ಐಪಿಎಲ್ ಪ್ಲೇಆಫ್ಗಳಲ್ಲಿ ಹೆಚ್ಚು ರನ್ ಗಳಿಸಿದವರು; ಕೊಹ್ಲಿ-ರೋಹಿತ್ಗಿಂತ ಮುಂದಿದ್ದಾರೆ ಗಿಲ್, ಧೋನಿಗೆ 2ನೇ ಸ್ಥಾನ
ಐಪಿಎಲ್ ಇತಿಹಾಸದಲ್ಲಿ ಪ್ಲೇಆಫ್ ಪಂದ್ಯಗಳಲ್ಲಿ ಅತಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯಲ್ಲಿ ಯಾರೆಲ್ಲಾ ಸ್ಥಾನ ಪಡೆದಿದ್ದಾರೆ. ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾಗೆ ಶುಭ್ಮನ್ ಗಿಲ್ ಅಚ್ಚರಿ ಮೂಡಿಸಿದ್ದಾರೆ.
(1 / 7)
ಪ್ಲೇಆಫ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟ್ಸ್ಮನ್ಗಳು - ಐಪಿಎಲ್ 2025 ಪ್ಲೇಆಫ್ಗಳು ಇಂದಿನಿಂದ ಅಂದರೆ ಮೇ 29 ರಿಂದ ಪ್ರಾರಂಭವಾಗುತ್ತಿವೆ. ಅಂತಹ ಪರಿಸ್ಥಿತಿಯಲ್ಲಿ, ಇಲ್ಲಿಯವರೆಗೆ ನಾಕೌಟ್ ಪಂದ್ಯಗಳಲ್ಲಿ ಹೆಚ್ಚು ರನ್ ಗಳಿಸಿದ ಆಟಗಾರರ ಪಟ್ಟಿಯನ್ನು ನಾವು ನಿಮಗೆ ತಂದಿದ್ದೇವೆ. ಈ ಪಟ್ಟಿಯಲ್ಲಿ ಧೋನಿ-ಕೊಹ್ಲಿ ಟಾಪ್-10ರಲ್ಲಿ ಸ್ಥಾನ ಪಡೆದಿದ್ದರೆ, ರೋಹಿತ್ ಔಟಾದರು. ಇಲ್ಲಿದೆ ಸಂಪೂರ್ಣ ಪಟ್ಟಿ:
(2 / 7)
ಚೆನ್ನೈ ಸೂಪರ್ ಕಿಂಗ್ಸ್ನ ಮಾಜಿ ಆಟಗಾರ ಸುರೇಶ್ ರೈನಾ 714 ರನ್ಗಳೊಂದಿಗೆ ಈ ಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದಾರೆ. ಐಪಿಎಲ್ ಪ್ಲೇಆಫ್ನಲ್ಲಿ ಅತಿ ಹೆಚ್ಚು ರನ್ ಗಳಿಸಿದ ಬ್ಯಾಟರ್ಸ್ ಪಟ್ಟಿಯಲ್ಲಿ ರೈನಾಗೆ ಸಾಟಿ ಯಾರೂ ಇಲ್ಲ. 24 ಪ್ಲೇಆಫ್ ಪಂದ್ಯಗಳಲ್ಲಿ 155.2ರ ಸ್ಟ್ರೈಕ್ರೇಟ್ನಲ್ಲಿ 714 ರನ್ ಗಳಿಸಿದ್ದಾರೆ.
(3 / 7)
ಈ ಪಟ್ಟಿಯಲ್ಲಿ ಎಂಎಸ್ ಧೋನಿ ಹೆಸರು ಆಶ್ಚರ್ಯಕರವಾಗಿದೆ, ಆಗಾಗ್ಗೆ 7-8ನೇ ಕ್ರಮಾಂಕದಲ್ಲಿ ಬ್ಯಾಟಿಂಗ್ ಮಾಡಲು ಬರುವ ಧೋನಿ ಈ ಪಟ್ಟಿಯಲ್ಲಿ 2ನೇ ಸ್ಥಾನ ಪಡೆದಿದ್ದಾರೆ. ಐಪಿಎಲ್ ಪ್ಲೇಆಫ್ನಲ್ಲಿ ಮಾಹಿ 23 ಪಂದ್ಯಗಳಲ್ಲಿ 523 ರನ್ ಗಳಿಸಿದ್ದಾರೆ.
(AFP)(4 / 7)
2018 ರಲ್ಲಿ ಐಪಿಎಲ್ಗೆ ಪದಾರ್ಪಣೆ ಮಾಡಿದ ಶುಭ್ಮನ್ ಗಿಲ್, ಪ್ಲೇಆಫ್ನಲ್ಲಿ ಹೆಚ್ಚು ರನ್ ಗಳಿಸಿದವರ ವಿಷಯದಲ್ಲಿ ವಿರಾಟ್ ಕೊಹ್ಲಿ ಮತ್ತು ರೋಹಿತ್ ಶರ್ಮಾ ಅವರಿಗಿಂತ ಬಹಳ ಮುಂದಿದ್ದಾರೆ. ಗಿಲ್ 10 ನಾಕೌಟ್ ಪಂದ್ಯಗಳಲ್ಲಿ 145.4 ಸ್ಟ್ರೈಕ್ ರೇಟ್ನಲ್ಲಿ 474 ರನ್ ಗಳಿಸಿದ್ದಾರೆ. ಪಟ್ಟಿಯಲ್ಲಿ ಮೂರನೇ ಸ್ಥಾನದಲ್ಲಿದ್ದಾರೆ.
(5 / 7)
ಫಾಫ್ ಡು ಪ್ಲೆಸಿಸ್ (390), ಶೇನ್ ವ್ಯಾಟ್ಸನ್ (389) ಮತ್ತು ಮೈಕ್ ಹಸ್ಸಿ (388). ಈ ಮೂವರು ಬ್ಯಾಟರ್ಗಳು ಪ್ಲೇಆಫ್ಗಳಲ್ಲಿ ಅಬ್ಬರಿಸುವ ಮೂಲಕ ಒಂದರ ನಂತರ ಒಂದರಂತೆ ಚೆನ್ನೈ ಸೂಪರ್ ಕಿಂಗ್ಸ್ ಪ್ರಶಸ್ತಿ ಗೆಲ್ಲುವಲ್ಲಿ ಪ್ರಮುಖ ಪಾತ್ರ ವಹಿಸಿದ್ದಾರೆ. ಡು ಪ್ಲೆಸಿಸ್ ಕೂಡ ಆರ್ಸಿಬಿ ಪರ ಆಡಿದ್ದಾರೆ.
(IPL)(6 / 7)
15 ಪ್ಲೇಆಫ್ ಪಂದ್ಯಗಳನ್ನು ಆಡಿದ್ದರೂ ವಿರಾಟ್ ಕೊಹ್ಲಿ ಉತ್ತಮ ಪ್ರದರ್ಶನ ನೀಡಿಲ್ಲ. 10ನೇ ಸ್ಥಾನ ಪಡೆದಿರುವ ಕೊಹ್ಲಿ ನಾಕೌಟ್ ಪಂದ್ಯಗಳಲ್ಲಿ ಗಳಿಸಿರೋದು ಕೇವಲ 341 ರನ್. ಕೊಹ್ಲಿ ಪ್ಲೇಆಫ್ನಲ್ಲಿ ಎಂದೂ ಪಂದ್ಯಶ್ರೇಷ್ಠ ಗೌರವಕ್ಕೆ ಪಾತ್ರರಾಗಲಿಲ್ಲ.
(AFP)ಇತರ ಗ್ಯಾಲರಿಗಳು