Reduce Belly Fat: ಹೊಟ್ಟೆಯ ಬೊಜ್ಜು ಕರಗಿಸುವುದು ಹೇಗೆ ಎಂಬ ಚಿಂತೆಯಾ: ನಿಮ್ಮ ಆಹಾರದಲ್ಲಿರಲಿ ಈ ಆರು ಪದಾರ್ಥಗಳು
ಹೊಟ್ಟೆಯ ಕೊಬ್ಬು ಅನಾರೋಗ್ಯಕರ ಮಾತ್ರವಲ್ಲ, ಇದು ಅತ್ಯಂತ ಅಪಾಯಕಾರಿಯಾಗಿದೆ. ಹೊಟ್ಟೆಯ ಕೊಬ್ಬು ಮಧುಮೇಹ, ಹೃದ್ರೋಗ, ಅಧಿಕ ರಕ್ತದೊತ್ತಡ ಮತ್ತು ಸ್ಥೂಲಕಾಯತೆದಂತಹ ಕಾಯಿಲೆಗಳನ್ನು ತಂದೊಡ್ಡಬಹುದು. ಹೊಟ್ಟೆಯ ಕೊಬ್ಬನ್ನು ಕರಗಿಸುವುದು ಹೇಗೆ ಎಂಬ ಬಗ್ಗೆ ಇಲ್ಲಿದೆ ಸಲಹೆ.
(1 / 8)
ಇಂದಿನ ದಿನಗಳಲ್ಲಿ ಬಹುತೇಕರ ದೊಡ್ಡ ಸಮಸ್ಯೆ ಏನೆಂದರೆ, ಹೊಟ್ಟೆಯ ಬೊಜ್ಜನ್ನು ಕರಗಿಸುವುದು ಹೇಗೆ ಎಂಬುದು. ಹೊಟ್ಟೆಯ ಕೊಬ್ಬಿಗೆ ಹಲವು ಕಾರಣಗಳಿವೆ. ಇದು ಜೆನೆಟಿಕ್ಸ್, ನಿರ್ದಿಷ್ಟ ಕಾಯಿಲೆಗಳು ಅಥವಾ ಸ್ಥೂಲಕಾಯತೆ, ಅನಾರೋಗ್ಯಕರ ಆಹಾರ ಪದ್ಧತಿ, ಅನಿಯಮಿತ ನಿದ್ದೆಯ ಮಾದರಿ, ವ್ಯಾಯಾಮದ ಕೊರತೆ ಇತ್ಯಾದಿಗಳು ಇರಬಹುದು. ಇವೆಲ್ಲವೂ ಹೊಟ್ಟೆಯ ಬೊಜ್ಜಿಗೆ ಕಾರಣವಾಗುತ್ತದೆ. ಹೀಗಾಗಿ ಈ ಆಹಾರಗಳನ್ನು ಸೇವಿಸಿ, ಹೊಟ್ಟೆಯ ಬೊಜ್ಜನ್ನು ಕಡಿಮೆ ಮಾಡಬಹುದು.
(2 / 8)
ಮೊಟ್ಟೆಗಳು: ಮೊಟ್ಟೆಗಳು ಪ್ರೊಟೀನ್‌ನ ಅತ್ಯುತ್ತಮ ಮೂಲವಾಗಿದೆ. ನೀವು ತೂಕವನ್ನು ಕಳೆದುಕೊಳ್ಳಲು ಪ್ರಯತ್ನಿಸುತ್ತಿದ್ದರೆ ಆಹಾರದಲ್ಲಿ ಮೊಟ್ಟೆಯನ್ನು ಸೇರಿಸಬಹುದು. ಮೊಟ್ಟೆಗಳನ್ನು ಸೇವಿಸುವುದರಿಂದ ಚಯಾಪಚಯವನ್ನು ಪುನರುಜ್ಜೀವನಗೊಳಿಸುತ್ತದೆ. ಮೊಟ್ಟೆ ಕಡಿಮೆ ಕ್ಯಾಲೋರಿಗಳನ್ನು ಹೊಂದಿರುತ್ತವೆ.
(3 / 8)
ಋತುಮಾನದ ಹಣ್ಣುಗಳು: ಋತುಮಾನದ ಹಣ್ಣುಗಳನ್ನು ಸೇವಿಸುವುದರಿಂದ ದೇಹದ ನೀರಿನ ಮಟ್ಟವನ್ನು ಹಾಗೆಯೇ ಇರಿಸಿಕೊಳ್ಳಲು ಸಹಾಯ ಮಾಡುತ್ತದೆ. ಹಣ್ಣುಗಳಲ್ಲಿ ಫೈಬರ್ ಅಂಶ ಸಮೃದ್ಧವಾಗಿರುವುದರಿಂದ ತೂಕ ಇಳಿಕೆಗೆ ಪ್ರಯತ್ನಿಸುತ್ತಿರುವವರಿಗೆ ಬಹಳ ಪ್ರಯೋಜನಕಾರಿಯಾಗಿದೆ.
(4 / 8)
ಮೊಳಕೆ ಕಾಳುಗಳು: ಅತ್ಯುತ್ತಮ ಉಪಹಾರಗಳಲ್ಲಿ ಮೊಳಕೆ ಕಾಳುಗಳು ಬೆಸ್ಟ್. ಇದು ಕಡಿಮೆ ಕ್ಯಾಲೋರಿ ಹೊಂದಿದ್ದು, ಜೀರ್ಣಿಸಿಕೊಳ್ಳಲು ಸುಲಭ. ಮೊಳಕೆ ಕಾಳುಗಳು ತೂಕ ನಷ್ಟಕ್ಕೆ ಸಹಾಯ ಮಾಡುತ್ತದೆ.
(5 / 8)
ಸೇಬು: ಸೇಬು ಉತ್ತಮ ಪ್ರಮಾಣದ ಉತ್ಕರ್ಷಣ ನಿರೋಧಕಗಳು, ವಿಟಮಿನ್ ಸಿ ಮತ್ತು ಫೈಬರ್ ಗಳನ್ನು ಹೊಂದಿರುತ್ತದೆ. ಇದರಲ್ಲಿ ಫೈಬರ್ ಅಂಶ ಹೆಚ್ಚಿರುವುದರಿಂದ ತೂಕ ನಷ್ಟಕ್ಕೆ ಸಹಕಾರಿಯಾಗಿದೆ. ಇದು ಅರಿವಿನ ಕಾರ್ಯಕ್ಷಮತೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ.
(6 / 8)
ಪಾಲಕ್ ಸೊಪ್ಪು: ಪಾಲಕ್ ಸೊಪ್ಪು ವಿಟಮಿನ್ ಮತ್ತು ಫೈಟೊಕೆಮಿಕಲ್‌ಗಳಿಂದ ತುಂಬಿರುತ್ತದೆ. ಇದು ಕಬ್ಬಿಣದ ಅಂಶವನ್ನು ಹೊಂದಿದ್ದು, ತೂಕ ಇಳಿಸಿಕೊಳ್ಳಲು ಪ್ರಯತ್ನಿಸುವವರಿಗೆ ಸಹಾಯ ಮಾಡುತ್ತದೆ.
(7 / 8)
ಗ್ರೀನ್ ಟೀ: ತೂಕ ನಷ್ಟಕ್ಕೆ ಪ್ರಯತ್ನಿಸುತ್ತಿರುವವರಿಗೆ ಹಸಿರು ಚಹಾ (Green Tea) ಬಹಳ ಪ್ರಯೋಜನಕಾರಿಯಾಗಿದೆ. ಗ್ರೀನ್ ಟೀ ಚಯಾಪಚಯ ಮತ್ತು ಜೀರ್ಣಕ್ರಿಯೆಯನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದನ್ನು ಸೇವಿಸುವುದರಿಂದ ಕರುಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತದೆ ಮತ್ತು ನಿಮ್ಮ ತೂಕವು ನಿಯಂತ್ರಣದಲ್ಲಿರಲು ಸಹಾಯಕವಾಗಿದೆ.
ಇತರ ಗ್ಯಾಲರಿಗಳು