗುವ 5 ಪ್ರಯೋಜನಗಳಿವು

  • ಬೇಸಿಗೆಯಲ್ಲಿ ಪುದಿನಾ ವಾಟರ್‌ ಕುಡಿಯುವುದರಿಂದ ಆರೋಗ್ಯಕ್ಕೆ ಸಾಕಷ್ಟು ಪ್ರಯೋಜನಗಳಿವೆ. ಇದು ದೇಹದಲ್ಲಿನ ವಿಷಾಂಶವನ್ನು ಹೊರ ಹಾಕಿ, ಚೈತನ್ಯ ನೀಡುವುದು ಮಾತ್ರವಲ್ಲ, ತೂಕ ಇಳಿಕೆಗೂ ಹೇಳಿ ಮಾಡಿಸಿದ್ದು, ಇದರ ಅದ್ಭುತ ಪ್ರಯೋಜನಗಳನ್ನು ನೋಡಿ.

ಬೇಸಿಗೆಯಲ್ಲಿ ದೇಹ ತಣಿಸುವ ಪಾನೀಯಗಳನ್ನು ಮನಸ್ಸು, ನಾಲಿಗೆ ಎರಡೂ ಬಯಸುವುದು ಸಹಜ. ಹಾಗಂತ ಮಾರುಕಟ್ಟೆಯಲ್ಲಿ ಸಿಗುವ ಪಾನೀಯಗಳು ಆರೋಗ್ಯ ಕೆಡಿಸುವುದರಲ್ಲಿ ಎರಡು ಮಾತಿಲ್ಲ. ಹಾಗಾಗಿ ಆರೋಗ್ಯ ವೃದ್ಧಿಸುವ ಪಾನೀಯಗಳ ಸೇವನೆಗೆ ಒತ್ತು ನೀಡಬೇಕು. ಅಂತಹ ಪಾನೀಯಗಳಲ್ಲಿ ಪುದಿನಾ ನೀರು ಕೂಡ ಒಂದು. ಇದು ದೇಹದಲ್ಲಿನ ವಿಷಾಂಶಗಳನ್ನು ಹೊರ ಹಾಕಿ, ದೇಹಕ್ಕೆ ಚೈತನ್ಯ ನೀಡುವುದು ಮಾತ್ರವಲ್ಲ ದೇಹ ತೂಕ ಇಳಿಕೆಗೂ ಸಹಕಾರಿ. ತೂಕ ಇಳಿಕೆಯ ವಿಚಾರದಲ್ಲಿ ಪುದಿನಾ ನೀರು ಕುಡಿಯುವುದರಿಂದಾಗುವ ಲಾಭವೇನು ತಿಳಿಯಿರಿ. 
icon

(1 / 7)

ಜೀರ್ಣಕ್ರಿಯೆಯನ್ನು ವೃದ್ಧಿಸುತ್ತದೆ: ಜೀರ್ಣಕ್ರಿಯೆಯ ತೊಂದರೆ ಇರುವವರಲ್ಲಿ ಚಯಾಪಚಯ ಕ್ರಿಯೆ ನಿಧಾನಗೊಳ್ಳುತ್ತದೆ. ಇದರಿಂದ ಹೊಟ್ಟೆಯುಬ್ಬರ, ಹೊಟ್ಟೆಯ ಅಸ್ವಸ್ಥತೆಯಂತಹ ಸಮಸ್ಯೆಗಳು ಎದುರಾಗಿ ತೂಕ ಹೆಚ್ಚಳಕ್ಕೆ ಸಾಧ್ಯವಾಗುತ್ತದೆ. ಪುದಿನಾ ಎಲೆಯಲ್ಲಿರುವ ಮೆಂಥಾಲ್‌ ಅಂಶ ಜೀರ್ಣಾಂಗ ವ್ಯವಸ್ಥೆಯ ಮೇಲೆ ಹಿತವಾದ ಪರಿಣಾಮ ಉಂಟು ಮಾಡುತ್ತದೆ. ಜೊತೆಗೆ ಇದು ಅಜೀರ್ಣ, ಗ್ಯಾಸ್‌, ಹೊಟ್ಟೆಯುಬ್ಬರದಂತಹ ಸಮಸ್ಯೆಗಳನ್ನೂ ನಿವಾರಿಸುತ್ತದೆ. 
icon

(2 / 7)

ಹಸಿವನ್ನು ನಿಯಂತ್ರಿಸುತ್ತದೆ: ಅತಿಯಾಗಿ ತಿನ್ನುವುದು, ಆಹಾರದ ಕಡುಬಯಕೆ ಹೊಂದಿರುವವರು ಪುದಿನಾ ನೀರು ಕುಡಿದರೆ ನಿಮಗೆ ಅಚ್ಚರಿಯ ಫಲಿತಾಂಶ ದೊರೆಯುತ್ತದೆ. ಪುದಿನಾ ನೀರಿನಲ್ಲಿ ಕಂಡುಬರುವ ನೈಸರ್ಗಿಕ ಸಂಯುಕ್ತಗಳು ಹಸಿವನ್ನು ನಿಗ್ರಹಿಸಿ, ಆಹಾರದ ಕಡುಬಯಕೆಯನ್ನು ನಿಯಂತ್ರಿಸುತ್ತವೆ. ಇದರಿಂದ ಸುಲಭವಾಗಿ ನಿಮ್ಮ ತೂಕ ಇಳಿಕೆಯಾಗುತ್ತದೆ. 
icon

(3 / 7)

ದೇಹವನ್ನು ಹೈಡ್ರೇಟ್‌ ಮಾಡುತ್ತದೆ: ತೂಕ ಇಳಿಯಬೇಕು ಎಂದರೆ ದೇಹ ಹೈಡ್ರೇಟ್‌ ಆಗಿರುವುದು ಬಹಳ ಮುಖ್ಯ. ಪುದಿನಾ ನೀರು ಕುಡಿಯುವುದರಿಂದ ಬಾಯಾರಿಕೆ ನೀಗುವುದು ಮಾತ್ರವಲ್ಲ, ದಿನವಿಡೀ ದೇಹವನ್ನು ಹೈಡ್ರೀಕರಿಸುತ್ತದೆ. ಇದು ಕೊಬ್ಬು ಕರಗಲು ಕೂಡ ಸಹಕಾರಿ. 
icon

(4 / 7)

ಚಯಾಪಚಯವನ್ನು ಹೆಚ್ಚಿಸುತ್ತದೆ: ಪುದೀನ ಎಲೆಗಳು ಜೀರ್ಣಕಾರಿ ಕಿಣ್ವಗಳನ್ನು ಉತ್ತೇಜಿಸುತ್ತವೆ. ಇದು ಚಯಾಪಚಯವನ್ನು ವೇಗಗೊಳಿಸಿ, ಪರಿಣಾಮಕಾರಿಯಾಗಿ ಕ್ಯಾಲೊರಿ ಬರ್ನ್‌ ಮಾಡಲು ಇದು ಸಹಕಾರಿ. 
icon

(5 / 7)

ವಿಷಾಂಶವನ್ನು ಹೊರ ಹಾಕುತ್ತದೆ: ತೂಕ ನಿರ್ವಹಣೆ ಹಾಗೂ ಒಟ್ಟಾರೆ ಆರೋಗ್ಯ ಸುಧಾರಣೆಗೆ ದೇಹ ನಿರ್ವಿಶದಿಂದಿರುವುದು ಮುಖ್ಯ. ಪುದಿನಾ ನೀರು ದೇಹವನ್ನು ನೈಸರ್ಗಿಕವಾಗಿ ನಿರ್ವಿಶಗೊಳಿಸುತ್ತದೆ. ದೇಹ ಒಟ್ಟಾರೆ ಕಾರ್ಯ ಸುಧಾರಣೆಗೂ ಇದು ಸಹಕಾರಿ. 
icon

(6 / 7)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(7 / 7)

IPL_Entry_Point

ಇತರ ಗ್ಯಾಲರಿಗಳು