IPL Record: 20ನೇ ಓವರ್‌ನಲ್ಲಿ ಸಿಕ್ಸರ್ ಕಿಂಗ್ ಯಾರು; ಡಿಕೆ, ಎಬಿಡಿ ದಾಖಲೆ ಮುರಿದ ಮಿಲ್ಲರ್, ಧೋನಿಯದ್ದು ಅಗ್ರಸ್ಥಾನ
- ಐಪಿಎಲ್ ಇತಿಹಾಸದಲ್ಲಿ 20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಡೇವಿಡ್ ಮಿಲ್ಲರ್ ಅವರು ದಿನೇಶ್ ಕಾರ್ತಿಕ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕಿದ್ದಾರೆ.
- ಐಪಿಎಲ್ ಇತಿಹಾಸದಲ್ಲಿ 20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಸಿಡಿಸಿದ ಆಟಗಾರರ ಪಟ್ಟಿಯಲ್ಲಿ ಡೇವಿಡ್ ಮಿಲ್ಲರ್ ಅವರು ದಿನೇಶ್ ಕಾರ್ತಿಕ್ ಮತ್ತು ಎಬಿ ಡಿವಿಲಿಯರ್ಸ್ ಅವರನ್ನು ಹಿಂದಿಕ್ಕಿದ್ದಾರೆ.
(1 / 9)
ಐಪಿಎಲ್ 2025ರಲ್ಲಿ ಸೋಮವಾರ (ಮಾರ್ಚ್ 24) ಲಕ್ನೋ ಸೂಪರ್ ಜೈಂಟ್ಸ್ ಬ್ಯಾಟರ್ ಡೇವಿಡ್ ಮಿಲ್ಲರ್ ಡೆಲ್ಲಿ ಕ್ಯಾಪಿಟಲ್ಸ್ ವಿರುದ್ಧ 1 ಬೌಂಡರಿ, 2 ಸಿಕ್ಸರ್ ಸಹಿತ ಅಜೇಯ 27 ರನ್ ಗಳಿಸಿದರು. ಮೋಹಿತ್ ಶರ್ಮಾ ಎಸೆದ 20ನೇ ಓವರ್‌ನ ಕೊನೆಯ 2 ಎಸೆತಗಳಲ್ಲಿ ಮಿಲ್ಲರ್ ಎರಡೂ ಸಿಕ್ಸರ್ ಬಾರಿಸಿದರು. ಈ ಸಿಕ್ಸರ್ಗಳೊಂದಿಗೆ ಐಪಿಎಲ್‌ನಲ್ಲಿ ವಿಶೇಷ ದಾಖಲೆಯೊಂದನ್ನು ತಮ್ಮ ಹೆಸರಿಗೆ ಬರೆದುಕೊಂಡಿದ್ದಾರೆ.
(Surjeet Yadav)(2 / 9)
ಐಪಿಎಲ್ ಇತಿಹಾಸದಲ್ಲಿ 20ನೇ ಓವರ್‌ನಲ್ಲಿ ಅತ್ಯಧಿಕ ಸಿಕ್ಸರ್ ಬಾರಿಸಿದ ಆಟಗಾರರ ಪಟ್ಟಿಯಲ್ಲಿ ಮಿಲ್ಲರ್ 6ನೇ ಸ್ಥಾನಕ್ಕೆ ಜಿಗಿತ ಕಂಡಿದ್ದಾರೆ. ಇಲ್ಲಿಯವರೆಗೆ 20ನೇ ಓವರ್‌ನಲ್ಲಿ ಒಟ್ಟು 106 ಬಾಲ್ಗಳನ್ನು ಎದುರಿಸಿದ್ದು, 21 ಸಿಕ್ಸರ್ ಬಾರಿಸಿದ್ದಾರೆ. ಇದರೊಂದಿಗೆ ದಿನೇಶ್ ಕಾರ್ತಿಕ್ ಮತ್ತು ಎಬಿ ಡಿವಿಲಿಯರ್ಸ್ ದಾಖಲೆ ಮುರಿದರು. ಹಾಗಾದರೆ ಅಗ್ರಸ್ಥಾನ ಪಡೆದವರು ಯಾರು? ಇಲ್ಲಿದೆ ವಿವರ.
(PTI)(3 / 9)
ಐಪಿಎಲ್‌ನಲ್ಲಿ ಕೊನೆಯ ಓವರ್‌ನ 'ಸಿಕ್ಸರ್‌ಗಳ ರಾಜ' ಎಂಎಸ್ ಧೋನಿ. 20ನೇ ಓವರ್‌ನಲ್ಲಿ ಅತಿ ಹೆಚ್ಚು ಸಿಕ್ಸರ್ ಬಾರಿಸಿದ ದಾಖಲೆ ಅವರ ಹೆಸರಿನಲ್ಲಿದೆ. ಚೆನ್ನೈ ಸೂಪರ್ ಕಿಂಗ್ಸ್ (CSK) ತಂಡದ ಮಾಜಿ ನಾಯಕ ಧೋನಿ, 20ನೇ ಓವರ್‌ನಲ್ಲಿ ಒಟ್ಟು 330 ಎಸೆತಗಳನ್ನು ಆಡಿ 69 ಸಿಕ್ಸರ್ ಚಚ್ಚಿದ್ದಾರೆ.
(PTI)(5 / 9)
ಚೆನ್ನೈ ಸೂಪರ್ ಕಿಂಗ್ಸ್ ಸ್ಟಾರ್ ಆಲ್‌ರೌಂಡರ್ ರವೀಂದ್ರ ಜಡೇಜಾ ಪಟ್ಟಿಯಲ್ಲಿ 3ನೇ ಸ್ಥಾನದಲ್ಲಿದ್ದು, 181 ಎಸೆತಗಳಲ್ಲಿ 30 ಸಿಕ್ಸರ್ ಬಾರಿಸಿದ್ದಾರೆ.
(PTI)(6 / 9)
ಮುಂಬೈ ಇಂಡಿಯನ್ಸ್ ನಾಯಕ ಮತ್ತು ಡ್ಯಾಶಿಂಗ್ ಆಲ್‌ರೌಂಡರ್ ಹಾರ್ದಿಕ್ ಪಾಂಡ್ಯ 28 ಸಿಕ್ಸರ್ ಬಾರಿಸಿದ್ದಾರೆ. ಅವರು ಐಪಿಎಲ್‌ನಲ್ಲಿ 20ನೇ ಓವರ್‌ನಲ್ಲಿ 117 ಎಸೆತ ಆಡಿದ್ದಾರೆ.
(X)(7 / 9)
ಮಾಜಿ ಎಂಐ ನಾಯಕ ಮತ್ತು 'ಹಿಟ್‌ಮ್ಯಾನ್' ರೋಹಿತ್ ಶರ್ಮಾ 5ನೇ ಸ್ಥಾನದಲ್ಲಿದ್ದಾರೆ. ಅವರು 91 ಎಸೆತಗಳಲ್ಲಿ 23 ಸಿಕ್ಸರ್ ಬಾರಿಸಿದ್ದಾರೆ.
(PTI)(8 / 9)
ಮಾಜಿ ವಿಕೆಟ್ ಕೀಪರ್-ಬ್ಯಾಟ್ಸ್‌ಮನ್ ದಿನೇಶ್ ಕಾರ್ತಿಕ್ ಏಳನೇ ಸ್ಥಾನದಲ್ಲಿದ್ದಾರೆ. 136 ಬಾಲ್ಗಳಲ್ಲಿ ನಂತರ 20 ಸಿಕ್ಸರ್ ಚಚ್ಚಿದ್ದಾರೆ. ಅವರು ಪ್ರಸ್ತುತ ರಾಯಲ್ ಚಾಲೆಂಜರ್ಸ್ ಬೆಂಗಳೂರು (RCB) ತಂಡದ ಮಾರ್ಗದರ್ಶಕರಾಗಿದ್ದಾರೆ.
(X)ಇತರ ಗ್ಯಾಲರಿಗಳು