Mehndi Design: ಭಾರತದಲ್ಲಿ ಸಖತ್ ಟ್ರೆಂಡಿಯಾಗಿರುವ ಮೆಹಂದಿ ವಿನ್ಯಾಸಗಳಿವು; ಅಂಗೈಗೆ ನೀಡುತ್ತೆ ರಾಯಲ್ ಟಚ್
ಮೆಹಂದಿಯು ಪ್ರತಿಯೊಬ್ಬರ ಕೈಗಳ ಸೌಂದರ್ಯವನ್ನು ಹೆಚ್ಚಿಸುತ್ತದೆ. ಶುಭ ಸಮಾರಂಭಗಳು, ಹಬ್ಬಗಳು ಸಮೀಪಿಸುತ್ತಿದ್ದಂತೆ ಹೆಣ್ಣಕ್ಕಳು ಕೈಗಳಿಗೆ ಮೆಹಂದಿ ಹಚ್ಚಿ ಸಂಭ್ರಮಿಸುತ್ತಾರೆ. ಇಲ್ಲಿದೆ ನೀವು ಇಷ್ಟಪಡಬಹುದಾದ ವಿನ್ಯಾಸಗಳು.
(1 / 10)
ಶುಭ ಸಮಾರಂಭಗಳು, ಹಬ್ಬಗಳು ಸಮೀಪಿಸುತ್ತಿದ್ದಂತೆ ಹೆಣ್ಣಕ್ಕಳು ಕೈಗಳಿಗೆ ಮೆಹಂದಿ ಹಚ್ಚಿ ಸಂಭ್ರಮಿಸುತ್ತಾರೆ. ವಿವಾಹ ಮಹೋತ್ಸವ ಇದ್ದರಂತೂ ಯಾವ ವಿನ್ಯಾಸದ ಮೆಹಂದಿ ಹಚ್ಚುವುದು ಎಂದು ತಲೆಕೆಡಿಸಿಕೊಳ್ಳುತ್ತಾರೆ. ನಿಮಗಾಗಿ ಇಲ್ಲಿ ಕೆಲವೊಂದು ವಿನ್ಯಾಸಗಳನ್ನು ನೀಡಲಾಗಿದೆ. ಖಂಡಿತ ಇವು ನಿಮಗೆ ಇಷ್ಟವಾಗಬಹುದು. ಭಾರತದಲ್ಲಿ ಸಖತ್ ಟ್ರೆಂಡಿಯಾಗಿರುವ ಮೆಹಂದಿ ವಿನ್ಯಾಸಗಳಿವು.
(Image Credit: simrah_arts Instagram Page)(2 / 10)
ಹಿಂಭಾಗದ ಕೈ ವಿನ್ಯಾಸಇತ್ತೀಚಿನ ದಿನಗಳಲ್ಲಿ ಎರಡೂ ಕೈಗಳಿಗೆ ಒಂದೇ ರೀತಿಯ ಮೆಹಂದಿ ಹಚ್ಚಿಕೊಳ್ಳುವ ಪ್ರವೃತ್ತಿ ಇದೆ. ನೀವು ಎರಡು ವಿಭಿನ್ನ ವಿನ್ಯಾಸಗಳನ್ನು ಆಯ್ಕೆ ಮಾಡಬಹುದು. ಈ ರೀತಿಯ ವಿನ್ಯಾಸದ ಮೆಹಂದಿ ಸಾಕಷ್ಟು ಟ್ರೆಂಡಿಂಗ್ ಆಗಿದೆ.
(3 / 10)
ಹೂವು ಮತ್ತು ಎಲೆಯ ವಿನ್ಯಾಸಈ ಹೂವು ಮತ್ತು ಎಲೆಯ ವಿನ್ಯಾಸವು ಹಿಂಭಾಗದ ಕೈಗೆ ಸೂಕ್ತವಾಗಿದೆ. ನಿಮಗೆ ಗೋರಂಟಿ ಹಚ್ಚಲು ಅಷ್ಟಾಗಿ ಬರುವುದಿಲ್ಲವಾದರೆ ಈ ಶೈಲಿಯನ್ನು ಆಯ್ಕೆ ಮಾಡಬಹುದು. ಇದನ್ನು ಹಚ್ಚುವುವುದು ಸುಲಭ.
(4 / 10)
ಮಿಶ್ರ ವಿನ್ಯಾಸಹೂವುಗಳು, ಎಲೆಗಳು, ಬಳ್ಳಿಗಳು ಮತ್ತು 3D ಯ ಸಂಯೋಜನೆಯಾದ ಈ ವಿನ್ಯಾಸವು ಮದುವೆಯಂತಹ ಕಾರ್ಯಕ್ರಮಗಳಿಗೆ ಉತ್ತಮವಾಗಿದೆ. ನಿಮ್ಮ ಮಣಿಕಟ್ಟಿನವರೆಗೂ ಮೆಹಂದಿ ಹಚ್ಚಿಕೊಳ್ಳಲು ಬಯಸಿದರೆ ಈ ವಿನ್ಯಾಸವನ್ನು ಪ್ರಯತ್ನಿಸಬಹುದು.
(5 / 10)
ಸರಳ ಆದರೆ ಗಂಭೀರ ವಿನ್ಯಾಸಈ ಮೆಹಂದಿ ವಿನ್ಯಾಸವು ತುಂಬಾ ಸರಳವಾಗಿದೆ ಆದರೆ ಗಂಭೀರವಾಗಿದೆ. ಇದು ಆಭರಣ ಶೈಲಿಯಂತಹ ನೋಟವನ್ನು ನೀಡುತ್ತಿದೆ. ಮೆಹಂದಿ ಹಚ್ಚಿ ಅದನ್ನು ತೊಳೆದ ನಂತರ ಇದು ತುಂಬಾ ಸುಂದರವಾಗಿ ಕಾಣುತ್ತದೆ.
(6 / 10)
ಆಭರಣ ಮಾದರಿ ಮೆಹಂದಿಇತ್ತೀಚಿನ ದಿನಗಳಲ್ಲಿ ಆಭರಣ ಮಾದರಿಯ ಮೆಹಂದಿ ಸಾಕಷ್ಟು ಟ್ರೆಂಡ್‌ನಲ್ಲಿದೆ. ಇದಕ್ಕೆ ಬಳೆಯಂತೆ ಕಾಣುವಂತೆ ವಿನ್ಯಾಸ ಮಾಡಲಾಗಿದೆ.
(7 / 10)
ವಧುವಿನ ಶೈಲಿಯ ಮೆಹಂದಿನಿಮ್ಮ ಮದುವೆ ಸಮಾರಂಭದಲ್ಲಿ ಅಥವಾ ನಿಮಗೆ ಹತ್ತಿರದ ಸಂಬಂಧಿಕರು ಆತ್ಮೀಯ ಸ್ನೇಹಿತೆಯ ಮದುವೆಗೆ ಮೆಹಂದಿ ಹಚ್ಚಲು ನೀವು ಬಯಸಿದರೆ, ಈ ವಿನ್ಯಾಸವನ್ನು ಹಚ್ಚಬಹುದು. ಹೂವಿನ ಗೊಂಚಲುಗಳಂತಿರುವ ಈ ವಿನ್ಯಾಸವು ತುಂಬಾ ಸುಂದರವಾಗಿ ಕಾಣುತ್ತವೆ.
(8 / 10)
ಮಣಿಕಟ್ಟಿನವರೆಗೆ 3D ಮೆಹಂದಿನಿಮ್ಮ ಮಣಿಕಟ್ಟಿನವರೆಗೂ 3D ವಿನ್ಯಾಸವನ್ನು ಹಚ್ಚಲು ಬಯಸಿದರೆ, ಇದು ಕೂಡ ಸುಲಭ ಮತ್ತು ಸುಂದರವಾದ ವಿನ್ಯಾಸವಾಗಿದೆ.
(9 / 10)
ಹೂವುಗಳಿಂದ ಅಲಂಕರಿಸಲ್ಪಟ್ಟಂತಿರುವ ವಿನ್ಯಾಸನೀವು ಹೂವುಗಳಿಂದ ಅಲಂಕರಿಸಲ್ಪಟ್ಟ ವಿನ್ಯಾಸವನ್ನು ಇಷ್ಟಪಟ್ಟರೆ ಈ ಡಿಸೈನ್ ಅನ್ನು ಆರಿಸಿಕೊಳ್ಳಬಹುದು. ಇದನ್ನು ರಚಿಸಿದಾಗ ತುಂಬಾ ಸುಂದರವಾಗಿ ಕಾಣುತ್ತದೆ. ಈ ವಿನ್ಯಾಸದ ಮೆಹಂದಿ ಕೂಡ ಟ್ರೆಂಡ್‌ನಲ್ಲಿದೆ.
ಇತರ ಗ್ಯಾಲರಿಗಳು











