Punarjanma: ಯಾರಿಗೆ ಪುನರ್ಜನ್ಮವಿಲ್ಲ? ಯಾರಿಗಿದೆ? ಜ್ಯೋತಿಷ್ಯ ಹೇಳೋದಿಷ್ಟು..
- Reincarnation: ಒಬ್ಬ ವ್ಯಕ್ತಿಗೆ 7 ಜನ್ಮ ಇರುತ್ತದೆ, ಮತ್ತೊಂದು ಜನ್ಮ ಅಂತ ಇದ್ದರೆ ನಾನು ಹಾಗೆ ಹುಟ್ಟಿ ಬರ್ತೀನಿ, ಹೀಗೆ ಮಾಡ್ತೀನಿ ಎಂದೆಲ್ಲಾ ಹೇಳುವವರನ್ನು ಕೇಳಿರುತ್ತೇವೆ ಅಲ್ಲವೇ. ಆದರೆ ಎಲ್ಲರಿಗೂ ಪುನರ್ಜನ್ಮದ ಅವಕಾಶ ಸಿಗುವುದಿಲ್ಲ. ಹಾಗಾದ್ರೆ ಯಾರಿಗೆ ಪುನರ್ಜನ್ಮವಿಲ್ಲ? ಎಂಬುದನ್ನು ನೋಡೋಣ ಬನ್ನಿ..

(1 / 5)
ಪುನರ್ಜನ್ಮ ಎಂದರೆ ಆತ್ಮವು ಭೌತಿಕ ನಿಧನದ ನಂತರ ಹೊಸ ದೇಹದಲ್ಲಿ ಹೊಸ ಜೀವನವನ್ನು ಕಂಡುಕೊಳ್ಳುವುದಾಗಿದೆ. ಭಾರತ ಸೇರಿದಂತೆ ಪ್ರಪಂಚದ ಅನೇಕ ರಾಷ್ಟ್ರಗಳಲ್ಲಿನ ಹಲವು ಧರ್ಮಗಳಲ್ಲಿನ ಜನರು ಪುನರ್ಜನ್ಮ- ಮರುಜನ್ಮವನ್ನು ನಂಬುತ್ತಾರೆ.
(2 / 5)
ಒಬ್ಬ ವ್ಯಕ್ತಿಗೆ 7 ಜನ್ಮ ಇರುತ್ತದೆ ಎಂದು ಹೇಳಲಾಗುತ್ತದೆ. ಆದರೆ ಎಲ್ಲರಿಗೂ ಆ ಅವಕಾಶ ಸಿಗುವುದಿಲ್ಲ. ಅದರಲ್ಲಿಯೂ ಮನುಷ್ಯರು ಮತ್ತೊಂದು ಜನ್ಮದಲ್ಲಿ ಮನುಷ್ಯರಾಗಿಯೇ ಹುಟ್ಟುತ್ತಾರೆಂದು ಹೇಳಲಾಗುವುದಿಲ್ಲ.
(3 / 5)
ನಿರ್ಲಿಪ್ತ ಜೀವನ ನಡೆಸುವವರು ಅಥವಾ ಆಸೆಗಳನ್ನು ತ್ಯಜಿಸಿದವರು ಅಥವಾ ತಪಸ್ವಿಗಳಿಗೆ ಆ ಭಾಗ್ಯ ಸಿಗುತ್ತದೆ. ಹಾಗಾದ್ರೆ ನಿಜಕ್ಕೂ ಯಾರಿಗೆ ಪುನರ್ಜನ್ಮವಿಲ್ಲ? ಎಂಬುದನ್ನು ನೋಡೋಣ ಬನ್ನಿ..
(4 / 5)
ಒಬ್ಬರ ಜನ್ಮ ಕುಂಡಲಿಯಲ್ಲಿ 12ನೇ ಮನೆಯು ಮೋಕ್ಷ ಸ್ಥಾನವಾಗಿದೆ. ನವಗ್ರಹಗಳಲ್ಲಿ 7ನೇ ಗ್ರಹವಾಗಿರುವ ಕೇತು ಮೋಕ್ಷಾಕಾರಕನಾಗಿ ಕಾರ್ಯನಿರ್ವಹಿಸುತ್ತಾನೆ. ಒಬ್ಬರ ಜಾತಕದಲ್ಲಿ ಕೇತುವು 12ನೇ ಮನೆಯನ್ನು ಆಕ್ರಮಿಸಿದರೆ ಅಂತವರಿಗೆ ಪುನರ್ಜನ್ಮ ಸಿಗುವುದಿಲ್ಲ. ಆದರೆ ಅವರು ಮೋಕ್ಷ ಪಡೆಯುತ್ತಾರೆ.
ಇತರ ಗ್ಯಾಲರಿಗಳು