ಕೊಡಗು- ಹಾಸನ ಭಾಗದಲ್ಲಿ ಪುಂಡಾಟ ಮಾಡುತ್ತಿದ್ದ ಆನೆ ಸೆರೆ ಹಿಡಿದ ಅರಣ್ಯ ಇಲಾಖೆ; ದುಬಾರೆಯಲ್ಲಿ ಕ್ರಾಲ್ ಸೇರಿಕೊಂಡ ಕಾಜೂರು ಕರ್ಣ
- ಕೊಡಗು ಹಾಗೂ ಹಾಸನ ಭಾಗದಲ್ಲಿ ಕೆಲ ವರ್ಷದಿಂದ ಉಪಟಳ ನೀಡುತ್ತಿದ್ದ ಕಾಜೂರು ಕರ್ಣ ಎನ್ನುವ ಕಾಡಾನೆಯನ್ನು ಕರ್ನಾಟಕ ಅರಣ್ಯ ಇಲಾಖೆಯವರು ಸೋಮವಾರಪೇಟೆ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
- ಕೊಡಗು ಹಾಗೂ ಹಾಸನ ಭಾಗದಲ್ಲಿ ಕೆಲ ವರ್ಷದಿಂದ ಉಪಟಳ ನೀಡುತ್ತಿದ್ದ ಕಾಜೂರು ಕರ್ಣ ಎನ್ನುವ ಕಾಡಾನೆಯನ್ನು ಕರ್ನಾಟಕ ಅರಣ್ಯ ಇಲಾಖೆಯವರು ಸೋಮವಾರಪೇಟೆ ತಾಲ್ಲೂಕಿನಲ್ಲಿ ಯಶಸ್ವಿಯಾಗಿ ಸೆರೆ ಹಿಡಿದಿದ್ದಾರೆ.
(1 / 6)
ಇದರ ಹೆಸರು ಕರ್ಣ, ಕೊಡಗಿನ ಸೋಮವಾರಪೇಟೆ ತಾಲ್ಲೂಕಿನ ಕಾಜೂರು ಸುತ್ತಮುತ್ತಲ ಪ್ರದೇಶದಲ್ಲಿಯೇ ಅಡ್ಡಾಡಿಕೊಂಡಿದ್ದ ಕಾರಣಕ್ಕೆ ಇದಕ್ಕೆ ಕಾಜೂರು ಕರ್ಣ ಆನೆ ಎಂದೇ ಹೆಸರಿಡಲಾಗಿತ್ತು. ಇದರ ವಯಸ್ಸು 45 ವರ್ಷ.
(2 / 6)
ಹಲವು ವರ್ಷದಿಂದ ಕೊಡಗು ಹಾಗೂ ಹಾಸನ ಭಾಗದಲ್ಲಿ ಸುತ್ತಾಡಿಕೊಂಡು ಜನರಿಗೆ ಉಪಟಳ ನೀಡುತ್ತಿದ್ದ ಕಾಜೂರು ಕರ್ಣನ ಸೆರೆ ಹಿಡಿಯುವುದೇ ಸವಾಲಾಗಿತ್ತು.
(3 / 6)
ಅರಣ್ಯ ಸುತ್ತಮುತ್ತಲಿನ ಗ್ರಾಮಗಳಲ್ಲಿ ಮನೆ ಮುಂದೆ ನಿಲ್ಲಿಸಿದ ಬೈಕ್ ಜಖಂಗೊಳಿಸೋದು,. ಕಾರುಗಳ ಮೇಲೆ ದಾಳಿ ಮಾಡುವುದನ್ನು ಕರ್ಣ ನಿರಂತರವಾಗಿ ನಡೆಸಿಕೊಂಡು ಬಂದಿದ್ದ.
(4 / 6)
ಕೊಡಗಿನ ಭಾಗದವರಿಗೆ ಹೆಚ್ಚು ತೊಂದರೆ ನೀಡುತ್ತಿದ್ದ ಈತನನ್ನು ಸೆರೆ ಹಿಡಿಯುವಂತೆ ಸ್ಥಳೀಯರು ಒತ್ತಾಯಿಸುತ್ತಲೇ ಇದ್ದರು. ಕೊನೆಗೆ ಅರಣ್ಯ ಇಲಾಖೆ ಇದನ್ನು ಸೆರೆ ಹಿಡಿದಿದೆ.
(5 / 6)
ಒಂದು ವರ್ಷದಿಂದಲೂ ಈತನ ಸೆರೆಗೆ ಇಲಾಖೆ ಪ್ರಯತ್ನಿಸುತ್ತಿತ್ತು. ಆದರೂ ಕರ್ಣ ತಪ್ಪಿಸಿಕೊಳ್ಳುತ್ತಿದ್ದ. ಎರಡು ವಾರದಿಂದ ತಂಡ ರಚಿಸಿ ಗಂಭೀರ ಪ್ರಯತ್ನ ಆರಂಭಿಸಿ ಸೋಮವಾರ ಪೇಟೆ ಎಸಿಎಫ್ ಎಎ ಗೋಪಾಲ್ ಅವರ ನೇತೃತ್ವದ ತಂಡ ಇದನ್ನು ಸೆರೆ ಹಿಡಿದಿದೆ.
ಇತರ ಗ್ಯಾಲರಿಗಳು