ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಪಾಕ್ ವಿರುದ್ಧ ಯುಎಸ್ ಗೆಲುವಿನ ರೂವಾರಿ ಸೌರಭ್ ನೇತ್ರವಾಲ್ಕರ್ ಯಾರು? ಯುಎಸ್‌ಎ ಪ್ರಜೆ ಮೈಯಲ್ಲಿ ಭಾರತದ ರಕ್ತ!

ಪಾಕ್ ವಿರುದ್ಧ ಯುಎಸ್ ಗೆಲುವಿನ ರೂವಾರಿ ಸೌರಭ್ ನೇತ್ರವಾಲ್ಕರ್ ಯಾರು? ಯುಎಸ್‌ಎ ಪ್ರಜೆ ಮೈಯಲ್ಲಿ ಭಾರತದ ರಕ್ತ!

  • ಟಿ20 ವಿಶ್ವಕಪ್‌ನಲ್ಲಿ ಪಾಕಿಸ್ತಾನ ವಿರುದ್ಧ ಯುಎಸ್‌ಎ ತಂಡಕ್ಕೆ ಸೂಪರ್‌ ಓವರ್‌ನಲ್ಲಿ ಸೂಪರ್‌ ಗೆಲುವು ತಂದುಕೊಟ್ಟ ಆಟಗಾರ ಸೌರಭ್ ನೇತ್ರವಾಲ್ಕರ್. ಪಂದ್ಯ ಮುಗಿದ ಬಳಿಕ ಭಾರತೀಯ ಮೂಲದ ಈ ಆಟಗಾರ ಫುಲ್‌ ಟ್ರೆಂಡಿಂಗ್‌ನಲ್ಲಿದ್ದಾರೆ. ಇದಕ್ಕೆ ಕಾರಣವೂ ಇದೆ. ಹಾಗಿದ್ದರೆ, ಪಾಕ್‌ ಬೆದರಿಸಿದ ಈ ನೇತ್ರವಾಲ್ಕರ್ ಯಾರು ಎಂಬುದನ್ನು ನೋಡೋಣ.

32 ವರ್ಷದ ಅನುಭವಿ ಆಟಗಾರ ಮೂಲತಃ ಭಾರತದ ಮುಂಬೈನವರು. ಒರಾಕಲ್ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ನೇತ್ರವಾಲ್ಕರ್, ಇದೀಗ ಯುಎಸ್‌ಎ ತಂಡದ ಗೆಲುವಿನ ಹೀರೋ ಆಗಿ ಮಿಂಚಿದ್ದಾರೆ. ಪಂದ್ಯದ ಆರಂಭದಲ್ಲಿ ಮೊಹಮ್ಮದ್ ರಿಜ್ವಾನ್ ವಿಕೆಟ್ ಪಡೆದ ಬಳಿಕ, ಇಫ್ತಿಖರ್ ಅಹ್ಮದ್ ವಿಕೆಟ್‌ ಕೂಡಾ ಕಬಳಿಸಿದರು. ಅದಾದ ಬಳಿಕ ಸೂಪರ್ ಓವರ್‌ನ ಮೂರನೇ ಎಸೆತದಲ್ಲಿ ಮತ್ತೊಮ್ಮೆ ಪವರ್ ಹಿಟ್ಟರ್ ವಿಕೆಟ್‌ ಕಬಳಿಸಿದರು. ಅಲ್ಲದೆ, ಸೂಪರ್‌ ಓವರ್‌ನಲ್ಲಿ ಕೇವಲ 13 ರನ್‌ ಮಾತ್ರ ಬಿಟ್ಟುಕೊಟ್ಟು ಟಿ 20 ವಿಶ್ವಕಪ್‌ನಲ್ಲಿ ಯುಎಸ್‌ಎ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.
icon

(1 / 6)

32 ವರ್ಷದ ಅನುಭವಿ ಆಟಗಾರ ಮೂಲತಃ ಭಾರತದ ಮುಂಬೈನವರು. ಒರಾಕಲ್ ಕಂಪನಿಯಲ್ಲಿ ಟೆಕ್ಕಿಯಾಗಿದ್ದ ನೇತ್ರವಾಲ್ಕರ್, ಇದೀಗ ಯುಎಸ್‌ಎ ತಂಡದ ಗೆಲುವಿನ ಹೀರೋ ಆಗಿ ಮಿಂಚಿದ್ದಾರೆ. ಪಂದ್ಯದ ಆರಂಭದಲ್ಲಿ ಮೊಹಮ್ಮದ್ ರಿಜ್ವಾನ್ ವಿಕೆಟ್ ಪಡೆದ ಬಳಿಕ, ಇಫ್ತಿಖರ್ ಅಹ್ಮದ್ ವಿಕೆಟ್‌ ಕೂಡಾ ಕಬಳಿಸಿದರು. ಅದಾದ ಬಳಿಕ ಸೂಪರ್ ಓವರ್‌ನ ಮೂರನೇ ಎಸೆತದಲ್ಲಿ ಮತ್ತೊಮ್ಮೆ ಪವರ್ ಹಿಟ್ಟರ್ ವಿಕೆಟ್‌ ಕಬಳಿಸಿದರು. ಅಲ್ಲದೆ, ಸೂಪರ್‌ ಓವರ್‌ನಲ್ಲಿ ಕೇವಲ 13 ರನ್‌ ಮಾತ್ರ ಬಿಟ್ಟುಕೊಟ್ಟು ಟಿ 20 ವಿಶ್ವಕಪ್‌ನಲ್ಲಿ ಯುಎಸ್‌ಎ ತಂಡಕ್ಕೆ ಐತಿಹಾಸಿಕ ಗೆಲುವು ತಂದುಕೊಟ್ಟರು.(ICC)

ಪಂದ್ಯದಲ್ಲಿ ಅಮೆರಿಕ ಗೆಲ್ಲುತ್ತಿದ್ದಂತೆಯೇ, ಸೌರಭ್ ನೇತ್ರವಾಲ್ಕರ್ ಭಾರಿ ಸುದ್ದಿಯಲ್ಲಿದ್ದಾರೆ. ವಿಶೇಷವೆಂದರೆ, ಒರಾಕಲ್ ಟೆಕ್ಕಿಯಾಗಿದ್ದ ಸೌರಭ್‌ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಹಾಗಾದರೆ ನೇತ್ರಾವಲ್ಕರ್ ಯಾರು? ಡಲ್ಲಾಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಯುಎಸ್‌ ತಂಡದ ಸ್ಮರಣೀಯ ಗೆಲುವಿಗೆ ಕಾರಣರಾದ ಒರಾಕಲ್ ಟೆಕ್ಕಿ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.
icon

(2 / 6)

ಪಂದ್ಯದಲ್ಲಿ ಅಮೆರಿಕ ಗೆಲ್ಲುತ್ತಿದ್ದಂತೆಯೇ, ಸೌರಭ್ ನೇತ್ರವಾಲ್ಕರ್ ಭಾರಿ ಸುದ್ದಿಯಲ್ಲಿದ್ದಾರೆ. ವಿಶೇಷವೆಂದರೆ, ಒರಾಕಲ್ ಟೆಕ್ಕಿಯಾಗಿದ್ದ ಸೌರಭ್‌ ಅವರ ಲಿಂಕ್ಡ್‌ಇನ್ ಪ್ರೊಫೈಲ್ ಸಾಮಾಜಿಕ ಮಾಧ್ಯಮದಲ್ಲಿ ವೈರಲ್‌ ಆಗಿದೆ. ಹಾಗಾದರೆ ನೇತ್ರಾವಲ್ಕರ್ ಯಾರು? ಡಲ್ಲಾಸ್‌ನಲ್ಲಿ ನಡೆದ ಟಿ20 ವಿಶ್ವಕಪ್‌ ಪಂದ್ಯದಲ್ಲಿ ಪಾಕಿಸ್ತಾನದ ವಿರುದ್ಧ ಯುಎಸ್‌ ತಂಡದ ಸ್ಮರಣೀಯ ಗೆಲುವಿಗೆ ಕಾರಣರಾದ ಒರಾಕಲ್ ಟೆಕ್ಕಿ ಕುರಿತು ಇನ್ನಷ್ಟು ತಿಳಿದುಕೊಳ್ಳೋಣ.(ICC)

1991ರ ಅಕ್ಟೋಬರ್ 16ರಂದು ಮುಂಬೈನಲ್ಲಿ ಜನಿಸಿದ ನೇತ್ರವಾಲ್ಕರ್, ಅವರು ಭಾರತೀಯ ಮೂಲದ ಕ್ರಿಕೆಟಿಗ. ಅವರು ಈ ಹಿಂದೆ ಯುಎಸ್ ರಾಷ್ಟ್ರೀಯ ತಂಡದ ನಾಯಕರಾಗಿದ್ದರು. ನೇತ್ರಾವಲ್ಕರ್ ಭಾರತದಲ್ಲಿ ಅಲ್ಪಾವಧಿಗೆ ದೇಶೀಯ ಕ್ರಿಕೆಟ್‌ ಆಡಿದ್ದರು. ಭಾರತ ಅಂಡರ್‌ 19 ಕ್ರಿಕೆಟಿಗ, 2015ರಲ್ಲಿ ಅಮೆರಿಕಕ್ಕೆ ಶಿಫ್ಟ್‌ ಆಗಿ ಯುಎಸ್‌ ಪ್ರಜೆಯಾದರು. ಭಾರತದಲ್ಲಿದ್ದಾಗ ಅವರು ಮುಂಬೈ ಪರ ರಣಜಿ ಟ್ರೋಫಿ ಪಂದ್ಯವನ್ನೂ ಆಡಿದ್ದಾರೆ. 
icon

(3 / 6)

1991ರ ಅಕ್ಟೋಬರ್ 16ರಂದು ಮುಂಬೈನಲ್ಲಿ ಜನಿಸಿದ ನೇತ್ರವಾಲ್ಕರ್, ಅವರು ಭಾರತೀಯ ಮೂಲದ ಕ್ರಿಕೆಟಿಗ. ಅವರು ಈ ಹಿಂದೆ ಯುಎಸ್ ರಾಷ್ಟ್ರೀಯ ತಂಡದ ನಾಯಕರಾಗಿದ್ದರು. ನೇತ್ರಾವಲ್ಕರ್ ಭಾರತದಲ್ಲಿ ಅಲ್ಪಾವಧಿಗೆ ದೇಶೀಯ ಕ್ರಿಕೆಟ್‌ ಆಡಿದ್ದರು. ಭಾರತ ಅಂಡರ್‌ 19 ಕ್ರಿಕೆಟಿಗ, 2015ರಲ್ಲಿ ಅಮೆರಿಕಕ್ಕೆ ಶಿಫ್ಟ್‌ ಆಗಿ ಯುಎಸ್‌ ಪ್ರಜೆಯಾದರು. ಭಾರತದಲ್ಲಿದ್ದಾಗ ಅವರು ಮುಂಬೈ ಪರ ರಣಜಿ ಟ್ರೋಫಿ ಪಂದ್ಯವನ್ನೂ ಆಡಿದ್ದಾರೆ. (ICC)

ನೇತ್ರವಾಲ್ಕರ್ ಅವರು ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್ ಮತ್ತು ಸಂದೀಪ್ ಶರ್ಮಾ ಅವರ ಸಹ ಆಟಗಾರರಾಗಿ ಆಡಿದ್ದರು
icon

(4 / 6)

ನೇತ್ರವಾಲ್ಕರ್ ಅವರು ಕೆಎಲ್ ರಾಹುಲ್, ಮಯಾಂಕ್ ಅಗರ್ವಾಲ್, ಹರ್ಷಲ್ ಪಟೇಲ್, ಜಯದೇವ್ ಉನದ್ಕತ್ ಮತ್ತು ಸಂದೀಪ್ ಶರ್ಮಾ ಅವರ ಸಹ ಆಟಗಾರರಾಗಿ ಆಡಿದ್ದರು(ICC)

ನೇತ್ರವಾಲ್ಕರ್ ಅವರು ಪಾಕಿಸ್ತಾನ ತಂಡವನ್ನು 2010ರಲ್ಲಿ ಮೊದಲ ಬಾರಿಗೆ ಎದುರಿಸಿದ್ದರು. ಅದು ಭಾರತ ಅಂಡರ್ 19 ತಂಡದ ಸದಸ್ಯನಾಗಿ. ಅಂಡರ್‌ 19 ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ಬೌಲರ್‌ ಆಗಿದ್ದರು. ಆದರೆ ಆಗ ಪಾಕಿಸ್ತಾನದ ವಿರುದ್ಧ ಭಾರತ ಎರಡು ವಿಕೆಟ್‌ಗಳ ಸೋಲು ಕಂಡಿತ್ತು. 2010ರ U-19 ವಿಶ್ವಕಪ್‌ನಲ್ಲಿ ನೇತ್ರವಾಲ್ಕರ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆಗ ಆಡಿದ ಆರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ ಕಬಳಿಸಿದ್ದರು.
icon

(5 / 6)

ನೇತ್ರವಾಲ್ಕರ್ ಅವರು ಪಾಕಿಸ್ತಾನ ತಂಡವನ್ನು 2010ರಲ್ಲಿ ಮೊದಲ ಬಾರಿಗೆ ಎದುರಿಸಿದ್ದರು. ಅದು ಭಾರತ ಅಂಡರ್ 19 ತಂಡದ ಸದಸ್ಯನಾಗಿ. ಅಂಡರ್‌ 19 ವಿಶ್ವಕಪ್‌ನಲ್ಲಿ ಭಾರತದ ಪ್ರಮುಖ ಬೌಲರ್‌ ಆಗಿದ್ದರು. ಆದರೆ ಆಗ ಪಾಕಿಸ್ತಾನದ ವಿರುದ್ಧ ಭಾರತ ಎರಡು ವಿಕೆಟ್‌ಗಳ ಸೋಲು ಕಂಡಿತ್ತು. 2010ರ U-19 ವಿಶ್ವಕಪ್‌ನಲ್ಲಿ ನೇತ್ರವಾಲ್ಕರ್ ಭಾರತದ ಪರ ಅತಿ ಹೆಚ್ಚು ವಿಕೆಟ್ ಪಡೆದ ಬೌಲರ್ ಆಗಿದ್ದರು. ಆಗ ಆಡಿದ ಆರು ಪಂದ್ಯಗಳಲ್ಲಿ ಒಂಬತ್ತು ವಿಕೆಟ್‌ ಕಬಳಿಸಿದ್ದರು.(Getty Images via AFP)

ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ವೃತ್ತಿಪರ ಕ್ರಿಕೆಟಿಗ ಒರಾಕಲ್‌ನ ತಾಂತ್ರಿಕ ಸಿಬ್ಬಂದಿಯಾಗಿದ್ದಾರೆ. ಇವರು 2016ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2013ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್‌  ಪದವಿಯನ್ನು ಗಳಿಸಿದ್ದಾರೆ. 
icon

(6 / 6)

ಅವರ ಲಿಂಕ್ಡ್‌ಇನ್ ಪ್ರೊಫೈಲ್‌ನ ಪ್ರಕಾರ, ವೃತ್ತಿಪರ ಕ್ರಿಕೆಟಿಗ ಒರಾಕಲ್‌ನ ತಾಂತ್ರಿಕ ಸಿಬ್ಬಂದಿಯಾಗಿದ್ದಾರೆ. ಇವರು 2016ರಲ್ಲಿ ಕಂಪ್ಯೂಟರ್ ಸೈನ್ಸ್‌ನಲ್ಲಿ ಸ್ನಾತಕೋತ್ತರ ಪದವಿ ಪಡೆದಿದ್ದಾರೆ. 2013ರಲ್ಲಿ ಮುಂಬೈ ವಿಶ್ವವಿದ್ಯಾನಿಲಯದಿಂದ ಬ್ಯಾಚುಲರ್‌  ಪದವಿಯನ್ನು ಗಳಿಸಿದ್ದಾರೆ. (AFP)


ಟಿ20 ವರ್ಲ್ಡ್‌ಕಪ್ 2024

ಇತರ ಗ್ಯಾಲರಿಗಳು