Weight Loss Tips: ಹೊಟ್ಟೆ ಬೊಜ್ಜು ಕರಗಿಸಲು ಬೆಳಗಿನ ಜಾವ ಬೆಸ್ಟ್ ಟೈಂ: ಈ 5 ಅಭ್ಯಾಸ ರೂಢಿಸಿಕೊಳ್ಳಿ
- Fitness Tips: ತೂಕ ಇಳಿಸಲು ಬೆಸ್ಟ್ ಸಮಯ ಯಾವುದು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇಲ್ಲಿದೆ ಅದಕ್ಕೆ ಉತ್ತರ. ಬೆಳಗಿನ ಜಾವ ಈ ಐದು ಚಟುವಟಿಕೆಗಳನ್ನು ರೂಢಿಸಿಕೊಳ್ಳಿ. ಕಡಿಮೆ ಸಮಯದಲ್ಲೇ ಹೊಟ್ಟೆಯ ಸುತ್ತ ಇರುವ ಬೊಜ್ಜು ಕರಗುವುದನ್ನು ನೀವೇ ಗಮನಿಸಿ.
- Fitness Tips: ತೂಕ ಇಳಿಸಲು ಬೆಸ್ಟ್ ಸಮಯ ಯಾವುದು ಎಂಬ ಪ್ರಶ್ನೆ ನಿಮ್ಮಲ್ಲಿದ್ದರೆ ಇಲ್ಲಿದೆ ಅದಕ್ಕೆ ಉತ್ತರ. ಬೆಳಗಿನ ಜಾವ ಈ ಐದು ಚಟುವಟಿಕೆಗಳನ್ನು ರೂಢಿಸಿಕೊಳ್ಳಿ. ಕಡಿಮೆ ಸಮಯದಲ್ಲೇ ಹೊಟ್ಟೆಯ ಸುತ್ತ ಇರುವ ಬೊಜ್ಜು ಕರಗುವುದನ್ನು ನೀವೇ ಗಮನಿಸಿ.
(1 / 6)
ತೂಕವನ್ನು ಇಳಿಸುವ ಪ್ರಯತ್ನದಲ್ಲಿರುವ ನೀವು ನಿಮ್ಮ ಬೆಳಗ್ಗಿನ ಚಟುವಟಿಕೆಗಳ ಗಮನವನ್ನು ಇರಸಲೇಬೇಕು. ಕಡಿಮೆ ಸಮಯದಲ್ಲಿ ಹೊಟ್ಟೆಯ ಬೊಜ್ಜು ಕರಗಿಸಬೇಕು ಎಂದುಕೊಂಡಿದ್ದರೆ ಇಲ್ಲಿರುವ ಕೆಲವು ಬೆಳಗ್ಗಿನ ಚಟುವಟಿಕೆಗಳನ್ನು ನೀವು ರೂಢಿಸಿಕೊಳ್ಳಬೇಕು.(PC: Canva)
(2 / 6)
ನಿಂಬು–ಜೇನುತುಪ್ಪ: ಬೆಳಗ್ಗೆ ಎದ್ದು ಹಲ್ಲುಜ್ಜಿದ ತಕ್ಷಣ ನೀರು ಕುಡಿಯುವುದರ ಮೂಲಕ ನಿಮ್ಮ ದಿನವನ್ನು ಆರಂಭಿಸಿ. ಒಂದು ದೊಡ್ಡ ಲೋಟ ಉಗುರು ಬೆಚ್ಚನೆಯ ನೀರಿಗೆ ನಿಂಬು ಹಾಗೂ ಜೇನುತುಪ್ಪ ಮಿಶ್ರಣ ಮಾಡಿ ಕುಡಿಯಿರಿ. ಈ ಬೆಳಗ್ಗಿನ ಪಾನೀಯವು ನಿಮ್ಮ ಜೀರ್ಣ ವ್ಯವಸ್ಥೆಯನ್ನು ಸುಧಾರಿಸುತ್ತದೆ ಹಾಗೂ ನಿಮ್ಮ ತೂಕ ಇಳಿಕೆಗೆ ಸಹಕಾರಿಯಾಗಿದೆ. (PC: FirstCry Parenting)
(3 / 6)
ಉಪಹಾರಕ್ಕೂ ಮುನ್ನ ವ್ಯಾಯಾಮ ಮಾಡಿ: ಬೆಳಗ್ಗೆ ತಿಂಡಿ ಸೇವನೆ ಮಾಡುವ ಮುಂಚೆ ನೀವು ದೇಹದಂಡನೆ ಮಾಡಬೇಕು.ಇದರಿಂದಲೂ ನಿಮ್ಮ ಜೀರ್ಣ ಕ್ರಿಯೆ ಸುಧಾರಿಸುತ್ತದೆ ಹಾಗೂ ಫ್ಯಾಟ್ ಆಕ್ಸಿಡೇಷನ್ ಉಂಟಾಗುತ್ತದೆ. ಹೊಟ್ಟೆ ಬೊಜ್ಜು ಕರಗಿಸುವ ವ್ಯಾಯಾಮಗಳನ್ನೇ ಮಾಡಿ. (PC: HT File Photo)
(4 / 6)
ಧ್ಯಾನ: ದಿನನಿತ್ಯದ ಜಂಜಾಟ,ಒತ್ತಡಗಳಿಂದ ಕಲುಷಿತಗೊಂಡ ನಿಮ್ಮ ಮನಸ್ಸನ್ನು ನಿಯಂತ್ರಣಕ್ಕೆ ತರಲು ಧ್ಯಾನ ಉತ್ತಮ ಆಯ್ಕೆಯಾಗಿದೆ. ಮಾನಸಿಕ ಆರೋಗ್ಯ ಸರಿಯಾಗಿದ್ದಾಗ ಮಾತ್ರ ದೈಹಿಕ ಆರೋಗ್ಯ ಸುಧಾರಿಸಲು ಸಾಧ್ಯವಿದೆ. ಬೆಳಗ್ಗೆ ವ್ಯಾಯಾಮ ಮುಗಿಸಿದ ಬಳಿಕ 15-20 ನಿಮಿಷ ಧ್ಯಾನ ಮಾಡಿ. (HT File Photo)
(5 / 6)
ಪ್ರೋಟಿನ್ ಹೆಚ್ಚಿರುವ ಆಹಾರ ಸೇವಿಸಿ: ಪ್ರೋಟಿನ್ ಅಗಾಧ ಪ್ರಮಾಣದಲ್ಲಿರುವ ಆಹಾರವು ನಿಮ್ಮ ದೇಹದಲ್ಲಿ ಸಕ್ಕರೆ ಮಟ್ಟವನ್ನು ನಿಯಂತ್ರಣದಲ್ಲಿ ಇಡಲು ಸಹಕಾರಿ. ಅಲ್ಲದೇ ಇದು ಕೂಡ ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸುತ್ತದೆ. ಮೊಟ್ಟೆಯ ಬಿಳಿ ಭಾಗ, ಪ್ರೋಟೀನ್ ಸ್ಮೂದಿ , ವಿವಿಧ ಹಣ್ಣುಗಳನ್ನು ನೀವು ಸೇವಿಸಬಹುದು. (PC: HT File PHOTO)
ಇತರ ಗ್ಯಾಲರಿಗಳು