ಏನಿದು ಪಿಂಕ್ ಟೆಸ್ಟ್; ಆಸ್ಟ್ರೇಲಿಯಾ vs ಪಾಕಿಸ್ತಾನ ಸಿಡ್ನಿ ಟೆಸ್ಟ್‌ಗೆ ಈ ಹೆಸರೇಕೆ?
- Pink Test: ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಬುಧವಾರದಿಂದ (ಜನವರಿ 3) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧದ ತನ್ನ ಮೂರನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಪಂದ್ಯಕ್ಕೂ ಮುನ್ನ ನಡೆದ ಫೋಟೋಶೂಟ್‌ನಲ್ಲಿ ಆಸೀಸ್ ಆಟಗಾರರು ಗುಲಾಬಿ ಬಣ್ಣದ ಟೋಪಿ ಧರಿಸಿದ್ದರು. ಇದಕ್ಕೆ ಕಾರಣ ಹೀಗಿದೆ.
- Pink Test: ಆಸ್ಟ್ರೇಲಿಯಾ ಕ್ರಿಕೆಟ್ ತಂಡವು ಬುಧವಾರದಿಂದ (ಜನವರಿ 3) ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ಪಾಕಿಸ್ತಾನ ವಿರುದ್ಧದ ತನ್ನ ಮೂರನೇ ಟೆಸ್ಟ್ ಪಂದ್ಯವನ್ನಾಡುತ್ತಿದೆ. ಪಂದ್ಯಕ್ಕೂ ಮುನ್ನ ನಡೆದ ಫೋಟೋಶೂಟ್‌ನಲ್ಲಿ ಆಸೀಸ್ ಆಟಗಾರರು ಗುಲಾಬಿ ಬಣ್ಣದ ಟೋಪಿ ಧರಿಸಿದ್ದರು. ಇದಕ್ಕೆ ಕಾರಣ ಹೀಗಿದೆ.
(1 / 8)
ಆಸೀಸ್ ಆಟಗಾರರು ಹಸಿರು ಬಣ್ಣದಿಂದ ಗುಲಾಬಿ ಬಣ್ಣಕ್ಕೆ ತಮ್ಮ ಟೋಪಿ ಬಣ್ಣವನ್ನು ಬದಲಾಯಿಸಲು ಕಾರಣವಿದೆ. ಅದುವೇ ಪಿಂಕ್ ಟೆಸ್ಟ್. ಪಾಕಿಸ್ತಾನ ವಿರುದ್ಧದ ಪಂದ್ಯವು ಪಿಂಕ್ ಟೆಸ್ಟ್ ಪಂದ್ಯ ಆಗಿದ್ದು, ಹೀಗಾಗಿ ತಂಡವು ಗುಲಾಬಿ ಬಣ್ಣವನ್ನು ಹೈಲೈಟ್ ಮಾಡಿದೆ.(AFP)
(2 / 8)
ಪಿಂಕ್ ಟೆಸ್ಟ್ ಎಂದರೆ: ಆಸ್ಟ್ರೇಲಿಯಾದ ಸಿಡ್ನಿ ಕ್ರಿಕೆಟ್ ಮೈದಾನದಲ್ಲಿ ನಡೆಯುವ ಕ್ಯಾಲೆಂಡರ್ ವರ್ಷದ ಮೊದಲ ಟೆಸ್ಟ್ ಪಂದ್ಯವನ್ನು 'ಪಿಂಕ್ ಟೆಸ್ಟ್' ಎಂದು ಕರೆಯಲಾಗುತ್ತದೆ. (AFP)
(3 / 8)
ಈ ಪಂದ್ಯದಲ್ಲಿ ಬಳಸಲಾಗುವ ಸ್ಟಂಪ್‌ಗಳು ಸೇರಿದಂತೆ ಮೈದಾನದ ಸುತ್ತಲಿನ ಸ್ಟ್ಯಾಂಡ್‌ಗಳು ಕೂಡಾ ಗುಲಾಬಿ ಬಣ್ಣದಲ್ಲಿಯೇ ಇರಲಿದೆ.(AFP)
(4 / 8)
ಸ್ತನ ಕ್ಯಾನ್ಸರ್ ಬಗ್ಗೆ ಜಾಗೃತಿ ಮೂಡಿಸುವುದು ಪಿಂಕ್ ಟೆಸ್ಟ್ ಹಿಂದಿನ ಉದ್ದೇಶವಾಗಿದೆ. ಆಸ್ಟ್ರೇಲಿಯಾದ ಮಾಜಿ ಆಟಗಾರ ಗ್ಲೆನ್ ಮೆಕ್‌ಗ್ರಾತ್ ಅವರ ಪತ್ನಿ ಜೇನ್ ಅವರು, ಇದೇ ಕಾಯಿಲೆಯಿಂದಾಗಿ ಸಾವನ್ನಪ್ಪಿದರು. ಮೆಕ್‌ಗ್ರಾತ್ ಅವರು 2005ರಲ್ಲಿ ತನ್ನ ಹೆಂಡತಿಗೆ ಸ್ತನ ಕ್ಯಾನ್ಸರ್ ಇರುವುದು ಪತ್ತೆಯಾದ ನಂತರ, ಮೆಕ್‌ಗ್ರಾತ್ ಫೌಂಡೇಶನ್ ಆರಂಭಿಸಿದರು.(AFP)
(5 / 8)
ಈ ಕಾಯಿಲೆ ಕುರಿತು ಜಾಗೃತಿ ಮೂಡಿಸುವುದರೊಂದಿಗೆ ರೋಗಿಗಳು ಮತ್ತು ಅದರಿಂದ ಬದುಕುಳಿದವರಿಗೆ ನೆರವಾಗುವುದು ಈ ಫೌಂಡೇಷನ್ ಉದ್ದೇಶ. ಈ ಫೌಂಡೇಶನ್ ಕ್ರಿಕೆಟ್ ಆಸ್ಟ್ರೇಲಿಯಾದೊಂದಿಗೆ ಪಾಲುದಾರಿಕೆ ಮೂಲಕ ಧನ ಸಂಗ್ರಹ ಮಾಡುತ್ತದೆ.(AFP)
(6 / 8)
ಮೊದಲ ಪಿಂಕ್ ಟೆಸ್ಟ್ ಪಂದ್ಯವು 2009ರಲ್ಲಿ ಆಸ್ಟ್ರೇಲಿಯಾ ಮತ್ತು ದಕ್ಷಿಣ ಆಫ್ರಿಕಾ ನಡುವೆ ನಡೆಯಿತು. ಇದೀಗ ಆಸ್ಟ್ರೇಲಿಯಾ ಮತ್ತು ಪಾಕಿಸ್ತಾನ ನಡುವಿನ ಟೆಸ್ಟ್ ಪಂದ್ಯವು 16ನೇ ಪಿಂಕ್ ಟೆಸ್ಟ್ ಪಂದ್ಯವಾಗಿದೆ.(AFP)
(7 / 8)
ಆಸ್ಟ್ರೇಲಿಯಾ ಇಲ್ಲಿಯವರೆಗೆ 15 ಪಿಂಕ್ ಟೆಸ್ಟ್‌ಗಳನ್ನು ಆಡಿದ್ದು, ಎಂಟರಲ್ಲಿ ಗೆದ್ದಿದೆ. ಉಳೀದಂತೆ ಆರು ಪಂದ್ಯಗಳಲ್ಲಿ ಡ್ರಾ ಸಾಧಿಸಿದ್ದು, ಕೇವಲ ಒಂದರಲ್ಲಿ ಮಾತ್ರ ಸೋತಿದೆ.(AFP)
ಇತರ ಗ್ಯಾಲರಿಗಳು