Interesting Facts: ಜಗತ್ತಿನಲ್ಲಿ ಕನ್ನಡಿಯೇ ಇಲ್ಲದಿದ್ದರೆ ಏನಾಗುತ್ತಿತ್ತು? ಇದನ್ನು ನೀವು ಊಹೆನೂ ಮಾಡಿರಲ್ಲ
- ಜಗತ್ತಿನಲ್ಲಿ ಕನ್ನಡಿಯೇ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ನೀವು ಎಂದಾದರೂ ಯೋಚನೆ ಮಾಡಿದ್ರಾ? ಮಾಡಿಲ್ಲ ಅಂದ್ರೆ ಈಗ ಒಮ್ಮೆ ಮಾಡಿಕೊಂಡು ಇದನ್ನು ಓದಿ ನೋಡಿ
- ಜಗತ್ತಿನಲ್ಲಿ ಕನ್ನಡಿಯೇ ಇಲ್ಲದಿದ್ದರೆ ಏನಾಗುತ್ತಿತ್ತು ಎಂದು ನೀವು ಎಂದಾದರೂ ಯೋಚನೆ ಮಾಡಿದ್ರಾ? ಮಾಡಿಲ್ಲ ಅಂದ್ರೆ ಈಗ ಒಮ್ಮೆ ಮಾಡಿಕೊಂಡು ಇದನ್ನು ಓದಿ ನೋಡಿ
(1 / 8)
ನೀವು ಹೇಗಿದ್ದೀರಿ ಎಂದು ಸುಲಭವಾಗಿ ತಿಳಿದುಕೊಳ್ಳಲು ಕನ್ನಡಿ ಬಳಸುತ್ತೀರಿ. ಕೆಲ ಸಂದರ್ಭದಲ್ಲಿ ಕನ್ನಡಿ ಇಲ್ಲದಿರುವಾಗ ಮೊಬೈಲ್ ಬಳಸಿ ನೋಡಿಕೊಳ್ಳುತ್ತೀರಿ. ಆದರೆ ಕನ್ನಡಿಯೇ ಇಲ್ಲ ಎಂದಾದರೆ ಜಗತ್ತು ಇಂದಿಗಿಂತ ಹೇಗೆ ಭಿನ್ನವಾಗಿರುತ್ತಿತ್ತು ನೋಡಿ.
(2 / 8)
ಜನರು ತಾವು ಹೇಗಿದ್ದೇವೆ ಎಂದು ತಿಳಿಯಲು ಇನ್ನೊಬ್ಬರಿಂದ ವಿವರಣೆ ಪಡೆಯಬೇಕಿತ್ತು. ಅಂದ ಚಂದಕ್ಕೆ ಅಷ್ಟೊಂದು ಪ್ರಾಮುಖ್ಯತೆ ಇರುತ್ತಿರಲಿಲ್ಲ. ತಮಗನಿಸಿದ ಮಟ್ಟಿಗೆ ರೆಡಿ ಆಗಿ ಹೋಗುತ್ತಿದ್ದರು. ಇತರರ ವಿವರಣೆಗಳನ್ನು ಆಲಿಸುವ ಮೂಲಕ ತಮ್ಮನ್ನು ತಾವು ಕಾಣುತ್ತಿದ್ದರು.
(3 / 8)
ನೀರಿನಲ್ಲಿ ಅಥವಾ ಗಾಜಿನ ಮೇಲೆ ಹೀಗೆ ಎಲ್ಲಾದರೂ ಒಂದು ಕಡೆ ತಮ್ಮ ಪ್ರತಿಬಿಂಬವನ್ನು ನೋಡಿಕೊಂಡರೂ ತಾವು ಹೇಗಿದ್ದೇವೆ ಎಂದು ತಿಳಿದಿದ್ದರು, ಪ್ರತಿನಿತ್ಯ ಕನ್ನಡಿ ನೋಡಿಕೊಂಡು ಬಗೆ ಬಗೆಯ ಉಡುಪು ತೊಟ್ಟು ನಾನಾ ವಿಧದಲ್ಲಿ ಕೇಷ, ವಸ್ತ್ರ ವಿನ್ಯಾಸಗಳನ್ನು ದಿನವೂ ಮಾಡಿಕೊಳ್ಳಲು ಈಗಿನಷ್ಟು ಆಸಕ್ತಿ ಇರುತ್ತಿರಲಿಲ್ಲ.
(4 / 8)
ಸ್ವಚ್ಛ ಮತ್ತು ನೈರ್ಮಲ್ಯದ ಭಾವನೆ ಮಾತ್ರ ಹೆಚ್ಚಾಗಿ ಇರುತ್ತಿತ್ತು. ಮುಖದ ಕಾಂತಿ, ಮೇಕಪ್ ಈ ರೀತಿಯ ಪ್ರಾಮುಖ್ಯತೆಗಳು ಕಡಿಮೆ ಆಗಿರುತ್ತಿತ್ತು. ಸ್ಪರ್ಶ ಮತ್ತು ವಾಸನೆಯಂತಹ ಸಂವೇದನೆಗಳಿಗೆ ಹೆಚ್ಚಿನ ಒತ್ತು ನೀಡಲಾಗುತ್ತಿತ್ತು.
(5 / 8)
ಫ್ಯಾಶನ್ ಟ್ರೆಂಡ್‌ಗಳು, ವಸ್ತ್ರ ವಿನ್ಯಾಸಗಳು ತಮಗೆ ಎಷ್ಟು ಒಪ್ಪುತ್ತದೆ ಎಂಬುದರ ಬಗ್ಗೆ ಈಗಿದ್ದಷ್ಟು ಗಮನ ಇರುತ್ತಿರಲಿಲ್ಲ. ಜನರು ಇತರರ ಪ್ರತಿಕ್ರಿಯೆಗಳು ಮತ್ತು ಭಾವನೆಗಳನ್ನು ಅರ್ಥಮಾಡಿಕೊಳ್ಳಲು ಹೆಚ್ಚು ಬಯಸುತ್ತಿದ್ದರು.
(6 / 8)
ಭಾವಚಿತ್ರ ಮತ್ತು ಕಲಾ ಪ್ರಕಾರ ಅಂದರೆ ಪೇಟಿಂಗ್, ಡ್ರಾಯಿಂಗ್ ಇವುಗಳಿಗೆ ಹೆಚ್ಚಿನ ಮಹತ್ವ ಇರುತ್ತಿತ್ತು. ಜನರು ಆ ರೂಪದಲ್ಲಿ ತಮ್ಮನ್ನು ಹೆಚ್ಚಾಗಿ ಕಂಡುಕೊಳ್ಳಲು ಬಯಸುತ್ತಿದ್ದರು. ವಿನ್ಯಾಸ ಮತ್ತು ವಾಸ್ತುಶಿಲ್ಪಕ್ಕೂ ಹೆಚ್ಚಿನ ಮಾನ್ಯತೆ ಇರುತ್ತಿತ್ತು
(7 / 8)
ಮಾನಸಿಕ ಆರೋಗ್ಯ ಚೆನ್ನಾಗಿರುತ್ತಿತ್ತು. ನಾನು ದಪ್ಪ, ನಾನು ತೆಳ್ಳಗಿದ್ದೆ, ಕಪ್ಪಗಿದ್ದೇನೆ ಹಾಗೆ ಹೀಗೆ ಎಂದು ತಮ್ಮನ್ನೇ ತಾವು ಕುಗ್ಗಿಸಿಕೊಳ್ಳುವ ಪ್ರಮೇಯ ಕಡಿಮೆ ಇರುತ್ತಿತ್ತು. ಸೌಂದರ್ಯದ ಮಾನದಂಡಗಳು ಈಗಿದ್ದಷ್ಟು ಉತ್ತುಂಗದಲ್ಲಿ ಇರುತ್ತಿರಲಿಲ್ಲ. ಇನ್ನು ಕ್ಯಾಮರಾ ಮಾಡಬೇಕು ಎಂದರೂ ಅದರೊಳಗೊಂದು ಪ್ರತಿಫಲನ ಬೇಕು.
ಇತರ ಗ್ಯಾಲರಿಗಳು