Weight Loss Tips: ತೂಕ ಇಳಿಸೋಕೆ ವಾಕಿಂಗ್ ಮಾಡ್ತಾ ಇದೀರಾ, ಬೇಗ ತೂಕ ಕಡಿಮೆಯಾಗಬೇಕು ಅಂದ್ರೆ ದಿನಕ್ಕೆಷ್ಟು ಹೆಜ್ಜೆ ನಡೆಯಬೇಕು ನೋಡಿ
ಇಂದಿನ ಒತ್ತಡದ ಜೀವನಶೈಲಿಯಲ್ಲಿ, ಬಹುತೇಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಅದರಲ್ಲೂ ಫಾಸ್ಟ್ ಫುಡ್ ತಿನ್ನುವವರೇ ಹೆಚ್ಚು. ಸಂಸ್ಕರಿಸಿದ ಆಹಾರವು ತೂಕ ಹೆಚ್ಚಳಕ್ಕೆ ಕಾರಣವಾಗುತ್ತದೆ. ತೂಕ ಕಳೆದುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ದಿನಕ್ಕಿಷ್ಟು ಹೆಜ್ಜೆ ನಡೆದರೆ ಬೇಗ ತೂಕ ಇಳಿಕೆಯಾಗುತ್ತದೆ. ಈ ಬಗ್ಗೆ ಇಲ್ಲಿದೆ ಇನ್ನಷ್ಟು ಮಾಹಿತಿ.
(1 / 8)
ಇಂದಿನ ಒತ್ತಡದ ಜೀವನಶೈಲಿಯಲ್ಲಿ, ಬಹುತೇಕರು ತಮ್ಮ ಆರೋಗ್ಯವನ್ನು ನಿರ್ಲಕ್ಷಿಸುತ್ತಾರೆ. ಇದು ಅನೇಕ ಸಮಸ್ಯೆಗಳಿಗೆ ಕಾರಣವಾಗುತ್ತದೆ. ಅದರಲ್ಲೂ ಫಾಸ್ಟ್ ಫುಡ್ ತಿನ್ನುವವರೇ ಹೆಚ್ಚು. ಸಂಸ್ಕರಿಸಿದ ಆಹಾರವು ನಮ್ಮ ಆರೋಗ್ಯಕ್ಕೆ ಹಾನಿ ಮಾಡುತ್ತದೆ. ಅಷ್ಟೇ ಅಲ್ಲ ತೂಕ ಹೆಚ್ಚಳಕ್ಕೂ ಕಾರಣವಾಗುತ್ತದೆ. ಇಂದು ಸ್ಥೂಲಕಾಯ ಸಮಸ್ಯೆಯಿಂದ ಬಹಳಷ್ಟು ಮಂದಿ ಬಳಲುತ್ತಿದ್ದಾರೆ. ತೂಕ ಇಳಿಕೆಯೇ ದೊಡ್ಡ ಸವಾಲಾಗಿದೆ.
(Canva)(2 / 8)
ತೂಕ ಕಳೆದುಕೊಳ್ಳುವುದು ಅಷ್ಟು ಸುಲಭದ ಕೆಲಸವಲ್ಲ. ಕಷ್ಟಪಟ್ಟು ಕೆಲಸ ಮಾಡಬೇಕಾಗಿರುವುದು ಮಾತ್ರವಲ್ಲದೆ ಇತರ ಅನೇಕ ವಿಷಯಗಳ ಬಗ್ಗೆ ವಿಶೇಷ ಕಾಳಜಿ ವಹಿಸಬೇಕಾಗುತ್ತದೆ. ತೂಕ ಇಳಿಸಿಕೊಳ್ಳಲು ನೀವು ಪ್ರತಿದಿನ ಮಾಡಬೇಕಿರುವುದು ಏನು ಎಂಬ ಬಗ್ಗೆ ಇಲ್ಲಿ ತಿಳಿದುಕೊಳ್ಳಿ.
(Freepik)(3 / 8)
ಒಂದೇ ಸ್ಥಳದಲ್ಲಿ ಕುಳಿತು ನಿರಂತರವಾಗಿ ಕೆಲಸ ಮಾಡುವ ಬದಲು ಆಗಾಗ ಬ್ರೇಕ್ ತೆಗೆದುಕೊಳ್ಳಬೇಕು. 20 ನಿಮಿಷ ಕೆಲಸ ಮಾಡಿ ನಂತರ ಸಣ್ಣ ವಾಕ್ ಮಾಡಬೇಕು. ತೂಕ ಇಳಿಕೆಗೆ ದೈಹಿಕ ಚಟುವಟಿಕೆ ಮಾಡುವುದು ಮುಖ್ಯ. ತೂಕ ಇಳಿಸಿಕೊಳ್ಳಲು ಕನಿಷ್ಠ 8,000 ದಿಂದ 10,000 ಹೆಜ್ಜೆ ನಡೆಯಬೇಕು.
(4 / 8)
ತೂಕ ಇಳಿಕೆಗಾಗಿ ಈ ಗುರಿಯನ್ನು ನಿಗದಿಪಡಿಸಿ ಮತ್ತು ಅದನ್ನು ಸಾಧಿಸಲು ಪ್ರಯತ್ನಿಸಿ. ತೂಕವನ್ನು ನಿಯಂತ್ರಿಸಲು ಇದು ಸುಲಭ ಮಾರ್ಗವಾಗಿದೆ. ನೀವು ಹೆಚ್ಚು ನಡೆದಷ್ಟು ಪ್ರಯೋಜನ ಪಡೆಯುತ್ತೀರಿ. 1000 ದಷ್ಟು ಹೆಜ್ಜೆ ಇಟ್ಟರೆ ಸರಿಸುಮಾರು 30 ರಿಂದ 40 ಕ್ಯಾಲೊರಿ ಕಳೆದುಕೊಳ್ಳುತ್ತೀರಿ. ಅದೇ, ನೀವು 10,000 ಹೆಜ್ಜೆಗಳನ್ನು ನಡೆದರೆ 300 ರಿಂದ 400 ಕ್ಯಾಲೊರಿಗಳನ್ನು ಕಳೆದುಕೊಳ್ಳುತ್ತೀರಿ.
(5 / 8)
ತೂಕ ಇಳಿಸಿಕೊಳ್ಳುವಾಗ, ಆಹಾರದ ಬಗ್ಗೆ ಕಾಳಜಿ ವಹಿಸಿ. ಸಾಧ್ಯವಾದರೆ, ನಿಮ್ಮ ಆಹಾರದಲ್ಲಿ ಕಡಿಮೆ ಕ್ಯಾಲೊರಿ ಇರುವ ಆಹಾರಗಳನ್ನು ತಿನ್ನಿ. ಕಡಿಮೆ ಕ್ಯಾಲೋರಿ ಇರುವ ಹೆಚ್ಚು ಪೋಷಕಾಂಶವಿರುವ ಆಹಾರ ಸೇವಿಸುವುದು ಉತ್ತಮ. ತೂಕ ಇಳಿಕೆಯ ಪ್ರಯಾಣದಲ್ಲಿ ಓಟ್ಸ್ ತಿನ್ನುವುದು ಕೂಡ ಉತ್ತಮ.
(6 / 8)
ನೀವು ವೇಗವಾಗಿ ತೂಕ ಹೊಂದುತ್ತಿದ್ದು, ನಿಯಂತ್ರಿಸಲು ಸಾಧ್ಯವಾಗದಿದ್ದರೆ ಪ್ರತಿದಿನ ವ್ಯಾಯಾಮ ಮಾಡುವುದು ಒಳಿತು. ಪ್ರತಿದಿನ ವ್ಯಾಯಾಮ ಮಾಡುವುದರಿಂದ ನಿಮ್ಮ ತೂಕ ಮಾತ್ರವಲ್ಲದೆ ದೇಹದಲ್ಲಿಯೂ ಬದಲಾವಣೆಯನ್ನು ಕಾಣಬಹುದು. ವ್ಯಾಯಾಮ ಮಾಡುವುದರಿಂದ ದೇಹಕ್ಕೆ ಶಕ್ತಿ ತುಂಬುತ್ತದೆ.
(7 / 8)
ಗಮನಿಸಿ: ಈ ಮಾಹಿತಿಯು ಸಾಮಾನ್ಯ ಜ್ಞಾನ ಹಾಗೂ ಅಂತರ್ಜಾಲದಲ್ಲಿ ಸಿಕ್ಕ ಮಾಹಿತಿಯನ್ನ ಆಧರಿಸಿದೆ. ಈ ವಿಚಾರ ಸಂಪೂರ್ಣ ನಿಖರವಾಗಿದೆ ಎಂದು ಹಿಂದೂಸ್ತಾನ್ ಟೈಮ್ಸ್ ಕನ್ನಡ ಪ್ರತಿಪಾದಿಸುವುದಿಲ್ಲ. ಈ ವಿಷಯದ ಕುರಿತ ನಿಖರ ಮಾಹಿತಿಗಾಗಿ ಸಂಬಂಧಪಟ್ಟ ಕ್ಷೇತ್ರದ ತಜ್ಞರನ್ನು ಸಂಪರ್ಕಿಸಿ.
(Canva)ಇತರ ಗ್ಯಾಲರಿಗಳು