Ayurveda: ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಚಳಿಗಾಲದ ರೋಗಗಳಿಗೆ ಹೇಳಿ ಟಾಟಾ ಬೈ ಬೈ
- Winter care with ayurveda: ಚಳಿಗಾಲ ಬಂತೆಂದರೆ ನಾನಾ ರೋಗಗಳು ನಮ್ಮ ಮೇಲೆ ಅಟ್ಯಾಕ್ ಮಾಡಲು ಸಿದ್ಧವಾಗಿರುತ್ತದೆ. ಜ್ವರ, ಶೀತ, ಕೆಮ್ಮು, ಗಂಟಲು ನೋವು ಸೇರಿದಂತೆ ಅನೇಕ ಆರೋಗ್ಯ ಸಮಸ್ಯೆಗಳು ನಮ್ಮನ್ನು ಕಾಡುತ್ತವೆ. ಇದಕ್ಕೆಲ್ಲ ಪರಿಹಾರವೆಂದರೆ ಚಳಿಗಾಲದಲ್ಕಿ ಈ 5 ಆಯುರ್ವೇದ ವಸ್ತುಗಳನ್ನು ಅಥವಾ ಗಿಡಮೂಲಿಕೆಗಳನ್ನು ಬಳಸುವುದು.

(1 / 6)
ಚಳಿಗಾಲದಲ್ಲಿ ನೆಗಡಿ, ಕೆಮ್ಮು, ಗಂಟಲು ನೋವು ಮತ್ತು ಜ್ವರ ಕಾಮನ್. ಇದರೊಂದಿಗೆ ಹೃದ್ರೋಗ ಮತ್ತು ಮಧುಮೇಹ ಕೂಡ ಹೆಚ್ಚಾಗುತ್ತದೆ. ಈ ಋತುವಿನಲ್ಲಿ ಚಿಕ್ಕ ಮಕ್ಕಳಿಂದ ಹಿಡಿದು ದೊಡ್ಡವರವರೆಗೆ ಎಲ್ಲರೂ ಜಾಗರೂಕರಾಗಿರಬೇಕು. ಆದರೆ ಈ 5 ಗಿಡಮೂಲಿಕೆ ನಿಮ್ಮ ಮನೆಯಲ್ಲಿದ್ದರೆ ಇವುಗಳನ್ನು ಬಳಸುವುದರಿಂದ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸಬಹುದು.
(2 / 6)
ತುಳಸಿ ಎಲೆಗಳನ್ನು ಆಯುರ್ವೇದ ಔಷಧಿಗಳ ತಯಾರಿಕೆಯಲ್ಲಿ ಬಳಸಲಾಗುತ್ತದೆ. ಒಂದು ಚಮಚ ತುಳಸಿ ಎಲೆಗಳ ರಸವನ್ನು ಪ್ರತಿದಿನ ಕುಡಿಯುವುದು ಒಳ್ಳೆಯದು. ಇದು ರೋಗನಿರೋಧಕ ಶಕ್ತಿಯನ್ನು ಹೆಚ್ಚಿಸುತ್ತದೆ. ಇದು ಹೆಚ್ಚಿನ ಬ್ಯಾಕ್ಟೀರಿಯಾ ವಿರೋಧಿ ಗುಣಗಳನ್ನು ಹೊಂದಿದೆ. ಹೀಗಾಗಿ ವಿವಿಧ ಬಗೆಯ ಸೋಂಕು ತಡೆಗಟ್ಟುತ್ತದೆ.
(3 / 6)
ಶುಂಠಿಯಲ್ಲಿ ಜಿಂಜರಾಲ್ ಎಂಬ ಪದಾರ್ಥವಿದೆ. ಇದು ವಾಕರಿಕೆ ಮತ್ತು ವಾಂತಿಯಂತಹ ಸಮಸ್ಯೆಗಳನ್ನು ತಡೆಯುತ್ತದೆ. ಗಂಟಲು ನೋವು, ಕೆಮ್ಮು, ಶೀತಕ್ಕೆ ಶುಂಠಿ ಕಷಾಯ ಬೆಸ್ಟ್. ಆದ್ದರಿಂದ ಚಳಿಗಾಲದಲ್ಲಿ ಪ್ರತಿದಿನ ಶುಂಠಿ ಚಹಾವನ್ನು ಕುಡಿಯಿರಿ.
(4 / 6)
ಬೇವಿನ ಎಲೆಗಳನ್ನು ಆಹಾರದಲ್ಲಿ ಸೇರಿಸುವುದು ಒಳ್ಳೆಯದು. ಬೇವಿನ ಟೀ ಕುಡಿಯುವುದರಿಂದ ಸಂಧಿವಾತದಂತಹ ನೋವು ನಿವಾರಣೆಯಾಗುತ್ತದೆ. ಇದಲ್ಲದೆ, ಮಧುಮೇಹ, ರಕ್ತದೊತ್ತಡವೂ ನಿಯಂತ್ರಣದಲ್ಲಿರುತ್ತದೆ.
(5 / 6)
ಆಯುರ್ವೇದದಲ್ಲಿ ಅಶ್ವಗಂಧಕ್ಕೆ ವಿಶೇಷ ಸ್ಥಾನವಿದೆ. ಇದರ ಪುಡಿಯನ್ನು ನೀರಿನೊಂದಿಗೆ ಬೆರೆಸಿ ಕುಡಿಯುವುದರಿಂದ ಒತ್ತಡದ ಹಾರ್ಮೋನ್‌ಗಳು ಉತ್ಪತ್ತಿಯಾಗುವುದನ್ನು ತಡೆಯುತ್ತದೆ. ಇದು ನಿದ್ರಾಹೀನತೆಯನ್ನು ಸಹ ನಿವಾರಿಸುತ್ತದೆ.
ಇತರ ಗ್ಯಾಲರಿಗಳು