Weight Loss Tips: ಬಿಯರ್ ಪ್ರಿಯರೇ, ಹೆಚ್ಚು ಕುಡಿದ್ರೆ ಹೊಟ್ಟೆಯೂ ಹೆಚ್ಚಾಗುತ್ತೆ; ನಿಮ್ಮ ಬೆಲ್ಲಿ ಫ್ಯಾಟ್ ಕರಗಿಸಲು ಇಲ್ಲಿದೆ ಟಿಪ್ಸ್
ಜಂಕ್ ಫುಡ್‌ಗಳನ್ನು ತಿನ್ನುವುದರಿಂದ ಮಾತ್ರವಲ್ಲ, ಬಿಯರ್ ಕುಡಿಯುವುದರಿಂದ ಕೂಡಾ ಬೊಜ್ಜು ಹೆಚ್ಚಾಗುತ್ತದೆ. ಅದರಲ್ಲೂ ಹೊಟ್ಟೆ ಹಾಗೂ ಸುತ್ತಮುತ್ತ ಬೊಜ್ಜು ಸಂಗ್ರಹವಾಗಿ ನೀವು ದಪ್ಪ ಕಾಣುವಿರಿ.
(1 / 7)
ನಿರಂತರವಾಗಿ ಬಿಯರ್ ಕುಡಿಯುವುದರಿಂದ ತೂಕ ಹೆಚ್ಚಾಗುತ್ತದೆ ಮತ್ತು ಹೊಟ್ಟೆಯಲ್ಲಿ ಬೊಜ್ಜು ಶೇಖರಣೆಯಾಗುತ್ತದೆ. ಬಿಯರ್‌ನ ಹೆಚ್ಚುವರಿ ಕ್ಯಾಲೊರಿಗಳಿಂದ ಹೊಟ್ಟೆ ದಪ್ಪಗಾದರೆ ಅದನ್ನು ಬೆಲ್ಲಿ ಎಂದು ಕರೆಯಲಾಗುತ್ತದೆ. ಹೀಗೆ ಬಿಯರ್ ಸೇವನೆಯಿಂದ ಉಂಟಾಗುವ ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಲು ಇಲ್ಲಿ ಕೆಲವು ಐಡಿಯಾಗಳಿವೆ.
(2 / 7)
ಬಿಯರ್‌ನಲ್ಲಿರುವ ಆಲ್ಕೋಹಾಲ್ ಪ್ರಮಾಣವು ಅದೇ ಪ್ರಮಾಣದ ಕ್ಯಾಲೊರಿಗಳನ್ನು ಹೊಂದಿರುತ್ತದೆ. ಕೆಲವು ಸಂಶೋಧನೆಗಳ ಪ್ರಕಾರ ಅತಿಯಾಗಿ ಬಿಯರ್ ಸೇವಿಸುವುದರಿಂದ ಹೊಟ್ಟೆಯ ಕೊಬ್ಬು ಹೆಚ್ಚಾಗುತ್ತದೆ.
(3 / 7)
ನಿಮ್ಮ ಜೀವನಶೈಲಿಯಲ್ಲಿ ನೀವು ಕೆಲವೊಂದು ಬದಲಾವಣೆಗಳನ್ನು ಅಳವಡಿಸಿಕೊಂಡರೆ ಖಂಡಿತ ನಿಮ್ಮ ಹೊಟ್ಟೆಯ ಕೊಬ್ಬನ್ನು ಕಡಿಮೆ ಮಾಡಬಹುದು.
(4 / 7)
ಬಿಯರ್‌ನಿಂದ ಉಂಟಾದ ಹೊಟ್ಟೆಯ ಕೊಬ್ಬನ್ನ ಕಡಿಮೆ ಮಾಡಲು ನೀವು ಕ್ಯಾಲೊರಿಯತ್ತ ಗಮನ ಕೊಡಿ. ಒಂದು ದಿನದಲ್ಲಿ ನೀವು ಎಷ್ಟು ಕ್ಯಾಲೊರಿಗಳನ್ನು ಸೇವಿಸುತ್ತೀರಿ ಎಂಬುದನ್ನು ಟ್ರ್ಯಾಕ್ ಮಾಡಿ.
(5 / 7)
ನೀವು ಭೋಜಪ್ರಿಯರಾಗಿದ್ದು ನಿಮಗೆ ಐಸ್ ಕ್ರೀಮ್ ತಿನ್ನಬೇಕು ಎನಿಸಿದರೆ ಅದರ ಬದಲಿಗೆ ಸ್ಟ್ರಾಬೆರಿಗಳನ್ನು ಪ್ರಯತ್ನಿಸಿ. ಸೋಡಾ ಬದಲಿಗೆ ನೀರು ಕುಡಿಯಿರಿ. ಅಡುಗೆ ಮಾಡುವಾಗ, ಬೆಣ್ಣೆಯ ಬದಲಿಗೆ ಆಲಿವ್ ಎಣ್ಣೆಯಂತಹ ಆರೋಗ್ಯಕರ ಫ್ಯಾಟ್ ಆಯ್ಕೆ ಮಾಡಿಕೊಳ್ಳಿ.
(6 / 7)
ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವಾಗ ದೈಹಿಕ ಚಟುವಟಿಕೆಯನ್ನು ಹೆಚ್ಚಿಸುವುದು ಮುಖ್ಯ. ಅರ್ಧ ಗಂಟೆ ವಾಕ್ ಮಾಡಿ. ಹಾಗೇ ಕನಿಷ್ಠ 30 ನಿಮಿಷಗಳ ಹೆಚ್ಚಿನ ತೀವ್ರತೆಯ ಏರೋಬಿಕ್ ವ್ಯಾಯಾಮವನ್ನು ಮಾಡಲು ಪ್ರಯತ್ನಿಸಿ.
ಇತರ ಗ್ಯಾಲರಿಗಳು