Ind vs SL: ಭಾರತ vs ಶ್ರೀಲಂಕಾ ಮೊದಲ ಏಕದಿನ ಪಂದ್ಯ ಟೈ ಆದರೂ ಏಕೆ ಸೂಪರ್ ಓವರ್ ಆಡಿಸಲಿಲ್ಲ? - Explained
- India-Sri Lanka 1st ODI: ಭಾರತ vs ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡರೂ ಫಲಿತಾಂಶ ನಿರ್ಧರಿಸಲು ಏಕೆ ಸೂಪರ್ ಓವರ್ ಆಡಿಸಲಿಲ್ಲ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.
- India-Sri Lanka 1st ODI: ಭಾರತ vs ಶ್ರೀಲಂಕಾ ನಡುವಿನ ಮೊದಲ ಏಕದಿನ ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡರೂ ಫಲಿತಾಂಶ ನಿರ್ಧರಿಸಲು ಏಕೆ ಸೂಪರ್ ಓವರ್ ಆಡಿಸಲಿಲ್ಲ ಎಂಬುದು ಅಭಿಮಾನಿಗಳ ಪ್ರಶ್ನೆಯಾಗಿದೆ.
(1 / 8)
ಶ್ರೀಲಂಕಾ ವಿರುದ್ಧದ ಮೊದಲ ಏಕದಿನ ಪಂದ್ಯವು ರೋಚಕ ಟೈನಲ್ಲಿ ಕೊನೆಗೊಂಡಿತು. ಗೆಲುವಿಗೆ 15 ಎಸೆತಗಳಲ್ಲಿ 1 ರನ್ ಗಳಿಸಬೇಕಿದ್ದ ಭಾರತ, ತನ್ನ ಕೈಯಾರೆ ತಾನೇ ಕೈಸುಟ್ಟುಕೊಂಡಿತು.
(2 / 8)
ಕೊಲಂಬೊದ ಪ್ರೇಮದಾಸ ಕ್ರೀಡಾಂಗಣದಲ್ಲಿ ಜರುಗಿದ ಈ ಪಂದ್ಯವು ಅಂತಿಮ ಹಂತದಲ್ಲಿ ತಿರುವು ಪಡೆಯಿತು. ಗೆಲುವಿನ ಸಮೀಪ ಬಂದಿದ್ದ ಭಾರತ, ಸತತ 2 ವಿಕೆಟ್ ಕಳೆದುಕೊಂಡು ನಿರಾಸೆ ಅನುಭವಿಸಿತು.(AFP)
(3 / 8)
ಮೊದಲು ಬ್ಯಾಟಿಂಗ್ ಮಾಡಿದ್ದ ಶ್ರೀಲಂಕಾ, 50 ಓವರ್ಗಳಲ್ಲಿ 8 ವಿಕೆಟ್ ನಷ್ಟಕ್ಕೆ 230 ರನ್ ಗಳಿಸಿತು. ದುನಿತ್ ವೆಲ್ಲಾಲಗೆ ಅಜೇಯ 67 ಮತ್ತು ಪಾಥುಮ್ ನಿಸ್ಸಾಂಕ 56 ರನ್ ಸಿಡಿಸಿದರು.(AFP)
(4 / 8)
ಈ ಗುರಿ ಬೆನ್ನಟ್ಟಿದ ಭಾರತ 47.5 ಓವರ್ಗಳಲ್ಲಿ 230 ರನ್ ಗಳಿಸಲಷ್ಟೇ ಶಕ್ತವಾಯಿತು. ಇನ್ನೂ 15 ಎಸೆತಗಳಿಗೆ ಕೇವಲ 1 ರನ್ ಬೇಕಿದ್ದ ವೇಳೆ ಭಾರತ ತನ್ನ ಕೊನೆಯ ಎರಡು ವಿಕೆಟ್ಗಳನ್ನು ಕಳೆದುಕೊಂಡಿತು.(AFP)
(5 / 8)
ಪಂದ್ಯ ರೋಚಕ ಟೈನಲ್ಲಿ ಅಂತ್ಯಗೊಂಡರೂ ಫಲಿತಾಂಶ ನಿರ್ಧರಿಸಲು ಏಕೆ ಸೂಪರ್ ಓವರ್ ಆಡಿಸಲಿಲ್ಲ ಎಂಬುದು ಅಭಿಮಾನಿಗಳ ಸಹಜ ಪ್ರಶ್ನೆಯಾಗಿದೆ.(AFP)
(6 / 8)
ಭಾರತ ಮತ್ತು ಶ್ರೀಲಂಕಾ ನಡುವಿನ 3ನೇ ಟಿ20ಐ ಟೈ ಆಗಿತ್ತು. ಆಗ ಸೂಪರ್ ಓವರ್ ಆಡಿಸಲಾಗಿತ್ತು. ಆದರೆ ಏಕದಿನ ಟೈ ಆದರೂ ಏಕೆ ಸೂಪರ್ ಓವರ್ ಆಡಿಸಲಿಲ್ಲ ಎಂಬುದು ನೆಟ್ಟಿಗರ ಪ್ರಶ್ನೆಯಾಗಿದೆ.(PTI)
(7 / 8)
ಐಸಿಸಿ ನಿಯಮದ ಪ್ರಕಾರ ದ್ವಿಪಕ್ಷೀಯ ಸರಣಿಯಲ್ಲಿ ಟೈ ಆದರೆ ಸೂಪರ್ ಓವರ್ ಇರುವುದಿಲ್ಲ. ಆದರೆ ಐಸಿಸಿ ಟೂರ್ನಿ, ಏಷ್ಯಾಕಪ್ ಮತ್ತು ತ್ರಿಕೋನ ಸರಣಿಗಳಲ್ಲಿ ಟೈ ಆದರೆ ಸೂಪರ್ ಓವರ್ ಇರಲಿದೆ.(PTI)
ಇತರ ಗ್ಯಾಲರಿಗಳು