ಅರಿಶಿನ ಪುಡಿಯನ್ನು ಹಾಲಿಗೆ ಹಾಕಿ ಕುಡಿಯುವುದರಿಂದ ಏನಾಗುತ್ತೆ; ಇದು ನಿಮ್ಮ ಆರೋಗ್ಯದ ಮೇಲೆ ಯಾವ ರೀತಿ ಪರಿಣಾಮ ಬೀರುತ್ತದೆ ನೋಡಿ
- Milk With Turmeric: ಅರಿಶಿನ ಪುಡಿಯನ್ನು ಹಾಲಿಗೆ ಹಾಕಿ ನೀವು ಕುಡಿಯುತ್ತಿದ್ದರೆ. ಅದು ನಿಮ್ಮ ದೇಹಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ನೀವು ತಿಳಿದುಕೊಳ್ಳಲೇಬೇಕು. ಆ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
- Milk With Turmeric: ಅರಿಶಿನ ಪುಡಿಯನ್ನು ಹಾಲಿಗೆ ಹಾಕಿ ನೀವು ಕುಡಿಯುತ್ತಿದ್ದರೆ. ಅದು ನಿಮ್ಮ ದೇಹಕ್ಕೆ ಒಳ್ಳೆಯದೋ ಅಥವಾ ಕೆಟ್ಟದ್ದೋ ಎಂದು ನೀವು ತಿಳಿದುಕೊಳ್ಳಲೇಬೇಕು. ಆ ಬಗ್ಗೆ ಒಂದಷ್ಟು ಮಾಹಿತಿಯನ್ನು ನಾವಿಲ್ಲಿ ನೀಡಿದ್ದೇವೆ ಗಮನಿಸಿ.
(1 / 7)
ಕೆಲವರು ಪ್ರತಿನಿತ್ಯ ರಾತ್ರಿ ಮಲಗುವ ಮುನ್ನ ಅರಶಿನ ಸೇರಿಸಿದ ಹಾಲನ್ನು ಕುಡಿದು ಮಲಗುತ್ತಾರೆ. ಇದರಿಂದ ಆರೋಗ್ಯಕ್ಕೆ ಉತ್ತಮ ಲಾಭವೇ ಇದೆ. ಇದು ನಿಮ್ಮಲ್ಲಿ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ.
(2 / 7)
ಆದರೆ ಇದು ನಿಮ್ಮ ಬಾಡಿಯನ್ನು ಸ್ವಲ್ಪ ಹೀಟ್ ಮಾಡುತ್ತದೆ. ಆ ಕಾರಣಕ್ಕಾಗಿ ಬಾಯಿಯಲ್ಲಿ ಹುಟ್ಟು ಆದ ದಿನಗಳಲ್ಲಿ ನೀವು ಇದನ್ನು ಕುಡಿದರೆ ಅದು ಹೆಚ್ಚಾಗುವ ಸಾಧ್ಯತೆ ಇರುತ್ತದೆ.
(3 / 7)
ಚಳಿಗಾಲ ಮತ್ತು ಮಳೆಗಾಲಕ್ಕೆ ಇದು ಉತ್ತಮವಾಗಿದೆ. ಆದರೆ ಬೇಸಿಗೆಯಲ್ಲಿ ನೀವು ಇದನ್ನು ಅಷ್ಟಾಗಿ ಸೇವನೆ ಮಾಡುವುದು ಉತ್ತಮವಲ್ಲ. ಯಾಕೆಂದರೆ ಇದು ನಿಮ್ಮ ಬಾಡಿಗೆ ಇನ್ನಷ್ಟು ಉಷ್ಣಾಂಶವನ್ನು ನೀಡುತ್ತದೆ.
(4 / 7)
ಅರಶಿನವು ನಿಮ್ಮ ದೇಹವನ್ನು ಬೆಚ್ಚಗಿಡುತ್ತದೆ. ಒಂದು ಲೋಟ ಹಾಲಿಗೆ ಒಂದು ಚಿಟಿಕೆ ಅರಶಿನವನ್ನು ಮಾತ್ರ ಹಾಕಿ ಕುಡಿಯಿರಿ. ಹೆಚ್ಚಾಗಿ ನೀವು ಇದನ್ನು ಮಿಕ್ಸ್ ಮಾಡಿ ಕುಡಿಯುವುದು ಆರೋಗ್ಯಕ್ಕೆ ಅಷ್ಟು ಒಳ್ಳೆಯದಲ್ಲ.
(5 / 7)
ಪೌಷ್ಟಿಕತಜ್ಞರ ಪ್ರಕಾರ ಅರಶಿನದ ಹಾಲು ನಿಮ್ಮಲ್ಲಿನ ರಕ್ತದ ಒತ್ತಡವನ್ನು ಕಡಿಮೆ ಮಾಡುತ್ತದೆ. ಉತ್ತಮ ನಿದ್ರೆ ಬರುವಂತೆ ಮಾಡುತ್ತದೆ. ಅರಿಶಿನ ಹಾಲು ದೇಹದಿಂದ ವಿಷವನ್ನು ತೆಗೆದುಹಾಕುವಲ್ಲಿ ಸಹಾಯ ಮಾಡುತ್ತದೆ. ಅಂದರೆ ನಿಮ್ಮ ದೇಹದಲ್ಲಿನ ನಂಜನ್ನು ತೆಗೆಯುತ್ತದೆ.
(6 / 7)
ಚರ್ಮ ಮತ್ತು ಕೂದಲಿನ ಆರೈಕೆಗೆ ಇದು ಉತ್ತಮ ಪರಿಣಾಮಕಾರಿ ಮನೆಮದ್ದು ಎಂದೇ ಹೇಳಬಹುದು. ಮುಖದ ಕಾಂತಿಯನ್ನು ಹೆಚ್ಚಿಸಿಕೊಳ್ಳಲು ಬಯಸುವವರು ಸಹ ಇದನ್ನು ಕುಡಿಯಬಹುದು. ಅಥವಾ ಹಾಲಿನ ಕೆನೆ ಜೊತೆಗೆ ಅರಶಿನವನ್ನು ಮಿಕ್ಸ್ ಮಾಡಿಕೊಂಡು ಹಚ್ಚಿಕೊಳ್ಳಬಹುದು.
ಇತರ ಗ್ಯಾಲರಿಗಳು