Sleeves Designs: ಕುರ್ತಾ, ಚೂಡಿದಾರ್‌ಗೆ ಸ್ಟೈಲಿಶ್ ಆಗಿ ಸ್ಲೀವ್ ಡಿಸೈನ್ ಮಾಡಿಸಬೇಕಾ, ಇಲ್ಲಿವೆ ನೋಡಿ ಒಂದಿಷ್ಟು ವಿನ್ಯಾಸಗಳು
ಕನ್ನಡ ಸುದ್ದಿ  /  ಫೋಟೋ ಗ್ಯಾಲರಿ  /  Sleeves Designs: ಕುರ್ತಾ, ಚೂಡಿದಾರ್‌ಗೆ ಸ್ಟೈಲಿಶ್ ಆಗಿ ಸ್ಲೀವ್ ಡಿಸೈನ್ ಮಾಡಿಸಬೇಕಾ, ಇಲ್ಲಿವೆ ನೋಡಿ ಒಂದಿಷ್ಟು ವಿನ್ಯಾಸಗಳು

Sleeves Designs: ಕುರ್ತಾ, ಚೂಡಿದಾರ್‌ಗೆ ಸ್ಟೈಲಿಶ್ ಆಗಿ ಸ್ಲೀವ್ ಡಿಸೈನ್ ಮಾಡಿಸಬೇಕಾ, ಇಲ್ಲಿವೆ ನೋಡಿ ಒಂದಿಷ್ಟು ವಿನ್ಯಾಸಗಳು

ಕುರ್ತಾ, ಚೂಡಿದಾರ್‌ ಧರಿಸಿದಾಗ ಸ್ಟೈಲಿಶ್ ಆಗಿ ಕಾಣಿಸಬೇಕು ಅಂತಿದ್ರೆ ಸ್ಲೀವ್ಸ್‌ ಕೂಡ ಸ್ಟೈಲಿಶ್ ಆಗಿರಬೇಕು. ಇತ್ತೀಚಿನ ದಿನಗಳಲ್ಲಿ ಸಖತ್ ಟ್ರೆಂಡಿ ಆಗಿರುವ ಸ್ಲೀವ್‌ ಡಿಸೈನ್‌ಗಳು ಫ್ಯಾಷನ್‌ ಮಾರುಕಟ್ಟೆಯಲ್ಲಿ ಟ್ರೆಂಡ್ ಸೃಷ್ಟಿಸಿವೆ. ನೀವು ಸರಳವಾದ ಉಡುಪಿಗೆ ಲೇಟೆಸ್ಟ್ ಡಿಸೈನ್ ಸ್ಲೀವ್ಸ್ ಇರಿಸಬೇಕು ಅಂತಿದ್ರೆ ಇಲ್ಲೊಮ್ಮೆ ಗಮನಿಸಿ.

ದೈನಂದಿನ ಉಡುಗೆಯಾಗಿರಲಿ, ಯಾವುದೇ ವಿಶೇಷ ಸಂದರ್ಭಕ್ಕೆ ಧರಿಸುವ ಡ್ರೆಸ್ ಆಗಿರಲಿ ಉಡುಪು ಸರಳವಾಗಿದ್ರೂ ಸ್ಲೀವ್ಸ್‌ ಸ್ಟೈಲಿಶ್ ಆಗಿದ್ರೆ ಸಖತ್ ಆಗಿ ಕಾಣಿಸುತ್ತೀರಿ. ನೀವು ರೆಡಿಮೇಡ್ ಟಾಪ್‌ ಅಥವಾ ಚೂಡಿದಾರ್ ಇಷ್ಟಪಡುವವರು ಅಲ್ಲ ಎಂದರೆ ಈ ಡಿಸೈನ್‌ಗಳನ್ನು ನಿಮ್ಮ ಟೈಲರ್‌ಗೆ ಹೇಳಿ ಮಾಡಿಸಬಹುದು. ಇದರಿಂದ ಸಖತ್ ಟ್ರೆಂಡಿ ಆಗಿ ಕಾಣಿಸಬಹುದು. ಇತ್ತೀಚಿನ ಟ್ರೆಂಡ್‌ನ ಕುರ್ತಾ, ಚೂಡಿದಾರ್ ಸ್ಲೀವ್ ಡಿಸೈನ್ ಇಲ್ಲಿದೆ. 
icon

(1 / 10)

ನಿಮ್ಮ ಸೂಟ್‌ಗೆ ಫ್ಯಾನ್ಸಿ ಲುಕ್ ನೀಡಲು, ನೀವು ಅದರ ತೋಳುಗಳ ಮೇಲೆ ಗೋಟಾ ಪಟ್ಟಿ ಲೇಸ್ ಅನ್ನು ಮಾಡಬಹುದು. ಈ ರೀತಿಯಾಗಿ, ಬಳೆಗಳ ಆಕಾರದಲ್ಲಿ ಜೋಡಿಸಲಾದ ಲೇಸ್ ನಿಮ್ಮ ಡ್ರೆಸ್‌ ಅಲಂಕಾರಿಕ ನೋಟವನ್ನು ನೀಡುತ್ತದೆ. ನಿಮ್ಮ ಡ್ರೆಸ್ ಬಹಳ ಸರಳವಾಗಿದ್ದರೂ ಈ ರೀತಿ ವಿನ್ಯಾಸ ಮಾಡಿಸುವುದರಿಂದ ನಿಮ್ಮ ಸೂಟ್‌ಗೆ ಇನ್ನಷ್ಟು ಡಿಸೈನರ್ ಲುಕ್ ನೀಡಲು ಸಾಧ್ಯವಿದೆ.
icon

(2 / 10)

ಕುರ್ತಾ ಟಾಪ್‌ ಆಗಿರಲಿ ಅಥವಾ ಚೂಡಿದಾರ್ ಆಗಿರಲಿ, ಇತ್ತೀಚಿನ ದಿನಗಳಲ್ಲಿ ಬಲೂನ್ ತೋಳುಗಳು ತುಂಬಾ ಟ್ರೆಂಡ್‌ನಲ್ಲಿವೆ. ಇವು ಸಾಂಪ್ರದಾಯಿಕ ಬಟ್ಟೆಗಳಿಗೆ ಅಲಂಕಾರಿಕ ಮತ್ತು ಸೊಗಸಾದ ಸ್ಪರ್ಶವನ್ನು ನೀಡುತ್ತವೆ.  ಈ ವಿನ್ಯಾಸವು ನಿಮ್ಮ ಸರಳ, ದೈನಂದಿನ ಉಡುಗೆ ಅಥವಾ ಕಚೇರಿಗೆ ಹೋಗುವ ಉಡುಪುಗಳಿಗೆ ಹೊಂದಿಕೆಯಾಗುತ್ತದೆ. 
icon

(3 / 10)

ಸ್ಟ್ರಿಂಗ್ ನೆಕ್‌ಗಳು ಯಾವಾಗಲೂ ಟ್ರೆಂಡ್‌ನಲ್ಲಿಯೇ ಇರುತ್ತವೆ ಆದರೆ ಸ್ಟ್ರಿಂಗ್ ಸ್ಲೀವ್‌ಗಳ ವಿನ್ಯಾಸವು ಸಂಪೂರ್ಣವಾಗಿ ಹೊಸದು. ಅದರ ಮೇಲೆ ಸುಂದರವಾದ ಕಟ್ ವರ್ಕ್ ಮಾಡಲಾಗಿದ್ದು, ಅದಕ್ಕೆ ದಾರವನ್ನು ಜೋಡಿಸಲಾಗಿದೆ. ಇದು ತುಂಬಾ ಸೊಗಸಾದ ಮತ್ತು ಸುಂದರವಾದ ನೋಟವನ್ನು ನೀಡುತ್ತಿದೆ. ಯಾವುದೇ ರೀತಿಯ ಡ್ರೆಸ್‌ಗೂ ನೀವು ರೀತಿ ತೋಳಿನ ವಿನ್ಯಾಸ ಮಾಡಬಹುದು.
icon

(4 / 10)

ಫ್ರಿಲ್ ತೋಳು ಕೂಡ ಅಂದವಾಗಿ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಇದು ಧರಿಸಲು ಆರಾಮವಾಗಿರುವುದು ಮಾತ್ರವಲ್ಲ ಸ್ಟೈಲಿಶ್ ಆಗಿಯೂ ಕಾಣಿಸುತ್ತದೆ. ತೋಳುಗಳಿಗೆ ಹೆಚ್ಚು ಅಲಂಕಾರಿಕ ನೋಟವನ್ನು ನೀಡಲು, ನೀವು ಅವುಗಳ ಅಂಚುಗಳಲ್ಲಿ ಮಣಿಗಳು, ಪೋಮ್-ಪೋಮ್‌ಗಳು, ಮುತ್ತುಗಳನ್ನು ಜೋಡಿಸಬಹುದು.
icon

(5 / 10)

ನೀವು ಯಾವುದೇ ಅಲಂಕಾರಿಕ ವಿನ್ಯಾಸವನ್ನು ಬಯಸದಿದ್ದರೆ, ಸರಳ ಮತ್ತು ವಿಶಿಷ್ಟವಾದ ಸ್ಲೀವ್ ಡಿಸೈನ್‌ ಬಯಸಿದರೆ, ಈ ವಿನ್ಯಾಸವು ಪರಿಪೂರ್ಣವಾಗಿರುತ್ತದೆ. ಇದರಲ್ಲಿ, ತೋಳುಗಳ ಗಡಿಯಲ್ಲಿ ತುಂಬಾ ಅಲಂಕಾರಿಕ ಕಟ್ ವರ್ಕ್‌ ಮಾಡಲಾಗಿದ್ದು, ಅದು ತುಂಬಾ ಸುಂದರವಾಗಿ ಕಾಣುತ್ತದೆ. ಪ್ರತಿಯೊಂದು ರೀತಿಯ ಡ್ರೆಸ್‌ನೊಂದಿಗೆ ಇದು ಹೊಂದಿಕೆಯಾಗುತ್ತದೆ. 
icon

(6 / 10)

ನಿಮ್ಮ ಸೂಟ್‌ಗೆ ತುಂಬಾ ಫ್ಯಾನ್ಸಿ ಮತ್ತು ಕ್ಲಾಸಿ ಲುಕ್ ನೀಡಲು, ನೀವು ಈ ರೀತಿ ವಿನ್ಯಾಸವನ್ನು ಆಯ್ಕೆ ಮಾಡಬಹುದು. ಈ ವಿನ್ಯಾಸವು ಕಾಲೇಜು ಮತ್ತು ಕಚೇರಿಗೆ ಹೋಗುವ ಮಹಿಳೆಯರಿಗೆ ಸೂಕ್ತವಾಗಿದೆ.
icon

(7 / 10)

ತುಂಬಾ ಸರಳವಾದ ವಿನ್ಯಾಸ ಬಯಸಿದರೆ ಇದನ್ನು ನೀವು ಆಯ್ಕೆ ಮಾಡಿಕೊಳ್ಳಬಹುದು. ತುಂಬು ತೋಳಿನ ಡ್ರೆಸ್‌ಗೆ ಇದು ಹೊಂದಿಕೆಯಾಗುತ್ತದೆ.
icon

(8 / 10)

ಇತ್ತೀಚಿನ ದಿನಗಳಲ್ಲಿ ಪಾಕಿಸ್ತಾನಿ ಸೂಟ್‌ಗಳ ಮೇಲಿನ ಕ್ರೇಜ್ ತುಂಬಾ ಹೆಚ್ಚಾಗಿದೆ. ಇವು ಚಿಕ್ಕ ಹುಡುಗಿಯರಲ್ಲಿ ಬಹಳ ಜನಪ್ರಿಯವಾಗಿವೆ. ಪಾಕಿಸ್ತಾನಿ ಶೈಲಿಯ ಈ ತೋಳಿನ ವಿನ್ಯಾಸ ಸಖತ್ ಟ್ರೆಂಡಿಯಾಗಿ ಸ್ಟೈಲಿಶ್ ಆಗಿ ಕಾಣಿಸುತ್ತದೆ. ಇದು ತುಂಬು ತೋಳು ಇಷ್ಟ ಪಡುವವರಿಗೆ ಖಂಡಿತ ಇಷ್ಟವಾಗುತ್ತದೆ. 
icon

(9 / 10)

ಆಹಾರ, ಆರೋಗ್ಯ, ಫ್ಯಾಷನ್‌, ರಿಲೇಷನ್‌ಶಿಪ್‌ , ಪೇರೆಂಟಿಂಗ್‌ ಸಂಬಂಧಿಸಿದ ಲೇಖನಗಳಿಗಾಗಿ ಹಿಂದೂಸ್ತಾನ್‌ ಟೈಮ್ಸ್‌ ಕನ್ನಡ ಲೈಫ್‌ಸ್ಟೈಲ್‌ ಪುಟಕ್ಕೆ ಭೇಟಿ ನೀಡಿ 
icon

(10 / 10)

ಇತರ ಗ್ಯಾಲರಿಗಳು