ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾಗೆ 5 ಮಕ್ಕಳು ಬೇಕೆಂಬ ಆಸೆ ಇತ್ತಂತೆ, 10 ಆಸಕ್ತಿದಾಯಕ ಅಂಶಗಳು
ದೆಹಲಿ ಚುನಾವಣೆಯಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ ಪರ್ವೇಶ್ ವರ್ಮಾ ಅವರಿಗೆ 5 ಮಕ್ಕಳು ಬೇಕು ಎಂಬ ಆಸೆ ಇತ್ತಂತೆ. ಹಾಗೆ, ಪರ್ವೇಶ್ ಮತ್ತು ಅವರ ಕುಟುಂಬಕ್ಕೆ ಸಂಬಂಧಿಸಿದ 10 ಆಸಕ್ತಿದಾಯಕ ಅಂಶಗಳಿವು.
(1 / 12)
ಪರ್ವೇಶ್ ವರ್ಮಾ ಅವರು ನವದೆಹಲಿ ವಿಧಾನಸಭಾ ಕ್ಷೇತ್ರದಲ್ಲಿ ಅರವಿಂದ್ ಕೇಜ್ರಿವಾಲ್ ಅವರನ್ನು ಸೋಲಿಸಿದ್ದು, ಸದ್ಯ ದೆಹಲಿಯ ಮುಖ್ಯಮಂತ್ರಿ ಗಾದಿಯ ರೇಸ್‌ನಲ್ಲಿ ಪ್ರಬಲ ಸ್ಪರ್ಧಿಯಾಗಿ ಕಾಣಿಸಿಕೊಂಡಿದ್ಧಾರೆ. ಹೀಗಾಗಿ ಅವರ ವೈಯಕ್ತಿಕ ಬದುಕಿನ ಬಗ್ಗೆಯೂ ಜನರಲ್ಲಿ ಸಹಜವಾಗಿಯೇ ಕುತೂಹಲ ಹೆಚ್ಚಾಗಿದೆ. ಪರ್ವೇಶ್ ವರ್ಮಾಗೆ 5 ಮಕ್ಕಳು ಬೇಕೆಂಬ ಆಸೆ ಇತ್ತಂತೆ. ಅಂತಹ 10 ಆಸಕ್ತಿದಾಯಕ ಅಂಶಗಳು ಇಲ್ಲಿವೆ.
(2 / 12)
ಪರ್ವೇಶ್ ವರ್ಮಾ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ಬಿಜೆಪಿಯ ಪ್ರಭಾವಿ ರಾಜಕೀಯ ಕುಟುಂಬದಲ್ಲಿ ಜನಿಸಿರುವ ಅವರು 2014 ರಿಂದ 2024ರ ತನಕ ಲೋಕಸಭೆಯ ಸದಸ್ಯರಾಗಿದ್ದರು. ದೆಹಲಿ ವಿಧಾನ ಸಭಾ ಚುನಾವಣೆ ಪ್ರಚಾರದ ವೇಳೆ ಅವರು ಯಮುನಾ ನದಿ ಸ್ಚಚ್ಛತೆ ನಿರ್ಲಕ್ಷಿಸಿದ್ದಕ್ಕಾಗಿ ಎಎಪಿ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಕಟೌಟ್ ಅನ್ನು ನದಿಯಲ್ಲಿ ಮುಳುಗಿಸಿದ್ದ ಸಂದರ್ಭ ಇದು.
(PTI)(3 / 12)
ಪರ್ವೇಶ್ ಮಿಶ್ರಾ ಅವರು ಮಧ್ಯಪ್ರದೇಶದ ಬಿಜೆಪಿ ನಾಯಕ, ಕೇಂದ್ರದ ಮಾಜಿ ಸಚಿವ ವಿಕ್ರಮ್ ವರ್ಮಾ ಅವರ ಪುತ್ರಿ ಸ್ವಾತಿ ಸಿಂಗ್ ಅವರನ್ನು ವಿವಾಹವಾಗಿದ್ದಾರೆ. ಈ ದಂಪತಿಗೆ ಮೂವರು ಮಕ್ಕಳು. ಸನ್ನಿಧಿ ಸಿಂಗ್, ಪ್ರಿಶಾ ಸಿಂಗ್ ಎಂಬ ಇಬ್ಬರು ಪುತ್ರಿಯರು ಹಾಗೂ ಶಿವೇನ್ ಸಿಂಗ್ ಎಂಬ ಪುತ್ರ ಇದ್ದಾರೆ. ಮಧ್ಯದಲ್ಲಿ ಇರುವವರು ಪರ್ವೇಶ್ ಅವರ ತಾಯಿ.. ಪರ್ವೇಶ್ ವರ್ಮಾ ಅವರ ಕುಟುಂಬ ಸದಸ್ಯರು ಚಿತ್ರದಲ್ಲಿದ್ದಾರೆ.
(Hindustan Times)(4 / 12)
ಪರ್ವೇಶ್ ವರ್ಮಾ ಅವರ ಪುತ್ರ ಶಿವೇನ್ ಸಿಂಗ್ ಮತ್ತು ಪುತ್ರಿಯರಾದ ಸನ್ನಿಧಿ ಸಿಂಗ್, ಪ್ರಿಶಾ ಸಿಂಗ್.
(Hindustan Times)(5 / 12)
ಕಳೆದ ವರ್ಷ (2024) ನ್ಯೂಸ್ 18 ಇಂಡಿಯಾಗೆ ನೀಡಿದ ಸಂದರ್ಶನದಲ್ಲಿ ಪರ್ವೇಶ್ ವರ್ಮಾ ಅವರ ವಿವಾಹಕ್ಕೆ ಸಂಬಂಧಿಸಿದ ರಹಸ್ಯವನ್ನು ಬಹಿರಂಗಪಡಿಸಿದ್ದರು. ತನ್ನನ್ನು ಮದುವೆಯಾದರೆ 5 ಮಕ್ಕಳ ತಾಯಿಯಾಗಬೇಕು ಎಂದು ಸ್ವಾತಿ ಸಿಂಗ್‌ಗೆ ಷರತ್ತು ವಿಧಿಸಿದ್ದಾಗಿ ಹೇಳಿಕೊಂಡಿದ್ದರು. ಸ್ವಾತಿ ಸಿಂಗ್ ಅದನ್ನು ಒಪ್ಪಿ ಮದುವೆಯಾಗಿದ್ದರು.
(Rahul Singh / ANI)(6 / 12)
ಮದುವೆಯಾದ ಬಳಿಕ ಸ್ವಾತಿ ಸಿಂಗ್ ಮೂವರು ಮಕ್ಕಳಿಗೆ ತಾಯಿಯಾದರು. ಮೂರು ಹೆರಿಗೆಯೂ ಸಿಸೇರಿಯನ್ ಆದ ಕಾರಣ, ಬದಲಾದ ಸನ್ನಿವೇಶದಲ್ಲಿ ಇನ್ನೆರಡು ಮಕ್ಕಳ ಆಸೆ ಕೈಬಿಡುವಂತೆ ಡಾಕ್ಟರ್ ಸಲಹೆ ನೀಡಿದ್ದಾಗಿ ಪರ್ವೇಶ್ ಶರ್ಮಾ ಸಂದರ್ಶನದಲ್ಲಿ ವಿವರಿಸಿದ್ದರು.
(ANI)(7 / 12)
ಪರ್ವೇಶ್ ವರ್ಮಾ ಮತ್ತು ಸ್ವಾತಿ ಸಿಂಗ್ ಇಬ್ಬರೂ ಪ್ರಭಾವಿ ರಾಜಕಾರಣಗಳ ಮಕ್ಕಳು. ಪರ್ವೇಶ್ ವರ್ಮಾ ಅವರು ದೆಹಲಿಯ ಮಾಜಿ ಮುಖ್ಯಮಂತ್ರಿ ಸಾಹಿಬ್ ಸಿಂಗ್ ವರ್ಮಾ ಅವರ ಪುತ್ರ. ಸ್ವಾತಿ ಸಿಂಗ್ ಕೇಂದ್ರ ಸರ್ಕಾರದ ಮಾಜಿ ಸಚಿವ ವಿಕ್ರಮ್ ಸಿಂಗ್ ವರ್ಮಾ ಅವರ ಪುತ್ರಿ.
(Vipin Kumar)(8 / 12)
ತುಸು ಪ್ರಚೋದನಕಾರಿ ಮನೋಭಾವದ ಪರ್ವೇಶ್ ವರ್ಮಾ ಅವರು 2020ರ ಚುನಾವಣೆ ಪ್ರಚಾರದ ವೇಳೆ ಅರವಿಂದ್ ಕೇಜ್ರಿವಾಲ್ ಅವರನ್ನು ಟೆರರಿಸ್ಟ್ ಎಂದು ಕರೆದಿದ್ದರು. ಈ ದ್ವೇಷ ಭಾಷಣಕ್ಕಾಗಿ ಪರ್ವೇಶ್ ವರ್ಮಾ ಅವರನ್ನು ಚುನಾವಣಾ ಆಯೋಗ ಒಂದು ದಿನದ ಮಟ್ಟಿಗೆ ಪ್ರಚಾರ ಮಾಡದಂತೆ ನಿರ್ಬಂಧಿಸಿತ್ತು.
(p_sahibsingh X)(9 / 12)
ಪರ್ವೇಶ್ ವರ್ಮಾ ಅವರ ನಾಮನಿರ್ದೇಶನ ಅಫಿಡವಿಟ್ ಪ್ರಕಾರ, ಪರ್ವೇಶ್ ವರ್ಮಾ ಅವರು 89 ಕೋಟಿ ರೂ. ವೈಯಕ್ತಿಕ ನಿವ್ವಳ ಸಂಪತ್ತು ಘೋಷಿಸಿದರೆ, ಅವರ ಪತ್ನಿ ಸ್ವಾತಿ ಸಿಂಗ್ 24.4 ಕೋಟಿ ರೂ. ಅವರ ಸಂಯೋಜಿತ ಸಂಪತ್ತು 113 ಕೋಟಿ ರೂಪಾಯಿ ಎಂದು ಘೋಷಿಸಿದ್ದರು. ಚುನಾವಣಾ ಪ್ರಚಾರ ಸಂದರ್ಭದ ಫೋಟೋವನ್ನು ಸಾಂಕೇತಿಕವಾಗಿ ಬಳಸಲಾಗಿದೆ.
(PTI)(10 / 12)
ಅದೇ ರೀತಿ 2.2 ಲಕ್ಷ ರೂ ನಗದು, 52.75 ಕೋಟಿ ರೂ.ಇಕ್ವಿಟಿ ಮತ್ತು ಷೇರು ಮಾರುಕಟ್ಟೆ ಹೂಡಿಕೆಗಳು ಮತ್ತು ವಿಮಾ ಹೂಡಿಕೆಗಳಲ್ಲಿ 17 ಲಕ್ಷ ರೂ. ವಿಮಾ ಸಿಂಗ್ ವಿಮಾ ಪಾಲಿಸಿಗಳಲ್ಲಿ 5.5 ಲಕ್ಷ ರೂಪಾಯಿ ಇದೆ ಎಂದು ಘೋಷಿಸಿಕೊಂಡಿದ್ದಾರೆ
(p_sahibsingh X)(11 / 12)
ಪರ್ವೇಶ್ ವರ್ಮಾ ಅವರು, ಟೊಯೋಟಾ ಫಾರ್ಚೂನರ್, ಟೊಯೋಟಾ ಇನ್ನೋವಾ, ಮತ್ತು ಮಹೀಂದ್ರಾ ಕ್ಸುವ್ ಸೇರಿದಂತೆ ಐಷಾರಾಮಿ ವಾಹನಗಳ ಸಮೂಹವನ್ನು ಹೊಂದಿದ್ದಾರೆ. ಅವರು 8.25 ಲಕ್ಷ ರೂ. ಮೌಲ್ಯದ 200 ಗ್ರಾಂ ಚಿನ್ನ ತಮ್ಮ ಇರುವುದಾಗಿ ಘೋಷಿಸಿಕೊಂಡಿದ್ದಾರೆ
(Vipin Kumar)ಇತರ ಗ್ಯಾಲರಿಗಳು