Blouse Design: ಸೀರೆಗೆ ಬ್ಲೌಸ್ ಹೊಲಿಸೋಕೆ ಡಿಸೈನ್ಸ್ ನೋಡ್ತಾ ಇದೀರಾ, ಈ ಬ್ಯಾಕ್‌ಲೆಸ್‌ ವಿನ್ಯಾಸಗಳು ನಿಮಗೆ ಸಖತ್ ಇಷ್ಟವಾಗಬಹುದು ಗಮನಿಸಿ
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Blouse Design: ಸೀರೆಗೆ ಬ್ಲೌಸ್ ಹೊಲಿಸೋಕೆ ಡಿಸೈನ್ಸ್ ನೋಡ್ತಾ ಇದೀರಾ, ಈ ಬ್ಯಾಕ್‌ಲೆಸ್‌ ವಿನ್ಯಾಸಗಳು ನಿಮಗೆ ಸಖತ್ ಇಷ್ಟವಾಗಬಹುದು ಗಮನಿಸಿ

Blouse Design: ಸೀರೆಗೆ ಬ್ಲೌಸ್ ಹೊಲಿಸೋಕೆ ಡಿಸೈನ್ಸ್ ನೋಡ್ತಾ ಇದೀರಾ, ಈ ಬ್ಯಾಕ್‌ಲೆಸ್‌ ವಿನ್ಯಾಸಗಳು ನಿಮಗೆ ಸಖತ್ ಇಷ್ಟವಾಗಬಹುದು ಗಮನಿಸಿ

ಮದುವೆ, ಗೃಹಪ್ರವೇಶದಂತಹ ಶುಭಕಾರ್ಯಗಳಲ್ಲಿ ಹೆಣ್ಣುಮಕ್ಕಳು ಸೀರೆ ಉಟ್ಟು ಅಲಂಕರಿಸಿಕೊಳ್ಳುತ್ತಾರೆ. ಇದೀಗ ಉತ್ತರಾಯಣ ಆರಂಭವಾಗಿದ್ದು, ಶುಭಕಾರ್ಯಗಳು ಶುರುವಾಗುತ್ತವೆ. ನೀವು ಸೀರೆ ಖರೀದಿಸಿದ್ದು, ಸೀರೆಗೆ ಹೊಂದುವ ಬ್ಲೌಸ್‌ ಡಿಸೈನ್ಸ್ ಹುಡುಕುತ್ತಿದ್ದರೆ ಈ ವಿನ್ಯಾಸಗಳು ನಿಮಗೆ ಇಷ್ಟವಾಗಬಹುದು ನೋಡಿ. ಇಲ್ಲಿವೆ ಲೇಟೆಸ್ಟ್ ಬ್ಲ್ಯಾಕ್‌ಲೆಸ್‌ ಬ್ಲೌಸ್ ಡಿಸೈನ್‌ಗಳು.

ಹೆಣ್ಣಿಗೆ ಸೀರೆ ಅಂದ ಎಂಬ ಮಾತಿದೆ, ಆದರೆ ಸೀರೆ ಎಂಥದ್ದೇ ಇರಲಿ ಅದಕ್ಕೆ ಸ್ಟೈಲಿಶ್ ಲುಕ್ ಬರಬೇಕು ಅಂದ್ರೆ ಬ್ಲೌಸ್ ಯಾವ ರೀತಿ ಹೊಲಿಸುತ್ತೀರಿ ಅನ್ನೋದು ಮುಖ್ಯವಾಗುತ್ತದೆ. ಸೀರೆಯ ಅಂದ ಹೆಚ್ಚೋದು ಬ್ಲೌಸ್ ಡಿಸೈನ್‌ನಿಂದಲೇ. ಸ್ಟೈಲಿಶ್ ಆಗಿ ಕುಪ್ಪಸ ಹೊಲಿಸುವುದರಿಂದ ಅತ್ಯಂತ ಸರಳ ಸೀರೆಯು ಐಷಾರಾಮಿಯಂತೆ ಕಾಣಿಸುತ್ತೆ. ನಿಮ್ಮನೇಲಿ ವಿಶೇಷ ಕಾರ್ಯಕ್ರಮಗಳಿದ್ದು, ಬ್ಲೌಸ್ ಡಿಸೈನ್ ಏನಪ್ಪಾ ಮಾಡ್ಲಿ ಅಂತಿದ್ರೆ ಈ ಡಿಸೈನ್‌ಗಳ ಮೇಲೆ ಗಮನ ಹರಿಸಿ. ಈ ಬ್ಯಾಕ್‌ಲೆಸ್ ಡಿಸೈನ್‌ಗಳು ಲೇಟೆಸ್ಟ್ ಹಾಗೂ ಟ್ರೆಂಡಿ ಆಗಿವೆ. 
icon

(1 / 10)

(Instagram)

ಡಬಲ್ ಡೋರಿ ಡಿಸೈನ್‌: ಡೋರಿ ಡಿಸೈನ್‌ನ ಬ್ಲೌಸ್ ಇತ್ತೀಚೆಗೆ ಸಾಮಾನ್ಯವಾಗಿದೆ. ಆದರೆ ಡಬಲ್ ಡೋರಿ ಡಿಸೈನ್ ಖಂಡಿತ ನಿಮಗೆ ಇಷ್ಟವಾಗುತ್ತದೆ. ಬ್ಯಾಕ್‌ಲೆಸ್‌ ಬ್ಲೌಸ್ ಡಿಸೈನ್ ಹುಡುಕುತ್ತಿರುವವರು ಈ ಡಿಸೈನ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. ಇದು ಸಾದಾ ಸೀರೆ ಅಥವಾ ರೇಷ್ಮೆ ಸೀರೆ ಎಲ್ಲದ್ದಕ್ಕೂ ಹೊಂದುತ್ತದೆ. 
icon

(2 / 10)

ಹೂವಿನ ಆಕಾರದ ಬ್ಲೌಸ್ ಡಿಸೈನ್‌: ಈ ವಿನ್ಯಾಸವು ಎಲ್ಲಾ ರೀತಿಯ ಸೀರೆಗೂ ಸೂಕ್ತವಾಗಿದೆ. ಇದು ನೋಡಲು ತುಂಬಾ ಸುಂದರವಾಗಿ, ವಿಶಿಷ್ಟವಾಗಿದೆ. ಹಿಂಭಾಗದಲ್ಲಿ ಸುಂದರವಾದ ಹೂವಿನ ಕಲಾಕೃತಿಯನ್ನು ಮೂಡಿಸುವ ಕಾರಣ ಇದು ಸಖತ್ ಡಿಫ್ರೆಂಟ್ ಆಗಿ ಕಾಣಿಸುತ್ತದೆ. 
icon

(3 / 10)

ಬ್ಲೌಸ್ ಪೀಸ್‌ನಲ್ಲಿ ಪಾರದರ್ಶಕ ಲೇಸ್ ಅಥವಾ ಅದಕ್ಕೆ ಹೊಂದಿಕೆಯಾಗುವ ನೆಟ್ ಬಟ್ಟೆಯನ್ನು ಬಳಸಿ ನೀವು ಈ ಡಿಸೈನ್ ಮಾಡಬಹುದು. ನಿಮಗೆ ಫುಲ್‌ ಬ್ಯಾಕ್‌ಲೆಸ್ ಡಿಸೈನ್ ಬೇಡ ಅಂತಿದ್ದರೆ ನೀವು ಈ ಡಿಸೈನ್‌ ಅನ್ನು ಆಯ್ಕೆ ಮಾಡಿಕೊಳ್ಳಬಹುದು. 
icon

(4 / 10)

ರಿಬ್ಬನ್ ಆಕಾರದ ಬ್ಲೌಸ್ ವಿನ್ಯಾಸ: ನೀವು ಬ್ಲೌಸ್‌ನ ಹಿಂಭಾಗಕ್ಕೂ ಈ ರಿಬ್ಬನ್ ಆಕಾರದ ಬ್ಲೌಸ್ ವಿನ್ಯಾಸವನ್ನು ಆಯ್ಕೆ ಮಾಡಬಹುದು. V-ಆಕಾರದ ಬ್ಲೌಸ್‌ಗೆ ಹುಕ್‌ ಮೇಲೆ ರಿಬ್ಬನ್ ಬಳಸಿ ತುಂಬಾ ಸೊಗಸಾದ ಡಿಸೈನ್ ಮಾಡಲಾಗಿದೆ. ಈ ವಿನ್ಯಾಸವು ದಿನನಿತ್ಯದ ಉಡುಗೆಗೆ ಹಾಗೂ ಕಾಟನ್‌ ಸೀರೆಗಳಿಗೆ ಹೇಳಿ ಮಾಡಿಸಿದಂತಿದೆ. ಫ್ಯಾನ್ಸಿ ಸೀರೆಗೂ ಈ ಡಿಸೈನ್ ತುಂಬಾನೇ ಹೊಂದುತ್ತದೆ.
icon

(5 / 10)

ಈ ವಿಶಿಷ್ಟ ಬ್ಲೌಸ್ ಬ್ಯಾಕ್ ವಿನ್ಯಾಸವು ತುಂಬಾ ಸ್ಟೈಲಿಶ್ ಆಗಿದೆ. ಇದು ಕೆಳಭಾಗದಲ್ಲಿ U ಆಕಾರದ ಕಂಠರೇಖೆಯ ವಿನ್ಯಾಸವನ್ನು ಹೊಂದಿದ್ದು, ನೋಟವನ್ನು ಹೆಚ್ಚು ಸೊಗಸಾದ ಮತ್ತು ವಿಶಿಷ್ಟವಾಗಿಸಲು ಡಬಲ್ ಸ್ಟ್ರಿಂಗ್ ಅನ್ನು ಸೇರಿಸಲಾಗಿದೆ. ನೀವು ಈ ರೀತಿಯ ವಿನ್ಯಾಸವನ್ನು ಬಹುತೇಕ ಎಲ್ಲಾ ರೀತಿಯ ಸೀರೆಗಳೊಂದಿಗೆ ಜೋಡಿಸಬಹುದು. ಇದು ಲೇಟೆಸ್ಟ್ ಹಾಗೂ ಟ್ರೆಂಡಿ ಆಗಿ ಕಾಣಿಸುವುದರಲ್ಲಿ ಎರಡು ಮಾತಿಲ್ಲ. 
icon

(6 / 10)

ಓವಲ್ ಆಕಾರದ ಬ್ಲೌಸ್ ಡಿಸೈನ್‌: ಬ್ಲೌಸ್‌ನ ಹಿಂಭಾಗಕ್ಕೆ ಈ ಅಂಡಾಕಾರದ ವಿನ್ಯಾಸವು ಇತ್ತೀಚಿನ ದಿನಗಳಲ್ಲಿ ತುಂಬಾ ಟ್ರೆಂಡ್‌ನಲ್ಲಿದೆ. ಎರಡು ದಾರಗಳನ್ನು ಬಳಸಿ ಬ್ಲೌಸ್‌ನ ಸುಂದರವಾದ ಹಿಂಭಾಗದ ವಿನ್ಯಾಸವನ್ನು ಮಾಡಲಾಗಿದೆ. ಅದನ್ನು ಹೆಚ್ಚು ಸ್ಟೈಲಿಶ್ ಮಾಡಲು ನೀವು ಅದಕ್ಕೆ ಹೊಂದುವ ಪೆಂಡೆಂಟ್‌ಗಳು ಮತ್ತು ಮಣಿಗಳನ್ನು ಸೇರಿಸಬಹುದು
icon

(7 / 10)

ಈ ವಿನ್ಯಾಸವು ತುಂಬಾ ಟ್ರೆಂಡಿ ಮತ್ತು ಸ್ಟೈಲಿಶ್ ಆಗಿದೆ. ನೀವು ಸರಳವಾದ ಸ್ಟ್ರಿಂಗ್ ಮತ್ತು ಪೆಂಡೆಂಟ್ ಬ್ಲೌಸ್ ವಿನ್ಯಾಸಗಳಿಂದ ಬೇಸರಗೊಂಡಿದ್ದರೆ ಮತ್ತು ಹೊಸದನ್ನು ಪ್ರಯತ್ನಿಸಲು ಬಯಸಿದರೆ, ಈ ವಿನ್ಯಾಸವು ಅತ್ಯುತ್ತಮವಾಗಿದೆ. ಇದು ಎಲ್ಲಾ ರೀತಿಯ ಸೀರೆಗಳಿಗೂ ಚೆನ್ನಾಗಿ ಹೊಂದಿಕೊಳ್ಳುತ್ತದೆ.
icon

(8 / 10)

ಫ್ರಿಲ್ ತೋಳುಗಳ ಬ್ಲೌಸ್ ವಿನ್ಯಾಸ: ನೀವು ಪಾರ್ಟಿ ಅಥವಾ ವಿಶೇಷ ಸಂದರ್ಭಕ್ಕಾಗಿ ಸೀರೆಯನ್ನು ಸಿದ್ಧಪಡಿಸುತ್ತಿದ್ದರೆ, ಈ ರೀತಿಯ ಟ್ರೆಂಡಿ ಫ್ರಿಲ್ ಸ್ಲೀವ್ ಬ್ಲೌಸ್ ವಿನ್ಯಾಸವನ್ನು ಹೊಲಿಯಬಹುದು. ಇದರ ಆಳವಾದ ನೆಕ್ ವಿನ್ಯಾಸವು ತುಂಬಾ ಫ್ಯಾಶನೇಬಲ್‌ ಆಗಿದೆ. ಈ ರೀತಿಯ ಲುಕ್ ಹುಡುಗಿಯರಿಗೆ ಉತ್ತಮವಾಗಿರುತ್ತದೆ.
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(10 / 10)

ಇತರ ಗ್ಯಾಲರಿಗಳು