ಬೇಸಿಗೆಗೆ ಚೂಡಿದಾರ್ ಪರಿಪೂರ್ಣ ಆಯ್ಕೆ: ಕುರ್ತಾ ಸ್ಟೈಲಿಶ್ ಆಗಿ ಕಾಣಲು ಕುತ್ತಿಗೆ, ತೋಳುಗಳ ವಿನ್ಯಾಸ ಹೀಗಿರಲಿ
ಬೇಸಿಗೆಯಾದ್ದರಿಂದ ಕಾಟನ್ ಅಥವಾ ಹತ್ತಿ ಉಡುಪನ್ನು ಧರಿಸುವುದು ಸಾಮಾನ್ಯ. ಕಾಟನ್ ಚೂಡಿದಾರ್‌ಗೆ ಸ್ಟೈಲಿಶ್ ನೋಟ ನೀಡಲು ಇಲ್ಲಿವೆ ಕೆಲವು ಇತ್ತೀಚಿನ ವಿನ್ಯಾಸಗಳು. ಇವು ಚೂಡಿದಾರ್, ಕುರ್ತಾವನ್ನು ಮತ್ತಷ್ಟು ಆಕರ್ಷಣೀಯವಾಗಿ ಕಾಣಿಸುತ್ತದೆ.
(1 / 8)
ಪ್ರತಿಯೊಬ್ಬ ಭಾರತೀಯ ಹುಡುಗಿಯ ವಾರ್ಡ್ರೋಬ್‌ನಲ್ಲಿ ಚೂಡಿದಾರ್ ಇದ್ದೇ ಇರುತ್ತವೆ. ಇವು ನೋಡಲು ಸೊಗಸಾಗಿರುವುದರ ಜೊತೆಗೆ, ತುಂಬಾ ಆರಾಮದಾಯಕವಾಗಿರುತ್ತದೆ. ಬೇಸಿಗೆಯಲ್ಲಿ ಚೂಡಿದಾರ್ ದೈನಂದಿನ ಉಡುಗೆಗೆ ಸೂಕ್ತ ಆಯ್ಕೆಯಾಗಿದೆ. ಈಗಾಗಲೇ ಬೇಸಿಗೆಯ ಆಗಮನವಾಗಿದ್ದು ಕಾಟನ್ ಚೂಡಿದಾರ್ ಹೊಲಿಸಬಹುದು. ಸರಳವಾಗಿ ಹೊಲಿಸುವ ಬದಲು ಈ ರೀತಿ ಸ್ಟೈಲಿಶ್ ಆಗಿ ಹೊಲಿಸಬಹುದು. ಇಲ್ಲಿವೆ ಕೆಲವು ನೆಕ್ ಡಿಸೈನ್‌ಗಳು.
(2 / 8)
ಚೂಡಿದಾರ್ ಹಿಂಭಾಗಕ್ಕೆ ಈ ಫ್ಯಾನ್ಸಿ ನೆಕ್ ವಿನ್ಯಾಸವನ್ನು ನೀವು ಆಯ್ಕೆ ಮಾಡಬಹುದು. ಹಿಂಭಾಗದಲ್ಲಿ ಝಿಗ್-ಜಾಗ್ ಮಾದರಿಯಲ್ಲಿ ದಾರವನ್ನು ಜೋಡಿಸುವ ಮೂಲಕ ತುಂಬಾ ಸೊಗಸಾದ ವಿನ್ಯಾಸವನ್ನು ರಚಿಸಲಾಗಿದೆ. ಇದಕ್ಕೆ ಸುಂದರವಾದ ಗೊಂಡೆಯನ್ನು ಕೂಡ ಜೋಡಿಸಬಹುದು.
(Image Credit: @mrslather_instagram)(3 / 8)
ಸ್ವೀಟ್‌ಹಾರ್ಟ್ ನೆಕ್‌ಲೈನ್ ಹೊಂದಿರುವ ಫ್ಲೋಯಿ ತೋಳುಗಳು: ಅದು ಚೂಡಿದಾರ್ ಆಗಿರಲಿ ಅಥವಾ ಡ್ರೆಸ್ ಆಗಿರಲಿ, ಸ್ವೀಟ್‌ಹಾರ್ಟ್ ನೆಕ್‌ಲೈನ್ ಯಾವಾಗಲೂ ಆಕರ್ಷಕವಾಗಿ ಕಾಣುತ್ತದೆ. ನೀವು ಈ ರೀತಿಯ ನೆಕ್ ಲೈನ್ ಮತ್ತು ತೋಳುಗಳನ್ನು ಹೊಲಿಸುವ ಮೂಲಕ ಕುರ್ತಾದ ಆಕರ್ಷಣೆಯನ್ನು ಮತ್ತಷ್ಟು ಹೆಚ್ಚಿಸಬಹುದು. ಇವು ಸ್ಟೈಲಿಶ್ ಆಗಿ ಕಾಣುವುದರ ಜೊತೆಗೆ, ಬೇಸಿಗೆಯಲ್ಲಿ ನಿಮಗೆ ಆರಾಮವನ್ನು ನೀಡುತ್ತವೆ.
(Image Credit: @labelsim)(4 / 8)
ಸ್ಟೈಲಿಶ್ ಚೂಡಿದಾರ್ ವಿನ್ಯಾಸ: ಕಾಟನ್ ಚೂಡಿದಾರ್‌ಗೆ ಈ ರೀತಿಯ ಅಲಂಕಾರಿಕ ನೆಕ್ ಡಿಸೈನ್ ಅನ್ನು ಪಡೆಯಬಹುದು. ಇದು ಸಾಕಷ್ಟು ವಿಶಿಷ್ಟವಾಗಿ ಕಾಣುತ್ತದೆ ಮತ್ತು ದೈನಂದಿನ ಉಡುಗೆಗೂ ಪರಿಪೂರ್ಣವಾಗಿರುತ್ತದೆ. ಇದೇ ರೀತಿ, ನೀವು ಬಲೂನ್ ಶೈಲಿಯ ತೋಳುಗಳನ್ನು ಸಹ ತಯಾರಿಸಬಹುದು. ಇದು ನಿಮ್ಮ ಸೂಟ್‌ಗೆ ಪರಿಪೂರ್ಣ ನೋಟವನ್ನು ನೀಡುತ್ತದೆ.
(Image Credit: beauty_fashionistt)(5 / 8)
ಫ್ಯಾನ್ಸಿ ನೆಕ್‌ಲೈನ್ ಮತ್ತು ತೋಳುಗಳು: ನಿಮ್ಮ ಚೂಡಿದಾರ್‌ಗೆ ಸ್ಟೈಲಿಶ್ ಲುಕ್ ನೀಡಲು, ನೀವು ಈ ರೀತಿಯ ನೆಕ್‌ಲೈನ್ ಮತ್ತು ತೋಳುಗಳನ್ನು ಸಹ ವಿನ್ಯಾಸಗೊಳಿಸಬಹುದು. ಈ ರೀತಿಯ ಕುರ್ತಿಗಳು ದೈನಂದಿನ ಉಡುಗೆಗೆ ಹಾಗೂ ಕಚೇರಿ ಮತ್ತು ಕಾಲೇಜಿಗೆ ಹೋಗುವ ಹುಡುಗಿಯರಿಗೆ ಉತ್ತಮವಾಗಿರುತ್ತದೆ. ಪಫ್ ಶೈಲಿಯ ತೋಳುಗಳು ಚೂಡಿದಾರ್ ಅಥವಾ ಕುರ್ತಾಗೆ ವಿಂಟೇಜ್ ಮತ್ತು ಕ್ಲಾಸಿ ಲುಕ್ ನೀಡುತ್ತದೆ.
(Image Credit: Pinterest)(6 / 8)
ಈ ವಿನ್ಯಾಸವು ಬೇಸಿಗೆಗೂ ಸೂಕ್ತವಾಗಿದೆ: ಬೇಸಿಗೆಗಾಗಿ ವಿನ್ಯಾಸಗೊಳಿಸಲಾದ ಅಂತಹ ಕೆಲವು ಹತ್ತಿ ಸೂಟ್‌ಗಳನ್ನು ನೀವು ಪಡೆಯಬಹುದು. ಈ ಟ್ರೆಂಡಿ ನೆಕ್‌ಲೈನ್ ಮತ್ತು ತೋಳುಗಳು ತುಂಬಾ ಸ್ಟೈಲಿಶ್ ಆಗಿ ಕಾಣುತ್ತವೆ. ನಿಮ್ಮ ಆಯ್ಕೆಯ ಪ್ರಕಾರ ನೀವು ಅಲಂಕಾರಿಕ ಕುರ್ತಾ ಸೆಟ್ ಅನ್ನು ವಿನ್ಯಾಸಗೊಳಿಸಬಹುದು. ತೋಳುಗಳನ್ನು ಕೂಡ ವಿಶೇಷವಾಗಿ ವಿನ್ಯಾಸಗೊಳಿಸಬಹುದು.
(Image Credit: beauty_fashionistt)(7 / 8)
ನಿಮ್ಮ ಕುರ್ತಾಗೆ ಸೊಗಸಾದ ನೋಟವನ್ನು ನೀಡಲು ಈ ಅಲಂಕಾರಿಕ ಮಾದರಿಗಳನ್ನು ಕುತ್ತಿಗೆ ಹಾಗೂ ತೋಳುಗಳ ಮೇಲೆ ವಿನ್ಯಾಸ ಮಾಡಬಹುದು. ಈ ರೀತಿಯ ಬ್ಲಾಕ್ ಪ್ಯಾಟರ್ನ್ ಸೂಟ್‌ಗೆ ತುಂಬಾ ಟ್ರೆಂಡಿ ಲುಕ್ ನೀಡುತ್ತದೆ. ನೀವು ಕಚೇರಿ ಅಥವಾ ಕಾಲೇಜಿಗೆ ಹೋಗುತ್ತಿದ್ದರೆ, ಇಂತಹ ಕುರ್ತಾ ಸ್ಟೈಲಿಶ್ ಆಗಿ ಕಾಣುತ್ತದೆ.
(Image Credit: beauty_fashionistt)ಇತರ ಗ್ಯಾಲರಿಗಳು