ಸೋತರೂ ಡೆಲ್ಲಿಗೆ ಸಿಕ್ಕಾಪಟ್ಟೆ ಕಾಡಿದ ಲಕ್ನೋ ದಿಗ್ವೇಶ್ ಸಿಂಗ್ ಯಾರು? ಭಾರತಕ್ಕೆ ಸಿಕ್ಕರು ಮತ್ತೊಬ್ಬ ಮಿಸ್ಟರಿ ಸ್ಪಿನ್ನರ್
- Digvesh Singh Rathi: ಗೆಲುವು ಸಾಧಿಸಿದ್ದರ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಈ ಮಿಸ್ಟರಿ ಸ್ಪಿನ್ನರ್ ಬಗ್ಗೆ ಯಾರಿಗೂ ಗೊತ್ತಿಲ್ಲ!
- Digvesh Singh Rathi: ಗೆಲುವು ಸಾಧಿಸಿದ್ದರ ನಡುವೆಯೂ ಡೆಲ್ಲಿ ಕ್ಯಾಪಿಟಲ್ಸ್ ತಂಡಕ್ಕೆ ಕಾಡಿದ ಲಕ್ನೋ ಸೂಪರ್ ಜೈಂಟ್ಸ್ ತಂಡದ ಈ ಮಿಸ್ಟರಿ ಸ್ಪಿನ್ನರ್ ಬಗ್ಗೆ ಯಾರಿಗೂ ಗೊತ್ತಿಲ್ಲ!
(1 / 10)
ಸದ್ಯಕ್ಕೆ ಕ್ರಿಕೆಟ್ ಪ್ರಿಯರ ಕಣ್ಣು ನೆಟ್ಟಿರುವುದು ಡೆಲ್ಲಿ ಕ್ಯಾಪಿಟಲ್ಸ್ಗೆ ರೋಚಕ ಗೆಲುವು ತಂದುಕೊಟ್ಟ ಅಶುತೋಷ್ ಶರ್ಮಾ ಮತ್ತು ವಿಪ್ರಜ್ ನಿಗಮ್ ಮೇಲೆ. ಈ ಯುವ ಆಟಗಾರರ ಆಟದ ವೈಭವಕ್ಕೆ ಕ್ರಿಕೆಟ್ ಜಗತ್ತೇ ಬೆರಗಾಗಿದೆ. ಗೆಲುವು ಸಾಧಿಸಿದ್ದರ ನಡುವೆಯೂ ಡೆಲ್ಲಿ ತಂಡಕ್ಕೆ ಕಾಡಿದ ಈ ಮಿಸ್ಟರಿ ಸ್ಪಿನ್ನರ್ ಬಗ್ಗೆ ಯಾರಿಗೂ ಗೊತ್ತಿಲ್ಲ!
(REUTERS)(2 / 10)
ಈತನ ಹೆಸರು ದಿಗ್ವೇಶ್ ಸಿಂಗ್ ರಥಿ. ಹುಟ್ಟಿದ್ದು ಡೆಲ್ಲಿಯಲ್ಲಿ. ಐಪಿಎಲ್ನ 4ನೇ ಪಂದ್ಯದಲ್ಲಿ ತಮ್ಮ ತವರಿನ ತಂಡದ ವಿರುದ್ಧವೇ ಮಿಂಚಿನ ಬೌಲಿಂಗ್ ನಡೆಸಿದ ದಿಗ್ವೇಶ್, 4 ಓವರ್ಗಳಲ್ಲಿ 31 ರನ್ ಬಿಟ್ಟುಕೊಟ್ಟು ಪ್ರಮುಖ 2 ವಿಕೆಟ್ ಕಿತ್ತರು. ಆದರೆ ಅವರ ಕೈಯಿಂದ ಬಿಡುಗಡೆ ಬಳಿಕ ಚೆಂಡು ಸ್ವಿಂಗ್ ಆಗುತ್ತಿದ್ದದ್ದು ಬ್ಯಾಟರ್ಗಳಿಗೆ ಅಚ್ಚರಿ ಮೂಡಿಸಿತ್ತು.
(REUTERS)(3 / 10)
ಐಪಿಎಲ್‌ನಲ್ಲಿ ದಿಗ್ವೇಶ್ ಸಿಂಗ್ ರಥಿ ತಾನು ಎಸೆದ ಮೊದಲ ಓವರ್ನ ಮೊದಲ ಎಸೆತ ಸ್ವಿಂಗ್ ಆಯಿತು. 2ನೇ ಎಸೆತ ಸ್ಕಿಡ್ ಆಯಿತು. ಮೂರನೇ ಎಸೆತದ ಹೊತ್ತಿಗೆ ಅಕ್ಷರ್ ಪಟೇಲ್ ಅರ್ಥವಾಗದ ಬಲೆಗೆ ಸಿಲುಕಿಕೊಂಡರು. ಕೆಲ ಎಸೆತಗಳಲ್ಲಿ ರನ್ ಸೋರಿಕೆ ಮಾಡಿದರೂ ಹೆಚ್ಚಿನದಾಗಿ ಡಾಟ್ ಮಾಡುವಲ್ಲಿ ಯಶಸ್ವಿಯಾದರು.
(REUTERS)(4 / 10)
ದಿಗ್ವೇಶ್ ಅವರ ಐಪಿಎಲ್ ಪ್ರಯಾಣವು ರಾತ್ರೋರಾತ್ರಿ ಯಶಸ್ಸಿನ ಕಥೆಯಲ್ಲ. ಇದು 2024ರ ಡೆಲ್ಲಿ ಪ್ರೀಮಿಯರ್ ಲೀಗ್ (ಡಿಪಿಎಲ್)ನಲ್ಲಿನ ಪ್ರದರ್ಶನಗಳ ಮೇಲೆ ನಿರ್ಮಿಸಲಾದ ಪರಿಶ್ರಮದ ಹಾದಿಯಾಗಿದೆ. ಇಲ್ಲಿ ಗಮನ ಸೆಳೆದ ಹಿನ್ನೆಲೆ ಐಪಿಎಲ್ ತನಕ ಬರುವಂತಾಯಿತು.
(REUTERS)(5 / 10)
ಆಯುಷ್ ಬಡೋನಿ ನಾಯಕತ್ವದಲ್ಲಿ ಸೌತ್ ಡೆಲ್ಲಿ ಸೂಪರ್‌ಸ್ಟಾರ್ಸ್ ಪರ ಆಡಿದ 25 ವರ್ಷದ ಲೆಗ್ ಸ್ಪಿನ್ನರ್ 10 ಪಂದ್ಯಗಳಲ್ಲಿ 14 ವಿಕೆಟ್ ಕಬಳಿಸಿದ್ದರು. ಆ ಟೂರ್ನಿಯಲ್ಲಿ 5ನೇ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿ ಮುಗಿಸುವ ಮೂಲಕ ಗಮನ ಸೆಳೆದಿದ್ದರು.
(PTI)(6 / 10)
ಬೌಲಿಂಗ್ ವೇಳೆ ಒಂದು ತಂತ್ರವನ್ನಷ್ಟೇ ಅನುಕರಿಸಲ್ಲ. ಬೌನ್ಸ್ ಹಾಕುತ್ತಾರೆ, ಸ್ವಿಂಗ್ ಮಾಡುತ್ತಾರೆ, ಬ್ಯಾಟರ್ಗಳು ಗೊಂದಲ ಸೃಷ್ಟಿಸುವ ಮಿಸ್ಟರಿ ಎಸೆತಗಳನ್ನು ಹಾಕುತ್ತಾರೆ. ಥೇಟ್ ಸುನಿಲ್ ನರೈನ್ ಅವರಂತೆ ಬೌಲಿಂಗ್ ಮಾಡುತ್ತಾರೆ ಎಂದು ಕೆಲವರು ಹೇಳಿದ್ದುಂಟು! ಡಿಪಿಎಲ್ ಕೊನೆಯಲ್ಲಿ ಐಪಿಎಲ್ ಸ್ಕೌಟಿಂಗ್ ಪಟ್ಟಿಗೆ ತನ್ನ ಹೆಸರು ಸೇರಿಸಿದ್ದರು.
(PTI)(7 / 10)
ಜೆಡ್ಡಾದಲ್ಲಿ ನಡೆದ 2025ರ ಐಪಿಎಲ್ ಮೆಗಾ ಹರಾಜಿನಲ್ಲಿ ದಿಗ್ವೇಶ್ ಅವರನ್ನು ಎಲ್ಎಸ್ಜಿ 30 ಲಕ್ಷ ರೂಪಾಯಿಗೆ ಖರೀದಿಸಿತು. ಆದರೆ ಹರಾಜಿನಲ್ಲಿ ದಿಗ್ವೇಶ್ರನ್ನು ಖರೀದಿಸಲು ಲಕ್ನೋ ಮುಂದಾಗಿರಲಿಲ್ಲ. ಆದರೆ ಅವರು ಉತ್ತಮ ಪ್ರದರ್ಶನ ನೀಡಿರುವ ಕುರಿತು ಊಹಾಪೋಹ ಹಬ್ಬಿದ್ದ ಕಾರಣ ತನ್ನ ತೆಕ್ಕೆಗೆ ಹಾಕಿಕೊಂಡಿತು.
(PTI)(8 / 10)
2024ರ ಸೈಯದ್ ಮುಷ್ತಾಕ್ ಅಲಿ ಟ್ರೋಫಿಯಲ್ಲಿ ದಿಗ್ವೇಶ್ ಪ್ರದರ್ಶನ ಅದ್ಭುತವಾಗಿತ್ತು. ಡೆಲ್ಲಿ ಪರ ಐತಿಹಾಸಿಕ ಪಂದ್ಯದಲ್ಲಿ ಮಣಿಪುರ ವಿರುದ್ಧ 8 ರನ್ಗೆ 2 ವಿಕೆಟ್ ಪಡೆದಿದ್ದರು. ಈ ಟೂರ್ನಿಯಲ್ಲಿ 3 ಪಂದ್ಯಗಳಲ್ಲಿ ಆಡಿದ್ದ ದಿಗ್ವೇಶ್, 5 ವಿಕೆಟ್ ಕಿತ್ತಿದ್ದಾರೆ. ಆದರೆ ಅವರಿಗೆ ಲಿಸ್ಟ್ ಎ, ರಣಜಿ ಟ್ರೋಫಿಯಲ್ಲಿ ಇನ್ನೂ ಅವಕಾಶ ಸಿಗಲಿಲ್ಲ.
(PTI)(9 / 10)
ದಿಗ್ವೇಶ್ ಅವರಿಗೆ ಡೆಲ್ಲಿ ವಿರುದ್ಧದ ಪಂದ್ಯದಲ್ಲಿ ಅವಕಾಶ ಸಿಕ್ಕಿದ್ದೇ ರೋಚಕ. ಏಕೆಂದರೆ ಮಯಾಂಕ್ ಯಾದವ್, ಆವೇಶ್ ಖಾನ್ ಸೇರಿದಂತೆ ಪ್ರಮುಖ ಬೌಲರ್ಗಳು ಗಾಯಗೊಂಡ ಹಿನ್ನೆಲೆ ತಂಡದಲ್ಲಿ ದಿಗ್ವೇಶ್ಗೆ ಸುವರ್ಣಾವಕಾಶ ದೊರೆತಿದೆ.
(PTI)ಇತರ ಗ್ಯಾಲರಿಗಳು