ಚೂಡಿದಾರ್, ಕುರ್ತಾ ಆಕರ್ಷಕವಾಗಿ ಕಾಣಬೇಕೆಂದರೆ ಈ ರೀತಿ ತೋಳುಗಳ ವಿನ್ಯಾಸವನ್ನಿಡಿ; ಟ್ರೆಂಡಿಂಗ್ ಡಿಸೈನ್‌ಗಳು ಇಲ್ಲಿವೆ
ಚೂಡಿದಾರ್ ಅಥವಾ ಕುರ್ತಾ ಹೊಲಿಯುವ ಮೊದಲು ಇತ್ತೀಚಿನ ಟ್ರೆಂಡ್‌ಗಳನ್ನು ತಿಳಿದುಕೊಳ್ಳುವುದು ಬಹಳ ಮುಖ್ಯ. ಇಲ್ಲಿ ಕೆಲವು ಟ್ರೆಂಡಿಂಗ್‌ನಲ್ಲಿರುವ ತೋಳುಗಳ ವಿನ್ಯಾಸಗಳಿವೆ. ಇವು ನಿಮ್ಮ ಪ್ರತಿದಿನದ ಸೌಂದರ್ಯವನ್ನು ಹೆಚ್ಚಿಸುತ್ತವೆ.
(1 / 7)
ಫ್ಯಾನ್ಸಿ ತೋಳುಗಳು: ರೆಡಿಮೆಡ್ ಸೆಲ್ವಾರ್, ಚೂಡಿದಾರ್ ಖರೀದಿಸುವ ಬದಲು ಬಹಳಷ್ಟು ಮಹಿಳೆಯರು ಟೈಲರ್ ಬಳಿ ಹೊಲಿಸುವುದೇ ಹೆಚ್ಚು. ಕಾರಣವೇನೆಂದರೆ, ಟೈಲರ್ ಹೊಲಿಯುವ ಉಡುಪುಗಳ ಫಿಟ್ಟಿಂಗ್ ಚೆನ್ನಾಗಿರುತ್ತದೆ. ಮತ್ತು ನಿಮಗೆ ಬೇಕಾದ ರೀತಿಯಲ್ಲಿ ವಿನ್ಯಾಸಗೊಳಿಸಬಹುದಾಗಿದೆ. ಆದರೆ, ಟ್ರೆಂಡ್ ಬಗ್ಗೆ ತಿಳಿದಿರುವುದು ಬಹಳ ಮುಖ್ಯ. ವಿಶೇಷವಾಗಿ ನೀವು ಫ್ಯಾಷನ್ ಪ್ರಿಯರಾಗಿದ್ದರೆ. ಸೆಲ್ವಾರ್ ಹೊಲಿಯುವ ಮೊದಲು ಕುತ್ತಿಗೆ ಮತ್ತು ತೋಳುಗಳ ಇತ್ತೀಚಿನ ಟ್ರೆಂಡ್‌ಗಳನ್ನು ಪರಿಶೀಲಿಸುವುದು ಮುಖ್ಯ. ಇಲ್ಲಿ ಕೆಲವು ಸುಂದರ ತೋಳುಗಳ ವಿನ್ಯಾಸಗಳನ್ನು ನೀಡಲಾಗಿದೆ. ನಿಮ್ಮ ದೈನಂದಿನ ಉಡುಗೆಯಾಗಿರಲಿ ಅಥವಾ ಪಾರ್ಟಿ ವೇರ್ ಆಗಿರಲಿ, ಈ ತೋಳುಗಳ ವಿನ್ಯಾಸಗಳು ಅದರ ನೋಟವನ್ನು ಇನ್ನಷ್ಟು ಸ್ಟೈಲಿಶ್ ಮಾಡುತ್ತದೆ.
(2 / 7)
ಡೈಮಂಡ್ ಕಟ್ ವರ್ಕ್ ಸ್ಲೀವ್: ನೀವು ಚೂಡಿದಾರ್‌ಗೆ ಹೆಚ್ಚು ಅಲಂಕಾರಿಕ ಮತ್ತು ಸ್ಟೈಲಿಶ್ ಲುಕ್ ನೀಡಲು ಬಯಸಿದರೆ, ನೀವು ತೋಳುಗಳ ಮೇಲೆ ಈ ರೀತಿಯ ಡೈಮಂಡ್ ಕಟ್ ಸ್ಲೀವ್ ಅನ್ನು ಹೊಲಿಸಬಹುದು. ಇದು ನೋಡಲು ಬಹಳ ಸುಂದರವಾಗಿ ಕಾಣುತ್ತದೆ. ಮಧ್ಯದಲ್ಲಿ ಮುತ್ತು ಅಥವಾ ಮಣಿಗಳನ್ನು ಬಳಸಬಹುದು. ಈ ತೋಳುಗಳು ನಿಜವಾಗಿಯೂ ಆಕರ್ಷಕವಾಗಿ ಕಾಣುತ್ತವೆ.
(PC: beauty_fashionistt)(3 / 7)
ಬಲೂನ್ ತೋಳುಗಳ ವಿನ್ಯಾಸ: ಇತ್ತೀಚಿನ ದಿನಗಳಲ್ಲಿ ಬಲೂನ್ ತೋಳುಗಳು ಸಾಕಷ್ಟು ಟ್ರೆಂಡ್‌ನಲ್ಲಿವೆ. ಇವು ಇತ್ತೀಚಿನ ದಿನಗಳಲ್ಲಿ ಹೆಚ್ಚು ಜನಪ್ರಿಯವಾಗುತ್ತಿವೆ. ನಿಮ್ಮ ಚೂಡಿದಾರ್‌ನ ತೋಳುಗಳಿಗೆ ಆಧುನಿಕ ಸ್ಪರ್ಶ ನೀಡಿ. ಈ ಬಲೂನ್ ವಿನ್ಯಾಸದ ತೋಳಿರುವ ಚೂಡಿದರ್ ತುಂಬಾ ಸ್ಟೈಲಿಶ್ ಆಗಿ ಕಾಣುತ್ತದೆ.
(PC: beauty_fashionistt)(4 / 7)
ತೋಳುಗಳಿಗೆ ದಾರದ ವಿನ್ಯಾಸ: ಚೂಡಿದಾರ್ ತೋಳುಗಳಿಗೆ ದಾರವನ್ನು ಜೋಡಿಸಬಹುದು. ಇದು ತುಂಬಾ ಅಲಂಕಾರಿಕ ಮತ್ತು ಆಕರ್ಷಕವಾಗಿ ಕಾಣುತ್ತದೆ. ಅದು ಪಾರ್ಟಿ ವೇರ್ ಅಥವಾ ದಿನನಿತ್ಯ ಕಚೇರಿಗೆ ಉಡುವ ಉಡುಪಾಗಿರಲಿ, ಅಂತಹ ತೋಳುಗಳು ಉತ್ತಮವಾಗಿ ಕಾಣುತ್ತವೆ.
(PC: @Filmy.Today_Pinterest)(5 / 7)
ಫ್ಯಾನ್ಸಿ ವಿನ್ಯಾಸ: ಚೂಡಿದಾರ್‌ಗೆ ಇಂತಹ ಕೆಲವು ಅಲಂಕಾರಿಕ ತೋಳುಗಳ ವಿನ್ಯಾಸವನ್ನು ನೀವು ಆಯ್ಕೆ ಮಾಡಬಹುದು. ಉದ್ದನೆಯ ತೋಳಿರುವ ಉಡುಪಿಗೆ ಶೀರ್ ಲೇಸ್ ಹಾಗೂ ಅದಕ್ಕೆ ಹೊಂದಿಕೆಯಾಗುವ ಗುಂಡಿಗಳನ್ನು ಬಳಸಲಾಗಿದೆ. ನಿಮ್ಮ ಕುರ್ತಾ ತುಂಬಾ ಸರಳವಾಗಿದ್ದರೆ, ಇಂತಹ ಅಲಂಕಾರಿಕ ವಿನ್ಯಾಸವನ್ನು ಮಾಡುವ ಮೂಲಕ ಅದನ್ನು ಸುಂದರವಾಗಿ ಕಾಣುವಂತೆ ಮಾಡಬಹುದು.
(PC: beauty_fashionistt)(6 / 7)
ಹೊಂದಿಕೆಯಾಗುವ ನೆಟ್ ಬಟ್ಟೆಯನ್ನು ಬಳಸಿ: ತೋಳುಗಳಿಗೆ ಹೆಚ್ಚು ಡಿಸೈನರ್ ಲುಕ್ ನೀಡಲು, ನೀವು ಬಟ್ಟೆಯ ಬದಲಿಗೆ ಮ್ಯಾಚಿಂಗ್ ನೆಟ್ ಫ್ಯಾಬ್ರಿಕ್ ಅನ್ನು ಬಳಸಬಹುದು. ಬಲೂನ್ ಆಕಾರದ ತೋಳುಗಳಂತೆಯೇ ಇದನ್ನೂ ಹೊಲಿಯಲಾಗುತ್ತದೆ. ಆದರೆ, ಇದಕ್ಕೆ ನೆಟ್ ಬಟ್ಟೆಯನ್ನು ಬಳಸಲಾಗುತ್ತದೆ. ಹಾಗೆಯೇ ಕೈಗಳ ಅಂಚಿಗೆ (ಬಾರ್ಡರ್) ಕುರ್ತಾಗೆ ಹೊಂದಿಕೆಯಾಗುವ ಬಣ್ಣದ ಫ್ಯಾಬ್ರಿಕ್ ಅನ್ನು ಬಳಸಲಾಗುತ್ತದೆ. ಇದು ನೋಡಲು ತುಂಬಾ ಚೆನ್ನಾಗಿ ಕಾಣುತ್ತದೆ.
(PC: beauty_fashionistt)ಇತರ ಗ್ಯಾಲರಿಗಳು