ಚೂಡಿದಾರ್, ಕುರ್ತಾ ಜೊತೆ ಧರಿಸಲು ಸ್ಟೈಲಿಶ್‌ ಪ್ಯಾಂಟ್‌ ನೋಡ್ತಾ ಇದ್ರೆ ಗಮನಿಸಿ; ಇಲ್ಲಿವೆ ನೋಡಿ ಲೇಟೆಸ್ಟ್ ಡಿಸೈನ್‌ಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  ಚೂಡಿದಾರ್, ಕುರ್ತಾ ಜೊತೆ ಧರಿಸಲು ಸ್ಟೈಲಿಶ್‌ ಪ್ಯಾಂಟ್‌ ನೋಡ್ತಾ ಇದ್ರೆ ಗಮನಿಸಿ; ಇಲ್ಲಿವೆ ನೋಡಿ ಲೇಟೆಸ್ಟ್ ಡಿಸೈನ್‌ಗಳು

ಚೂಡಿದಾರ್, ಕುರ್ತಾ ಜೊತೆ ಧರಿಸಲು ಸ್ಟೈಲಿಶ್‌ ಪ್ಯಾಂಟ್‌ ನೋಡ್ತಾ ಇದ್ರೆ ಗಮನಿಸಿ; ಇಲ್ಲಿವೆ ನೋಡಿ ಲೇಟೆಸ್ಟ್ ಡಿಸೈನ್‌ಗಳು

ಚೂಡಿದಾರ್ ಅಥವಾ ಕುರ್ತಾ ಟಾಪ್ ಜೊತೆ ಧರಿಸುವ ಪ್ಯಾಂಟ್ ಟ್ರೆಂಡಿ ಆಗಿರಬೇಕು ಅಂದುಕೊಳ್ಳುತ್ತಿದ್ದೀರಾ, ಇತ್ತೀಚಿನ ದಿನಗಳಲ್ಲಿ ಸಾದಾ ಪ್ಯಾಂಟ್‌ಗಿಂತ ಪಾದದ ಬಳಿ ಡಿಸೈನ್ ಇರುವ ಪ್ಯಾಂಟ್‌ಗಳೇ ಹೆಚ್ಚು ಟ್ರೆಂಡ್ ಸೃಷ್ಟಿಸುತ್ತಿವೆ. ಇಲ್ಲಿರುವ ಮೊಹ್ರಿ ವಿನ್ಯಾಸಗಳು ನಿಮ್ಮ ಪ್ಯಾಂಟ್ ಮತ್ತು ಪಲಾಝೊಗೆ ವಿಭಿನ್ನ ಲುಕ್ ನೀಡುತ್ತವೆ.

ಚೂಡಿದಾರ್‌ ಅಥವಾ ಕುರ್ತಾ ಟಾಪ್‌ ಜೊತೆ ಧರಿಸುವ ಪ್ಯಾಂಟ್‌ ಕೂಡ ಸ್ಟೈಲಿಶ್ ಆಗಿದ್ರೆ ಚೆಂದ. ಇದು ಇತ್ತೀಚೆಗೆ ಟ್ರೆಂಡ್ ಕೂಡ ಹೌದು. ಪಲಾಜೋ ಅಥವಾ ಯಾವುದೇ ಪ್ಯಾಂಟ್ ಇರಲಿ ಸಾಧಾರಣವಾಗಿರುವುದಕ್ಕಿಂತ ಇದಕ್ಕೆ ಸ್ಟೈಲಿಶ್ ಟಚ್ ನೀಡುವ ಮೂಲಕ ವಿಭಿನ್ನವಾಗಿ ಕಾಣುವಂತೆ ಮಾಡಬಹುದು. ಇಲ್ಲಿರುವ ಫ್ಯಾಷನ್ ವಿನ್ಯಾಸಗಳನ್ನು ನೀವೂ ಗಮನಿಸಿ. ಮುಂದಿನ ಬಾರಿ ಚೂಡಿದಾರ್ ಅಥವಾ ಯಾವುದೇ ಡ್ರೆಸ್‌ಗೆ ಪ್ಯಾಂಟ್ ಹೊಲಿಸುತ್ತಿದ್ದರೆ ಈ ಡಿಸೈನ್ ಮಾಡಿಸಿ ನೋಡಿ. 
icon

(1 / 8)

(Instagram)

ಸಿಂಪಲ್ ಕಟ್ ವರ್ಕ್ ಮೊಹ್ರಿನೀವು ಸೂಟ್‌, ಚೂಡಿದಾರ್‌, ಕುರ್ತಾಗೆ ಪ್ಯಾಂಟ್ ಹೊಲಿಯುತ್ತಿದ್ದರೆ, ಸರಳ ವಿನ್ಯಾಸದ ಬದಲು ಫ್ಯಾನ್ಸಿ ಕಟ್ ವರ್ಕ್ ಡಿಸೈನ್‌ ವಿನ್ಯಾಸಗೊಳಿಸಬಹುದು. ಈ ರೀತಿಯ ಅಲಂಕಾರಿಕ ವಿನ್ಯಾಸವು ದೈನಂದಿನ ಉಡುಗೆ ಸೂಟ್‌ಗಳಿಗೆ ಪರಿಪೂರ್ಣವಾಗಿರುತ್ತದೆ. ಇದು ತುಂಬಾ ಸುಂದರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.
icon

(2 / 8)

ಸಿಂಪಲ್ ಕಟ್ ವರ್ಕ್ ಮೊಹ್ರಿ
ನೀವು ಸೂಟ್‌, ಚೂಡಿದಾರ್‌, ಕುರ್ತಾಗೆ ಪ್ಯಾಂಟ್ ಹೊಲಿಯುತ್ತಿದ್ದರೆ, ಸರಳ ವಿನ್ಯಾಸದ ಬದಲು ಫ್ಯಾನ್ಸಿ ಕಟ್ ವರ್ಕ್ ಡಿಸೈನ್‌ ವಿನ್ಯಾಸಗೊಳಿಸಬಹುದು. ಈ ರೀತಿಯ ಅಲಂಕಾರಿಕ ವಿನ್ಯಾಸವು ದೈನಂದಿನ ಉಡುಗೆ ಸೂಟ್‌ಗಳಿಗೆ ಪರಿಪೂರ್ಣವಾಗಿರುತ್ತದೆ. ಇದು ತುಂಬಾ ಸುಂದರವಾಗಿ ಮತ್ತು ಸ್ಟೈಲಿಶ್ ಆಗಿ ಕಾಣುತ್ತದೆ.

(Instagram)

ಜಾಲರಿ ಇರುವ ವಿನ್ಯಾಸ ನೀವು ತುಂಬಾ ಫ್ಯಾನ್ಸಿ ಮತ್ತು ಸ್ಟೈಲಿಶ್ ಪ್ಯಾಂಟ್ ವಿನ್ಯಾಸವನ್ನು ಹುಡುಕುತ್ತಿದ್ದರೆ ಈ ಜಾಲರಿ ಆಕಾರದ ಪ್ಯಾಂಟ್ ವಿನ್ಯಾಸ ನಿಮಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತದೆ. ಇದು ಇತ್ತೀಚೆಗೆ ಟ್ರೆಂಡ್‌ನಲ್ಲಿದೆ. 
icon

(3 / 8)

ಜಾಲರಿ ಇರುವ ವಿನ್ಯಾಸ 
ನೀವು ತುಂಬಾ ಫ್ಯಾನ್ಸಿ ಮತ್ತು ಸ್ಟೈಲಿಶ್ ಪ್ಯಾಂಟ್ ವಿನ್ಯಾಸವನ್ನು ಹುಡುಕುತ್ತಿದ್ದರೆ ಈ ಜಾಲರಿ ಆಕಾರದ ಪ್ಯಾಂಟ್ ವಿನ್ಯಾಸ ನಿಮಗೆ ತುಂಬಾ ಚೆನ್ನಾಗಿ ಹೊಂದಿಕೆಯಾಗುತ್ತದೆ. ಇದು ಇತ್ತೀಚೆಗೆ ಟ್ರೆಂಡ್‌ನಲ್ಲಿದೆ. 

(Instagram)

ಪ್ರಿಲ್ ಇರುವ ಪಲಾಜೊ ಪಲಾಜೊ ಪ್ಯಾಂಟ್‌ಗಳು ಕೇವಲ ಕುರ್ತಾ, ಚೂಡಿದಾರ್‌ಗೆ ಮಾತ್ರವಲ್ಲ ಶಾರ್ಟ್ ಟಾಪ್‌, ಕ್ರಾಪ್‌ ಟಾಪ್‌ಗೂ ಹೊಂದುತ್ತದೆ. ನೀವು ಈ ಪ್ಯಾಂಟ್ ಸ್ಟೈಲಿಶ್ ಆಗಿ ಕಾಣುವಂತೆ ಡಿಸೈನ್ ಮಾಡಬೇಕು ಅಂತಿದ್ದರೆ ಹೊಂದಿಕೆಯಾಗುವ ಶೀರ್ ಲೇಸ್ ಬಳಸಿ ಸುಂದರವಾದ ಹೂವಿನ ಮಾದರಿ ಡಿಸೈನ್ ಮಾಡಿಸಬಹುದು. ಈ ರೀತಿಯ ಮೊಹ್ರಿ ವಿನ್ಯಾಸವು ನಿಮ್ಮ ಪಲಾಝೊಗೆ ತುಂಬಾ ಟ್ರೆಂಡಿ ಲುಕ್ ನೀಡುತ್ತದೆ.
icon

(4 / 8)

ಪ್ರಿಲ್ ಇರುವ ಪಲಾಜೊ 
ಪಲಾಜೊ ಪ್ಯಾಂಟ್‌ಗಳು ಕೇವಲ ಕುರ್ತಾ, ಚೂಡಿದಾರ್‌ಗೆ ಮಾತ್ರವಲ್ಲ ಶಾರ್ಟ್ ಟಾಪ್‌, ಕ್ರಾಪ್‌ ಟಾಪ್‌ಗೂ ಹೊಂದುತ್ತದೆ. ನೀವು ಈ ಪ್ಯಾಂಟ್ ಸ್ಟೈಲಿಶ್ ಆಗಿ ಕಾಣುವಂತೆ ಡಿಸೈನ್ ಮಾಡಬೇಕು ಅಂತಿದ್ದರೆ ಹೊಂದಿಕೆಯಾಗುವ ಶೀರ್ ಲೇಸ್ ಬಳಸಿ ಸುಂದರವಾದ ಹೂವಿನ ಮಾದರಿ ಡಿಸೈನ್ ಮಾಡಿಸಬಹುದು. ಈ ರೀತಿಯ ಮೊಹ್ರಿ ವಿನ್ಯಾಸವು ನಿಮ್ಮ ಪಲಾಝೊಗೆ ತುಂಬಾ ಟ್ರೆಂಡಿ ಲುಕ್ ನೀಡುತ್ತದೆ.

(Instagram)

ಹೆಚ್ಚು ಆಡಂಬರದ ಡಿಸೈನ್ ಬೇಡ ಅಂತಿದ್ದರೆ ನಿಮ್ಮ ಪ್ಯಾಂಟ್‌ಗೆ ಈ ಸರಳ ವಿನ್ಯಾಸಗಳನ್ನು ಮೂಡಿಸಬಹುದು. ಈ ಸಣ್ಣ ಕಟ್ ವರ್ಕ್ ನಿಂದ ಪ್ಯಾಂಟ್ ಹೆಚ್ಚು ಫ್ಯಾನ್ಸಿಯಾಗಿ ಕಾಣುತ್ತದೆ. ಇದು ದೈನಂದಿನ ಉಡುಗೆ ಸೂಟ್‌ಗಳಿಗೆ ಸೂಕ್ತವಾಗಿದೆ.
icon

(5 / 8)

ಹೆಚ್ಚು ಆಡಂಬರದ ಡಿಸೈನ್ ಬೇಡ ಅಂತಿದ್ದರೆ ನಿಮ್ಮ ಪ್ಯಾಂಟ್‌ಗೆ ಈ ಸರಳ ವಿನ್ಯಾಸಗಳನ್ನು ಮೂಡಿಸಬಹುದು. ಈ ಸಣ್ಣ ಕಟ್ ವರ್ಕ್ ನಿಂದ ಪ್ಯಾಂಟ್ ಹೆಚ್ಚು ಫ್ಯಾನ್ಸಿಯಾಗಿ ಕಾಣುತ್ತದೆ. ಇದು ದೈನಂದಿನ ಉಡುಗೆ ಸೂಟ್‌ಗಳಿಗೆ ಸೂಕ್ತವಾಗಿದೆ.

(Instagram)

ಕುರ್ತಾ ಜೊತೆ ಧರಿಸುವಾಗ ಹಾಗೂ ಯಾವುದೇ ಪಲಾಜೋ ಪ್ಯಾಂಟ್‌ಗೆ ಈ ವಿನ್ಯಾಸ ಹೆಚ್ಚು ಹೊಂದಿಕೆಯಾಗುತ್ತದೆ. ಈ ರೀತಿಯ ನೆಟ್‌ ಡಿಸೈನ್ ಇತ್ತೀಚಿನ ಟ್ರೆಂಡ್ ಕೂಡ ಹೌದು.
icon

(6 / 8)

ಕುರ್ತಾ ಜೊತೆ ಧರಿಸುವಾಗ ಹಾಗೂ ಯಾವುದೇ ಪಲಾಜೋ ಪ್ಯಾಂಟ್‌ಗೆ ಈ ವಿನ್ಯಾಸ ಹೆಚ್ಚು ಹೊಂದಿಕೆಯಾಗುತ್ತದೆ. ಈ ರೀತಿಯ ನೆಟ್‌ ಡಿಸೈನ್ ಇತ್ತೀಚಿನ ಟ್ರೆಂಡ್ ಕೂಡ ಹೌದು.

(Instagram)

ಧೋತಿ ಆಕಾರದ ಪ್ಯಾಂಟ್‌ಗಳುಸೂಟ್‌ನೊಂದಿಗೆ ಧೋತಿ ಆಕಾರದ ಪ್ಯಾಂಟ್‌ಗಳು ಸಹ ಸಾಕಷ್ಟು ಟ್ರೆಂಡ್‌ನಲ್ಲಿವೆ. ಇವು ಇಂಡೋ-ವೆಸ್ಟರ್ನ್ ಲುಕ್‌ಗೆ ಸೂಕ್ತವಾಗಿವೆ. ನೀವು ಧೋತಿ ಶೈಲಿಯ ಪ್ಯಾಂಟ್‌ಗಳನ್ನು ಸಂಪೂರ್ಣವಾಗಿ ಧರಿಸಲು ಬಯಸದಿದ್ದರೆ, ಈ ಮೊಹ್ರಿ ವಿನ್ಯಾಸವನ್ನು ಮಾಡುವ ಮೂಲಕ ನೀವು ಇದೇ ರೀತಿಯ ವಿನ್ಯಾಸವನ್ನು ರಚಿಸಬಹುದು. 
icon

(7 / 8)

ಧೋತಿ ಆಕಾರದ ಪ್ಯಾಂಟ್‌ಗಳು
ಸೂಟ್‌ನೊಂದಿಗೆ ಧೋತಿ ಆಕಾರದ ಪ್ಯಾಂಟ್‌ಗಳು ಸಹ ಸಾಕಷ್ಟು ಟ್ರೆಂಡ್‌ನಲ್ಲಿವೆ. ಇವು ಇಂಡೋ-ವೆಸ್ಟರ್ನ್ ಲುಕ್‌ಗೆ ಸೂಕ್ತವಾಗಿವೆ. ನೀವು ಧೋತಿ ಶೈಲಿಯ ಪ್ಯಾಂಟ್‌ಗಳನ್ನು ಸಂಪೂರ್ಣವಾಗಿ ಧರಿಸಲು ಬಯಸದಿದ್ದರೆ, ಈ ಮೊಹ್ರಿ ವಿನ್ಯಾಸವನ್ನು ಮಾಡುವ ಮೂಲಕ ನೀವು ಇದೇ ರೀತಿಯ ವಿನ್ಯಾಸವನ್ನು ರಚಿಸಬಹುದು. 

(Instagram)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(8 / 8)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 

ಇತರ ಗ್ಯಾಲರಿಗಳು