Health Tips: ಉರಿಯೂತವನ್ನು ಕಡೆಗಣಿಸಬೇಡಿ, ದೀರ್ಘಕಾಲದ ಉರಿಯೂತ ತಗ್ಗಿಸಲು ಇಲ್ಲಿದೆ ಅಮೂಲ್ಯ ಸಲಹೆಗಳು
- Tips to reduce chronic inflammation: ಉರಿಯೂತ ಬಹುತೇಕರಿಗೆ ಕಾಡುವ ತೊಂದರೆ. ದೀರ್ಘಕಾಲದಿಂದ ಉರಿಯೂತ ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವ ಮೂಲಕ ಗುಣಮುಖರಾಗಬಹುದು. ಹಣ್ಣು, ತರಕಾರಿ ಸೇವನೆ ಮತ್ತು ಸಂಸ್ಕರಣೆ ಮಾಡದ ಆಹಾರ ಸೇವನೆ ಮೂಲಕ ಉರಿಯೂತಕ್ಕೆ ಗುಡ್‌ಬೈ ಹೇಳಬಹುದು.
- Tips to reduce chronic inflammation: ಉರಿಯೂತ ಬಹುತೇಕರಿಗೆ ಕಾಡುವ ತೊಂದರೆ. ದೀರ್ಘಕಾಲದಿಂದ ಉರಿಯೂತ ನಿಮ್ಮನ್ನು ಕಾಡುತ್ತಿದ್ದರೆ ನಿಮ್ಮ ಆಹಾರ ಪದ್ಧತಿಯಲ್ಲಿ ತುಸು ಬದಲಾವಣೆ ಮಾಡಿಕೊಳ್ಳುವ ಮೂಲಕ ಗುಣಮುಖರಾಗಬಹುದು. ಹಣ್ಣು, ತರಕಾರಿ ಸೇವನೆ ಮತ್ತು ಸಂಸ್ಕರಣೆ ಮಾಡದ ಆಹಾರ ಸೇವನೆ ಮೂಲಕ ಉರಿಯೂತಕ್ಕೆ ಗುಡ್‌ಬೈ ಹೇಳಬಹುದು.
(1 / 7)
ಉರಿಯೂತವು ದೇಹದ ನೈಸರ್ಗಿಕ ಪ್ರತಿರಕ್ಷಣಾ ವ್ಯವಸ್ಥೆಯನ್ನು ಪ್ರಚೋದಿಸಿದಾಗ ಉಂಟಾಗುವ ಸ್ಥಿತಿ. ಇದು ದೀರ್ಘಕಾಲದಿಂದ ಕಾಡುವ ಮೂಲಕ ಸಾಕಷ್ಟು ಜನರು ಯಾತನೆ ಅನುಭವಿಸುತ್ತಾರೆ. ಈ ದೀರ್ಘಕಾಲದ ಉರಿಯೂತ ಕಡಿಮೆ ಮಾಡಲು ತಜ್ಞರಾದ ಅಂಜಲಿ ಮುಖರ್ಜಿ ಅವರು ಕೆಲವು ಅಮೂಲ್ಯ ಸಲಹೆಗಳನ್ನು ನೀಡಿದ್ದಾರೆ. "ನಿಮ್ಮ ಉತ್ತಮ ಆರೋಗ್ಯಕ್ಕಾಗಿ, ದೀರ್ಘಕಾಲದ ಉರಿಯೂತ ಕಡಿಮೆ ಮಾಡಲು ನಾನು ಹೇಳುವ ಕೆಲವು ಸರಳ ವಿಧಾನವನ್ನು ಅನುಸರಿಸಿ" ಎಂದು ಅವರು ಹೇಳಿದ್ದಾರೆ. (Unsplash)
(2 / 7)
ಹಣ್ಣುಗಳು, ತರಕಾರಿಗಳು ಮತ್ತು ಸಂಸ್ಕರಿಸದ ಆಹಾರ ಪದಾರ್ಥಗಳನ್ನು ಒಳಗೊಂಡ ಉರಿಯೂತ ಕಡಿಮೆ ಮಾಡುವ ಆಹಾರವನ್ನು ಹೊಂದಿರುವುದು ದೀರ್ಘಕಾಲದ ಉರಿಯೂತವನ್ನು ಎದುರಿಸಲು ಸಹಾಯ ಮಾಡುತ್ತದೆ ಎಂದು ಅವರು ಹೇಳಿದ್ದಾರೆ.(Unsplash)
(3 / 7)
ಸಂಸ್ಕರಿಸಿದ ಸಕ್ಕರೆ, ಸಂಸ್ಕರಿಸಿದ ಆಹಾರ ಪದಾರ್ಥಗಳು ಮತ್ತು ಆಲ್ಕೋಹಾಲ್ ಸೇವನೆ ತಪ್ಪಿಸುವ ಮೂಲಕ ಉರಿಯೂತದಿಂದ ಪಾರಾಗಬಹುದು ಎಂದು ಅವರು ಟಿಪ್ಸ್ ನೀಡಿದ್ದಾರೆ.(Unsplash)
(4 / 7)
ಸಾಲ್ಮನ್ ಮತ್ತು ಸಾರ್ಡೀನ್‌ಗಳಂತಹ ಮೀನುಗಳಲ್ಲಿ ಒಮೆಗಾ-3 ಕೊಬ್ಬಿನಾಮ್ಲಗಳು ಸಮೃದ್ಧವಾಗಿವೆ. ಇದು ದೀರ್ಘಕಾಲದ ಉರಿಯೂತವನ್ನು ಎದುರಿಸಲು ಪ್ರಮುಖ ಪೋಷಕಾಂಶವಾಗಿದೆ. ಹೀಗಾಗಿ ಇಂತಹ ಮೀನುಗಳ ಸೇವನೆ ಮಾಡಿ ಎಂದು ಅವರು ಹೇಳಿದ್ದಾರೆ. (Unsplash)
(5 / 7)
ಸಂಸ್ಕರಿಸಿದ ಕಾರ್ಬೋಹೈಡ್ರೇಟ್‌ಗಳು ರಕ್ತದಲ್ಲಿನ ಸಕ್ಕರೆ ಮಟ್ಟವನ್ನು ಮತ್ತು ಉರಿಯೂತವನ್ನು ಹೆಚ್ಚಿಸಬಹುದು. ಬಿಳಿ ಬ್ರೆಡ್ ಮತ್ತು ಬಿಳಿ ಅಕ್ಕಿಯಂತಹ ಸಂಸ್ಕರಿಸಿದ ಆಹಾರ ಪದಾರ್ಥಗಳಲ್ಲಿ ಇಂತಹ ಕಾರ್ಬೋಹೈಡ್ರೇಟ್ ಸಮೃದ್ಧವಾಗಿದ್ದು, ಇಂತಹ ಆಹಾರ ಪದಾರ್ಥಗಳನ್ನು ತಪ್ಪಿಸಬೇಕು. (Unsplash)
(6 / 7)
ಉರಿಯೂತ ತಗ್ಗಿಸಲು ದೈಹಿಕ ಚಟುವಟಿಕೆ ಕೂಡ ಬೇಕು. ನಮ್ಮ ದಿನನಿತ್ಯದ ದಿನಚರಿಯಲ್ಲಿ ಈಜು, ಸೈಕ್ಲಿಂಗ್ ಅಥವಾ ವೇಗದ ನಡಿಗೆ ಇತ್ಯಾದಿ ಚಟುವಟಿಕೆ ಸೇರಿಸಿಕೊಳ್ಳಬೇಕು ಎಂದು ಅವರು ಹೇಳಿದ್ದಾರೆ. (Unsplash)
ಇತರ ಗ್ಯಾಲರಿಗಳು