Akaay: ವಿರುಷ್ಕಾ ಪುತ್ರನ ಹೆಸರಿನ ಅರ್ಥವೇನು; ಅಕಾಯ್ ಪದದಲ್ಲಿದೆ ಅನುಷ್ಕಾ, ಕೊಹ್ಲಿ ಹೆಸರಲ್ಲಿರುವ ಅಕ್ಷರ
- Akaay Name Meaning: ಭಾರತ ಕ್ರಿಕೆಟ್ ತಂಡದ ಮಾಜಿ ನಾಯಕ ವಿರಾಟ್ ಕೊಹ್ಲಿ ಹಾಗೂ ಅನುಷ್ಕಾ ಶರ್ಮಾ ದಂಪತಿಯು, ಎರಡನೇ ಮಗುವನ್ನು ಸ್ವಾಗತಿಸಿದ್ದಾರೆ. ಫೆಬ್ರವರಿ 15ರಂದು ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದಾರೆ. ವಮಿಕಾ ತಮ್ಮನಿಗೆ ಅಕಾಯ್ ಎಂಬ ಹೆಸರಿಟ್ಟಿರುವುದಾಗಿ, ಕೊಹ್ಲಿ ಸಾಮಾಜಿಕ ಜಾಲತಾಣದಲ್ಲಿ ಹೇಳಿದ್ದಾರೆ. ಈ ಹೆಸರಿನ ಅರ್ಥ ಹೀಗಿದೆ.

(1 / 5)
ಟೀಮ್ ಇಂಡಿಯಾದ ಸ್ಟಾರ್ ಆಟಗಾರ ಹಾಗೂ ಬಾಲಿವುಡ್ ನಟಿ ಅನುಷ್ಕಾ ಶರ್ಮಾ ಜೋಡಿಯು ಅಭಿಮಾನಿಗಳಿಗೆ ಗುಡ್ ನ್ಯೂಸ್ ಹೇಳಿದ್ದಾರೆ. ಫೆಬ್ರವರಿ 15 ರಂದು ಅನುಷ್ಕಾ ಗಂಡು ಮಗುವಿಗೆ ಜನ್ಮ ನೀಡಿದ್ದರು. ಈ ವಿಚಾರವನ್ನು ಗೌಪ್ಯವಾಗಿಟ್ಟಿದ್ದ ಕುಟುಂಬವು, ಫೆಬ್ರವರಿ 20ರಂದು ವಿಷಯ ಬಹಿರಂಗಪಡಿಸಿದೆ. (Instagram)
(2 / 5)
ವಿರುಷ್ಕಾ ದಂಪತಿಯು ತಮ್ಮ ಮಗನಿಗೆ ಅಕಾಯ್ ಎಂದು ಹೆಸರಿಟ್ಟಿದ್ದಾರೆ. ಈ ವಿಶೇಷ ಸಂದರ್ಭದಲ್ಲಿ ಎಲ್ಲರ ಆಶೀರ್ವಾದ ಮತ್ತು ಶುಭ ಹಾರೈಕೆಗಳನ್ನು ಕೇಳುತ್ತಿದ್ದೇವೆ ಎಂದು ಕೊಹ್ಲಿ ಪೋಸ್ಟ್ ಮಾಡಿದ್ದಾರೆ.
(3 / 5)
ವಿರಾಟ್ ಮತ್ತು ಅನುಷ್ಕಾ ತಮ್ಮ ಮಗನಿಗೆ ಅಕಾಯ್ (Akaay) ಎಂದು ಹೆಸರಿಸಿಟ್ಟ ಬೆನ್ನಲ್ಲೇ, ಅನೇಕ ಜನರು ಈ ಹೆಸರಿನ ಅರ್ಥವನ್ನು ಕಂಡುಹಿಡಿಯಲು ಪ್ರಯತ್ನಿಸುತ್ತಿದ್ದಾರೆ.
(4 / 5)
ಅಕಾಯ್ ಎಂಬ ಪದವು 'ಕಾಯ' ಎಂಬ ಹಿಂದಿ ಪದದಿಂದ ಬಂದಿದೆ, ಇದರರ್ಥ 'ದೇಹ' ಎಂದಾಗಿದೆ. ಅಕಾಯ್ ಎಂದರೆ ಭೌತಿಕ ದೇಹಕ್ಕಿಂತಲೂ ಶ್ರೇಷ್ಠ ವ್ಯಕ್ತಿ ಎಂದರ್ಥ. ಟರ್ಕಿಶ್ ಭಾಷೆಯಲ್ಲಿ, 'ಅಕಾಯ್' ಎಂದರೆ 'ಹೊಳೆಯುತ್ತಿರುವ ಚಂದ್ರ' ಎಂದರ್ಥ. ಅಲ್ಲದೆ ಈ ಹೆಸರಿನಲ್ಲಿ ಅನುಷ್ಕಾ ಮತ್ತು ಕೊಹ್ಲಿ ಹೆಸರು ಕೂಡ ಸೇರಿದೆ. ಅನುಷ್ಕಾ ಹೆಸರಿನ 'ಅ' ಮತ್ತು ಕೊಹ್ಲಿಯಲ್ಲಿ 'ಕಾ' ಅಕ್ಷರ ಇದರಲ್ಲಿದೆ.
ಇತರ ಗ್ಯಾಲರಿಗಳು