ಹೊಟ್ಟೆಯ ಕೊಬ್ಬನ್ನು ಕರಗಿಸುವ 6 ಸರಳ ವ್ಯಾಯಾಮಗಳು, ಪ್ರತಿದಿನ ಮಾಡಿದ್ರೆ ಕೆಲವೇ ದಿನಗಳಲ್ಲಿ ಬೆಲ್ಲಿ ಫ್ಯಾಟ್ ಕಡಿಮೆ ಆಗುತ್ತೆ
- ಇತ್ತೀಚಿನ ದಿನಗಳಲ್ಲಿ ಹಲವರು ಬೆಲ್ಲಿ ಫ್ಯಾಟ್ ಸಮಸ್ಯೆಯಿಂದಾಗಿ ತಲೆ ಕೆಡಿಸಿಕೊಳ್ಳುವಂತಾಗಿದೆ. ಹೊಟ್ಟೆಯ ಸುತ್ತಲಿನ ಬೊಜ್ಜು ಕಡಿಮೆ ಮಾಡಲು ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳುವ ಜೊತೆಗೆ ವ್ಯಾಯಾಮದ ಮೇಲೂ ಗಮನ ಹರಿಸಬೇಕು. ಬೆಲ್ಲಿ ಫ್ಯಾಟ್‌ನಿಂದಾಗಿ ನಿಮ್ಮ ಹೊಟ್ಟೆ ಜೋತು ಬಿದ್ದಂತಾಗಿದ್ದರೆ ಈ ಕೆಲವು ವ್ಯಾಯಾಮಗಳನ್ನು ನಿರಂತರ ಅಭ್ಯಾಸ ಮಾಡಿ
- ಇತ್ತೀಚಿನ ದಿನಗಳಲ್ಲಿ ಹಲವರು ಬೆಲ್ಲಿ ಫ್ಯಾಟ್ ಸಮಸ್ಯೆಯಿಂದಾಗಿ ತಲೆ ಕೆಡಿಸಿಕೊಳ್ಳುವಂತಾಗಿದೆ. ಹೊಟ್ಟೆಯ ಸುತ್ತಲಿನ ಬೊಜ್ಜು ಕಡಿಮೆ ಮಾಡಲು ಆಹಾರ ಪದ್ಧತಿಯನ್ನು ಬದಲಿಸಿಕೊಳ್ಳುವ ಜೊತೆಗೆ ವ್ಯಾಯಾಮದ ಮೇಲೂ ಗಮನ ಹರಿಸಬೇಕು. ಬೆಲ್ಲಿ ಫ್ಯಾಟ್‌ನಿಂದಾಗಿ ನಿಮ್ಮ ಹೊಟ್ಟೆ ಜೋತು ಬಿದ್ದಂತಾಗಿದ್ದರೆ ಈ ಕೆಲವು ವ್ಯಾಯಾಮಗಳನ್ನು ನಿರಂತರ ಅಭ್ಯಾಸ ಮಾಡಿ
(1 / 8)
ಬೆಲ್ಲಿ ಫ್ಯಾಟ್ ಕಾರಣದಿಂದಾಗಿ ಹೊಟ್ಟೆಯು ಜೋತು ಬಿದ್ದಂತಾದರೆ ಇದನ್ನು ಕಡಿಮೆ ಮಾಡುವುದು ತುಂಬಾ ಕಷ್ಟದ ಕೆಲಸ. ಹೊಟ್ಟೆಯ ಸುತ್ತಲಿನ ಬೊಜ್ಜು ಕಡಿಮೆ ಮಾಡಲು ಆಹಾರಕ್ರಮದ ಬದಲಾವಣೆಯ ಜೊತೆಗೆ ಸಾಕಷ್ಟು ವ್ಯಾಯಾಮಗಳನ್ನೂ ಮಾಡಬೇಕಾಗುತ್ತದೆ. ಹಾಗಂತ ಬೆಲ್ಲಿ ಫ್ಯಾಟ್ ಕರಗಿಸುವುದು ಖಂಡಿತ ಕಷ್ಟದ ಕೆಲಸವಲ್ಲ. ಈ ಕೆಲವು ವ್ಯಾಯಾಮಗಳನ್ನು ಅಭ್ಯಾಸ ಮಾಡುವುದರಿಂದ ಕೆಲವೇ ದಿನಗಳಲ್ಲಿ ಹೊಟ್ಟೆಯ ಸುತ್ತಲಿನ ಕೊಬ್ಬು ಕರಗುವಂತೆ ಮಾಡಲು ಸಾಧ್ಯವಿದೆ.
(2 / 8)
ಪ್ಲಾಂಕ್
ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಲು ಪ್ಲಾಂಕ್ ಫೋಸ್ ಅಥವಾ ಪ್ಲಾಂಕ್ ವ್ಯಾಯಾಮ ಒಂದು ಉತ್ತಮ ಆಯ್ಕೆ. ಇದು ಹೊಟ್ಟೆಯ ಸುತ್ತಲಿನ ಬೊಜ್ಜು ಕರಗಿಸಲು ಪರಿಣಾಮಕಾರಿ ವ್ಯಾಯಾಮವು ಹೌದು. ಪ್ಲಾಂಕ್ ವ್ಯಾಯಾಮಕ್ಕಾಗಿ ನೀವು ಹೊಟ್ಟೆಯ ಮೇಲೆ ಮಲಗಿ ಕಾಲಿನ ಬೆರಳ ತುದಿ ಹಾಗೂ ಮಡಿಸಿದ ಕೈಗಳ ಮೇಲೆ ದೇಹ ನಿಂತುಕೊಳ್ಳುವಂತೆ ಮಾಡುವುದು. ಇಡೀ ದೇಹದ ಭಾರವನ್ನು ಅದರ ಕೈ ಹಾಗೂ ಕಾಲ ಬೆರಳ ಮೇಲೆ ಬೀಳುವಂತೆ ಮಾಡುವುದು. ಕನಿಷ್ಠ 30 ಸೆಕೆಂಡುಗಳ ಕಾಲ ಈ ಪೋಸ್‌ನಲ್ಲಿ ನಿಂತಿರಬೇಕು.
(3 / 8)
ರಿವರ್ಸ್ ಕ್ರಂಚಸ್
ಇದನ್ನು ಮಾಡಲು, ನಿಮ್ಮ ಬೆನ್ನಿನ ಮೇಲೆ ಮಲಗಿ, ನಿಮ್ಮ ಮೊಣಕಾಲುಗಳನ್ನು 90 ಡಿಗ್ರಿ ಕೋನದಲ್ಲಿ ಬಗ್ಗಿಸಿ ಮತ್ತು ನಿಮ್ಮ ಕೈಗಳನ್ನು ಬದಿಗಳಲ್ಲಿ ಇರಿಸಿ. ನಂತರ ನಿಧಾನವಾಗಿ ಎರಡೂ ಕಾಲುಗಳನ್ನು ಒಟ್ಟಿಗೆ ಮೇಲಕ್ಕೆತ್ತಿ ಮತ್ತು ನಿಮ್ಮ ಸೊಂಟವನ್ನು ಕೂಡ ಮೇಲಕ್ಕೆತ್ತಿ. ಈಗ ನಿಮ್ಮ ಮೊಣಕಾಲುಗಳನ್ನು ನಿಮ್ಮ ಎದೆಯ ಕಡೆಗೆ ತಂದು ನಿಧಾನವಾಗಿ ನಿಮ್ಮ ಕಾಲುಗಳನ್ನು ಕೆಳಕ್ಕೆ ಇಳಿಸಿ.
(4 / 8)
ಪರ್ವತಾರೋಹಿಗಳು
ಇದು ಸುಲಭವಾಗಿ ನಿಂತುಕೊಂಡೇ ಮಾಡುವ ವ್ಯಾಯಾಮವಾಗಿದೆ. ಟಿಪಾಯಿ ಅಥವಾ ಕುರ್ಚಿ ಸಹಾಯದಿಂದ ಈ ವ್ಯಾಯಾಮವನ್ನು ಮಾಡಬಹುದು. ಕುರ್ಚಿಯ ಒಂದು ತುದಿಯನ್ನು ಹಿಡಿದು ಒಂದು ಕಾಲನ್ನು ಮೇಲಕ್ಕೆ ಎತ್ತಿ, ಇನ್ನೊಂದು ಕಾಲನ್ನು ನೆಲಕ್ಕೆ ಬಿಡಿ. ಒಂದು ಬಾರಿ ಒಂದು ಕಾಲು, ಇನ್ನೊಂದು ಬಾರಿ ಇನ್ನೊಂದು ಕಾಲು ಹೀಗೆ ಪುನರಾವರ್ತಿಸಿ.
(5 / 8)
ಸೈಕಲ್ ಕ್ರಂಚಸ್
ಇದನ್ನು ಮಾಡಲು, ನಿಮ್ಮ ಬೆನ್ನಿನ ಮೇಲೆ ಮಲಗಿ ಕೈಗಳನ್ನು ತಲೆಯ ಹಿಂದೆ ಇರಿಸಿ. ನಿಮ್ಮ ಭುಜದ ಭಾಗವನ್ನು ನೆಲದಿಂದ ಮೇಲಕ್ಕೆತ್ತಿ ಮತ್ತು ನಿಮ್ಮ ಬಲ ಮೊಣಕೈಯನ್ನು ಎಡ ಮೊಣಕಾಲಿನ ಬಳಿ ತಂದು, ಬಲಗಾಲನ್ನು ವಿಸ್ತರಿಸಿ. ನಂತರ ಇನ್ನೊಂದು ಕಾಲು ಮತ್ತು ಕೈಯಿಂದ ಪುನರಾವರ್ತಿಸಿ.
(6 / 8)
ದೋಣಿ ಭಂಗಿ
ದೋಣಿ ಭಂಗಿ ಮಾಡಲು, ನಿಮ್ಮ ಮೊಣಕಾಲುಗಳನ್ನು ಬಗ್ಗಿಸಿ ಮತ್ತು ಎರಡೂ ಕಾಲುಗಳನ್ನು ನೆಲದ ಮೇಲೆ ನೇರವಾಗಿ ಇರಿಸಿ ಕುಳಿತುಕೊಳ್ಳಿ. ನಂತರ ಎರಡೂ ಕಾಲುಗಳನ್ನು ಮೇಲಕ್ಕೆತ್ತಿ, ಮಧ್ಯಭಾಗವನ್ನು ತೊಡಗಿಸಿಕೊಳ್ಳುವಾಗ ನಿಧಾನವಾಗಿ ಹಿಂದಕ್ಕೆ ಬಾಗಿ. ನಿಮ್ಮ ಮೊಣಕಾಲುಗಳು ನೆಲಕ್ಕೆ ಸಮಾನಾಂತರವಾಗಿರುವಂತೆ ಬಾಗಿದಂತೆ ಇರಿಸಿ. ನಂತರ ಕಾಲುಗಳನ್ನು 45 ಡಿಗ್ರಿ ಕೋನದಲ್ಲಿ ನೇರಗೊಳಿಸಿ, ಇದರಿಂದ ಕಾಲುಗಳು ಮತ್ತು ದೇಹದ ಮೇಲ್ಭಾಗವು V ಆಕಾರವನ್ನು ರೂಪಿಸುತ್ತದೆ. ಈಗ ನಿಮ್ಮ ಕೈಗಳನ್ನು ಮುಂದೆ ಚಾಚಿ. ಉಸಿರನ್ನು ಒಳಗೆಳೆದುಕೊಳ್ಳಿ ಮತ್ತು ಸ್ವಲ್ಪ ಹೊತ್ತು ಈ ಭಂಗಿಯಲ್ಲಿಯೇ ಇದ್ದು, ನಂತರ ಕಾಲುಗಳನ್ನು ಬಿಡುತ್ತಾ ಉಸಿರನ್ನು ಬಿಡಿ. ವಿಶ್ರಾಂತಿ ಪಡೆಯಿರಿ
(7 / 8)
ಬರ್ಪೀಸ್
ನೇರವಾಗಿ ನಿಂತು, ನಂತರ ಜಂಪಿಂಗ್ ಜ್ಯಾಕ್ ಸ್ಥಾನಕ್ಕೆ ಜಿಗಿಯಿರಿ ಮತ್ತು ನಂತರ ಸ್ಕ್ವಾಟ್ ಸ್ಥಾನಕ್ಕೆ ಇಳಿಯಿರಿ. ಸ್ಕ್ವಾಟ್ ಸ್ಥಾನದಿಂದ, ನಿಮ್ಮ ಕೈಗಳನ್ನು ಮುಂದಕ್ಕೆ ಚಾಚಿ ಪುಷ್-ಅಪ್ ಸ್ಥಾನಕ್ಕೆ ಬನ್ನಿ. ನಂತರ ನೇರವಾಗಿ ನಿಂತು ಅದೇ ವೇಗದಲ್ಲಿ ಜಿಗಿಯಿರಿ. ಈ ಹಂತಗಳನ್ನು ಒಂದರ ನಂತರ ಒಂದರಂತೆ ನಿರಂತರವಾಗಿ ಪುನರಾವರ್ತಿಸಿ.
ಇತರ ಗ್ಯಾಲರಿಗಳು