ಮೈಸೂರು ದಸರಾ ಗಜಪಡೆಯ ತೂಕ ಪರೀಕ್ಷೆ; ಕ್ಯಾಪ್ಟನ್ ಅಭಿಮನ್ಯುವೇ ನಂ 1, ಉಳಿದ ಆನೆಗಳ ತೂಕ ಎಷ್ಟೆಷ್ಟಿದೆ?
- Mysuru Dasara 2024: ಮೈಸೂರು ದಸರಾಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಕಾಡಿನಿಂದ ನಾಡಿಗೆ ಬಂದಿರುವ ದಸರಾ ಗಜಪಡೆ ತೂಕ ಪರೀಕ್ಷೆ ನಡೆಸಲಾಯಿತು. ಯಾವ ಆನೆ ಎಷ್ಟು ತೂಕ ಇದೆ? ಇಲ್ಲಿದೆ ವಿವರ.
- Mysuru Dasara 2024: ಮೈಸೂರು ದಸರಾಗೆ ಸಕಲ ಸಿದ್ಧತೆ ನಡೆಯುತ್ತಿದೆ. ಇದರ ನಡುವೆ ಕಾಡಿನಿಂದ ನಾಡಿಗೆ ಬಂದಿರುವ ದಸರಾ ಗಜಪಡೆ ತೂಕ ಪರೀಕ್ಷೆ ನಡೆಸಲಾಯಿತು. ಯಾವ ಆನೆ ಎಷ್ಟು ತೂಕ ಇದೆ? ಇಲ್ಲಿದೆ ವಿವರ.
(1 / 9)
ಕಾಡಿನಿಂದ ನಾಡಿಗೆ ಬಂದಿರುವ ಕ್ಯಾಪ್ಟನ್ ಅಭಿಮನ್ಯು ನೇತೃತ್ವದ ದಸರಾ ಗಜಪಡೆಗೆ ಇಂದು (ಆಗಸ್ಟ್ 24) ತೂಕ ಪರೀಕ್ಷೆ ನಡೆಯಿತು.
(2 / 9)
ಮೈಸೂರಿನ ಧನ್ವಂತರಿ ರಸ್ತೆಯಲ್ಲಿರುವ ಸಾಯಿರಾಂ ಅಂಡ್ ಕೋ, ಎಲೆಕ್ಟ್ರಿಕ್ ತೂಕ ಮಾಪನ ಕೇಂದ್ರದಲ್ಲಿ 9 ಆನೆಗಳನ್ನು ತೂಕ ಮಾಡಲಾಯಿತು.
(3 / 9)
ಈ 9 ಆನೆಗಳ ಪೈಕಿ ಕ್ಯಾಪ್ಟನ್ ಅಭಿಮನ್ಯುನೇ ಅತಿ ಹೆಚ್ಚು ತೂಕ ಇದ್ದಾನೆ. ಅಭಿಮನ್ಯು 5,560 ಕೆಜಿ ತೂಕ ಹೊಂದಿದ್ದಾನೆ. ಉಳಿದ ಆನೆಗಳಿಗಿಂತ ಅಧಿಕ ತೂಕ ಹೊಂದಿದ್ದಾನೆ.
(4 / 9)
ಉಳಿದಂತೆ ವರಲಕ್ಷ್ಮಿ 3,495 ತೂಕ, ಭೀಮ 4,945, ಏಕಲವ್ಯ 4,730, ಲಕ್ಷ್ಮಿ 2,480, ರೋಹಿತ್ 3,625, ಗೋಪಿ 4,970, ಕಂಜನ್ 4,515, ಧನಂಜಯ 5,155 ಕೆಜಿ ತೂಕ ಇದ್ದಾನೆ.
(5 / 9)
ದಸರಾ ಗಜಪಡೆಯ ತೂಕ ಪರೀಕ್ಷೆ ಕುರಿತು ಮೈಸೂರು ವಲಯ ವನ್ಯಜೀವಿ ವಿಭಾಗದ ಡಿಸಿಎಫ್ ಡಾ ಪ್ರಭುಗೌಡ ಮಾತನಾಡಿದ್ದು, ನಿನ್ನೆ ಮೈಸೂರು ಅರಮನೆಗೆ ಬಂದ ಗಜಪಡೆಗೆ ಇಂದು ತೂಕ ಪರೀಕ್ಷೆ ಮಾಡಲಾಗಿದೆ ಎಂದಿದ್ದಾರೆ.
(6 / 9)
ತೂಕದ ಜೊತೆಗೆ ಆನೆಗಳ ಆರೋಗ್ಯದ ಬಗ್ಗೆ ಹೆಚ್ಚಿನ ಗಮನ ಹರಿಸಲಾಗಿದೆ. ಆನೆಗಳ ತೂಕದ ಆಧಾರದ ಮೇಲೆ ಪೌಷ್ಟಿಕ ಆಹಾರ ನೀಡಲಾಗುತ್ತದೆ ಎಂದು ಮಾಹಿತಿ ನೀಡಿದ್ದಾರೆ.
(7 / 9)
ದಸರಾ ಜಂಬೂಸವಾರಿ ಮೆರವಣಿಗೆಗೂ ಮುನ್ನಾ ಮತ್ತೊಮ್ಮೆ ಆನೆಗಳ ತೂಕ ಪರೀಕ್ಷೆ ಮಾಡುತ್ತೇವೆ. ಎಲ್ಲಾ ಆನೆಗಳ ಆರೋಗ್ಯ ಚೆನ್ನಾಗಿದೆ. ನಾಳೆಯಿಂದಲೇ ಗಜಪಡೆಯ ನಿತ್ಯ ತಾಲೀಮು ಅರಂಭವಾಗುತ್ತದೆ ಎಂದು ತಿಳಿಸಿದ್ದಾರೆ.
(8 / 9)
ಇದೇ ವೇಳೆ ಆನೆಗಳ ಆರೋಗ್ಯ ನೋಡಿಕೊಳ್ಳುತ್ತಿರುವ ಡಾ ಮುಜೀಬ್ ಹಾಗೂ ಸಾಯಿರಾಮ್ ಅಂಡ್ ಕೊ., ತೂಕ ಮಾಪನಕೇಂದ್ರದ ಮಾಲೀಕ ಗಣೇಶ್ ಪ್ರಸಾದ್ ಕೂಡ ಇದ್ದರು.
ಇತರ ಗ್ಯಾಲರಿಗಳು