ಸಿಂಪಲ್ ಸೀರೆಗೆ ಸಖತ್ ಲುಕ್ ನೀಡುವ ಟ್ರೆಂಡಿ ಬ್ಲೌಸ್ ಡಿಸೈನ್ ಮಾಡಿಸಬೇಕಾ, ಈ ಪ್ಯಾಟರ್ನ್‌ಗಳು ಖಂಡಿತ ನಿಮಗೆ ಇಷ್ಟವಾಗುತ್ತೆ ನೋಡಿ
ಸೀರೆ ಸಿಂಪಲ್ ಆಗಿದ್ರೂ ಬ್ಲೌಸ್ ಡಿಸೈನ್ ಗ್ರ್ಯಾಂಡ್ ಆಗಿರಬೇಕು, ಸಖತ್ ಲುಕ್ ನೀಡುವಂತಿರಬೇಕು ಅಂತ ನೀವು ಅಂದುಕೊಳ್ಳುತ್ತಿದ್ದರೆ ಈ ಪ್ಯಾರ್ಟನ್ ಗಮನಿಸಿ. ಇಲ್ಲಿರುವ ಬ್ಲೌಸ್ ಡಿಸೈನ್‌ಗಳು ಖಂಡಿತ ನಿಮಗೆ ಇಷ್ಟವಾಗುತ್ತೆ. ಸರಳ ಸೀರೆಗೂ ಗ್ರ್ಯಾಂಡ್ ಲುಕ್ ನೀಡುವಂತೆ ಮಾಡುವ ಟ್ರೆಂಡಿ ವಿನ್ಯಾಸಗಳಿವು.
(1 / 9)
ಸೀರೆ ಎಷ್ಟೇ ಸುಂದರವಾಗಿದ್ರೂ ಬ್ಲೌಸ್ ಡಿಸೈನ್ ಸಿಂಪಲ್ ಆಗಿ, ನೀರಸವಾಗಿದ್ರೆ ಸೀರೆಯ ಲುಕ್ ಡಲ್ ಆಗುತ್ತೆ. ಹಾಗಾಗಿ ಬ್ಲೌಸ್ ಹೊಲಿಸುವಾಗ ಸೀರೆ ಡಿಸೈನ್ ಬಗ್ಗೆ ಗಮನ ಹರಿಸುವುದು ಮುಖ್ಯವಾಗುತ್ತದೆ. ಸೀರೆಗೆ ಬ್ಲೌಸ್ ಹೊಲಿಸಬೇಕು ಅಂತಿದ್ರೆ ಇತ್ತೀಚಿನ ಟ್ರೆಂಡ್ ಗಮನಿಸಿ. ಇಲ್ಲಿರುವ ಪ್ಯಾರ್ಟನ್‌ಗಳು ನಿಮ್ಮ ಸೀರೆಗೆ ಸಖತ್ ಟ್ರೆಂಡಿ ಲುಕ್ ಕೊಡೋದು ಖಂಡಿತ.
(2 / 9)
ನಿಮ್ಮದು ಸರಳ ಸೀರೆಯಾಗಿರಲಿ, ದುಬಾರಿ ರೇಷ್ಮೆ ಸೀರೆಯಾಗಿರಲಿ ಈ ರೀತಿ ಬ್ಯಾಕ್ ಡಿಸೈನ್ ಮಾಡಿಸಿದ್ರೆ ಸೀರೆಯ ನೋಟವೇ ಬದಲಾಗುತ್ತದೆ. ಕೈಗಳ ತುದಿಗೆ ಇರಿಸುವ ಪ್ಯಾರ್ಟನ್ ಅನ್ನೇ ಹಿಂಭಾಗದಲ್ಲೂ ಡಿಸೈನ್ ರೂಪದಲ್ಲಿ ಇರಿಸಿ. ಈ ವಿನ್ಯಾಸವು ಸಾಕಷ್ಟು ವಿಶಿಷ್ಟವಾಗಿ ಮತ್ತು ಸೊಗಸಾಗಿ ಕಾಣುತ್ತದೆ. ಇದು ಬನಾರಸಿ, ರೇಷ್ಮೆ ಸೀರೆಗಳಿಗೆ ಸಖತ್ ಹೊಂದುತ್ತದೆ. ಡೀಪ್ ನೆಕ್ ಡಿಸೈನ್ ಇನ್ನಷ್ಟು ಸ್ಟೈಲಿಷ್ ಆಗಿ ಕಾಣುವಂತೆ ಮಾಡುತ್ತದೆ.
(3 / 9)
ಓಪನ್ ಬ್ಯಾಕ್ ಪ್ಯಾರ್ಟನ್ ಬಯಸುವವರಿಗೆ ಈ ಡಿಸೈನ್ ಹೇಳಿ ಮಾಡಿಸಿದಂತಿದೆ. ಇದು ಲೇಟೆಸ್ಟ್ ಹಾಗೂ ಟ್ರೆಂಡಿ ಆಗಿ ಕಾಣಿಸುತ್ತದೆ. ವಿನ್ಯಾಸವು ನಿಮ್ಮ ಪಾರ್ಟಿ ವೇರ್, ಮಿನುಗುವ, ಹೊಳೆಯುವ ಸೀರೆಗಳು ಮತ್ತು ಸೀಕ್ವಿನ್‌ಗಳು ಮತ್ತು ಜರಿ ವರ್ಕ್‌ಗೆ ಸೂಕ್ತವಾಗಿದೆ. ದಿನನಿತ್ಯದ ಉಡುಗೆಗಾಗಿ ಸರಳ ಸೀರೆಗಳಿಗೆ ವಿಶೇಷ ಮೆರುಗು ನೀಡಲು ನೀವು ಈ ಪ್ಯಾರ್ಟನ್ ಆಯ್ಕೆ ಮಾಡಿಕೊಳ್ಳಬಹುದು.
(4 / 9)
ಬ್ಯಾಕ್‌ಲೆಸ್ ಬ್ಲೌಸ್‌ಗಳು ಯಾವಾಗಲೂ ಟ್ರೆಂಡ್‌ನಲ್ಲಿ ಇರುತ್ತವೆ. ಇತ್ತೀಚೆಗಂತೂ ಇದು ಟ್ರೆಂಡ್ ಸೃಷ್ಟಿಸಿರುವುದು ಸುಳ್ಳಲ್ಲ. ನೀವು ಬ್ಯಾಕ್‌ಲೆಸ್ ಬ್ಲೌಸ್‌ಗೆ ಡಬಲ್ ಸ್ಟ್ರಿಂಗ್ ಇರಿಸಬಹುದು. ಚಿತ್ರದಲ್ಲಿ ತೋರಿಸಿರುವಂತೆ ಡಬ್ಬಲ್ ಡೋರಿ ಇರಿಸುವ ಮೂಲಕ ಬ್ಲೌಸ್‌ಗೆ ಸಖತ್ ಟ್ರೆಂಡಿ ಲುಕ್ ನೀಡಬಹುದು.
(5 / 9)
ಹಾರ್ಟ್ ಶೇಪ್ ಇರುವ ಈ ಡಿಸೈನ್ ಪ್ರೇಮಿಗಳ ದಿನದ ಸಂದರ್ಭ ತೊಡಲು ಹೇಳಿ ಮಾಡಿಸಿದಂತಿದೆ. ಇನ್ನೇನು ಪ್ರೇಮಿಗಳ ದಿನ ಹತ್ತಿರ ಬರುತ್ತಿದ್ದು ಪ್ರೇಮಿಗಳ ದಿನದಂದು ಸೀರೆ ಉಡುವ ಪ್ಲಾನ್ ಇದ್ದವರು ಈ ಸೀರೆ ಬ್ಲೌಸ್ ಡಿಸೈನ್ ಮಾಡಿಸಬಹುದು. ವಿಶೇಷ ಸಂದರ್ಭಗಳಲ್ಲಿ ಉಡಲು ಈ ಬ್ಲೌಸ್ ಡಿಸೈನ್ ಹೇಳಿ ಮಾಡಿಸಿದಂತಿದೆ. ಇದು ಸ್ಟೈಲಿಶ್ ಆಗಿಯೂ, ಟ್ರೆಂಡಿ ಆಗಿಯೂ ಕಾಣಿಸುತ್ತದೆ.
(6 / 9)
ಈ ಬ್ಲೌಸ್ ಡಿಸೈನ್ ಟ್ರೆಂಡಿ ಮಾತ್ರವಲ್ಲ, ಬಹಳ ಅಪರೂಪದ್ದು ಕೂಡ ಹೌದು. ಇದು ಲೇಟೆಸ್ಟ್ ಡಿಸೈನ್, ಮಾತ್ರವಲ್ಲ ಖಂಡಿತ ನೋಡಿದ ಕೂಡಲೇ ಎಲ್ಲರಿಗೂ ಇಷ್ಟವಾಗುವಂತಿದೆ. ಫ್ಯಾನಿ ಸೀರೆಗಳಿಗೆ ಹೆಚ್ಚು ಹೊಂದುವಂತಿರುವ ಈ ಡಿಸೈನ್ ಇತರ ರೇಷ್ಮೆ ಸೀರೆಗಳಿಗೂ ಹೊಂದುತ್ತದೆ.
(7 / 9)
ನೀವು ಟ್ರೆಂಡಿ ಮತ್ತು ಸ್ಟೈಲಿಶ್ ಆಗಿ ಕಾಣುವ ಮತ್ತು ಧರಿಸಲು ಆರಾಮದಾಯಕ ಎನ್ನಿಸುವ ವಿನ್ಯಾಸವನ್ನು ಹುಡುಕುತ್ತಿದ್ದರೆ, ಈ ವಿನ್ಯಾಸವು ನಿಮಗೆ ಸೂಕ್ತ ಎನ್ನಿಸಬಹುದು. ದಾರವನ್ನು ಕ್ರಿಸ್-ಕ್ರಾಸ್ ಆಕಾರದಲ್ಲಿ ಜೋಡಿಸುವ ಮೂಲಕ ಈ ವಿನ್ಯಾಸವನ್ನು ಬಹಳ ಸುಂದರವಾಗಿ ಡಿಸೈನ್ ಮಾಡಲಾಗಿದೆ.
(8 / 9)
ನೀವು ಬ್ಲೌಸ್‌ನ ಹಿಂಭಾಗಕ್ಕೆ ಆಳವಾದ V ಕಂಠರೇಖೆಯನ್ನು ಸಹ ವಿನ್ಯಾಸಗೊಳಿಸಬಹುದು. ಇತ್ತೀಚಿನ ದಿನಗಳಲ್ಲಿ ಇದು ತುಂಬಾ ಟ್ರೆಂಡ್ ಆಗುತ್ತಿದೆ ಮತ್ತು ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ. ಇದು ಟ್ರೆಂಡಿ ಹಾಗೂ ಲೇಟೆಸ್ಟ್ ಆಗಿರುವ ಡಿಸೈನ್ ಕೂಡ ಹೌದು.
ಇತರ ಗ್ಯಾಲರಿಗಳು