ಎಲ್ಲಾ ಸೀರೆಗಳಿಗೂ ಹೊಂದುವಂಥ ಕಾಂಟ್ರಾಸ್ಟ್ ಬಣ್ಣದ ಬ್ಲೌಸ್‌ಗಳು: ನೀವೂ ಒಮ್ಮೆ ಇದೇ ರೀತಿ ಮ್ಯಾಚಿಂಗ್ ಮಾಡಿ
ಯಾವುದಾದರೂ ಕಾರ್ಯಕ್ರಮಕ್ಕೆ ಸೀರೆ ಆಯ್ಕೆ ಮಾಡುವಾಗ, ಅದಕ್ಕೆ ಸರಿಹೊಂದುವಂಥ ಕುಪ್ಪಸವನ್ನು ಸೆಲೆಕ್ಟ್ ಮಾಡುವುದು ಕೂಡಾ ಬಹಳ ಮುಖ್ಯವಾಗಿರುತ್ತದೆ, ಬ್ಲೌಸ್ ಬಣ್ಣ, ಡಿಸೈನ್, ಕಸೂತಿ ಎಲ್ಲವೂ ನಿಮ್ಮ ಅಂದವನ್ನು ಹೆಚ್ಚಿಸುತ್ತದೆ.
(1 / 8)
ಸೀರೆಯೊಂದಿಗೆ ಮ್ಯಾಚಿಂಗ್ ಬ್ಲೌಸ್ ಧರಿಸಿದರೂ ಕೆಲವರು, ಗುಂಪಿನಲ್ಲಿ ಎದ್ದು ಕಾಣಲು ಬಯಸುತ್ತಾರೆ. ಆದ್ದರಿಂದ ನೀವು ಕಾಂಟ್ರಾಸ್ಟ್ ಕಲರ್ ಬ್ಲೌಸ್‌ಗಳನ್ನು ನಿರ್ದಿಷ್ಟ ಬಣ್ಣದ ಸೀರೆಗಳೊಂದಿಗೆ ಹೊಂದಿಸಬಹುದು. ಕೆಂಪು, ಹಸಿರು ಅಥವಾ ಯಾವುದೇ ಬಣ್ಣದ ಸೀರೆ ಬಳಿ ಇದ್ದರೆ, ಯಾವ ಬಣ್ಣದ ಕಾಂಟ್ರಾಸ್ಟ್ ಬ್ಲೌಸ್ ಆಕರ್ಷಕವಾಗಿ ಕಾಣುತ್ತದೆ ಎಂಬುದನ್ನು ತಿಳಿಯಿರಿ.
(2 / 8)
ನೀವು ಕಾರ್ಯಕ್ರಮಕ್ಕೆ ಕಾಂಜೀವರಂ ಸೀರೆ ಧರಿಸಲು ನಿರ್ಧರಿಸಿದ್ದರೆ, ನೇರಳೆ ಬಣ್ಣದ ಕುಪ್ಪಸದೊಂದಿಗೆ ಅದನ್ನು ಮ್ಯಾಚಿಂಗ್ ಮಾಡಬಹುದು. ಶ್ರೀದೇವಿ-ಬೋನಿ ಕಪೂರ್ ಪುತ್ರಿ ಖುಷಿ ಕಪೂರ್ ಅವರ ಈ ಕಾಂಟ್ರಾಸ್ಟ್ ಬ್ಲೌಸ್ ಕಲರ್ ಮ್ಯಾಚಿಂಗ್ ಬಹಳ ಆಕರ್ಷಕವಾಗಿ ಕಾಣುತ್ತಿದೆ.
(3 / 8)
ನಿಮ್ಮ ಬಳಿ ಕಡು ಪಿಂಕ್ ಬಣ್ಣದ ಸೀರೆ ಇದ್ದರೆ ಅದಕ್ಕೆ ನೀವು ಹಸಿರು ಬಣ್ಣದ ರವಿಕೆಯನ್ನು ಮ್ಯಾಚಿಂಗ್ ಮಾಡಬಹುದು, ಇದೂ ಕೂಡಾ ವಿಭಿನ್ನ, ವಿಶಿಷ್ಠವಾದ ಮ್ಯಾಚಿಂಗ್ ಆಗಿದೆ. ಅದಕ್ಕೆ ಒಪ್ಪುವ ಆಭರಣಗಳನ್ನು ಧರಿಸಿದರೆ ನೀವು ನಾಯಕಿ ಯಾಮಿ ಗೌತಮ್ ಅವರಂತೇ ಆಕರ್ಷಕವಾಗಿ ಕಾಣುವುದು ಪಕ್ಕಾ.
(4 / 8)
ನೋರಾ ಫತೇಹಿ ಉಟ್ಟಿರುವ ಈ ಸೀರೆ ಹಾಗೂ ರವಿಕೆಯನ್ನು ಗಮನಿಸಿ, ಸೀರೆ ಹಾಗೂ ಕುಪ್ಪಸ ಒಂದೇ ಬಣ್ಣದ್ದಲ್ಲದಿದ್ದರೂ ನೋಡಲು ಎಷ್ಟು ಆಕರ್ಷಕವಾಗಿ ಕಾಣುತ್ತಿದೆ. ಹಸಿರು ಬಣ್ಣದ ಬನಾರಸ್ ಅಥವಾ ರೇಷ್ಮೆ ಸೀರೆಗೆ ನೀವು ನೇರಳೆ ಬಣ್ಣದ ವೆಲ್ವೆಟ್ ಬ್ಲೌಸ್ ಮ್ಯಾಚಿಂಗ್ ಮಾಡಬಹುದು.
(5 / 8)
ಇತ್ತೀಚೆಗೆ ಬಾಲಿವುಡ್‌ಗೆ ಎಂಟ್ರಿ ಕೊಟ್ಟಿರುವ ಕೀರ್ತಿ ಸುರೇಶ್, ಚಿನ್ನ-ಬೆಳ್ಳಿ ಬಣ್ಣ ಮಿಶ್ರಿತ ಸೀರೆಗೆ ಗುಲಾಬಿ, ಹಸಿರು ಬಣ್ಣದ ಸ್ಲೀವ್‌ಲೆಸ್ ಕಸೂತಿ ಕುಪ್ಪಸವನ್ನು ಮ್ಯಾಚಿಂಗ್ ಮಾಡಿದ್ದಾರೆ, ಬ್ಲೌಸ್ ಅಂಚಿಗೆ ಸೀರೆಗೆ ಮ್ಯಾಚಿಂಗ್ ಆಗುವಂತೆ ಬಾರ್ಡರ್ ನೀಡಲಾಗಿದೆ.
(6 / 8)
ಅಂಕಿತಾ ಲೋಕಂಡೆ ಹಸಿರು ಬಣ್ಣದ ಕಾಟನ್ ಸೀರೆಗೆ ತಿಳಿ ಹಳದಿ ಬಣ್ಣದ ಸ್ಲೀವ್‌ಲೆಸ್ ಬ್ಲೌಸ್ ಮ್ಯಾಚಿಂಗ್ ಮಾಡಿದ್ದಾರೆ, ಇದು ನೋಡಲು ಬಹಳ ಆಕರ್ಷಕವಾಗಿ ಕಾಣುತ್ತಿದೆ.
(7 / 8)
ಹಿಂದಿ ಕಿರುತೆರೆ ನಟಿ ರುಬೀನಾ ಕಡು ಗುಲಾಬಿ ಬಣ್ಣದ ಕಾಟನ್ ಸೀರೆಗೆ ಸಿಂಪಲ್ ಆಗಿ ಕಪ್ಪು ಬಣ್ಣದ ಬ್ಲೌಸ್ ಧರಿಸಿದ್ದಾರೆ. ಸೀರೆ ನೋಡಲು ಬಹಳ ಸಿಂಪಲ್ ಆಗಿದ್ದರೂ ನೋಡಲು ಬಹಳ ಆಕರ್ಷಕವಾಗಿ ಕಾಣುತ್ತಿದೆ,
ಇತರ ಗ್ಯಾಲರಿಗಳು