ಆಪರೇಷನ್ ಸಿಂದೂರದ ಅಪ್ಡೇಟ್ ಕೊಡ್ತಾ ಇರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ಯಾರು, ಅವರ ಶಿಕ್ಷಣ ಮತ್ತು ಇತರೆ ವಿವರದ ಚಿತ್ರನೋಟ
ಪಹಲ್ಗಾಮ್ ದಾಳಿ ಬಳಿಕ ಭಯೋತ್ಪಾದನೆ ವಿರುದ್ಧ ಆಪರೇಷನ್ ಸಿಂದೂರ ಶುರುಮಾಡಿದ್ದರಿಂದಾಗಿ ಭಾರತ - ಪಾಕ್ ಬಿಕ್ಕಟ್ಟು ತೀವ್ರಗೊಂಡಿದೆ. ಈ ಮಾಹಿತಿ ಒದಗಿಸುತ್ತಿರುವ ಭಾರತದ ವಿದೇಶಾಂಗ ಕಾರ್ಯದರ್ಶಿ ವಿಕ್ರಮ್ ಮಿಸ್ರಿ ತಮ್ಮ ಎಕ್ಸ್ ಖಾತೆಯನ್ನು ಲಾಕ್ ಮಾಡಿಕೊಂಡಿದ್ದಾರೆ. ವಿಕ್ರಮ್ ಮಿಸ್ರಿ ಯಾರು ಎಂಬ ಕುತೂಹಲ ಸಹಜ. ಅವರ ಶಿಕ್ಷಣ ಮತ್ತು ಇತರೆ ವಿವರಗಳ ಚಿತ್ರನೋಟ ಇಲ್ಲಿದೆ.
(1 / 12)
ಎಕ್ಸ್ ಖಾತೆಯಲ್ಲಿ ಕೆಟ್ಟ ಸಂದೇಶಗಳನ್ನು ಎದುರಿಸಿದ ಐಎಫ್‌ಎಸ್ ಅಧಿಕಾರಿ ವಿಕ್ರಮ್ ಮಿಸ್ರಿ ಭಾನುವಾರ (ಮೇ 11) ತಮ್ಮ ಎಕ್ಸ್ ಖಾತೆಯನ್ನು ಲಾಕ್ ಮಾಡಿಕೊಂಡಿದ್ದಾರೆ. ಭಯೋತ್ಪಾದನೆ ವಿರುದ್ಧ ಭಾರತದ ಹೋರಾಟ ತೀವ್ರಗೊಂಡ ಬೆನ್ನಿಗೆ ಆಪರೇಷನ್ ಸಿಂದೂರದ ಮಾಹಿತಿಯನ್ನು ಮಾಧ್ಯಮ ಪ್ರತಿನಿಧಿಗಳಿಗೆ ಒದಗಿಸುವುದಕ್ಕಾಗಿ ಸುದ್ದಿಗೋಷ್ಠಿ ನಡೆಸುತ್ತಿದ್ದ ಐಎಫ್‌ಎಸ್ ಅಧಿಕಾರಿ ವಿಕ್ರಮ್ ಮಿಸ್ರಿ ಸದ್ಯ ಕುತೂಹಲದ ಕೇಂದ್ರ ಬಿಂದು.
(2 / 12)
ವಿಕ್ರಮ್ ಮಿಸ್ರಿ ಅವರು 1989ರ ಇಂಡಿಯನ್ ಫಾರಿನ್ ಸರ್ವೀಸ್ (ಐಎಫ್‌ಎಸ್) ಅಧಿಕಾರಿ. ವಿದೇಶಾಂಗ ಸಚಿವಾಲಯದಲ್ಲಿ ಕೆಲಸ ಮಾಡುತ್ತಿರುವ ಪ್ರತಿಭಾವಂತ ಅಧಿಕಾರಿಯಾಗಿದ್ದು, ಭಾರತ- ಪಾಕ್ ಬಿಕ್ಕಟ್ಟಿನ ಮಾಹಿತಿ ಒದಗಿಸುತ್ತಿರುವ ಭಾರತ ಸರ್ಕಾರದ ಪ್ರತಿನಿಧಿಯಾಗಿ ಗಮನಸೆಳೆದಿದ್ದಾರೆ.
(Ministry of Defence, Government )(3 / 12)
ವಿಕ್ರಮ್ ಮಿಸ್ರಿ ಅವರು ಜಮ್ಮು- ಕಾಶ್ಮೀರದ ಶ್ರೀನಗರದಲ್ಲಿ ಜನಿಸಿದ್ದು, ಉಧಂಪುರದ ಬರ್ನ್ ಹಾಲ್ ಸ್ಕೂಲ್ ಮತ್ತು ಡಿಎವಿ ಸ್ಕೂಲ್‌ನಲ್ಲಿ ಪ್ರಾಥಮಿಕ ಶಿಕ್ಷಣ ಪಡೆದರು. ಬಳಿಕ ಜಮ್ಮು- ಕಾಶ್ಮೀರದ ಕಾರ್ಮೆಲ್ ಕಾನ್ವೆಂಟ್ ಸ್ಕೂಲ್‌ನಲ್ಲಿ ಶಿಕ್ಷಣ ಪಡೆದರು. ಅದಾಗಿ, ಗ್ವಾಲಿಯರ್‌ನ ಸಿಂಧಿಯಾ ಸ್ಕೂಲ್‌ನಲ್ಲಿ ಕಲಿಕೆ ಮುಂದುವರಿಸಿದರು.
(ANI)(4 / 12)
ದೆಹಲಿ ಯೂನಿವರ್ಸಿಟಿಯ ಹಿಂದು ಕಾಲೇಜ್‌ನಲ್ಲಿ ಇತಿಹಾಸ ವಿಷಯದಲ್ಲಿ ಪದವಿ ಪಡೆದ ವಿಕ್ರಮ್ ಮಿಸ್ರಿ, ಜೆಮ್ಶೆಡ್‌ಪುರ ಎಕ್ಸ್‌ಎಲ್‌ಆರ್‌ಐನಿಂದ ಎಂಬಿಎ ಪದವಿ ಪಡೆದರು. ಯುಪಿಎಸ್‌ಸಿ ಪರೀಕ್ಷೆ ಬರೆದು 1989ರಲ್ಲಿ ಐಎಫ್‌ಎಸ್ ಅಧಿಕಾರಿಯಾದರು.
(Ministry of Defence, Government )(5 / 12)
ವಿಕ್ರಮ್ ಮಿಸ್ರಿ ಅವರು ಡೋಲಿ ಮಿಸ್ರಿ ಅವರನ್ನು ವಿವಾಹವಾಗಿದ್ದು, ಇಬ್ಬರು ಮಕ್ಕಳಿದ್ಧಾರೆ. ಸರ್ಕಾರದ ಸೇವೆ ಸೇರುವ ಮೊದಲು ಮೂರು ವರ್ಷ ವಿಕ್ರಮ್ ಮಿಸ್ರಿ ಖಾಸಗಿ ವಲಯದಲ್ಲಿ ಕೆಲಸ ಮಾಡಿದ್ದರು.
(AFP)(6 / 12)
ವಿಕ್ರಮ್ ಮಿಸ್ರಿ ಅವರು ಲಿಂಟಾಸ್ ಇಂಡಿಯಾ- ಬಾಂಬೆ ಮತ್ತು ಕಾಂಟ್ರಾಕ್ಟ್ ಅಡ್ವರ್ಟೈಸಿಂಗ್ ಮತ್ತು ಅಡ್ವರ್ಟೈಸಿಂಗ್ ಫಿಲಂ ಮೇಕಿಂಗ್ ಕಂಪನಿಯಲ್ಲಿ ಕೆಲಸ ಮಾಡಿದ್ದರು. ಇದಲ್ಲದೆ, ವಿಕ್ರಮ್ ಮಿಸ್ರಿ ಅವರು ಅಸ್ಪೆನ್ ಇನ್‌ಸ್ಟಿಟ್ಯೂಟ್ ಯುಎಸ್‌ಎಯ ಇಂಡಿಯಾ ಲೀಡರ್‌ಶಿಪ್ ಇನಿಷಿಯೇಟಿವ್ (ಈಗ ಕಮಲಾನಯನ್ ಬಜಾಜ್ ಫೆಲೋಶಿಪ್)ನ ಫೆಲೋ ಆಗಿ ಕೆಲಸ ಮಾಡಿದ್ದರು.
(PIB)(7 / 12)
ವಿಕ್ರಮ್ ಮಿಸ್ರಿ ಅವರು ಹಿಂದಿ, ಇಂಗ್ಲಿಷ್, ಕಾಶ್ಮೀರಿ ಭಾಷೆಯನ್ನು ಸುಲಲಿತವಾಗಿ ಮಾತನಾಡಬಲ್ಲರು. ಫ್ರೆಂಚ್ ಭಾಷೆಯ ಜ್ಞಾನವೂ ಅವರಿಗೆ ಇದ್ದು, ವೃತ್ತಿಪರವಾಗಿ ಅದನ್ನು ಬಳಸುತ್ತಿದ್ದಾರೆ.
(PIB)(8 / 12)
ವಿಕ್ರಮ್ ಮಿಸ್ರಿ ಅವರು 2024ರ ಜುಲೈ 14ರಂದು ವಿದೇಶಾಂಗ ಕಾರ್ಯದರ್ಶಿಯಾಗಿ ಅಧಿಕಾರಿ ಸ್ವೀಕರಿಸಿದರು. ವಿದೇಶಾಂಗ ಸಚಿವಾಲಯ, ಪ್ರಧಾನ ಮಂತ್ರಿ ಕಚೇರಿಯಲ್ಲಿ ವಿವಿಧ ಹೊಣೆಗಾರಿಕೆಗಳನ್ನು ನಿರ್ವಹಿಸಿದ ಅವರು, ಯುರೋಪ್, ಆಫ್ರಿಕಾ, ಏಷ್ಯಾ ಮತ್ತು ಉತ್ತರ ಅಮೆರಿಕದ ರಾಯಭಾರ ಕಚೇರಿಗಳಲ್ಲಿ ವಿವಿದ ಹೊಣೆಗಾರಿಕೆ ನಿರ್ವಹಿಸಿದ್ದರು.
(AP)(9 / 12)
ಆಪರೇಷನ್ ಸಿಂದೂರ ಕಾರ್ಯಾಚರಣೆ ಅಪ್ಡೇಟ್ಸ್ ನೀಡಿದ ವಿಕ್ರಮ್ ಮಿಸ್ತ್ರಿ ಬಹಳ ಅನುಭವಿ ರಾಜತಾಂತ್ರಿಕ ಅಧಿಕಾರಿ. ಮೂವರು ಪ್ರಧಾನ ಮಂತ್ರಿಗಳಾದ ಐಕೆ ಗುಜ್ರಾಲ್, ಮನಮೋಹನ್ ಸಿಂಗ್, ನರೇಂದ್ರ ಮೋದಿ ಅವರಿಗೆ ಪ್ರಧಾನಿಯವರ ಖಾಸಗಿ ಕಾರ್ಯದರ್ಶಿಯಾಗಿ ಕೆಲಸ ಮಾಡಿದ ಅನುಭವವೂ ಮಿಸ್ರಿ ಅವರದ್ದು.
(Hindustan Times)(10 / 12)
ಆಪರೇಷನ್ ಸಿಂದೂರದ ಅಪ್ಡೇಟ್ಸ್ ನೀಡುವ ವೇಳೆ ವಿಕ್ರಮ್ ಮಿಸ್ರಿ ಅವರು ಭಾರತೀಯ ಸೇನಾ ಪಡೆಯ ಇಬ್ಬರು ಮಹಿಳಾ ಅಧಿಕಾರಿಗಳೊಂದಿಗೆ ಸುದ್ದಿಗೋಷ್ಠಿ ನಡೆಸಿದ ಸಂದರ್ಭ.
(Shrikant Singh)(11 / 12)
ವಿಕ್ರಮ್ ಮಿಸ್ರಿ ಅವರು ಭಾರತದ ವಿದೇಶಾಂಗ ಸಚಿವಾಲಯದಲ್ಲಿ ಪಾಕಿಸ್ತಾನ ಡೆಸ್ಕ್‌ನ ಭಾಗವಾಗಿ ಕೆಲಸ ಮಾಡಿದ ಅನುಭವಿ. ಐಕೆ ಗುಜ್ರಾಲ್ ಮತ್ತು ಪ್ರಣಬ್ ಮುಖರ್ಜಿ ಅವರು ವಿದೇಶಾಂಗ ಸಚಿವರಾಗಿ ಇದ್ದಾಗ ಅವರ ಜತೆಗೂ ಕೆಲಸ ಮಾಡಿದ ಅನುಭವ ಮಿಸ್ರಿಗೆ ಇದೆ.
(PTI)(12 / 12)
ಎಕ್ಸ್ ತಾಣದಲ್ಲಿ ಅನೇಕರು ಕದನ ವಿರಾಮಕ್ಕೆ ಸಂಬಂಧಿಸಿ ತೀರಾ ವೈಯಕ್ತಿಕ ಕಾಮೆಂಟ್ ಮಾಡಿದ್ದು, ಅದಕ್ಕೆ ಅನೇಕರು ಪ್ರತಿಕ್ರಿಯಿಸಿದ್ದು, ವಿಕ್ರಮ್ ಮಿಸ್ರಿ ಟ್ರೋಲ್‌ಗೆ ಒಳಗಾಗಿದ್ದರು. ವಿಕ್ರಮ್ ಮಿಸ್ರಿ ಅವರನ್ನು ಟ್ರೋಲ್ ಮಾಡಿರುವುದನ್ನು ಅನೇಕರು ಖಂಡಿಸಿದ್ದಾರೆ. ಮಿಸ್ರಿ ಅವರು ತಮ್ಮ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಐಎಎಸ್ ಅಸೋಸಿಯೇಷನ್ ಕೂಡ ಈ ಘಟನೆಯನ್ನು ಖಂಡಿಸಿದೆ.
(PMO)ಇತರ ಗ್ಯಾಲರಿಗಳು