Bigg Boss Kannada 11: ಈ ಸಲದ ಬಿಗ್ ಬಾಸ್ ವಿನ್ನರ್ ಹನುಮಂತುನೇ ಅನ್ನೋಕೆ ಸಿಕ್ತು ಮತ್ತೊಂದು ಸಾಕ್ಷ್ಯ! ತ್ರಿವಿಕ್ರಮ್ ರನ್ನರ್ ಅಪ್
- Bigg Boss Kannada 11 Winner Prediction: ಬಿಗ್ ಬಾಸ್ ಮನೆಗೆ ಕ್ಯಾಪ್ಟನ್ ಆಗಿಯೇ ವೈಲ್ಡ್ ಕಾರ್ಡ್ ಮೂಲಕ ಎಂಟ್ರಿ ಕೊಟ್ಟವರು ಹಾವೇರಿ ಜಿಲ್ಲೆ ಸವಣೂರು ತಾಲೂಕಿನ ಚಿಲ್ಲೂರು ಬಡ್ನಿ ತಾಂಡಾದ ಹನುಮಂತು ಲಮಾಣಿ. ರಿಯಾಲಿಟಿ ಶೋಗಳ ಮೂಲಕವೇ ಹೆಸರು ಮಾಡಿರುವ ಹನುಮಂತು, ಇದೀಗ ಬಿಗ್ ಬಾಸ್ ಕನ್ನಡದ 11ನೇ ಸೀಸನ್ ಗೆಲ್ಲುವ ಫೇವರಿಟ್ ಸ್ಪರ್ಧಿಯಾಗಿದ್ದಾರೆ.

(1 / 7)
ಬಿಗ್ ಬಾಸ್ ಆರಂಭವಾಗಿ ಮೂರು ವಾರಕ್ಕೇ ವೈಲ್ಡ್ ಕಾರ್ಡ್ ಎಂಟ್ರಿ ಮೂಲಕ ಆಗಮಿಸಿದವರು ಹಳ್ಳಿ ಹಕ್ಕಿ ಹನುಮಂತ ಲಮಾಣಿ. ಈಗ ಇದೇ ಹೈದ ನೇರವಾಗಿ ಫಿನಾಲೆ ಪ್ರವೇಶಿಸಿದ ಮೊದಲ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
(Instagram\ Hanamantha Lamani)(2 / 7)
ಯಾರ ಜತೆ ಕಿತ್ತಾಡಿಕೊಳ್ಳದೆ, ಮಾತಿಗೆ ಮಾತು ಬೆಳೆಸದೆ, ಆಟದಲ್ಲಿ ಮಾತ್ರ ತನ್ನ ಅಸಲಿಯತ್ತನ್ನು ತೋರಿಸುತ್ತ ಬಂದ ಹನುಮಂತು, ಇದೀಗ ಎಲ್ಲರ ನೆಚ್ಚಿನ ಸ್ಪರ್ಧಿಯಾಗಿ ಹೊರಹೊಮ್ಮಿದ್ದಾರೆ.
(3 / 7)
ಶುಕ್ರವಾರದ ಏಪಿಸೋಡ್‌ನಲ್ಲಿ ಛೂ ಮಂತರ್ ಸಿನಿಮಾದ ನಟ ಶರಣ್ ಮತ್ತು ಅದಿತಿ ಪ್ರಭುದೇವ ಅವರ ಕೈಯಿಂದ ಟಿಕೆಟ್ ಟು ಫಿನಾಲೆ ಪಡೆದುಕೊಂಡು, ಎಲ್ಲರಿಗಿಂತ ಮೊದಲೇ ತಮ್ಮ ಸ್ಥಾನವನ್ನು ಅಧಿಕೃತಗೊಳಿಸಿಕೊಂಡಿದ್ದಾರೆ.
(4 / 7)
ಇದಷ್ಟೇ ಆಗಿದ್ದರೆ ನಡೆಯುತ್ತಿತ್ತು. ಆದರೆ, ಇದಕ್ಕೂ ಮಿಗಿಲಾದ ಗರಿಯೊಂದು ಹನುಮಂತುಗೆ ಒಲಿದು ಬರಲಿದೆ ಎಂದೇ ಹೇಳಲಾಗುತ್ತಿದೆ. ಅದೇನು ಅಂದರೆ, ಬಿಗ್ ಬಾಸ್ ಸೀಸನ್ 11ರ ವಿಜೇತರಾಗಲಿದ್ದಾರಂತೆ ಹನುಮಂತು.
(5 / 7)
ಈಗಾಗಲೇ ಸೋಷಿಯಲ್ ಮೀಡಿಯಾದಲ್ಲಿ ಮತ್ತು ವೀಕ್ಷಕರ ವಲಯದಲ್ಲಿ ಈ ಸಲದ ಬಿಗ್ ಬಾಸ್ ಗೆಲ್ಲುವ ಫೇವರಿಟ್ ಪಟ್ಟಿಯಲ್ಲಿ ಹನುಮಂತು, ತ್ರಿವಿಕ್ರಮ್, ರಜತ್ ಮತ್ತು ಭವ್ಯಾ ಗೌಡ ಇದ್ದಾರೆ. ಈ ನಾಲ್ವರ ಪೈಕಿ ಹನುಮಂತು ಅವರಿಗೇ ಗೆಲುವು ಎಂದೂ ಅಂದಾಜಿಸಿದ್ದಾರೆ.
(6 / 7)
ಅದರಂತೆ ಇದೀಗ ಬಿಗ್ ಬಾಸ್ ಕನ್ನಡ ಸೀಸನ್ 11ರ ವಿಕೀಪಿಡಿಯಾದಲ್ಲಿ ಹನುಮಂತು ಅವರೇ ವಿನ್ನರ್ ಎಂದು ಘೋಷಣೆ ಮಾಡಲಾಗಿದೆ. ಅಷ್ಟೇ ಅಲ್ಲ ಎರಡನೇ ಸ್ಥಾನದಲ್ಲಿ ತ್ರಿವಿಕ್ರಮ್ ಇರಲಿದ್ದಾರೆ ಎಂದೂ ನಮೂದಿಸಲಾಗಿದೆ.
ಇತರ ಗ್ಯಾಲರಿಗಳು