ಕಾಡಿನಿಂದ ನೀರು ಕುಡಿಯಲು ಬಂದು ಕಾಂಕ್ರಿಟ್‌ ಪಿಲ್ಲರ್‌ಗೆ ಸಿಲುಕಿದ ಆನೆ; ನಾಗರಹೊಳೆ ಅರಣ್ಯದಂಚಿನಲ್ಲಿ ಜೆಸಿಬಿ ಬಳಸಿ ಕೊನೆಗೂ ಕಾಡಾನೆ ರಕ್ಷಣೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಕಾಡಿನಿಂದ ನೀರು ಕುಡಿಯಲು ಬಂದು ಕಾಂಕ್ರಿಟ್‌ ಪಿಲ್ಲರ್‌ಗೆ ಸಿಲುಕಿದ ಆನೆ; ನಾಗರಹೊಳೆ ಅರಣ್ಯದಂಚಿನಲ್ಲಿ ಜೆಸಿಬಿ ಬಳಸಿ ಕೊನೆಗೂ ಕಾಡಾನೆ ರಕ್ಷಣೆ

ಕಾಡಿನಿಂದ ನೀರು ಕುಡಿಯಲು ಬಂದು ಕಾಂಕ್ರಿಟ್‌ ಪಿಲ್ಲರ್‌ಗೆ ಸಿಲುಕಿದ ಆನೆ; ನಾಗರಹೊಳೆ ಅರಣ್ಯದಂಚಿನಲ್ಲಿ ಜೆಸಿಬಿ ಬಳಸಿ ಕೊನೆಗೂ ಕಾಡಾನೆ ರಕ್ಷಣೆ

  • ವಿದ್ಯುದ್ದಾಲಿಂಘನಕ್ಕೆ ಸಿಕ್ಕಿ ಸತ್ತಿದೆ ಕಾಗೆ ಎನ್ನುವ ಕವನದ ಸಾಲುಗಳು ನೆನಪಿರಬೇಕು. ಆದರೆ ನಾಗರಹೊಳೆ ಅರಣ್ಯದಂಚಿನಲ್ಲಿ ನೀರು ಕುಡಿಯಲು ಬಂದ ಕಾಡಾನೆ ಕಾಂಕ್ರಿಟ್‌ ಕಂಬಗಳ ನಡುವೆ ಸಿಲುಕಿ ಒದ್ದಾಡಿ ಕೊನೆಗೆ ಬದುಕಿದೆಯೋ ಬಡ ಜೀವ ಎನ್ನುವ ಹಾಗೆ ಓಡಿ ಹೋದಿದೆ. ಇದರ ನೋಟ ಇಲ್ಲಿದೆ. 

ಮೈಸೂರು ಜಿಲ್ಲೆಯ ಹುಣಸೂರು ತಾಲೂಕು ಮುದುಗನೂರು ಹೊಸಕೆರೆ ಬಳಿ  ಕಾಂಕ್ರಿಟ್‌ ಗೋಡೆ ನಡುವೆ ಸಿಲುಕಿದ್ದ ಆನೆ.
icon

(1 / 7)

ನಾಗರಹೊಳೆ ಅಭಯಾರಣ್ಯದಿಂದ ನಾಡಿಗೆ ಬಂದಿದ್ದ ಒಂಟಿಸಲಗ. ವಾಪಸ್ಸು ಹೋಗುವ ವೇಳೆ ಆನೆ ತಡೆಗೆ ಹಾಕಿದ್ದ ಕಾಂಕ್ರೀಟ್ ಪಿಲ್ಲರ್‌ಗೆ ಸಿಲುಕಿತ್ತು.
icon

(2 / 7)

ಸುಮಾರು ಮೂರು ಗಂಟೆಗಳ ಕಾಲ ಹೊರಬರಲಾಗದೇ ಅದರ ನಡುವೆಯೇ ನರಳಾಡಿದ್ದ ಕಾಡಾನೆ ತಪ್ಪಿಸಿಕೊಂಡು ಹೋಗಲು ಪ್ರಯತ್ನಿಸುತ್ತಲೇ ಇತ್ತು.
icon

(3 / 7)

ಆನೆ ಘೀಳಿಡುವುದನ್ನು ಗಮನಿಸಿದ್ದ ಗ್ರಾಮಸ್ಥರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು.
icon

(4 / 7)

ಹಿಂದೆಯೂ ಇದೇ ರೀತಿ ಕಾಡಾನೆಗಳು ಅರಣ್ಯದಂಚಿನಲ್ಲಿ ಅಳವಡಿಸಿರುವ ರೈಲ್ವೆ ಕಂಬಿಗಳ ನಡುವೆ ಸಿಲುಕಿ ತೊಂದರೆ ಅನುಭವಿಸಿದ ಘಟನೆಗಳೂ ವರದಿಯಾಗಿದ್ದವು.
icon

(5 / 7)

ಈ ಹಿಂದೆ ಕಾಡಿನಿಂದ ನಾಡಿಗೆ ಬಂದಿದ್ದ ಇದೇ ಒಂಟಿಸಲಗ. ಪದೇ ಪದೇ ಬಂದು ಬೆಳೆ ನಾಶ ಮಾಡುತ್ತಿತ್ತು. ಈ ಹಿನ್ನೆಲೆಯಲ್ಲಿ ಆನೆಗೆ ರೇಡಿಯೋ ಕಾಲರ್ ಅಳವಡಿಸಲಾಗಿತ್ತು
icon

(6 / 7)

ಬಳಿಕ ಸ್ಥಳಕ್ಕಾಗಮಿಸಿದ ಅರಣ್ಯ ಇಲಾಖೆ ಅಧಿಕಾರಿಗಳು, ಸಿಬ್ಬಂದಿ. ಜೆಸಿಬಿ ಯಂತ್ರದ ಸಹಾಯದಿಂದ ಪಿಲ್ಲರ್‌ ಅನ್ನು ತೆರವುಗೊಳಿಸಿದರು. ಕೊನೆಗೆ  ಕಾಡಾನೆ  ಅಲ್ಲಿಂದ ತಪ್ಪಿಸಿಕೊಂಡು ಕಾಡಿನ ಕಡೆಗೆ ಓಡಿತು. 
icon

(7 / 7)

ಇತರ ಗ್ಯಾಲರಿಗಳು