ಈ ಸುಂದರ ಗೊಂಡೆ ವಿನ್ಯಾಸವು ನಿಮ್ಮ ಬ್ಲೌಸ್, ಚೂಡಿದಾರ್‌ನ ಅಂದವನ್ನು ಮತ್ತಷ್ಟು ಹೆಚ್ಚಿಸುತ್ತವೆ; ಇಲ್ಲಿವೆ ಸ್ಟೈಲಿಶ್ ಡಿಸೈನ್‌ಗಳು
ಬ್ಲೌಸ್ (ಕುಪ್ಪಸ) ಅಥವಾ ಚೂಡಿದಾರ್‌ನ ಹಿಂಬದಿಗೆ ಸ್ಟೈಲಿಶ್ ಲುಕ್ ನೀಡಲು ಬಯಸಿದರೆ ಈ ರೀತಿಯ ಗೊಂಡೆಗಳ ವಿನ್ಯಾಸವನ್ನು ಬಳಸಬಹುದು. ಇಲ್ಲಿವೆ ಕೆಲವು ಸುಂದರ ಗೊಂಡೆ ವಿನ್ಯಾಸಗಳು.
(1 / 8)
ಸೀರೆ ಕುಪ್ಪಸ ಅಥವಾ ಚೂಡಿದಾರ್‌ಗೆ ಹೆಚ್ಚು ಅಲಂಕಾರಿಕ ನೋಟವನ್ನು ನೀಡಲು ಹಿಂದೆ ಗೊಂಡೆ ಅಥವಾ ಕುಚ್ಚು ವಿನ್ಯಾಸವನ್ನು ಬಳಸಲಾಗುತ್ತದೆ. ಇದು ಸೀರೆ ರವಿಕೆ, ಚೂಡಿದಾರ್ ಇತ್ಯಾದಿ ಉಡುಪನ್ನು ಮತ್ತಷ್ಟು ಸ್ಟೈಲಿಶ್ ಆಗಿ ಕಾಣಿಸುತ್ತದೆ. ಇತ್ತೀಚೆಗೆ ಗೊಂಡೆ ಇಡುವುದು ಕೂಡ ಸಖತ್ ಟ್ರೆಂಡಿಯಾಗಿದೆ. ಇಲ್ಲಿ ಕೆಲವು ಅಲಂಕಾರಿಕ ಗೊಂಡೆ ಪೆಂಡೆಂಟ್ ವಿನ್ಯಾಸಗಳನ್ನು ಇಲ್ಲಿ ನೀಡಲಾಗಿದೆ. ಕುಪ್ಪಸ ಅಥವಾ ಚೂಡಿದಾರ್ ಸರಳವಾಗಿದ್ದರೂ, ಗೊಂಡೆ ಇಡುವುದರಿಂದ ನೀವು ತುಂಬಾ ಸ್ಟೈಲಿಶ್ ಆಗಿ ಕಾಣಿಸುವಿರಿ.
(2 / 8)
ನಿಮ್ಮ ಚೂಡಿದಾರ್ ಮತ್ತು ಸೀರೆ ಕುಪ್ಪಸದ ಹಿಂಭಾಗಕ್ಕೆ ಇಂತಹ ಗೊಂಡೆಗಳ ವಿನ್ಯಾಸವನ್ನು ಮಾಡಬಹುದು. ಇದರಲ್ಲಿ, ಮ್ಯಾಚಿಂಗ್ ಫ್ಯಾಬ್ರಿಕ್ ಮತ್ತು ಗೋಟಾ ಪಟ್ಟಿ ಲೇಸ್ ಸಹಾಯದಿಂದ ಬಹಳ ಸುಂದರವಾದ ವಿನ್ಯಾಸವನ್ನು ರಚಿಸಲಾಗಿದೆ. ಈ ರೀತಿಯ ಪೆಂಡೆಂಟ್ ನಿಮ್ಮ ಸರಳವಾದ ಉಡುಪನ್ನು ಇನ್ನಷ್ಟು ಅಲಂಕಾರಿಕವಾಗಿಸುತ್ತದೆ.
(Image Credit: Pinterest)(3 / 8)
ಚಿಟ್ಟೆ ಆಕಾರದ ಗೊಂಡೆ
ಈ ರೀತಿಯ ಚಿಟ್ಟೆ ಆಕಾರದ ಗೊಂಡೆಯು ಬ್ಲೌಸ್ ಅಥವಾ ಚೂಡಿದಾರ್ ಹಿಂಭಾಗಕ್ಕೆ ಮಾಡುವುದರಿಂದ ಬಹಳ ಸುಂದರವಾಗಿ ಕಾಣುತ್ತದೆ. ಬಟ್ಟೆಯನ್ನು ಚಿಟ್ಟೆಯಂತೆ ಮಾಡಲಾಗಿದ್ದು ಅದಕ್ಕೆ ಮುತ್ತುಗಳನ್ನು ಜೋಡಿಸಲಾಗಿದೆ. ಈ ಆಕಾರವು ಬಹಳ ಚೆನ್ನಾಗಿದೆ. ನಿಮಗೂ ಇಷ್ಟವಾಗಬಹುದು.
(Image Credit: kir_am_designer)(4 / 8)
ಬಿಲ್ಲಿನ ಆಕಾರದ ಗೊಂಡೆ
ಈ ರೀತಿಯ ಬಿಲ್ಲಿನ ಆಕಾರದ ಗೊಂಡೆಯು ಚೂಡಿದಾರ್ ಅಥವಾ ಬ್ಲೌಸ್‌ನ ಹಿಂಭಾಗಕ್ಕೂ ಸೂಕ್ತವಾಗಿದೆ. ಇದು ನೋಡಲು ತುಂಬಾ ಆಕರ್ಷಕ ಮತ್ತು ವಿಶಿಷ್ಟವಾಗಿದೆ. ನೀವು ಹೆಚ್ಚು ಗೊಂಡೆಯ ಗೊಂಚಲನ್ನು ಇಷ್ಟಪಡದಿದ್ದರೆ ಈ ರೀತಿ ಸರಳವಾದ ವಿನ್ಯಾಸವನ್ನು ಹೊಲಿಸಬಹುದು.
(Image Credit: sangeeta_boutique)(5 / 8)
ತ್ರಿಕೋನಾಕಾರದ ಗೊಂಡೆ
ಚೂಡಿದಾರ್ ಮತ್ತು ಬ್ಲೌಸ್‌ಗೆ ಗೊಂಡೆಯ ಹಲವು ಗೊಂಚಲುಗಳನ್ನಿಡಲು ಬಯಸಿದರೆ, ನೀವು ಈ ರೀತಿಯ ತ್ರಿಕೋನಾಕಾರದ ಗೊಂಡೆಯನ್ನು ಬಳಸಬಹುದು. ಇವುಗಳಲ್ಲಿ ಮ್ಯಾಚಿಂಗ್ ಫ್ಯಾಬ್ರಿಕ್ ಮತ್ತು ಗೋಟಾ ಪಟ್ಟಿ ಲೇಸ್ ಬಳಸಲಾಗಿದೆ. ಈ ರೀತಿಯ ಗೊಂಡೆ ಇತ್ತೀಚಿನ ದಿನಗಳಲ್ಲಿ ಸಾಕಷ್ಟು ಟ್ರೆಂಡ್‌ನಲ್ಲಿದ್ದು, ತುಂಬಾ ಆಕರ್ಷಕವಾಗಿ ಕಾಣುತ್ತದೆ.
(Image Credit: Pinterest)(6 / 8)
ಚೂಡಿದಾರ್, ಲೆಹೆಂಗಾ ಅಥವಾ ಸೀರೆಯ ಬ್ಲೌಸ್‌ಗೆ ತುಂಬಾ ಭಾರವಾದ ಲುಕ್ ನೀಡಲು ಬಯಸಿದರೆ, ಈ ಗೊಂಡೆ ವಿನ್ಯಾಸವು ಅತ್ಯುತ್ತಮವಾಗಿದೆ. ಮಣಿಗಳು, ಮುತ್ತುಗಳನ್ನು ಬಳಸಿ ಬಹಳ ಸುಂದರವಾದ ಮಾದರಿಯನ್ನು ರಚಿಸಲಾಗಿದೆ. ನೀವು ಯಾವುದೇ ವಿಶೇಷ ಸಂದರ್ಭಕ್ಕಾಗಿ ಉಡುಪನ್ನು ಸಿದ್ಧಪಡಿಸುತ್ತಿದ್ದರೆ, ಈ ವಿನ್ಯಾಸವನ್ನು ಹೊಲಿಸಲು ಮರೆಯಬೇಡಿ.
(Image Credit: latkan_collection)(7 / 8)
ಹೂವಿನ ಆಕಾರದ ಗೊಂಡೆ ವಿನ್ಯಾಸ
ನೀವು ಸರಳವಾದ ದೈನಂದಿನ ಉಡುಗೆ ಬ್ಲೌಸ್ ಅಥವಾ ಚೂಡಿದಾರ್‌ಗಾಗಿ ಈ ರೀತಿಯ ಹೂವಿನ ಆಕಾರದ ಗೊಂಡೆಯ ವಿನ್ಯಾಸವನ್ನು ಬಳಸಬಹುದು. ಇದು ನಿಮ್ಮ ನೋಟಕ್ಕೆ ಮುದ್ದಾದ ಸ್ಪರ್ಶವನ್ನು ನೀಡುತ್ತದೆ. ಅದಕ್ಕೆ ಹೊಂದಿಕೆಯಾಗುವ ಗುಂಡಿಗಳು ಮತ್ತು ಮುತ್ತುಗಳನ್ನು ಸೇರಿಸುವ ಮೂಲಕ ನೀವು ಅದಕ್ಕೆ ಇನ್ನಷ್ಟು ಅಲಂಕಾರಿಕ ನೋಟವನ್ನು ನೀಡಬಹುದು. ಇದು ನೋಡಲು ತುಂಬಾ ಮುದ್ದಾಗಿದೆ.
(Image Credit: blousedesign)ಇತರ ಗ್ಯಾಲರಿಗಳು