ದಿನವಿಡಿ ಏನನ್ನೂ ತಿನ್ನದೆ ಇದ್ದರೂ ಹಸಿವಾಗ್ತಾ ಇಲ್ವಾ? ಹಾಗಾದ್ರೆ ಈ ಮನೆಮದ್ದುಗಳು ನಿಮ್ಮ ಸಮಸ್ಯೆಗೆ ಪರಿಹಾರ ನೀಡುತ್ತೆ
Home Remedies: ನೀವು ಎಷ್ಟೇ ಪ್ರಯತ್ನಪಟ್ಟರೂ ಊಟ ಮಾಡಲು ಆಗ್ತಾ ಇಲ್ವ? ಹಸಿವೇ ಆಗೋದಿಲ್ವ? ಹಾಗದ್ರೆ ನೀವು ಒಮ್ಮೆ ಈ ಮನೆಮದ್ದನ್ನು ಟ್ರೈ ಮಾಡಿ ನೋಡಿ. ಇದು ನಿಮ್ಮ ಸಮಸ್ಯೆಗೆ ಪರಿಹಾರ ನೀಡಬಹುದು.
(1 / 7)
ಹಸಿವು ಯಾಕಾಗಲ್ಲ? ಈ ಪ್ರಶ್ನೆ ನಿಮ್ಮದೂ ಆಗಿರಬಹುದು. ದಿನಪೂರ್ತಿ ಊಟ ಮಾಡದೇ ಇದ್ದರೂ ಹಸಿವಾಗಲ್ಲ ಅನ್ನೋರು ಈ ಮನೆಮದ್ದು ಟ್ರೈ ಮಾಡಿ ನೊಡಿ ನಿಮ್ಮ ಸಮಸ್ಯೆಗೆ ಪರಿಹಾರ ಸಿಗುತ್ತದೆ. ಈ ರೀತಿ ಹಸಿವಾಗದೇ ಇರುವುದಕ್ಕೆ ಹಲವಾರು ಕಾರಣಗಳಿವೆ.
(2 / 7)
ನೀವು ಹಸಿವಾಗದೇ ಇರುವ ಸಂದರ್ಭದಲ್ಲಿ ಲಿಂಬು ರಸವನ್ನು ಬಿಸಿ ನೀರಿಗೆ ಹಿಂಡಿಕೊಂಡು ಕುಡಿಯಬೇಕು ಆಗ ಸ್ವಲ್ಪ ಹಸಿವಾಗಲು ಆರಂಭವಾಗುತ್ತದೆ.
(3 / 7)
ಶುಂಠಿಯು ನಿಮ್ಮ ಜೀರ್ಣಕ್ರಿಯೆಯನ್ನು ಸುಧಾರಿಸಲು ತುಂಬಾ ಉತ್ತಮವಾದ ಮಾರ್ಗವಾಗಿದೆ. ಇದರ ಪುಡಿಯನ್ನು ನೀವು ತಿನ್ನಬಹುದು. ಅಥವಾ ಹಸಿಯಾದ ಶುಂಠಿಯನ್ನು ಉಪ್ಪಿನೊಂದಿಗೆ ಜಜ್ಜಿ ತಿನ್ನಬಹುದು.
(4 / 7)
ನೀವು ಜೇನುತುಪ್ಪವನ್ನು ನೀರಿಗೆ ಹಾಕಿ ಕುಡಿಯಬೇಕು. ಇದನ್ನು ನೀವು ವೇಟ್‌ಲಾಸ್ ಮಾಡುವಾಗ ಬಳಸಿರುತ್ತೀರಾ. ಇದು ಕೂಡ ನಿಮ್ಮಲ್ಲಿ ಹಸಿವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಬೇಕಿದ್ದರೆ ಲಿಂಬು ರಸವನ್ನೂ ಇದಕ್ಕೆ ಸೇರಿಸಿಕೊಳ್ಳಬಹುದು.
(5 / 7)
ನೆಲ್ಲಿಕಾಯಿಯ ಚೂರ್ಣ ಅಥವಾ ಒಣಗಿಸಿದ ನೆಲ್ಲಿಕಾಯಿ ಪುಡಿಯನ್ನು ನೀವು ತಿನ್ನಬೇಕು. ಈ ರೀತಿ ಮಾಡಿದಾಗಲೂ ನಿಮ್ಮ ಹಸಿವು ಹೆಚ್ಚಾಗುತ್ತದೆ..
(6 / 7)
ಸೋಂಪು; ಇದನ್ನು ನೀವು ನೀರಿನಲ್ಲಿ ನೆನೆಸಿಟ್ಟು ಆ ನೀರನ್ನು ಕುಡಿಯಬಹುದು. ಅಥವಾ ನೀವು ಅದನ್ನು ಬರಿದೇ ಕೂಡ ತಿನ್ನಬಹುದು. ಚಿಕ್ಕ ಮಕ್ಕಳ ಹೊಟ್ಟೆನೋವಿಗೂ ಇದೊಂದು ಮದ್ದು.
ಇತರ ಗ್ಯಾಲರಿಗಳು