ತೇಜ್‌ ಪ್ರತಾಪ್‌ ಆರ್‌ಜೆಡಿಯಿಂದ ಔಟ್‌, ಕುಟುಂಬದಿಂದಲೂ ಹೊರಕ್ಕೆ; ಗರ್ಲ್‌ಫ್ರೆಂಡ್ ಅನುಷ್ಕಾ ಫೋಟೋ ಶೇರ್ ಮಾಡಿದ್ದು ಎಡವಟ್ಟಾಯಿತಾ, ಚಿತ್ರನೋಟ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ತೇಜ್‌ ಪ್ರತಾಪ್‌ ಆರ್‌ಜೆಡಿಯಿಂದ ಔಟ್‌, ಕುಟುಂಬದಿಂದಲೂ ಹೊರಕ್ಕೆ; ಗರ್ಲ್‌ಫ್ರೆಂಡ್ ಅನುಷ್ಕಾ ಫೋಟೋ ಶೇರ್ ಮಾಡಿದ್ದು ಎಡವಟ್ಟಾಯಿತಾ, ಚಿತ್ರನೋಟ

ತೇಜ್‌ ಪ್ರತಾಪ್‌ ಆರ್‌ಜೆಡಿಯಿಂದ ಔಟ್‌, ಕುಟುಂಬದಿಂದಲೂ ಹೊರಕ್ಕೆ; ಗರ್ಲ್‌ಫ್ರೆಂಡ್ ಅನುಷ್ಕಾ ಫೋಟೋ ಶೇರ್ ಮಾಡಿದ್ದು ಎಡವಟ್ಟಾಯಿತಾ, ಚಿತ್ರನೋಟ

ಗರ್ಲ್‌ಫ್ರೆಂಡ್ ಅನುಷ್ಕಾ ಯಾದವ್ ಅವರ ಫೋಟೋ ಹಂಚಿಕೊಂಡು, ತನ್ನ ಮತ್ತು ಆಕೆಯ 12 ವರ್ಷದ ಸಂಬಂಧವನ್ನು ಬಹಿರಂಗಪಡಿಸಿದ ತೇಜ್‌ ಪ್ರತಾಪ್‌ ಆರ್‌ಜೆಡಿಯಿಂದ ಉಚ್ಚಾಟಿತರಾಗಿದ್ದಾರೆ. ಅಷ್ಟೇ ಅಲ್ಲ, ಕುಟುಂಬದಿಂದಲೂ ಹೊರಹಾಕಲ್ಪಟ್ಟಿದ್ದಾರೆ. ಏನಿದು ಪ್ರಕರಣ - ಇಲ್ಲಿದೆ ವಿವರಣೆಯ ಚಿತ್ರನೋಟ.

ಆರ್‌ಜೆಡಿ ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರ ಹಿರಿಯ ಪುತ್ರ ತೇಜ್ ಪ್ರತಾಪ್ ಒಂದಿಲ್ಲೊಂದು ಕಾರಣಕ್ಕೆ ಸುದ್ದಿಯಲ್ಲಿರುವವರು. ಈ ಬಾರಿ ತಮ್ಮ ಗರ್ಲ್‌ಫ್ರೆಂಡ್ ಫೋಟೋವನ್ನು ಶೇರ್ ಮಾಡಿಕೊಂಡು ಸುದ್ದಿಯಾಗಿದ್ದಾರೆ. ಫೇಸ್‌ಬುಕ್‌ನಲ್ಲಿ ತನ್ನ ಮತ್ತು ಆಕೆಯ 12 ವರ್ಷದ ಸಂಬಂಧವನ್ನು ಬಹಿರಂಗಪಡಿಸಿದ ತೇಜ್‌ ಪ್ರತಾಪ್‌ ಈಗ ಪಕ್ಷ ಮತ್ತು ಮನೆಯಿಂದ ಔಟ್ ಆಗಿದ್ದಾರೆ. ಏನಿದು ಪ್ರಕರಣ ಇಲ್ಲಿದೆ ಆ ವಿವರ.
icon

(1 / 10)

ಆರ್‌ಜೆಡಿ ಶಾಸಕ ತೇಜ್‌ ಪ್ರತಾಪ್ ಯಾದವ್ ಅವರು ಫೇಸ್‌ಬುಕ್ ಮತ್ತು ಎಕ್ಸ್ ಖಾತೆಯಲ್ಲಿ ತನ್ನ ಗರ್ಲ್‌ಫ್ರೆಂಡ್ ಅನುಷ್ಕಾ ಯಾದವ್ ಜತೆಗಿರುವ ಫೋಟೋವನ್ನು ಶನಿವಾರ ಹಂಚಿಕೊಂಡಿದ್ದು, ಅದು ಟ್ರೋಲ್‌ಗೊಳಗಾದ ಕೂಡಲೇ ಡಿಲೀಟ್ ಮಾಡಿದ್ದರು. (ಕಡತ ಚಿತ್ರ)
icon

(2 / 10)

(Pappi Sharma/ ANI Photo)

ಕಳೆದ 12 ವರ್ಷಗಳಿಂದ ಅನುಷ್ಕಾ ಯಾದವ್ ಅವರೊಂದಿಗೆ ಸಂಬಂಧ ಹೊಂದಿರುವುದಾಗಿ ಮತ್ತು ಇಬ್ಬರೂ ಪರಸ್ಪರ ತುಂಬಾ ಪ್ರೀತಿಸುತ್ತಿರುವುದಾಗಿ ತೇಜ್ ಪ್ರತಾಪ್ ಯಾದವ್ ಅವರು ಸಾಮಾಜಿಕ ಮಾಧ್ಯಮದಲ್ಲಿ ಬಹಿರಂಗಪಡಿಸಿದ್ದರು
icon

(3 / 10)

(Pappi Sharma / ANI Photo)

ತೇಜ್‌ ಪ್ರತಾಪ್ ಯಾದವ್ ಅವರು ನಿನ್ನ(ಶನಿವಾರ) ಸೋಷಿಯಲ್ ಮೀಡಿಯಾದ ವರ್ತನೆ ವಿಚಿತ್ರವಾಗಿತ್ತು. ಅನುಷ್ಕಾ ಯಾದವ್ ಜತೆಗಿನ ತನ್ನ ಈ ಸಂಬಂಧದ ಪೋಸ್ಟ್‌ಗಳನ್ನು ಫೇಸ್‌ಬುಕ್‌ನಲ್ಲಿ ಎರಡು ಸಲ ಹಾಗೂ ಎಕ್ಸ್‌ನಲ್ಲಿ ಒಮ್ಮೆ ಡಿಲೀಟ್ ಮಾಡಿದ್ದರು ಎಂದು ಆಜ್‌ ತಕ್ ವರದಿ ಮಾಡಿದೆ.
icon

(4 / 10)

(Santosh Kumar/ Hindustan Times)

ದೆಹಲಿಯ ರೌಸ್ ಅವೆನ್ಯೂ ನ್ಯಾಯಾಲಯವು ಅವರಿಗೆ ಮೇ 17 ರಿಂದ ಮೇ 23 ರವರೆಗೆ ಮಾಲ್ಡೀವ್ಸ್‌ಗೆ ಹೋಗಲು ಅನುಮತಿ ನೀಡಿದೆ ಎಂದು ಹೇಳಲಾಗುತ್ತಿದ್ದು, ಇತ್ತೀಚೆಗಷ್ಟೆ ಮಾಲ್ಡೀವ್ಸ್ ಪ್ರವಾಸ ಮುಗಿಸಿ ಹಿಂತಿರುಗಿದ್ದರು. (ಕಡತ ಚಿತ್ರ)
icon

(5 / 10)

(Rahul Sharma/ANI Photo)

ತೇಜ್ ಪ್ರತಾಪ್ ಅವರ ಸೋಷಿಯಲ್ ಮೀಡಿಯಾ ಪೋಸ್ಟ್ ವೈರಲ್ ಆದ ಕೂಡಲೇ ವಿರೋಧಿಗಳು ಅವರನ್ನು ಟ್ರೋಲ್ ಮಾಡಲಾರಂಭಿಸಿದರು. ಇದು ಪಕ್ಷಕ್ಕೆ ಹಾಗೂ ಲಾಲು ಪ್ರಸಾದ್ ಕುಟುಂಬಕ್ಕೆ ಮುಜುಗರವನ್ನು ಉಂಟುಮಾಡಿತು.
icon

(6 / 10)

(PTI)

ತನ್ನ ಫೇಸ್‌ಬುಕ್ ಖಾತೆ ಹ್ಯಾಕ್ ಆಗಿದೆ ಎಂದು ತೇಜ್ ಪ್ರತಾಪ್ ಪೋಸ್ಟ್ ಹಾಕಿದ್ರು. ಸಮಜಾಯಿಷಿ ನೀಡಿದ್ರು. ಆದರೆ ಕಾಲ ಮಿಂಚಿ ಹೋಗಿತ್ತು. ಅವರನ್ನು ದೂರ ಮಾಡಲು ಪಕ್ಷ ಹಾಗೂ ಕುಟುಂಬ ತೀರ್ಮಾನ ಮಾಡಿತ್ತು.
icon

(7 / 10)

ರಾಷ್ಟ್ರೀಯ ಜನತಾ ದಳ (ಆರ್‌ಜೆಡಿ) ಮುಖ್ಯಸ್ಥ ಲಾಲು ಪ್ರಸಾದ್ ಯಾದವ್ ಅವರು ತಮ್ಮ ದೊಡ್ಡ ಮಗ ತೇಜ್‌ ಪ್ರತಾಪ್ ಅವರನ್ನು ಪಕ್ಷದಿಂದ ಉಚ್ಚಾಟನೆ ಮಾಡಿದ್ದಾರೆ. ಸಂಗಾತಿ ಜತೆಗೆ ಇರುವ ತೇಜ್‌ ಪ್ರತಾಪ್ ಅವರ ಫೋಟೋ ವೈರಲ್ ಆಗಿರುವುದೇ ಇದಕ್ಕೆ ಕಾರಣ. ಪಕ್ಷದಿಂದಷ್ಟೇ ಅಲ್ಲ, ಕುಟುಂಬದಿಂದಲೂ ಹೊರ ಹಾಕಿರುವುದಾಗಿ ಲಾಲು ಯಾದವ್ ಪ್ರಕಟಿಸಿದ್ದಾರೆ. (ಕಡತ ಚಿತ್ರ)
icon

(8 / 10)

ತೇಜ್ ಪ್ರತಾಪ್ ಅವರ ಫೇಸ್‌ಬುಕ್ ಪೋಸ್ಟ್ ಇದಾಗಿದ್ದು, ಸದ್ಯ ಡಿಲೀಟ್ ಆಗಿದೆ. ಇದರಲ್ಲಿ ಅವರು, 'ನಾನು ತೇಜ್ ಪ್ರತಾಪ್ ಯಾದವ್ ಮತ್ತು ಈ ಚಿತ್ರದಲ್ಲಿ ನನ್ನೊಂದಿಗೆ ಕಾಣುವ ಹುಡುಗಿ ಅನುಷ್ಕಾ ಯಾದವ್.' ಎಂದು ಬರೆದುಕೊಂಡಿದ್ದು, ನಾವಿಬ್ಬರೂ ಕಳೆದ 12 ವರ್ಷಗಳಿಂದ ಒಬ್ಬರನ್ನೊಬ್ಬರು ತಿಳಿದಿದ್ದೇವೆ, ಪ್ರೀತಿಸುತ್ತಿದ್ದೇವೆ. ನಾವು ಕಳೆದ 12 ವರ್ಷಗಳಿಂದ ರಿಲೇಷನ್‌ಶಿಪ್‌ನಲ್ಲಿದ್ದೇವೆ. ಈ ವಿಚಾರವನ್ನು ತಮ್ಮೊಂದಿಗೆ ಹಂಚಿಕೊಳ್ಳಬೇಕು ಎಂದು ಬಹಳ ದಿನಗಳಿಂದ ಬಯಸಿದ್ದೆ. ಹೇಗೆ ಹೇಳಬೇಕು ಎಂದು ಗೊತ್ತಾಗಿರಲಿಲ್ಲ. ಈ ಮೂಲಕ ಹೃದಯದ ಭಾವನೆ ಹಂಚಿಕೊಂಡಿದ್ದೇನೆ. ನಿಮ್ಮೆಲ್ಲರಿಗೂ ಇದು ಅರ್ಥವಾಗುತ್ತದೆ ಎಂದು ಭಾವಿಸುತ್ತೇನೆ ಎಂದು ಬರೆದುಕೊಂಡಿದ್ದರು.
icon

(9 / 10)

'ನನ್ನ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್‌ಗಳನ್ನು ಹ್ಯಾಕ್ ಮಾಡಲಾಗಿದೆ. ನನ್ನ ಮತ್ತು ನನ್ನ ಕುಟುಂಬವನ್ನು ತಪ್ಪಾಗಿ ಬಿಂಬಿಸಲು ಈ ರೀತಿ ಚಿತ್ರಗಳನ್ನು ಶೇರ್ ಮಾಡಲಾಗಿದೆ. ಫಾಲೋಯರ್ಸ್ ಮತ್ತು ಹಿತೈಷಿಗಳು ಇದನ್ನು ಅರ್ಥಮಾಡಿಕೊಂಡು ನಿಜ ಏನು ಎಂಬುದನ್ನು ತಿಳಿದುಕೊಂಡು ವರ್ತಿಸಬೇಕು ಎಂದು ಮನವಿ ಮಾಡುತ್ತಿರುವುದಾಗಿ ಸೋಷಿಯಲ್ ಮೀಡಿಯಾ ಪೋಸ್ಟ್ ಮಾಡಿದ್ದಾರೆ.
icon

(10 / 10)

(Aftab Alam Siddiqui)

ಉಮೇಶ್ ಕುಮಾರ್ ಶಿಮ್ಲಡ್ಕ: 'ಹಿಂದೂಸ್ತಾನ್ ಟೈಮ್ಸ್ ಕನ್ನಡ' ಜಾಲತಾಣದ ಸುದ್ದಿ ಸಂಪಾದಕ. ಜೀವನದ ಕಲಿಕಾರ್ಥಿ. ದೇಶ, ವಿದೇಶಗಳ ಪ್ರಸಕ್ತ ವಿದ್ಯಮಾನ, ವಾಣಿಜ್ಯ, ವಿಜ್ಞಾನ ತಂತ್ರಜ್ಞಾನ ಕುರಿತು ಕುತೂಹಲಿ. ಹೊಸ ದಿಗಂತ, ಉದಯವಾಣಿ, ವಿಜಯ ಕರ್ನಾಟಕ, ವಿಜಯವಾಣಿ ಪತ್ರಿಕೆಗಳು. ಏಷ್ಯಾನೆಟ್ ಸುವರ್ಣ, ಸಮಯ ಸುದ್ದಿವಾಹಿನಿಗಳ ವಿವಿಧ ವಿಭಾಗಗಳು ಸೇರಿ 20 ವರ್ಷಗಳಿಗೂ ಹೆಚ್ಚಿನ ಅನುಭವ. ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರು ನಿವಾಸಿ.

ಇತರ ಗ್ಯಾಲರಿಗಳು