RCB Captain: ಆರ್​ಸಿಬಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗುತ್ತಾರೆಯೇ; ಸ್ಪಷ್ಟನೆ ನೀಡಿದ ಫ್ರಾಂಚೈಸಿ ನಿರ್ದೇಶಕ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Rcb Captain: ಆರ್​ಸಿಬಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗುತ್ತಾರೆಯೇ; ಸ್ಪಷ್ಟನೆ ನೀಡಿದ ಫ್ರಾಂಚೈಸಿ ನಿರ್ದೇಶಕ

RCB Captain: ಆರ್​ಸಿಬಿಗೆ ವಿರಾಟ್ ಕೊಹ್ಲಿ ಮತ್ತೆ ನಾಯಕನಾಗುತ್ತಾರೆಯೇ; ಸ್ಪಷ್ಟನೆ ನೀಡಿದ ಫ್ರಾಂಚೈಸಿ ನಿರ್ದೇಶಕ

  • Royal Challengers Bengaluru: ಸ್ಟಾರ್ ಬ್ಯಾಟರ್ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಮರಳಲು ಬಯಸುತ್ತಾರೆಯೇ? ಈ ಬಗ್ಗೆ ಸ್ಪಷ್ಟನೆ ನೀಡಿದ್ದಾರೆ ಫ್ರಾಂಚೈಸಿ ನಿರ್ದೇಶಕ ಮೋ ಬೊಬಾಟ್.

ಸ್ಟಾರ್​ ಬ್ಯಾಟರ್​ ವಿರಾಟ್ ಕೊಹ್ಲಿ ಅವರನ್ನು ಮುಂಬರುವ ಐಪಿಎಲ್​ ಆವೃತ್ತಿಗೆ ರಾಯಲ್ ಚಾಲೆಂಜರ್ಸ್ ಬೆಂಗಳೂರು 21 ಕೋಟಿ ರೂಪಾಯಿಗೆ ಉಳಿಸಿಕೊಂಡಿದೆ. 2008 ರಿಂದ 2025 ರವರೆಗೆ ಐಪಿಎಲ್​ನಲ್ಲಿ ಒಂದೇ ತಂಡದ ಪರ ಕಾಣಿಸಿಕೊಳ್ಳಲಿರುವ ವಿಶ್ವದ ಏಕೈಕ ಆಟಗಾರ ಎಂಬ ಹೆಗ್ಗಳಿಕೆಗೆ ಪಾತ್ರರಾಗಿರುವ ವಿರಾಟ್ ಕೊಹ್ಲಿ, ತಾನು 3 ವರ್ಷಗಳ ಕಾಲ ಆಡಿದರೆ ಐಪಿಎಲ್​ನಲ್ಲಿ 20 ವರ್ಷಗಳ ಕಾಲ ಒಂದೇ ತಂಡದಲ್ಲಿ ಆಡಿದ ಅಪರೂಪದ ದಾಖಲೆ ನಿರ್ಮಿಸಲಿದ್ದಾರೆ.
icon

(1 / 5)

ನಿರೀಕ್ಷೆಯಂತೆ 2025 ಐಪಿಎಲ್​​ಗೂ ಮುನ್ನ ಆರ್​​ಸಿಬಿ ವಿರಾಟ್ ಅವರನ್ನು ಮೊದಲ ಆಟಗಾರನಾಗಿ ಉಳಿಸಿಕೊಂಡಿದೆ. ಕಳೆದ ಬಾರಿ ಅಬ್ಬರಿಸಿ ಆರೆಂಜ್ ಕ್ಯಾಪ್ ಗೆದ್ದುಕೊಂಡಿದ್ದ ಕೊಹ್ಲಿ, ಆರ್​ಸಿಬಿಗಾಗಿ ತನ್ನ ಸರ್ವಸ್ವವನ್ನೂ ಮುಡುಪಾಡಿಗಿಟ್ಟಿದ್ದಾರೆ. ಆರ್​ಸಿಬಿ ಪರವೇ ತನ್ನ ಐಪಿಎಲ್ ಆಡುವುದಾಗಿಯೂ ಈ ಹಿಂದೆ ಹೇಳಿದ್ದಾರೆ.
icon

(2 / 5)

ಐಪಿಎಲ್ ರಿಟೆನ್ಶನ್​ಗೂ ಮುನ್ನ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಮರಳುತ್ತಿದ್ದಾರೆ ಎಂದು ವರದಿಯಾಗಿತ್ತು. ಆರ್​​ಸಿಬಿಯೂ ಈ ಬಗ್ಗೆ ಸ್ಪಷ್ಟತೆ ನೀಡಿರಲಿಲ್ಲ. ನಾಯಕತ್ವದಿಂದ ಕೆಳಗಿಳಿದ ನಂತರ ಕೊಹ್ಲಿ 2023ರಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದರು. ಫಾಫ್ ಅವರನ್ನು ಕೈಬಿಡುವ ಸುದ್ದಿ ಗೊತ್ತಿದ್ದ ಕಾರಣ ಕೊಹ್ಲಿ ಮತ್ತೆ ಆರ್​​ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅಭಿಮಾನಿಗಳು ಸಹ ಖುಷಿಪಟ್ಟಿದ್ದರು.
icon

(3 / 5)

ಐಪಿಎಲ್ ರಿಟೆನ್ಶನ್​ಗೂ ಮುನ್ನ ವಿರಾಟ್ ಕೊಹ್ಲಿ ಅವರು ಮತ್ತೊಮ್ಮೆ ರಾಯಲ್ ಚಾಲೆಂಜರ್ಸ್ ಬೆಂಗಳೂರು ತಂಡದ ನಾಯಕನಾಗಿ ಮರಳುತ್ತಿದ್ದಾರೆ ಎಂದು ವರದಿಯಾಗಿತ್ತು. ಆರ್​​ಸಿಬಿಯೂ ಈ ಬಗ್ಗೆ ಸ್ಪಷ್ಟತೆ ನೀಡಿರಲಿಲ್ಲ. ನಾಯಕತ್ವದಿಂದ ಕೆಳಗಿಳಿದ ನಂತರ ಕೊಹ್ಲಿ 2023ರಲ್ಲಿ ಆರ್​ಸಿಬಿ ತಂಡವನ್ನು ಮುನ್ನಡೆಸಿದ್ದರು. ಫಾಫ್ ಅವರನ್ನು ಕೈಬಿಡುವ ಸುದ್ದಿ ಗೊತ್ತಿದ್ದ ಕಾರಣ ಕೊಹ್ಲಿ ಮತ್ತೆ ಆರ್​​ಸಿಬಿ ತಂಡವನ್ನು ಮುನ್ನಡೆಸಲಿದ್ದಾರೆ ಎಂದು ಅಭಿಮಾನಿಗಳು ಸಹ ಖುಷಿಪಟ್ಟಿದ್ದರು.(AFP)

ಆರ್​​ಸಿಬಿ ಕ್ರಿಕೆಟ್ ನಿರ್ದೇಶಕ ಮೋ ಬೊಬಾಟ್ ಅವರು ಈ ಬಗ್ಗೆ ಸ್ಪಷ್ಟಪಡಿಸಿದ್ದು, ಫಾಫ್ ಡು ಪ್ಲೆಸಿಸ್ ಅವರನ್ನು ಬಿಡುಗಡೆ ಮಾಡಿದ್ದರೂ, ವಿರಾಟ್ ಕೊಹ್ಲಿ ಅವರನ್ನು ನಾಯಕನನ್ನಾಗಿ ಮಾಡುವ ಬಗ್ಗೆ ಇನ್ನೂ ನಿರ್ಧರಿಸಲಾಗಿಲ್ಲ ಎಂದು ಹೇಳಿದ್ದಾರೆ. ‘ಆರ್ಸಿಬಿ ನಾಯಕತ್ವದ ಬಗ್ಗೆ ಅಂತಿಮ ನಿರ್ಧಾರ ತೆಗೆದುಕೊಳ್ಳಲಾಗಿಲ್ಲ. ನಾಯಕ ಯಾರಾಗಲಿದ್ದಾರೆ ಎಂಬುದರ ಬಗ್ಗೆ ಇನ್ನೂ ಚರ್ಚೆ ನಡೆಯುತ್ತಿದೆ. ಹರಾಜು ಮುಗಿದ ಬಳಿಕ ನಾಯಕತ್ವದ ನಿರ್ಧಾರವಾಗಲಿದೆ’ ಎಂದು ಹೇಳಿದ್ದಾರೆ.,
icon

(4 / 5)

2025ಕ್ಕೆ ಬಲಿಷ್ಠ ಭಾರತ ತಂಡವನ್ನು ಕಟ್ಟಲು ಎದುರು ನೋಡುತ್ತಿದ್ದೇವೆ. ನಮ್ಮ ಕೈಯಲ್ಲಿ ಉತ್ತಮ ಹಣವಿದೆ. ಹೀಗಾಗಿ ನಾವು ತಂಡವನ್ನು ಉತ್ತಮವಾಗಿ ನಿರ್ಮಿಸಬಹುದು. ಫ್ರಾಂಚೈಸಿ ವಿರಾಟ್ ಅವರೊಂದಿಗೆ ದೀರ್ಘಕಾಲದ ಸಂಬಂಧವನ್ನು ಹೊಂದಿದೆ. ಹೊಸ ಆಟಗಾರರು ವಿರಾಟ್ ಅವರಿಂದ ಸ್ಫೂರ್ತಿ ಪಡೆಯುತ್ತಾರೆ ಎಂದು ನಾನು ಭಾವಿಸುತ್ತೇನೆ. ಯಶ್ ದಯಾಳ್ ಮತ್ತು ರಜತ್ ಪಾಟಿದಾರ್ ಅವರಂತಹ ಆಟಗಾರರನ್ನು ಉಳಿಸಿಕೊಳ್ಳುವ ಮೂಲಕ ತಂಡವನ್ನು ಬಲಪಡಿಸಲಾಗುವುದು ಎಂದು ಹೇಳಿದ್ದಾರೆ.
icon

(5 / 5)

ಇತರ ಗ್ಯಾಲರಿಗಳು