ಬೇಸಿಗೆಯಲ್ಲಿ ಸೀರೆಗಳ ಸೌಂದರ್ಯ ಹೆಚ್ಚಿಸುತ್ತೆ ತೋಳಿಲ್ಲದ ರವಿಕೆ ಡಿಸೈನ್: ಇಲ್ಲಿವೆ 7 ಅದ್ಭುತ ವಿನ್ಯಾಸಗಳು
Sleeveless Blouse Design: ಸೀರೆಗೆ ತೋಳಿಲ್ಲದ ಕುಪ್ಪಸ ಬೇಸಿಗೆಯಲ್ಲಿ ತುಂಬಾ ಸುಂದರವಾಗಿ ಕಾಣುತ್ತದೆ. ನೀವು ಡಿಸೈನರ್ ಬ್ಲೌಸ್ ಮಾಡಿಸಿಕೊಳ್ಳುವ ಬಗ್ಗೆ ಯೋಚಿಸುತ್ತಿದ್ದರೆ, ಈ 7 ತೋಳಿಲ್ಲದ ಬ್ಲೌಸ್‌ಗಳ ಡಿಸೈನ್ ಪರಿಶೀಲಿಸಿ.
(1 / 9)
ತೋಳಿಲ್ಲದ ಕುಪ್ಪಸ ವಿನ್ಯಾಸ: ಬೇಸಿಗೆಯಲ್ಲಿ ನೀವು ಸೀರೆಯ ಜೊತೆಗೆ ತೋಳಿಲ್ಲದ ಕುಪ್ಪಸವನ್ನು ಧರಿಸಿದರೆ, ಸೆಖೆಗೂ ಒಳ್ಳೆಯದು ಹಾಗೂ ಸ್ಟೈಲಿಶ್ ಆಗಿಯೂ ಕಾಣುತ್ತದೆ. ಅಲ್ಲದೆ, ಇದು ಟ್ರೆಂಡಿಯಾಗಿಯೂ ಕಾಣುತ್ತದೆ. ಹತ್ತಿಯಿಂದ ಹಿಡಿದು ಶಿಫಾನ್‌ವರೆಗೆ ಯಾವುದೇ ಬಟ್ಟೆಯಿಂದ ತಯಾರಿಸಿದ ಈ ವಿಶೇಷವಾಗಿ ವಿನ್ಯಾಸಗೊಳಿಸಲಾದ ಕುಪ್ಪಸವನ್ನು ಧರಿಸುವುದರಿಂದ ನೋಡಲು ಬಹಳ ಆಕರ್ಷಕವಾಗಿ ಕಾಣುತ್ತದೆ. 7 ಸುಂದರವಾದ ತೋಳಿಲ್ಲದ ಬ್ಲೌಸ್ ವಿನ್ಯಾಸಗಳು ಇಲ್ಲಿವೆ.
(2 / 9)
ರಫಲ್ ಸ್ಲೀವ್ ಬ್ಲೌಸ್: ಬಹುತೇಕ ಪ್ರತಿಯೊಬ್ಬ ಮಹಿಳೆಯ ವಾರ್ಡ್ರೋಬ್‌ನಲ್ಲಿ ಗುಲಾಬಿ ಬಣ್ಣದ ಬಣ್ಣದ ಸೀರೆಗಳು ಮತ್ತು ಮೃದುವಾದ ಜಾರ್ಜೆಟ್ ಅಥವಾ ಶಿಫೋನ್ ಫ್ಯಾಬ್ರಿಕ್ ಸೀರೆಗಳು ಇರುತ್ತವೆ. ಸರಳವಾದ ಸೀರೆಯನ್ನು ಆಕರ್ಷಕವಾಗಿ ಮಾಡಲು ಬಯಸಿದರೆ, ರಫಲ್ ತೋಳುಗಳನ್ನು ಹೊಂದಿರುವ ಕುಪ್ಪಸ ವಿನ್ಯಾಸವನ್ನು ಪಡೆಯಬಹುದು. ಈ ವಿನ್ಯಾಸವು ತೋಳುಗಳಿಗೆ ಅಂಟಿಕೊಳ್ಳುವುದಿಲ್ಲ ಹಾಗೂ ಸೆಖೆಯಿಂದ ನಿಮ್ಮನ್ನು ರಕ್ಷಿಸಲು ಸಹಾಯ ಮಾಡುತ್ತದೆ.
(Image Credit: Pinterest )(3 / 9)
ಫ್ರಿಲ್ಸ್ ಇರುವ ಕುಪ್ಪಸ ವಿನ್ಯಾಸ: ತೋಳಿಲ್ಲದ ಕುಪ್ಪಸ ಧರಿಸಲು ಇಷ್ಟಪಡುತ್ತಿದ್ದು, ಆದರೆ ಅವು ತುಂಬಾ ಸರಳವಾಗಿ ಕಾಣುತ್ತಿದ್ದರೆ, ನೀವು ಈ ರೀತಿಯಾಗಿ ನೆಕ್ ಡಿಸೈನ್ ಮಾಡಬಹುದು. ಇವು ಆಕರ್ಷಕವಾಗಿ ಮತ್ತು ವಿಶಿಷ್ಟವಾಗಿ ಕಾಣುವುದಲ್ಲದೆ, ನಿಮ್ಮನ್ನು ಸಖತ್ ಸ್ಟೈಲಿಶ್ ಆಗಿ ಕಾಣುವಂತೆ ಮಾಡುತ್ತದೆ.
(Image Credit: Pinterest )(4 / 9)
ಆಕರ್ಷಕ ರವಿಕೆ ವಿನ್ಯಾಸ: ಸರಳವಾದ ಮುದ್ರಿತ ಬಟ್ಟೆಯ ರವಿಕೆಯನ್ನು ಎಷ್ಟು ಸುಂದರವಾಗಿ ಹೊಲಿಯಲಾಗಿದೆಯೆಂದರೆ ಇಡೀ ರವಿಕೆಯು ತನ್ನ ಆಕರ್ಷಣೆಯನ್ನು ಹೆಚ್ಚಿಸಿದೆ. ಅಲ್ಲದೆ ಇಂತಹ ವಿನ್ಯಾಸವು ಸೀರೆಯನ್ನು ಮತ್ತಷ್ಟು ಆಕರ್ಷಣೀಯವಾಗಿಸುತ್ತದೆ. ನಿಮ್ಮ ಬಳಿ ಸರಳ ಸೀರೆ ಇದ್ದರೆ ಅದನ್ನು ಈ ರೀತಿಯ ಬ್ಲೌಸ್‌ನೊಂದಿಗೆ ಧರಿಸಿ. ಇದು ಬೇಸಿಗೆಯಲ್ಲಿ ತುಂಬಾ ಆಕರ್ಷಕ ನೋಟವನ್ನು ನೀಡುತ್ತದೆ.
(Image Credit: Virgolady pintrest)(5 / 9)
ಕುತ್ತಿಗೆಯವರೆಗೆ ಇರುವ ನೆಕ್ ಡಿಸೈನ್: ತೋಳಿಲ್ಲದ ಕುತ್ತಿಗೆಯವರೆಗಿರುವ ನೆಕ್ ಡಿಸೈನ್ ಬಹಳ ಸುಂದರವಾಗಿ ಕಾಣುತ್ತದೆ. ಇದಕ್ಕೆ ಪೈಪಿಂಗ್ ಮಾಡಲಾಗಿದೆ. ಇದು ಕುಪ್ಪಸ ಹಾಗೂ ಸೀರೆಯನ್ನು ಮತ್ತಷ್ಟು ಆಕರ್ಷಣೀಯವಾಗಿ ಕಾಣಿಸುತ್ತದೆ. ಆರಾಮದಾಯಕ ಮತ್ತು ಕ್ಲಾಸಿ ಲುಕ್‌ಗಾಗಿ ನೀವು ಈ ರೀತಿಯ ಬ್ಲೌಸ್ ವಿನ್ಯಾಸವನ್ನು ಪ್ರಯತ್ನಿಸಬಹುದು.
(Image Credit: houseof.attires, Pinterest )(6 / 9)
ಕುತ್ತಿಗೆಯವರೆಗಿನ ನೆಕ್ ಡಿಸೈನ್ ಮತ್ತು ಬ್ಯಾಕ್‌ಲೆಸ್ ವಿನ್ಯಾಸ: ನೀವು ಪಾರ್ಟಿವೇರ್ ಸೀರೆಯೊಂದಿಗೆ ತೋಳಿಲ್ಲದ ವಿನ್ಯಾಸದ ಬ್ಲೌಸ್ ಬಯಸಿದರೆ, ಈ ರೀತಿಯ ಲುಕ್ ಅನ್ನು ಪಡೆಯಬಹುದು. ಮುಂಭಾಗ ಕುತ್ತಿಗೆಯವರೆಗಿನ ನೆಕ್ ಡಿಸೈನ್ ಮತ್ತು ತೋಳಿಲ್ಲದ ಬ್ಯಾಕ್‌ಲೆಸ್ ಡಿಸೈನ್ ಸುಂದರವಾಗಿ ಕಾಣುತ್ತದೆ.
(Image Credit: ethinic_style_ideas, Instagram)(7 / 9)
ವಿ ನೆಕ್‌ಲೈನ್ ಬ್ಲೌಸ್: ವಿ ನೆಕ್‌ಲೈನ್ ಬ್ಲೌಸ್ ವಿನ್ಯಾಸವು ತುಂಬಾ ಟ್ರೆಂಡ್‌ನಲ್ಲಿದೆ. ಈ ರೀತಿಯ ತೋಳಿಲ್ಲದ ವಿನ್ಯಾಸದ ಕುಪ್ಪಸ ಯಾವುದೇ ಸೀರೆಗೆ ಹೊಂದಿಕೆಯಾಗುತ್ತದೆ. ವಿಶೇಷವಾಗಿ ಹ್ಯಾಂಡ್ ಪೇಂಟ್, ಇಕ್ಕಟ್ ಮುಂತಾದ ಪ್ರಿಂಟ್‌ಗಳನ್ನು ಹೊಂದಿರುವ ಹತ್ತಿ ಸೀರೆಗೆ ಸುಂದರವಾಗಿ ಕಾಣುತ್ತದೆ.
(Image Credit: how_bywekey, Instagram)(8 / 9)
ಚೆಕ್ ಪ್ರಿಂಟ್ ಬ್ಲೌಸ್: ನೀವು ಕಾಟನ್ ಸೀರೆಯೊಂದಿಗೆ ಕಾಂಟ್ರಾಸ್ಟ್ ಬ್ಲೌಸ್ ಅನ್ನು ಜೋಡಿಸಲು ಬಯಸಿದರೆ, ಪ್ರಿಂಟೆಡ್ ಬಟ್ಟೆಯ ಮೇಲೆ ಹೊಲಿಯಲಾದ ಯು ಆಕಾರದ ನೆಕ್‌ಲೈನ್ ಹೊಂದಿರುವ ತೋಳಿಲ್ಲದ ಬ್ಲೌಸ್ ಅನ್ನು ಹೊಲಿಯಿರಿ. ಇದು ತುಂಬಾ ವಿಶಿಷ್ಟವಾದ ನೋಟವನ್ನು ನೀಡುತ್ತದೆ.
(Image Credit: southactressmedia, Instagram )ಇತರ ಗ್ಯಾಲರಿಗಳು