Winter Health: ಚಳಿಗಾಲದಲ್ಲಿ ಹಲ್ಲು ಹಾಗೂ ವಸಡಿನ ಆರೋಗ್ಯದ ಕಡೆ ಇರಲಿ ಗಮನ; ಇಲ್ಲಿದೆ ನಿಮಗೆ ಬಹುಮುಖ್ಯ ಸಲಹೆ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Winter Health: ಚಳಿಗಾಲದಲ್ಲಿ ಹಲ್ಲು ಹಾಗೂ ವಸಡಿನ ಆರೋಗ್ಯದ ಕಡೆ ಇರಲಿ ಗಮನ; ಇಲ್ಲಿದೆ ನಿಮಗೆ ಬಹುಮುಖ್ಯ ಸಲಹೆ

Winter Health: ಚಳಿಗಾಲದಲ್ಲಿ ಹಲ್ಲು ಹಾಗೂ ವಸಡಿನ ಆರೋಗ್ಯದ ಕಡೆ ಇರಲಿ ಗಮನ; ಇಲ್ಲಿದೆ ನಿಮಗೆ ಬಹುಮುಖ್ಯ ಸಲಹೆ

  • Health Tips: ಚಳಿಗಾಲವು ಎಷ್ಟು ತಂಪಾಗಿ ಇರುತ್ತದೆಯೋ ಅದೇ ರೀತಿ ಹಲ್ಲು ಹಾಗೂ ವಸಡಿನ ಆರೋಗ್ಯದ ಮೇಲೆಯೂ ಅಷ್ಟೇ ದುಷ್ಪರಿಣಾಮ ಬೀರುತ್ತದೆ. ಹೀಗಾಗಿ ನೀವು ಚಳಿಗಾಲದಲ್ಲಿಯೂ ನಿಮ್ಮ ನಗುವನ್ನು ಅಷ್ಟೇ ಜೋಪಾನವಾಗಿ ಕಾಪಾಡಿಕೊಳ್ಳಬೇಕು ಎಂದರೆ ಇಲ್ಲಿ ನೀಡಲಾದ ಸಲಹೆಗಳನ್ನು ನೀವು ತಪ್ಪದೇ ಪಾಲಿಸಬೇಕು.

ಸದ್ಯ ನಾವು ಚಳಿಗಾಲದ ಋತುವಿನಲ್ಲಿದ್ದೇವೆ. ಈ ಸೀಸನ್​​ನಲ್ಲಿ ಶುಷ್ಕ ಗಾಳಿ, ತಾಪಮಾನದಲ್ಲಿ ವಿಪರೀತ ಬದಲಾವಣೆ ಉಂಟಾಗುವುದರಿಂದ ನೀವು ನಿಮ್ಮ ಹಲ್ಲು ಹಾಗೂ ವಸಡುಗಳ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ತುಂಬಾನೇ ಮುಖ್ಯವಾಗಿರುತ್ತದೆ. ಈ ಸೀಸನ್​ ತಂಪಾಗಿದೆ ಎಂದು ಕಂಡರೂ ಸಹ ಆರೋಗ್ಯದ ದೃಷ್ಟಿಯಿಂದ ಇದನ್ನು ಒಳ್ಳೆಯ ಸೀಸನ್​ ಎಂದು ಕರೆಯಲು ಸಾಧ್ಯವಿಲ್ಲ. ಹೀಗಾಗಿ ನಿಮ್ಮ ಹಲ್ಲಿನ ಆರೋಗ್ಯ ನಿಮ್ಮ ಕೈಯಲ್ಲೇ ಇರುವುದರಿಂದ ಅವುಗಳನ್ನು ಕಾಪಾಡಿಕೊಳ್ಳಲು ನೀವು ಈ ಕೆಳಗಿನ ಹಂತಗಳನ್ನು ಪಾಲಿಸಬೇಕು. (PC: Unsplash, Freepik)
icon

(1 / 7)

ನೀರು ಕುಡಿಯುತ್ತಲೇ ಇರಿ: ತಾಪಮಾನ ವೈಪರಿತ್ಯ ಈ ಸೀಸನ್​ನಲ್ಲಿ ಹೆಚ್ಚಾಗಿ ಇರುತ್ತದೆ. ತಂಪಾದ ವಾತಾವರಣ ಇರುವುದರಿಂದ ನಿಮಗೆ ಬಾಯಾರಿಕೆ ಉಂಟಾಗುವುದಿಲ್ಲ. ಹಾಗಂತ ನೀವು ನೀರು ಕುಡಿಯದೇ ಇರುವುದು ಆರೋಗ್ಯದ ದೃಷ್ಟಿಯಿಂದ ಒಳ್ಳೆಯ ಅಭ್ಯಾಸವಲ್ಲ. ನೀವು ಕಾಲ ಕಾಲಕ್ಕೆ ಸರಿಯಾಗಿ ನೀರು ಸೇವನೆ ಮಾಡುತ್ತಿದ್ದರೆ ಇದರಿಂದ ನಿಮ್ಮ ಬಾಯಿ ತೇವವಾಗಿ ಇರುತ್ತದೆ. ಹಲ್ಲು ಕೊಳೆಯುವುದಕ್ಕೆ ಕಾರಣವಾಗುವ ಬ್ಯಾಕ್ಟೀರಿಯಾಗಳನ್ನು ಬಾಯಿಯಿಂದ ನಿರ್ನಾಮ ಮಾಡಲು ನೀರು ಕುಡಿಯುವುದು ಅತ್ಯವಶ್ಯಕವಾಗಿದೆ. (PC: Unsplash)
icon

(2 / 7)

ದಿನಕ್ಕೆರಡು ಬಾರಿ ಹಲ್ಲುಜ್ಜಿ: ಚಳಿಗಾಲವು ನಮ್ಮನ್ನು ಉದಾಸೀನರನ್ನಾಗಿ ಮಾಡಿಬಿಡುತ್ತವೆ. ಆದರೆ ನೀವು ನಿಮ್ಮ ನೈರ್ಮಲ್ಯವನ್ನು ಕಾಪಾಡಿಕೊಳ್ಳುವ ಅಭ್ಯಾಸಗಳಿಗೆ ಉದಾಸೀನವನ್ನು ನೆಪ ಮಾಡಿ ಮುಂದೂಡವಂತಿಲ್ಲ. ದಿನಕ್ಕೆ ಎರಡು ಬಾರಿ ನೀವು ಬ್ರಷ್​ ಮಾಡಲೇಬೇಕು. ಆಗ ಮಾತ್ರ ನಿಮ್ಮ ಹಲ್ಲು ಆರೋಗ್ಯಯುತವಾಗಿ ಇರಲು ಸಾಧ್ಯ. (PC: Unsplash )
icon

(3 / 7)

ಫ್ಲೋರೈಡ್​ಯುಕ್ತ ಟೂತ್​ಪೇಸ್ಟ್​ ಬಳಸಿ: ಚಳಿಗಾಲದಲ್ಲಿ ನೀವು ಫ್ಲೋರೈಡ್​ಯುಕ್ತ ಟೂತ್​ಪೇಸ್ಟ್​ಗಳನ್ನೇ ಬಳಸಬೇಕು. ಇದು ನಿಮ್ಮ ಹಲ್ಲು ಹಾಗೂ ವಸಡನ್ನು ಬಲಪಡಿಸುವ ಸಾಮರ್ಥ್ಯ ಹೊಂದಿದೆ. ಅಲ್ಲದೇ ಹಲ್ಲುಗಳು ಕೊಳೆಯದಂತೆ ರಕ್ಷಿಸುತ್ತವೆ. (PC: Unsplash)
icon

(4 / 7)

ಸಕ್ಕರೆ ಸೇವನೆ ತ್ಯಜಿಸಿ: ಚಳಿಗಾಲದಲ್ಲಿ ಹಬ್ಬದ ಸೀಸನ್​ ಕೂಡ ಇರುತ್ತದೆ. ಹೀಗಾಗಿ ಸಿಹಿಪದಾರ್ಥಗಳು ನಿಮ್ಮ ದೇಹವನ್ನು ಆಗಾಗ ಸೇರುತ್ತಲೇ ಇರುತ್ತವೆ. ಆದರೆ ನಿಮ್ಮ ಹಲ್ಲಿನ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ನೀವು ಸಕ್ಕರೆಯುಕ್ತ ಆಹಾರ ಸೇವನೆಗೆ ಮಿತಿ ಹಾಕಲೇಬೇಕು. ಹಲ್ಲಿನ ಆರೋಗ್ಯದ ಮೇಲೆ ಸಕ್ಕರೆಯು ನೇರ ಪರಿಣಾಮವನ್ನು ಬೀರುತ್ತವೆ. ಪ್ರತಿಬಾರಿ ಸಿಹಿ ಪದಾರ್ಥವನ್ನು ಸೇವಿಸಿದ ಬಳಿಕವೂ ಬಾಯಿ ತೊಳೆದುಕೊಳ್ಳುವುದನ್ನು ಮರೆಯಬೇಡಿ. (PC: Unsplash)
icon

(5 / 7)

ಸಕ್ಕರೆ ಸೇವನೆ ತ್ಯಜಿಸಿ: ಚಳಿಗಾಲದಲ್ಲಿ ಹಬ್ಬದ ಸೀಸನ್​ ಕೂಡ ಇರುತ್ತದೆ. ಹೀಗಾಗಿ ಸಿಹಿಪದಾರ್ಥಗಳು ನಿಮ್ಮ ದೇಹವನ್ನು ಆಗಾಗ ಸೇರುತ್ತಲೇ ಇರುತ್ತವೆ. ಆದರೆ ನಿಮ್ಮ ಹಲ್ಲಿನ ಆರೋಗ್ಯ ಚೆನ್ನಾಗಿ ಇರಬೇಕು ಎಂದರೆ ನೀವು ಸಕ್ಕರೆಯುಕ್ತ ಆಹಾರ ಸೇವನೆಗೆ ಮಿತಿ ಹಾಕಲೇಬೇಕು. ಹಲ್ಲಿನ ಆರೋಗ್ಯದ ಮೇಲೆ ಸಕ್ಕರೆಯು ನೇರ ಪರಿಣಾಮವನ್ನು ಬೀರುತ್ತವೆ. ಪ್ರತಿಬಾರಿ ಸಿಹಿ ಪದಾರ್ಥವನ್ನು ಸೇವಿಸಿದ ಬಳಿಕವೂ ಬಾಯಿ ತೊಳೆದುಕೊಳ್ಳುವುದನ್ನು ಮರೆಯಬೇಡಿ. (PC: Freepik)
icon

(6 / 7)

ಚಾಕಲೇಟ್​ ಸೇವನೆಗೆ ಮಿತಿ ಹೇರಿ: ಚಳಿಗಾಲದಲ್ಲಿ ಅನೇಕರು ಚಾಕಲೇಟ್​ ಸೇವನೆಯನ್ನು ಹೆಚ್ಚು ಇಷ್ಟಪಡುತ್ತಾರೆ. ಆದರೆ ಅತಿಯಾದ ಚಾಕಲೇಟ್​ ಸೇವನೆಯು ಹಲ್ಲಿನ ಹುಳುಕಿಗೆ ಕಾರಣವಾಗಬಹುದು. ಈ ರೀತಿಯಾಗಿ ನಿಮ್ಮ ಹಲ್ಲಿನ ಆರೋಗ್ಯವನ್ನು ಕಾಪಾಡಿಕೊಂಡಲ್ಲಿ ಮಾತ್ರ ನೀವು ಚಳಿಗಾಲದ ಅಂತ್ಯದವರೆಗೂ ನಿಮ್ಮ ನಗುವನ್ನು ಚಂದವಾಗಿ ಇಟ್ಟುಕೊಳ್ಳಬಹುದು.(PC: Unsplash)
icon

(7 / 7)

ಇತರ ಗ್ಯಾಲರಿಗಳು